ದೇಶದ ವಕ್ಫ್ ಆಸ್ತಿ ಬಡವರಿಗೆ ಹೋಗಬೇಕು- ಪ್ರಧಾನಿಗೆ ಪತ್ರ ಬರೆಯುತ್ತೇನೆ- ಶಾಸಕ ಯತ್ನಾಳ

ವಿಜಯಪುರ: ದೇಶದ ವಕ್ಫ ಆಸ್ತಿ ಬಡವರಿಗೆ ಹೋಗಬೇಕು.  ವಿಜಯಪುರದಲ್ಲಿರು ವಕ್ಪ ಅಪ್ ಆಸ್ತಿ ಕುರಿತು ಹೈಕೋರ್ಟಿಗೆ ಹೋಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ವಿಜಯಪುರದಲ್ಲಿ ಬಿಜೆಪಿ ಆಯೋಜಿಸಲಾಗಿದ್ದ ತೈಲ ಬೆಲೆ ಹೆಚ್ಚಳ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ 12 ಲಕ್ಷ ಎಕರೆ ಜಮೀನು ವಕ್ಪ್ ಆಸ್ತಿ ಇದೆ.  ಇದನ್ನು‌ ಮಾಜಿ ಪ್ರಧಾನಿ ದಿ. ಜವಾಹರಲಾಲ ನೆಹರು ಮಾಡಿದ್ದಾರೆ.  ವಕ್ಪನವರು ಇದು ನಮ್ಮ ಆಸ್ತಿ ಎಂದರೆ ನ್ಯಾಯಾಲಯಕ್ಕೆ ಹೋಗಲಾಗಲ್ಲ.  ವಿಶೇಷ ನ್ಯಾಯಾಲಯಕ್ಕೆ ಹೋಗಬೇಕು.  ಅಲ್ಲಿ‌ ನ್ಯಾಯವಾದಿಯೂ ಮುಸ್ಲಿಂ ಇರುತ್ತಾನೆ.  ಎಲ್ಲರೂ ಅವರೇ ಅಲ್ಲಿ ನಮಗೆ ನ್ಯಾಯ ಸಿಗಲ್ಲ.  ನಮಗೆ ನೆಹರೂ ಮಾಡೆಲ್ ಬೇಡ.  ನಮಗೆ ಮೋದಿ ಯೋಜನೆ ಬೇಕು.  ವಿಜಯಪುರದಲ್ಲಿ ವಕ್ಪ ಅಪ್ ಆಸ್ತಿ ಕುರಿತು ಹೈಕೋರ್ಟ್ ಗೆ ಹೋಗುವೆ.  ದೇಶದ ವಕ್ಫ ಆಸ್ತಿ ಬಡವರಿಗೆ ಹೋಗಬೇಕು.  12 ಲಕ್ಷ ಎಕರೆ ವಕ್ಪ ಅಪ್ ಆಸ್ತಿ ಬಡವರಿಗೆ ಹೋಗಬೇಕು.  ಬಡವರಿಗೆ ಮನೆ ನಿರ್ಮಾಣ ಮಾಡಲು ಬಳಕೆ ಮಾಡಬೇಕು.  ಈ ಕುರಿತು ಪ್ರಧಾನಿಗೆ ಪತ್ರ ಬರೆಯುತ್ತೇನೆ ಎಂದು ಅವರು ಹೇಳಿದರು.

ಪ್ರಜ್ವಲ್ ರೇವಣ್ಣ ಅಸಹಜ ಲೈಂಗಿಕ ಆರೋಪ ಪ್ರಕರಣ

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ಬಳಿಕ ಈಗ ವಿಧಾನ ಪರಿಷತ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಇದೇ ವೇಳೆ ಕೇಳಿದ ಪ್ರಶ್ನೆಗೆ ಸ್ಪಷ್ಟಪಡಿಸಿದರು.

ತೈಲಬೆಲೆ ಹೆಚ್ಚಳ ವಿರೋಧಿಸಿ ವಿಜಯಪುರದಲ್ಲಿ ಬಿಜೆಪಿ ಕೈಗೊಂಡ ಪ್ರತಿಭಟನೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು.

ಲೋಕಸಭೆ ಚುನಾವಣೆ ಬಳಿಕ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ ವಿಚಾರ

ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಸರಕಾರ ಪೆಟ್ರೋಲ್, ಡೀಸೆಲ್ ಹಾಗೂ ಇತರ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ.  ಈಗ ಕುಡಿಯುವ ನೀರಿನ ಬೆಲೆಯನ್ನು ಏರಿಕೆ ಮಾಡುತ್ತೇವೆ ಎಂದು ಡಿಸಿಎಂ ಹೇಳುತ್ತಾರೆ.  ಗ್ಯಾರೆಂಟಿ ಯೋಜನೆಗಳನ್ನು ಕೊಟ್ಟುಬಿಟ್ಟರೆ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಸೀಟ್ ಗಳನ್ನು ಗೆಲ್ಲುತ್ತೆವೆ ಎಂದು ವಿಚಾರ ಮಾಡಿದ್ದರು.  ಇಂಥ ಪ್ರಯೋಗವನ್ನು ಕರ್ನಾಟಕದಲ್ಲಿ ಮಾಡಿದ್ದರು.  ತೆಲಂಗಾಣದಲ್ಲಿ ಯಶಸ್ವಿಯಾಗಿತ್ತು.  ಈ ಪ್ರಯೋಗವನ್ನು ದೇಶದಲ್ಲಿ ಮಾಡಲು ಮುಂದಾಗಿದ್ದರು.  ರಾಹುಲ ಗಾಂಧಿ ಕಟಾಕಟ್.. ಕಟಾ ಜಟ್.. ಕಟಾ ಕಟ್ ಎಂದು ತಿಂಗಳಿಗೆ ರೂ. 8500 ಹಣ ಹಾಕುತ್ತೇನೆ ಎಂದು ಹೇಳಿದ್ದರು.  ಆದರೆ, ಅದರಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು.

ಎಲ್ಲಾ ಟ್ಯಾಕ್ಸ್ ಹೆಚ್ಚು ಮಾಡಿದರೆ ತಿಂಗಳಿಗೆ ರೂ. 15000 ಕೋ. ಸಂಗ್ರಹವಾಗುತ್ತದೆ.  ಗ್ಯಾರೆಂಟಿಗಾಗಿ ಹತ್ತರಿಂದ ಹನ್ನೊಂದು ಸಾವಿರ ಕೋಟಿ ರೂಪಾಯಿ ಬೇಕು.  ತೆರಿಗೆ ಏರಿಕೆ ಮಾಡಿದ ಹಣವನ್ನೇ ಗ್ಯಾರಂಟಿಗೆ ಹಾಕಿಕೊಳ್ಳುತ್ತಾರೆ.  ಸರಕಾರ ಒಂದು ಕಡೆ ಕೊಟ್ಟಂತೆ ಮಾಡಿ ಮತ್ತೊಂದು ಕಡೆ ಟ್ಯಾಕ್ಸ್ ಮೂಲಕ ವಸೂಲಿ ಮಾಡುತ್ತಿದೆ.  ವಿದ್ಯುತ್ ದರ ಏರಿಕೆ ಮಾಡಿದ್ದಾರೆ.  ಉಚಿತ ಗ್ಯಾರಂಟಿ ಯೋಜನೆ ನೀಡುವಲ್ಲಿ ವಿಫಲರಾಗಿದ್ದಾರೆ.  ಸರಕಾರ ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯಬೇಕು.  ಇಲ್ಲವಾದರೆ ಇದರ ಪರಿಣಾಮವನ್ನು ವಿಧಾನಸಭೆಯಲ್ಲೂ ಎದುರಿಸಬೇಕಾಗುತ್ತದೆ.  ಹೋರಾಟ ಮಾಡುತ್ತೇವೆ ಎಂದು ಶಾಸಕರು ತಿಳಿಸಿದರು.

ನಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಲ್ಲ

ರಾಜ್ಯದಲ್ಲಿನ ತೈಲ ಬೆಲೆಗಿಂತ ಗೋವಾದಲ್ಲಿ ತೆಲೆಬೆಲೆ ಹೆಚ್ಚಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ನಾನು ಕರ್ನಾಟಕದ ಬಗ್ಗೆ ಮಾತನಾಡುತ್ತಿದ್ದೇನೆ.  ನಾನು ಗೋವಾದ ಲೀಡರ್ ಅಲ್ಲ.  ನಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಕೇಂದ್ರ ತರಿಗೆ ಹಣದಿಂದ ಸಾಕಷ್ಟು ಅಭಿವೃದ್ಧಿ ಮಾಡಿದೆ

ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದ ಅವರು, ಕೇಂದ್ರ ತೆರಿಗೆ ಮೂಲಕ ಸಂಗ್ರಹಿಸಿದ ಹಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ.  ಉತ್ತಮ ರಸ್ತೆಗಳನ್ನು ನಿರ್ಮಿಸಿದ.  ಉತ್ತಮ ಹೈವೆಗಳನ್ನು ಮಾಡಿದ.  ಪ್ರಧಾನ ಮೋದಿ ಪ್ರತಿಯೊಂದು ಕುಟುಂಬಕ್ಕೂ ಸೋಲಾರ್ ಲೈಟ್ ನೀಡುವುದಾಗಿ ಹೇಳಿದ್ದಾರೆ.  ಮೋದಿಯವರು ಭ್ರಷ್ಟಾಚಾರ ರಹಿತ ಆಡಳಿತ ಮಾಡಿದ್ದಾರೆ.  ಅವರ ಒಂದೇ ಒಂದು ಭ್ರಷ್ಟಾಚಾರ ಹೊರತೆಗೆಯಲು ಪ್ರತಿಪಕ್ಷಗಳಿಗೆ ಆಗಿಲ್ಲ.  ತೈಲ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೆ ನಿರ್ಧಾರವಾಗುತ್ತದೆ.  ಅಲ್ಲಿ ಏರಿಳಿತವಾಗಿರುತ್ತದೆ.  ನಿರ್ಧಾರ ಮಾಡುವ ಅಧಿಕಾರವನ್ನು ಕಂಪನಿಗಳಿಗೆ ನೀಡಿದ್ದೇವೆ.  ತೈಲ ಬೆಲೆ ಕಡಿಮೆಯಾದಾಗ ಕಡಿಮೆ ಮತ್ತು ಹೆಚ್ಚಾದಾಗ ಹೆಚ್ಚು ಮಾಡುತ್ತಾರೆ.  ತೈಲ ಬೆಲೆ ನಿಗದಿ ವಿಚಾರ ಕೇಂದ್ರ ಸರಕಾರದ ಕೈಯಲ್ಲಿಲ್ಲ ಎಂದು ಅವರು ಪ್ರತಿಭಟನೆಯಲ್ಲಿ ಭಾಷಣ ಮಾಡಿದರು.

ಬ್ರಿಟಿಷ್ ಮಾದರಿಯಲ್ಲಿ ಉಪ್ಪಿನ ಮೇಲೆ ಕರ ವಿಧಿಸಿದಂತೆ ದರ ಏರಿಕೆ ಮಾಡಿದ್ದಾರೆ.  ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ನೀಡುತ್ತಿಲ್ಲ.  ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಲಾಭ ಎಂದು ಅಧಿಕಾರಿಗಳು ಹೇಳಿದ್ದಾರೆ.  ಹಾಗಾದರೆ ಕೇವಲ ಮಹಿಳೆಯರಿಗೆ ಮಾತ್ರ ಗ್ಯಾರಂಟಿ ನೀಡಿದರೆ ಸಾಲದು.  ಬಿಪಿಎಲ್ ಕಾರ್ಡಿನ ಪುರುಷರಿಗಾದರೂ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಲಿ.  ಸರಕಾರದ ಖಜಾನೆ ಖಾಲಿಯಾಗಿದೆ.  ಈಗ ಗ್ಯಾರಂಟಿ ಬಂದ್ ಮಾಡಿದರೆ ಅಪಾಯ ಎಂದು ಮುಂದುವರೆಸಿದ್ದಾರೆ.  ಚುನಾವಣೆ ಪೂರ್ವ ರಾಹುಲ್ ಗಾಂಧಿ ಕಟಾ ಕಟ್.. ಕಟಾ ಕಟ್.. ಕಟಾ ಕಟ್… ಎಂದು ಭರವಸೆ ನೀಡಿದ್ದರು.  ಈಗ ಕಟಾ ಕಟಾ ಕೊಡ್ತಿರೋ ಅಥವಾ ಪಟಾ ಪಟ್ ಕೊಡಬೇಕೋ ಎಂದು ಮಹಿಳೆಯರು ರಾಹುಲ ಗಾಂಧಿಯನ್ನು ಕೇಳಬೇಕು ಎಂದು ಅವರು ಹೇಳಿದರು.

ರಾಜ್ಯ ಸರಕಾರದಿಂದ ಹಗಲು ದರೋಡೆ ಆರೋಪ

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಹಗಲು ದರೋಡೆ ನಡೆಸುತ್ತಿದೆ.  ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ.  ಜಮೀನು ಹಗರಣ ನಡೆಯುತ್ತಿದೆ.  ಕಂದಾಯ ಇಲಾಖೆ ಸಚಿವರ ಕ್ಷೇತ್ರದಲ್ಲಿ ಕೋಟಿ ಕೋಟಿ ಬೆಲೆ ಜಮೀನು ನಕಲಿ ದಾಖಲೆ ಮೂಲಕ ಬೇರೆಯವರಿಗೆ ನೀಡಲಾಗಿದೆ.  ಇದರಲ್ಲಿ ಇಬ್ಬರು ಸಚಿವರು ಭಾಗಿಯಾಗಿದ್ದಾರೆ.  ಈ ಕುರಿತು ನಾನು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದೇನೆ.  ನಕಲಿ ದಾಖಲೆ ಜಮೀನು ಕಬಳಿಕೆ ಕುರಿತು ತನಿಖೆ ಮಾಡಬೇಕು ಎಂದು ಅವರು ಹೇಳಿದರು.

ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಗಜಕೇಸರಿ ಯೋಗ ಎಂದು ಎಪಿಎಂಸಿ ಸಚಿವರು  ಹಣ ವಸೂಲಿ ಮಾಡಿದ್ದಾರೆ.  ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಎಪಿಎಂಸಿ ಮೂಲಕ ಹಣ ವಸೂಲಿ ಮಾಡಿದ್ದಾರೆ.  ಆದರೆ‌ ವ್ಯಾಪಾರಸ್ಥರು‌ ಹೆದರಿ ಬಾಯಿ ಬಿಡುತ್ತಿಲ್ಲ.  ವಾಲ್ಮಿಕಿ ನಿಮಗಮದಲ್ಲಿ ರೂ. 187 ಕೋ. ವಂಚನೆ ಆಗಿದೆ.  ಇಲ್ಲಿರುವ ಹಣ  ಆಂದ್ರದಲ್ಲಿ ಜಮಾ ಆಗಿವೆ.  ಜುವೆಲರಿ. ಬಾರ್ ಹಾಗೂ ಪೆಟ್ರೋಲ್ ಬಂಕ್‌ನಲ್ಲಿ ಜಮಾವಣೆ ಆಗುತ್ತಿದೆ.  18 ನಕಲಿ  ಖಾತೆಗಳಲ್ಲಿ ‌ಜಮಾವಣೆ ಆಗಿದೆ ಎಂದು ಶಾಕಸಕರು ವಾಗ್ದಾಳಿನ ನಡೆಸಿದರು.

ಬಿಜೆಪಿ ಸಂವಿಧಾನ ಮಾಡಲ್ಲ

ಬಿಜೆಪಿ ಸಂವಿಧಾನ ಬದಲಾವಣೆ ಮಾಡಲ್ಲ.  ನಾವು ಸಂವಿಧಾನ ಬದಲಾವಣೆ ಮಾಡಲ್ಲ.  ಸೂರ್ಯ ಚಂದ್ರ ಇರುವವರೆಗೆ ಬದಲಾಗಲ್ಲ.  ನಾವು ಸಂವಿಧಾನ ಬದಲಾಯಿಸಲು ಬಂದಿಲ್ಲ.  ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆಯುತ್ತೇವೆ ಎಂದು ಅವರು ಭರವಸೆ ನೀಡಿದರು.

ಸಿಎಂ ರಾಜೀನಾಮೆ ನೀಡಲಿ

ಅನುದಾನ ಮತ್ತು ಅಭಿವೃದ್ಧಿ ಇಲ್ಲದೇ ಆಡಳಿತ ಪಕ್ಷದ ಶಾಸಕರು ಸಮಾಧಾನದಿಂದ ಇಲ್ಲ.  ಸಿಎಂ ಮತ್ತು ಡಿಸಿಎಂ ಹಣ ನೀಡುತ್ತಿಲ್ಲ.  ಯಾವುದೇ ಅಭಿವೃದ್ಧಿ ಕಾಮಗಾರಿ ಇಲ್ಲ.  ಸಿಎಂಗೆ ಆಡಳಿತ ಮಾಡಲು ಆಗುತ್ತಿಲ್ಲ.  ಆಡಳಿತ ಮಾಡದಿದ್ದರೆ ಸಿಎಂ ರಾಜೀನಾಮೆ ನೀಡಿ ಚುನಾವಣೆಗೆ ಹೋಗಿ ಎಂದು ಅವರು ಒತ್ತಾಯಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ.  ಹಿಂದೂಗಳ ಮೇಲೆ ಹಲ್ಲೆ, ಕೊಲೆ ಆಗುತ್ತಿವೆ.  ಸರಕಾರ ಕಣ್ಕುಚ್ಚಿ ಕುಳಿತಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

Leave a Reply

ಹೊಸ ಪೋಸ್ಟ್‌