ಶಾಸಕ ಯತ್ನಾಳ ವಕ್ಫ್ ಬಗ್ಗೆ ತಿಳಿದುಕೊಂಡು ಮಾತನಾಡಲಿ- ಎಸ್. ಎಂ. ಪಾಟೀಲ ಗಣಿಹಾರ
ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ವಕ್ಫ್ ಬಗ್ಗೆ ತಿಳಿದುಕೊಂಡು ಮಾತನಾಡಲಿ ಎಂದು ಕೆಪಿಸಿಸಿ ವಕ್ತಾರ ಎಸ್. ಎಂ. ಪಾಟೀಲ ಗಣಿಹಾರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ರೀಚೆಗೆ ಬಿಜೆಪಿ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಯತ್ನಾಳ ಅವರು ವಕ್ಫ್ ಕಾನೂನು ರದ್ದುಪಡಿಸಲು ಪ್ರಧಾನಿಗೆ ಪತ್ರ ಬರೆಯುವಿದಾಗಿ ಹೇಳಿದ್ದಾರೆ. ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿಯೇ ವಕ್ಫ್ ಕಾನೂನು ಇದೆ. ಮುಜರಾಯಿಯಂತೆ ವಕ್ಫ್ ನಲ್ಲೂ ಇದೆ. ಮುಸ್ಲಿಂ ಸಮಾಜಕ್ಕೆ ಸೇರಿದ ವ್ಯಕ್ತಿಗಳು, ವಸ್ತು ಅಥವಾ ಆಸ್ತಿಯನ್ನು ಅಲ್ಲಾ(ದೇವರು)ನ ಹೆಸರು ಮೇಲೆ […]