ಅಪಘಾತ ತಗ್ಗಿಸಲು ಸುರಕ್ಷತಾ ಉಪಕ್ರಮ ಕೈಗೊಳ್ಳಿ- ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ
ವಿಜಯಪುರ: ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿಗ್ನಲ್ ರೋಡ ಬ್ಯಾರಿಕೇಡ್, ಮಾಹಿತಿ ಫಲಕ, ತಿರುವು ರಸ್ತೆಗಳ ಮಾಹಿತಿ, ವೃತ್ತಗಳ ಮಾಹಿತಿ ಅಳವಡಿಸುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾಡಿದ ಅವರು, ರಸ್ತೆ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳುವಳಿಕೆ ನೀಡಬೇಕು. ರಸ್ತೆಯ ಸುಧಾರಣೆ ಕೈಗೊಂಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದ […]
ಗುಂಟಾ ನಿವೇಶನಗಳ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ- ಡಿಸಿ ಟಿ. ಭೂಬಾಲನ್ ಸೂಚನೆ
ವಿಜಯಪುರ: ನಗರಾದ್ಯಂತ ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಕೆಲ ಭೂ ಮಾಲೀಕರು ತಮ್ಮ ಕೃಷಿ ಜಮೀನುಗಳನ್ನು ಖಾಸಗಿಯಾಗಿ ವಿಭಾಗಿಸಿ ಗುಂಟೆವಾರು ನಿವೇಶನಗಳನ್ನು ರಚಿಸಿ ಮಾರಾಟ ಮಾಡುವುದು ನಿಯಮ ಬಾಹಿರವಾಗಿದ್ದು, ಈ ರೀತಿಯ ಅನಧಿಕೃತ ಗುಂಟಾ ನಿವೇಶನಗಳ ನಿರ್ಮಾಣಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಸರಕಾರದಿಂದ ಅನುಮೋದನೆಯಾದ ಮಹಾಯೋಜನೆಯಲ್ಲಿ ಪ್ರಸ್ತಾಪಿಸಿರುವ ರಸ್ತೆಗಳಲ್ಲಿ ನಿವೇಶನ-ಕಟ್ಟಡಗಳನ್ನು […]
ಗುಮ್ಮಟ ನಗರಿಯಲ್ಲಿ ಜೆಸಿಬಿ ಘರ್ಜನೆ- ಬೆಳ್ಳಂಬೆಳಿಗ್ಗೆ ಅತೀಕ್ರಮಣ ತೆರವು
ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಬೆಳ್ಳಂಬೆಳಿಗ್ಗೆ ಜೆಸಿಬಿ ಘರ್ಜಿಸಿವೆ. ನಗರದ ಗಾಂಧಿಚೌಕಿನ ಆಜಾದ್ ರಸ್ತೆಯಲ್ಲಿರುವ ಅಂಗಡಿಗಳ ಅಕ್ರಮ ಭಾಗ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. 10ಕ್ಕೂ ಹೆಚ್ಚು ಅಕ್ರಮ ಅಂಗಡಿಗಳು ಅತೀಕ್ರಮಿಸಿರುವ ಕಟ್ಟೆದ ಭಾಗವನ್ನು ತೆರವು ಮಾಡಲಾಗುತ್ತಿದೆ. ಒಟ್ಟು ನಾಲ್ಕು ಜೆಸಿಬಿಗಳನ್ನು ಈ ಕಾರ್ಯಾಚರಣೆಗೆ ಬಳಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಾಂಧಿಚೌಕ್ ಪೊಲೀಸರು ಬಿಗೀ ಬಂದೋಬಸ್ತ್ ಕೈಗೊಂಡಿದ್ದಾರೆ. ಅಂಗಡಿ ಮಾಲಿಕರ ವಿರೋಧ […]