ಬಸವ ನಾಡಿನಲ್ಲಿ ಕಂದಾಯ ದಿನಾಚರಣೆ ಪ್ರಯುಕ್ತ ಶ್ರಮದಾನ ಕಾರ್ಯಕ್ರಮ
ವಿಜಯಪುರ: ಜಿಲ್ಲಾಡಳಿತ ಮತ್ತು ಕಂದಾಯ ಇಲಾಖಾ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕಂದಾಯ ದಿನ ಆಚರಣೆಯ ಅಂಗವಾಗಿ ಶ್ರಮದಾನದ ಮೂಲಕ ಸ್ವಚ್ಚತೆ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಕಂದಾಯ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಅಧಿಕಾರಿ,ಸಿಬ್ಬಂದಿ ಜೊತೆಗೂಡಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸ್ವಚ್ಚತಾ ಶ್ರಮದಾನ ಕೈಗೊಂಡು, ನಂತರ ಜಿಲ್ಲಾ ಪಂಚಾಯಿತಿಯ ರಸ್ತೆಯಲ್ಲಿರುವ ಚುನಾವಣಾ ವ್ಹೇರ್ ಹೌಸ್ ಆವರಣದಲ್ಲಿ ಗಿಡ ನೆಟ್ಟು ಸಸಿಗೆ ನೀರೆರೆದು ಮಾತನಾಡಿದ ಅವರು, ಸ್ವಚ್ಚತಾ ಕಾರ್ಯಕ್ರಮವು ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನವು […]