ಡೆಂಗ್ಯೂ ನಿಯಂತ್ರಣ: ಕಾರ್ಪೋರೇಟರ್ ಶಿವರುದ್ರ ಬಾಗಲಕೋಟ ಸಮ್ಮುಖದಲ್ಲಿ ಪಾಲಿಕೆಯಿಂದ ಕ್ರಿಮಿನಾಶಕ ಸಿಂಪಡಣೆ

ವಿಜಯಪುರ: ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗ್ಯೂ ಜ್ವರದ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ವಾರ್ಡ್ ಸಂಖ್ಯೆ 32 ರಲ್ಲಿ ಬರುವ ನಾನಾ ಬಡಾವಣೆಗಳಲ್ಲಿ ಡೆಂಗ್ಯೂ ಹಾಗೂ ಇತರೆ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣಕ್ಕಾಗಿ ಲಾರ್ವಾ ಸಂತತಿ ಉತ್ಪತ್ತಿ ತಾಣಗಳಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರುದ್ರ ಬಾಗಲಕೋಟ, ರಾಜ್ಯಾದ್ಯಂತ ಡೆಂಗ್ಯೂ ಹಾವಳಿ ಹೆಚ್ಚಾಗಿದ್ದು ಕೆಲವೇ ದಿನಗಳಲ್ಲಿ 700 ಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.  ಶುದ್ಧ ನೀರು ಇರುವ ಸಣ್ಣಪುಟ್ಟ ಸ್ಥಳದಲ್ಲಿಯೇ ಡೆಂಗ್ಯೂ ಜ್ವರ ಹರಡುವ ಇಡಿಸ್ ಸೊಳ್ಳೆ ಉತ್ಪತ್ತಿಯಾಗುತ್ತವೆ. ಹೀಗಾಗಿ ಈ ರೋಗ ಉತ್ಪತ್ತಿ ತಾಣಗಳಾದ ತೆಂಗಿನ ಚಿಪ್ಪು, ಸಂಗ್ರಹಿಸಿಟ್ಟ ನೀರಿನ ತೊಟ್ಟಿ, ಡ್ರಮ್ ಗಳು, ಖಾಲಿ ಪ್ಲಾಸ್ಟಿಕ್ ಬಾಟಲಿಗಳು, ಟೈರ್ ಟ್ಯೂಬ್ ಗಳು, ನೀರು ನಿಲ್ಲಲು ಅವಕಾಶ ಇರುವ ತಾಣಗಳನ್ನು ಗುರುತಿಸಿ ಸೊಳ್ಳೆ ಉತ್ಪತ್ತಿಯಾಗುವುದನ್ನು ತಡೆಯಲಾಗುತ್ತಿದೆ ಎೞದು ತಿಳಿಸಿದರು.

ವಿಜಯಪುರ ನಗರದ ವಾರ್ಡ್ ಸಂಖ್ಯೆ 32ರಲ್ಲಿ ಮಹಾನಗರ ಪಾಲಿಕೆ ವತಿಯಿಂದ ಡೆಂಗ್ಯೂ ನಿಯಂತ್ರಣಕ್ಕಾಗಿ ಕ್ರಿಮಿನಾಶಕ ಸಿಂಪಡಣೆ ಮಾಡಲಾಯಿತು.

 

ಇದೇ ವೇಳೆ, ಇಡಿಸ್ ಸೊಳ್ಳೆಗಳ ಉಗಮ ತಾಣಗಳಾದ ಮನೆಯ ಒಳಗೆ ಮತ್ತು ಹೊರಗೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಹಾಗೂ ಸುತ್ತ ಮುತ್ತಲಿನ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕೆಂದು ಸಾರ್ವಜನಿಕರಿಗೆ ವಿನಂತಿ ಮಾಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕ ಜಟ್ಟೆಪ್ಪ ಬಿ. ಕಟ್ಟಿ, ನೈರ್ಮಲ್ಯ ಮೇಲ್ವಿಚಾರಕ ಧನಂಜಯ ನಿಮಗ್ರೆ, ಸ್ಯಾನಿಟೈಸರ್ ಸೂಪರ್ವೈಸರ್  ರಾಜು ತಾಂಬಾ, ಸಿಬ್ಬಂದಿಯಾದ ಸನ್ನಿ ಶಿಂದೆ, ಪರಸು ಗೊಲ್ಲರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌