ವಿಜಯಪುರ: ವಕ್ಫ್ ಆಸ್ತಿ ಯಾರಪ್ಪಂದೂ ಆಸ್ತಿ ಅಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 12 ಲಕ್ಷ ಎಕರೆ ವಕ್ಫ್ ಆಸ್ತಿಯನ್ನು ದೇಶದ ಬಡವರಿಗೆ ಹಂಚಿಕೆ ಮಾಡಬೇಕು ಎಂದು ಶಾಸಕ ಯತ್ನಾಳ ನೀಡಿರುವ ಹೇಳಿಕೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
ದೇಶದಲ್ಲಿ ಸುಮಾರು 12 ಲಕ್ಷ ಎಕರೆ ಜಮೀನು ವಕ್ಪ್ ಆಸ್ತಿಯಿದೆ. ಅದನ್ನು ಬಡವರ ಕೆಲಸಕ್ಕೆ ಉಪಯೋಗಿಸಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಯ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವಕ್ಪ್ ಆಸ್ತಿ 12 ಲಕ್ಷ ಎಕರೆಯಲ್ಲ 34 ಸಾವಿರ ಎಕರೆ ಇದೆ. ವಕ್ಪ್ ಗೆ ಆಸ್ತಿ ಕೊಟ್ಟಿರೋದು ಯಾರು? ದಾನಿಗಳು ಕೊಟ್ಟಿದ್ದಾರೆ. ಬಡವರಿಗೆ ಅದನ್ನು ಎತ್ತಿ ಕೊಡೋಕೆ ಅದು ಯತ್ನಾಳ ಅವರ ಅಪ್ಪಂದು ಆಸ್ತಿಯಲ್ಲ. ನನ್ನ ಆಸ್ತಿಯಲ್ಲ. ಅದು ನಮ್ಮಪ್ಪನ ಆಸ್ತಿ ಇದ್ದರೆ ಅದನ್ನು ಯಾರಿಗಾದರೂ ಕೊಡಬಹುದು. ನಾಳೆ ಅವರ ಅಪ್ಪನ ಅಸ್ತಿಯಾಗಿದ್ದರೆ ಅದನ್ನು ಯಾರಿಗಾದರೂ ಕೊಡಬಹುದು. ದಾನಿಗಳು ಮುಸ್ಲಿಂ ಸಮಾಜಕ್ಕೆ ಒಳ್ಳೆಯದಾಗಲಿ ಎಂದು ದಾನಿಗಳು ಆ ಆಸ್ತಿ ದಾನ ನೀಡಿದ್ದಾರೆ. ದಾನ ಮಾಡಿದವರು ಆ ಆಸ್ತಿ ಯಾವುದಕ್ಕೆ ಉಪಯೋಗ ಮಾಡಬೇಕೆಂಬುದನ್ನು ಕೂಡ ತಿಳಿಸಿರುತ್ತಾರೆ. ಶಿಕ್ಷಣ, ಸ್ಮಶಾನ, ಈದ್ಗಾ, ಮಸೀದಿ ಕಟ್ಟಲು ಉಪಯೋಗಿಸಬೇಕೆಂದು ದಾನ ಮಾಡಿರುತ್ತಾರೆ. ಯತ್ನಾಳ ಆಸ್ತಿಯೋ ನಮ್ಮಪ್ಪನ ಆಸ್ತಿಯೋ ಇದ್ದಿದ್ದರೆ ನಾವು ಯಾರಿಗಾದರೂ ಹಂಚಬಹುದಿತ್ತು. ಇದು ಯಾರ ಅಪ್ಪನ ಆಸ್ತಿಯಲ್ಲ ಇದು ವಕ್ಪ್ ಆಸ್ತಿ ಎಂದು ಅವರು ಹೇಳಿದರು.
ಡಿಸಿಎಂ ಸ್ಥಾನದ ಬೇಡಿಕೆ ವಿಚಾರ
ಡಿಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಡಿಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ? ಎಲ್ಲ ಸಮಾಜದವರಿಗೂ ಉಪ ಮುಖ್ಯಂಮತ್ರಿ ಸ್ಥಾನ ಕೊಡಬೇಕೆಂಬ ಬೇಡಿಕೆ ಇದೆ. ಮುಸ್ಲಿಂ ಅಷ್ಟೇ ಅಲ್ಲ ಎಲ್ಲಾ ಸಮಾಜದ ಬೇಡಿಕೆ ಇದೆ. ಮುಂದಿನ ತೀರ್ಮಾನವನ್ನು ಹೈಕಮಾಂಡ್ ಅವರು ತೆಗೆದುಕೊಳ್ಳುತ್ತದೆ. ಡಿಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಅದನನು ನಮ್ಮ ಹೈಕಮಾಂಡ ಕೊಡುತ್ತದೆ. ಈ ವಿಚಾರದಲ್ಲಿ ಯಾವುದೇ ಆಂತರಿಕ ಅಸಮಾಧಾನವಿಲ್ಲ ಎಂದು ಹೇಳಿದರು.
ನಟ ದರ್ಶನ್ ಪರ ಪೊಲೀಸರ ಮೇಲೆ ಒತ್ತಡ ಆರೋಪ ಪ್ರಕರಣ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಚಿತ್ರನಟ ದರ್ಶನ್ ರಕ್ಷಣೆಗೆ ಕೆಲ ಕಾಂಗ್ರೆಸ್ ಶಾಸಕರು ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, ದರ್ಶನ್ ಪ್ರಕರಣದಲ್ಲಿ ಯಾರೂ ಪೊಲೀಸರ ಮೇಲೆ ಒತ್ತಡ ಹಾಕಿಲ್ಲ. ನಾನೇ ಪೊಲೀಸರ ಮೇಲೆ ಒತ್ತಡ ಹಾಕಿದ್ದೇನೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಆದರೆ ನಾನು ಒತ್ತಡ ಹಾಕಿಲ್ಲ. ದರ್ಶನ್ ಮತ್ತು ನಾನು ಒಳ್ಳೆಯ ಸ್ನೇಹಿತರು ಆ ವಿಚಾರದಲ್ಲಿ ಇಲ್ಲ ಎಂದು ಹೇಳಲ್ಲ. ಇಂಥ ಘಟನೆ ಮಾಡಿದಾಗ ಯಾರು ಅವರ ಪರ ನಿಲ್ಲುತ್ತಾರೆ ಎಂದು ಪ್ರಶ್ನಿಸಿದರು.
ತಪ್ಪು ತಪ್ಪೇ. ಉಪ್ಪು ತಿಂದವ ನೀರು ಕುಡಿಯಲೇಬೇಕು. ತಪ್ಪು ಯಾರೇ ಮಾಡಲಿ, ನಾನಿದ್ದರೂ ಅಷ್ಟೇ. ದರ್ಶನ್ ಇದ್ದರೂ ಅಷ್ಟೇ, ಇನ್ನೊಬ್ಬರು ಇದ್ದರೂ, ಯಾರಿದ್ದರೂ ಅಷ್ಟೇ. ಮಾಧ್ಯಮದಲ್ಲಿ ನನ್ನ ಹೆಸರನ್ನು ನೇರವಾಗಿ ಹೇಳಿಲ್ಲ. ಪರೋಕ್ಷವಾಗಿ ಹೇಳಿದ್ದಾರೆ. ಆ ರೀತಿ ಯಾವುದೂ ಇಲ್ಲ. ಕಾನೂನಿನ ಚೌಕಟ್ಟಿಯಲ್ಲಿ ತನಿಖೆ ನಡೆಯುತ್ತಿದೆ. ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯ ಮುಂದಿನ ತೀರ್ಮಾನ ಮಾಡುತ್ತದೆ ಎಂದು ಅವರು ಹೇಳಿದರು.
ದರ್ಶನ ಪರ ಕೈ ಶಾಸಕ ಗೋವಿಂದಗೌಡ ಹೇಳಿಕೆ ವಿಚಾರ
ನಟ ದರ್ಶನ್ ಪರ ಕಾಂಗ್ರೆಸ್ ಶಾಸಕ ಗೋವಿಂದಗೌಡ ಮಾತನಾಡಿದ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅದು ಅವರವರ ಅಭಿಪ್ರಾಯ. ಅವರ ಅಭಿಪ್ರಾಯ ಅವರು ಹೇಳಿದ್ದಾರೆ. ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ ಎಂದು ತಿಳಿಸಿದರು.
ವಕ್ಫ್ ಆಸ್ತಿ ಯಾರಪ್ಪಂದೂ ಅಲ್ಲ
ದೇಶದಲ್ಲಿ ಸುಮಾರು 12 ಲಕ್ಷ ಎಕರೆ ಜಮೀನು ವಕ್ಪ್ ಆಸ್ತಿಯಿದೆ. ಅದನ್ನು ಬಡವರ ಕೆಲಸಕ್ಕೆ ಉಪಯೋಗಿಸಬೇಕು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಯ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವಕ್ಪ್ ಆಸ್ತಿ 12 ಲಕ್ಷ ಎಕರೆಯಲ್ಲ 34 ಸಾವಿರ ಎಕರೆ ಇದೆ. ವಕ್ಪ್ ಗೆ ಆಸ್ತಿ ಕೊಟ್ಟಿರೋದು ಯಾರು? ದಾನಿಗಳು ಕೊಟ್ಟಿದ್ದಾರೆ. ಬಡವರಿಗೆ ಅದನ್ನು ಎತ್ತಿ ಕೊಡೋಕೆ ಅದು ಯತ್ನಾಳ ಅವರ ಅಪ್ಪಂದು ಆಸ್ತಿಯಲ್ಲ. ನನ್ನ ಆಸ್ತಿಯಲ್ಲ. ಅದು ನಮ್ಮಪ್ಪನ ಆಸ್ತಿ ಇದ್ದರೆ ಅದನ್ನು ಯಾರಿಗಾದರೂ ಕೊಡಬಹುದು. ನಾಳೆ ಅವರ ಅಪ್ಪನ ಅಸ್ತಿಯಾಗಿದ್ದರೆ ಅದನ್ನು ಯಾರಿಗಾದರೂ ಕೊಡಬಹುದು. ದಾನಿಗಳು ಮುಸ್ಲಿಂ ಸಮಾಜಕ್ಕೆ ಒಳ್ಳೆಯದಾಗಲಿ ಎಂದು ದಾನಿಗಳು ಆ ಆಸ್ತಿ ದಾನ ನೀಡಿದ್ದಾರೆ. ದಾನ ಮಾಡಿದವರು ಆ ಆಸ್ತಿ ಯಾವುದಕ್ಕೆ ಉಪಯೋಗ ಮಾಡಬೇಕೆಂಬುದನ್ನು ಕೂಡ ತಿಳಿಸಿರುತ್ತಾರೆ. ಶಿಕ್ಷಣ, ಸ್ಮಶಾನ, ಈದ್ಗಾ, ಮಸೀದಿ ಕಟ್ಟಲು ಉಪಯೋಗಿಸಬೇಕೆಂದು ದಾನ ಮಾಡಿರುತ್ತಾರೆ. ಯತ್ನಾಳ ಆಸ್ತಿಯೋ ನಮ್ಮಪ್ಪನ ಆಸ್ತಿಯೋ ಇದ್ದಿದ್ದರೆ ನಾವು ಯಾರಿಗಾದರೂ ಹಂಚಬಹುದಿತ್ತು. ಇದು ಯಾರ ಅಪ್ಪನ ಆಸ್ತಿಯಲ್ಲ ಇದು ವಕ್ಪ್ ಆಸ್ತಿ ಎಂದು ಅವರು ಹೇಳಿದರು.
ವಿಧಾನ ಪರಿಷತ ಶಾಸಕ ಸೂರಜ ರೇವಣ್ಣ ಅಸಹಜ ಲೈಂಗಿಕ ಕಿರುಕುಳ ಆರೋಪ ಪ್ರಕರಣ
ವಿಧಾನ ಪರಿಷತ ಶಾಸಕ ಸೂರಜ ರೇವಣ್ಣ ಯುವಕನಿಗೆ ಅಸಹಜ ಲೈಂಗಿಕ ಕಿರುಕುಳ ನೀಡಿರುವ ಆರೋಪ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆ ಕುರಿತು ನಾನು ಕೇಳಪಟ್ಟಿದ್ದೇನೆ. ಆದರೆ ನೋಡಿಲ್ಲ ಎಂದು ಅವರು ಹೇಳಿದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದ್ದು ಗ್ಯಾರಂಟಿ ಯೋಜನೆಗಳಿಗಾಗಿ ಎಂದು ಪ್ರತಿಪಕ್ಷಗಳು ಮಾಡುತ್ತಿರುವ ವಾಗ್ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಲಾಭಕ್ಕೆ ಕೊಟ್ಟಿಲ್ಲ ಎಂದು ನಮ್ಮ ಸಿಎಂ ಅವರೇ ಹೇಳಿದ್ದಾರೆ. ನಮ್ಮ ಸರಕಾರ ಬಂದ ಮೇಲೆ ಬಡವರಿಗೆ ಸಹಾಯ ಆಗಲಿ ಎಂದು ಗ್ಯಾರೆಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಬರಲ್ಲ. ನಾವಿರುವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರೆಯುತ್ತವೆ ಎಂದು ಸಿಎಂ ಹೇಳಿದ್ದಾರೆ. ಇನ್ನು ಗ್ಯಾರಂಟಿ ಯೋಜನೆಗಳ ಕಾರಣದಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂಬುದು ಸುಳ್ಳು. ಎಲ್ಲಾ ಕಡೆ ಅನುದಾನ ಕೊಡಲಾಗುತ್ತದೆ ಎಲ್ಲಾ ಕೆಲಸಗಳು ನಡೆಯುತ್ತಿವೆ. ಬೆಂಗಳೂರು ಸಿಟಿಯಲ್ಲಿ ನನ್ನ ಕ್ಷೇತ್ರದಲ್ಲಿ ರೂ. 130 ಕೋ. ಅನುದಾನ ತೆಗೆದುಕೊಂಡಿದ್ದೇನೆ. ಯಾವುದೇ ಸರಕಾರದಲ್ಲಿ ಇಷ್ಟು ಪ್ರಮಾಣದ ದುಡ್ಡು ನನ್ನ ಕ್ಷೇತ್ರಕ್ಕೆ ಸಿಕ್ಕಿರಲಿಲ್ಲ. ನಮ್ಮ ಸರಕಾರ ಬಂದ ಮೇಲೆ ದೊಡ್ಡ ಪ್ರಮಾಣದ ಅನುದಾನ ಸಿಕ್ಕಿದೆ. ಬೆಂಗಳೂರು ಉಸ್ತುವಾರಿ ಸಚಿವ ಡಿ. ಕೆ. ಶಿವಕುಮಾರ ನನ್ನ ಕ್ಷೇತ್ರಕ್ಕೆ ರೂ. 130 ಕೋ. ಅನುದಾನ ಕೊಟ್ಟಿದ್ದಾರೆ. ರೂ. 160 ಕೋ. ವೆಚ್ಚದ ರೋಡ್ ವೈಡನಿಂಗ್ ಕಾಮಗಾರಿಗೆ ಅನುಮತಿ ನೀಡಲಾಗಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಎಂದು ಅವರು ಹೇಳಿದರು.
ಅಭಿವೃದ್ಧಿಗಾಗಿ ಅನುದಾನ ಸಿಕ್ಕಿಲ್ಲ ಎಂದು ಆಡಳಿತ ಪಕ್ಷದ ಶಾಸಕರ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯ ನೀಡಿದ ಅವರು, ನಿರೀಕ್ಷೆ ಜಾಸ್ತಿ ಇದೆ. ಜನರು ನಮ್ಮ ಸರಕಾರದ ಮೇಲೆ ನಿರೀಕ್ಷೆ ಜಾಸ್ತಿ ಹೊಂದಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ಹೇಳಲ್ಲ. ಗ್ಯಾರಂಟಿ ಯೋಜನೆಗಳಿಗೆ ರೂ. 55000 ಕೋ. ಹಣ ಬೇಕಾಗುತ್ತದೆ. ಅನುದಾನ ನೀಡಲು ಸ್ವಲ್ಪ ಸಮಸ್ಯೆ ಆಗುತ್ತದೆ. ಸಮಸ್ಯೆ ಇಲ್ಲ ಅಂತ ಅಲ್ಲ. ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಅಭಿವೃದ್ಧಿ ಕೆಲಸಕ್ಕೆ ಅನುದಾನ ಕೊಡುತ್ತಿಲ್ಲ ಎಂಬ ರೀತಿ ಇಲ್ಲ. ಅಭಿವೃದ್ಧಿಗೆ ಹಣ ಕೊಡುತ್ತಿದ್ದೇವೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.