ವಿಜಯಪುರ: ಹಿಂದೂಗಳ ಸಹಿಷ್ಣತೆ ಹೊಂದಿದವವರನ್ನು ಮತ್ತು ಕೆಡವುದುದ ಕೆಲವರ ಚಾಳಿಯಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಕುರಿತು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ ಗಾಂಧಿ ನೀಡಿರುವ ಹೇಳಿಕೆಯ ಕುರಿತು ಕೇಳಲಾದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ರಾಹುಲ್ ಗಾಂಧಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಶ್ರೀಗಳು, ಸಹಿಷ್ಣು ಆಗಿರುವವರನ್ನು ಕೆದಕುವುದು,ಮತ್ತು ಕೆಡುವುವುದು ಕೆಲವರ ಚಾಳಿ ಆಗಿದೆ. ಸಹಿಷ್ಟತೆ ಗುಣ ಹೊಂದಿರುವವರನ್ನು ಕೂಡ ಕೆಣಕಬೇಕು. ಹಾಗೆ ಕೆಣಕಿ ಒಂದಿಷ್ಟು ಗೊಂದಲ ಸೃಷ್ಟಿ ಮಾಡಬೇಕು. ತಮ್ಮ ಬೇಳೆ ಬೇಯಿಸಿಕೊಳ್ಳಬೇಕು ಎಂಬುದು ಅವರ ದುರುದ್ದೇಶವಾಗಿದೆ ಎಂದು ಹೇಳಿದರು.
ಎರಡು ಪ್ರಮುಖ ಪಂಗಡಗಳನ್ನು ಒಡೆಯುವುದು ಸರಿಯಲ್ಲ
ಸಮಾಜದ ಎರಡು ಪ್ರಮುಖ ಪಂಗಡಗಳನ್ನು ಒಡೆಯುವುದು, ಅಲ್ಲಿ ಬೆಂಕಿ ಹಚ್ಚುವುದು ಏನು ಕಷ್ಟದ ಕೆಲಸ ಅಲ್ಲ ಎಂದು ಹೇಳಿದ ಅವರು, ಈಗ ಮಣಿಪುರದಲ್ಲಿ ಬೆಂಕಿ ಹಚ್ಚಿದ್ದಾಗಿದೆ. ಇವತ್ತಿಗೂ ಅದನ್ನ ತಣಿಸಲು ಸಾಧ್ಯ ಆಯ್ತಾ? ಎಂದು ಪ್ರಶ್ನಿಸಿದರು.
ಪರಿಸ್ಥಿತಿ ಹೀಗಿರುವಾಗ ರಾಜಕೀಯ ನಾಯಕರು ಮತ್ತು ಮುಖಂಡರು ಇಂಥ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅಂಥವರನ್ನು ಸಮಾಜ ಮೊದಲು ದೂರ ಇಡಬೇಕು ಎಂದು ಅವರು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆ ವಿಚಾರ
ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಹಿನ್ನೆಡೆಯಾಗಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪೇಜಾವರ ಶ್ರೀಗಳು, ನಮ್ಮಲ್ಲಿ ಬಡತನ ಇದೆ. ಬಡತನ ಇರುವ ಕಡೆ ಆಸೆ- ಆಮಿಷೆಗಳಿಗೆ ಒಳಗಾಗಿ ಪ್ರತಿಪಕ್ಷವನ್ನು ಗೆಲ್ಲಿಸಿದ್ದಾರೆ ಎನ್ನಬಹುದು. ದುಡ್ಡು ಕೊಡುತ್ತೇವೆ ಎಂದು ಹೇಳಿದರೆ ಆಗಲ್ಲ. ಇಂಥ ಸೋಲು ಮತ್ತು ಮೋಸದ ಸೋಲು ಸಹಜ. ಹೀಗಾಗಿ ಅವರ ಮೇಲಿನ, ಅವರ ಪ್ರಭಾವದ ಕಾಲದ ಮೇಲೆ ಕಡಿಮೆ ಆಯ್ತೋ ಅಥವಾ ದುಡ್ಡಿನ ವ್ಯಾಮೋಹ ಹಾಗೂ ಮೋಸದ ಕೆಲಸ ಹೆಚ್ವು ಕೆಲಸ ಮಾಡಿತೋ ಎಂಬುದನ್ನು ತೀರ್ಮಾನ ಮಾಡುವುದು ಕಷ್ಟ. ಇದರಿಂದ ಧಾರ್ಮಿಕ ನಂಬಿಕೆಗಳಿಗೆ ಹೊಡೆತ ಎಂದು ಭಾವಿಸಬಾರದು ಎಂದು ಅವರು ಹೇಳಿದರು.
ಅವರನ್ನು ಸೋಲಿಸಿ ನಮ್ಮನ್ನು ಗೆಲ್ಲಿಸಿದರೆ ನಾವಿಷ್ಟು ಕೊಡುತ್ತೇವೆ ಎಂದು ಅವರು ಹೇಳಿದ್ದು ಮೋಸವಲ್ಲವೇ? ಈಗ ಅವರು ಕೊಟ್ಟಿದ್ದಾರಾ? ಮೋಸದಿಂದ ಸಾಧನೆ ಮಾಡಿರುವುದನ್ನು ವಿಜಯ, ಮತ್ತೋಬ್ಬರ ಸೋಲು ಎಂದು ಹೇಗೆ ಭಾವಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಸಮಾಜದಲ್ಲಿ ಯಾವುದೇ ಒಬ್ಬ ವ್ಯಕ್ತಿ ಸುಳ್ಳು ಆಶ್ವಾಸನೆ ಕೊಟ್ಟು ಮೋಸ ಮಾಡಿದರೆ ಕ್ರಿಮಿನಲ್ ಕೇಸ್ ಆಗುತ್ತದೆ. ಅದು ರಾಜಕೀಯ ಪಕ್ಷಗಳಿಗೆ ಹೇಗೆ ಅನ್ವಯವಾಗುವುದಿಲ್ಲ? ಅದು ತಪ್ಪಲ್ಲವೇ? ತಾವು ಕೊಟ್ಟ ಕೊಟ್ಟ ಮಾತನ್ನು ಉಳಿಸಿಕೊಂಡರೆ ಅದು ಮೋಸವಲ್ಲ. ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬಂದರೆ ಹಣ ನೀಡುವುದಾಗಿ ಹೇಳಿದ್ದರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಾತು ಗೆಲ್ಲಿಸಿದರೆ ಹಣ ಕೊಡುವುದಾಗಿ ಹೇಳಿದ್ದರು. ನಾವು ನೀವು ಅದರ ಬಗ್ಗೆ ಈಗ ಹೆಚ್ಚು ಚರ್ಚೆ ಮಾಡಬೇಕಿಲ್ಲ ಎಂದು ಸ್ವಾಮೀಜಿ ಹೇಳಿದರು.
ರಾಜ್ಯದಲ್ಲಿ ಬಿಜೆಪಿಗೆ ಸ್ವಪಕ್ಷೀಯರೇ ಕಾರಣ ಆರೋಪ ವಿಚಾರ
ರಾಜ್ಯದಲ್ಲಿ ಬಿಜೆಪಿ ಸೋಲಿಸಲು ಸ್ವಪಕ್ಷೀಯರೇ ಕಾರಣ ಎಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆ ರೀತಿ ಇರಬಹುದು. ಆದರೆ, ಅದರ ಬಗ್ಗೆ ನಾವು ಅದರೊಳಗೆ ಹೆಚ್ಚು ತಲೆ ಹಾಕಲ್ಲ. ಅದರೊಳಗೆ ನಾವು ಕೆಲಸ ಮಾಡುವುದಿಲ್ಲ. ನಾವು ಸಮಾಜದ ಒಳ್ಳೆಯ ಕೆಲಸ ಮಾಡುವವರು ಎೞದು ಅವರು ಸ್ಪಷ್ಪಡಿಸಿದರು.
ರಾಮ ಮಂದಿರ ಸೋರಿಕೆ ವಿಚಾರ
ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮ ಮಂದಿರ ಸೋರಿಕೆ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಮ ಮಂದಿರ ಉದ್ಘಾಟನೆ ತರಾತುರಿಯಲ್ಲಿ ನಡೆದಿಲ್ಲ. ಮಳೆ ಬಂದಾಗ ಮೇಲ್ಛಾವಣಿಯಿಂದ ನೀರು ಬೀಳುವುದು ಸಹಜ. ಮೇಲ್ಛಾವಣೆ ಪೂರ್ಣಗೊಂಡ ಬಳಿಕ ಈ ಸಮಸ್ಯೆ ಇರುವುದಿಲ್ಲ. ಹೀಗಾಗಿ ಇದಕ್ಕೆ ದೇವಸ್ಥಾನ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸುವುದು ಸರಿಯಲ್ಲ. ಒಂದು ವರ್ಷದಲ್ಲಿ ರಾಮ ಮಂದಿರ ಕಟ್ಟಡ ನಿರ್ಮಾಣ ಪೂರ್ಣವಾಗಲಿದೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲು ಉಂಟಾಗಿರುವುದಕ್ಕೆ ಪ್ರತಿಪಕ್ಷಗಳ ಆಸೆ- ಆಮಿಷಗಳೇ ಕಾರಣ. ಮೋಸದಿಂದ ಸಾಧಿಸಿದ್ದನ್ನು ವಿಜಯ ಎಂದು ಹೇಳಲು ಆಗುವುದಿಲ್ಲ ಎಂದು ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಗೋಪಾಲ ನಾಯಕ, ಬಿಜೆಪಿ ಮುಖಂಡ ಪ್ರಕಾಶ ಅಕ್ಕಲಕೋಟ, ಶ್ರೀಪಾದ ಸಿಂಗಮಲ್ಲೆ, ಅಶೋಕ ರಾವ, ವಿಜಯ ಜೋಶಿ, ವಿಕಾಸ ಪದಕಿ, ರಾಕೇಶ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.