ಶಾಸಕ ಯತ್ನಾಳ ವಕ್ಫ್ ಬಗ್ಗೆ ತಿಳಿದುಕೊಂಡು‌ ಮಾತನಾಡಲಿ- ಎಸ್. ಎಂ. ಪಾಟೀಲ ಗಣಿಹಾರ

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ವಕ್ಫ್ ಬಗ್ಗೆ ತಿಳಿದುಕೊಂಡು‌ ಮಾತನಾಡಲಿ ಎಂದು ಕೆಪಿಸಿಸಿ ವಕ್ತಾರ ಎಸ್. ಎಂ. ಪಾಟೀಲ ಗಣಿಹಾರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ರೀಚೆಗೆ ಬಿಜೆಪಿ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಯತ್ನಾಳ‌ ಅವರು ವಕ್ಫ್ ಕಾನೂನು ರದ್ದುಪಡಿಸಲು‌ ಪ್ರಧಾನಿಗೆ ಪತ್ರ ಬರೆಯುವಿದಾಗಿ ಹೇಳಿದ್ದಾರೆ. ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿಯೇ ವಕ್ಫ್ ಕಾನೂನು ಇದೆ. ಮುಜರಾಯಿಯಂತೆ ವಕ್ಫ್ ನಲ್ಲೂ ಇದೆ. ಮುಸ್ಲಿಂ ಸಮಾಜಕ್ಕೆ ಸೇರಿದ ವ್ಯಕ್ತಿಗಳು, ವಸ್ತು ಅಥವಾ ಆಸ್ತಿಯನ್ನು ಅಲ್ಲಾ(ದೇವರು)ನ ಹೆಸರು ಮೇಲೆ ಬಿಟ್ಟು ಕೊಟ್ಟಾಗ ಅದು ವಕ್ಫ್ ಆಸ್ತಿ ಆಗಿರುತ್ತದೆ. ವಕ್ಫ್ ಆಸ್ತಿಬಗ್ಗೆ ಶಾಸಕರು‌ ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಓದಿಕೊಳ್ಳಬೇಕು.

ವಕ್ಫ ಕಾನೂನಿನ ಬಗ್ಗೆ ಮಾತಾಡುವ ಯತ್ನಾಳ ಅವರಿಗೆ ಸಂವಿಧಾನದ ಬಗ್ಗೆ ಮಾತಾಡಲು ಅವರಿಗೆ ಹಕ್ಕಿಲ್ಲ. ಜೆಡಿಎಸ್ ನಿಂದ ನಿಂತು ಸೋತಾಗ ಇದರ ಬಗ್ಗೆ ಅರಿವು ಇರಲಿಲ್ಲವಾ ಮುಸ್ಲಿಮರ ಓಟು ಕೇಳುವಾಗ ಗೊತ್ತಿರಲಿಲ್ಲವೇ. ಮಾತೆತ್ತಿದರೆ ಪಾಕಿಸ್ತಾನಕ್ಕೆ ಹೋಗಿ ಅಂತಾರೆ. ಪಾಕಿಸ್ತಾನ ಮುಸ್ಲಿಂ ದೇಶ ಅಲ್ಲ. ಪಾಕಿಸ್ತಾನವನ್ನು ಒಡೆದು ಕೊಟ್ಟವರೇ ಸಂಘ ಪರಿವಾರದವರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಪ್ಲಾನಿಂಗ್ ಇತ್ತು. ಇದರ ಬಗ್ಗೆ ಹಿಂದೂ ಮಹಾಸಭಾ ನಿರ್ಣಯಗಳನ್ನು ಕೈಗೊಂಡಿರುವ ಕುರಿತು ರೆಕಾರ್ಡ್ ಗಳಲ್ಲಿ ಇವೆ. ಆ ದಾಖಲೆಗಳನ್ನು ನೋಡಬಹುದು. ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಿ ಎನ್ನುಲು ನಿಮಗೆ ಯಾವ ಹಕ್ಕಿದೆ? ನೀವು ಮಾನ ಮರ್ಯಾದೆ ಕಳೆದುಕೊಂಡು ನಾಲಿಗೆಯ ಮೇಲೆ ಹಿಡತವಿಲ್ಲದೆ ಮಾತನಾಡುತ್ತಿದ್ದೀರಿ. ಶಾಸಕ ಸ್ಥಾನಕ್ಕೆ ಗೌರವಕ್ಕಾದರೂ ನಾಲಿಗೆ ಹಿಡಿತದಲ್ಲಿ ಇಟ್ಟುಕೊಳ್ಳಿ. ಅಹಿಂದ ವರ್ಗಕ್ಕೆ ಓಟಿಂಗ್ ಪವರ್ ಕೊಡುವುದಾದರೆ ನಮಗೆ ಸ್ವಾತಂತ್ರ್ಯ ಬೇಡ ಎಂದು ಬರೆದು ಕೊಟ್ಟವರ ಪಕ್ಷದಲ್ಲಿ ನೀವು ಇದ್ದೀರಿ. ಅದನ್ನು ತಿಳಿದುಕೊಳ್ಳಿ.
ಭಾರತದ ಮುಸ್ಲಿಮರಿಗೂ ಮೊಘಲರಿಗೂ ಹೊರದೇಶದ ಮುಸ್ಲಿ‌ಮರಿಗೂ ಸಂಭಂದವಿಲ್ಲ. ಇಸ್ಲಾಮ ಧರ್ಮದಲ್ಲಿ ಬೇರೆಯವರ ಆಸ್ತಿ, ಧಾರ್ಮಿಕ ಸ್ಥಳಗಳನ್ನು ಮುಟ್ಟಿದರೆ ಮಾಡಿದರೆ ಅವನು ಮುಸ್ಲಿಮ್ ಅಲ್ಲಾ ಎಂದು ಅವರ ಧರ್ಮ ಸಾರಿಸಾರಿ ಹೇಳುತ್ತಿದೆ ಎಂದು ಅವರು ಹೇಳಿದರು.

ಈ ದೇಶಕ್ಕೆ ಕೇರಳದಲ್ಲಿ ಇಸ್ಲಾಂ ಬಂದಿದೆ. ನಂತರ ಇಡೀ ಭಾರತ ದೇಶದಲ್ಲಿ ಬಂದಿದೆ. ದ್ರಾವಿಡರು ಪರಿವರ್ತನೆಯಾಗಿ ಮುಸ್ಲಿಮ್ ಆಗಿದ್ದಾರೆ. ಅಂಬೇಡ್ಕರ್ ಅವರು ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದು ಹೇಳಿದ್ದಾರೆ ಎಂದು ಯತ್ನಾಳ ಸುಳ್ಳು ಹೇಳುತ್ತಾರೆ. ಎಲ್ಲಾ ವರ್ಗಗಳು ಸಮನಾಗಿ ಇರಬೇಕು ಎಂದು ಅಂಬೇಡ್ಕರ ಅವರು ಸಂವಿಧಾನ ಬರೆದಿದ್ದಾರೆ ಎಂದು ಗಣಿಹಾರ ಹೇಳಿದರು.

ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೀವು ಏನು ಇದ್ದಿರಿ? ಎಲ್ಲಿಗೆ ಬಂದು ಮುಟ್ಟಿದದೀರಿ ಎಂಬುದು ಅವಲೋಕನ ಮಾಡಿಕೊಳ್ಳಿ. ಸತ್ಯಹರಿಶ್ಚಂದ್ರನ ವಂಶಸ್ಥರೇ ಆಗಿದ್ದರೆ ಉತ್ತರಿಸಿ. ಹಿರೆಬೇವನೂರ ರೈತರ ಹೆಸರಿನಲ್ಲಿ ಸಾಲಮಾಡಿ, ಸಕ್ಕರೆ ಕಾರ್ಖಾನೆ ಮಾಡಲು ಸಿದ್ಧೇಶ್ವರ ಬ್ಯಾಂಕ್ ದಿವಾಳಿ ಮಾಡಿದಿರಿ. ರೈತರನ್ನು ಸಾಲಗಾರರನ್ನಾಗಿ ಮಾಡಿದ್ದೀರಿ. ಸಿದ್ಧಸಿರಿ ಸೊಸೈಟಿ ಮಾಡಿ ಬ್ಯಾಂಕ್ ಎಂದು ಬಿಂಬಿಸಿದಿರಿ, ಅದರ ಅಡಿಟ್ ರಿಪೋರ್ಟ್ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ, ಆಸ್ಪತ್ರೆಗೆ ಹಣ ಎಲ್ಲಿಂದ ಬಂತು? ಅವರ ಹೆಸರಿನಲ್ಲಿ ಯಾಕೆ ಮಾಡ್ತಿರಿ? ನಿಮ್ಮದೇ ಫೋಟೊ ಹಾಕಿಕೊಳ್ಳಿ.
ಮಾಜಿಮಂತ್ರಿ ನಾಗೇಂದ್ರ ಅವರ ಭ್ರಷ್ಟಾಚಾರದ ಬಗ್ಗೆ ಮಾತಾಡಿದಿರಿ. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿ. ರಾಮನ ಹೆಸರು ಎತ್ತಲು ನಿಮಗೆ ನೈತಿಕ ಹಕ್ಕಿಲ್ಲ. ಮಹಾನಗರ ಪಾಲಿಕೆ ನಿಮ್ಮ ಕೈಯಲ್ಲಿಟ್ಟುಕೊಂಡು ಭ್ರಷ್ಟಾಚಾರ ಮಾಡಿದಿರಿ. ಸಚಿವ ಶಿವಾನಂದ ಪಾಟೀಲ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಹೇಳಿದ್ದಾರೆ. ರೂ. 40 ಸಾವಿರ ಕೋ. ಹಗರಣ ಬಿಜೆಪಿಯ ಅವಧಿಯಲ್ಲಿಯೇ ಹಗರಣ ಆಗಿದೆ ಎಂದು ಹೇಳಿದ್ದೀರಿ. ಈ ಆರೋಪಗಳಿಗೆ ದಾಖಲೆ ಕೊಟ್ಟು ಪ್ರೂವ್ ಮಾಡಿ. ‌ಮೊದಲು ನೀವು ಪ್ರಾಮಾಣಿಕರಾಗಿದ್ದುಕೊಂಡು ಇನ್ನೊಬ್ಬರ ಮೇಲೆ ಅರೋಪ ಮಾಡಿ. ದಾಖಲೆ ಇದ್ದರೆ ಕೊಡಿ. ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡುತ್ತೇವೆ, ಮುಂದಿನ ಚುನಾವಣೆಯಲ್ಲಿ ಮಣ್ಣುಮುಕ್ಕಿಸುವ ವರೆಗೂ ಬಿಡುವುದಿಲ್ಲ ಎಂದು ಎಸ್. ಎಂ. ಪಾಟೀಲ‌ ಗಣಿಹಾರ ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ನಾಗರಾಜ ಲಂಬು, ಫಯಾಜ್ ಕಲಾದಗಿ. ಡಾ. ರವಿಕುಮಾರ ಬಿರಾದಾರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌