ಗುಮ್ಮಟ ನಗರಿಯಲ್ಲಿ ಜೆಸಿಬಿ‌ ಘರ್ಜನೆ- ಬೆಳ್ಳಂಬೆಳಿಗ್ಗೆ ಅತೀಕ್ರಮಣ ತೆರವು

ವಿಜಯಪುರ: ಗುಮ್ಮಟ ನಗರಿ‌ ವಿಜಯಪುರದಲ್ಲಿ ಬೆಳ್ಳಂಬೆಳಿಗ್ಗೆ ಜೆಸಿಬಿ‌ ಘರ್ಜಿಸಿವೆ.

ನಗರದ ಗಾಂಧಿಚೌಕಿನ ಆಜಾದ್ ರಸ್ತೆಯಲ್ಲಿರುವ ಅಂಗಡಿಗಳ ಅಕ್ರಮ ಭಾಗ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಮಹಾನಗರ ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. 10ಕ್ಕೂ ಹೆಚ್ಚು ಅಕ್ರಮ ಅಂಗಡಿಗಳು ಅತೀಕ್ರಮಿಸಿರುವ ಕಟ್ಟೆದ ಭಾಗವನ್ನು ತೆರವು ಮಾಡಲಾಗುತ್ತಿದೆ.

ಒಟ್ಟು ನಾಲ್ಕು ಜೆಸಿಬಿಗಳನ್ನು ಈ ಕಾರ್ಯಾಚರಣೆಗೆ ಬಳಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಾಂಧಿಚೌಕ್ ಪೊಲೀಸರು ಬಿಗೀ ಬಂದೋಬಸ್ತ್ ಕೈಗೊಂಡಿದ್ದಾರೆ.

 

ಅಂಗಡಿ ಮಾಲಿಕರ ವಿರೋಧ

ಈ ಮಧ್ಯೆ ಮಹಾನಗರ ಪಾಲಿಕೆಯವರು ನಿನ್ನೆಯಷ್ಟೇ ಅಕ್ರಮ ತೆರವಿಗೆ ನೊಟೀಸ್ ನೀಡಿ ಈಗ ಏಕಾಏಕಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಒಂದು ವಾರವಾದರೂ ಕಾಲಾವಕಾಶ ನೀಡದೇ ತರಾತುರಿಯಲ್ಲಿ ತೆರವು ಮಾಡುತ್ತಿರುವುದು ಸರಿಯಲ್ಲ ಎಂದು ಅಂಗಡಿ ಮಾಲಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಂಡಿಕಾರರ ವಿರೋಧದ ನಡುವೆಯೂ ಪಾಲಿಕೆಯಿಂದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರೆದಿದೆ.

Leave a Reply

ಹೊಸ ಪೋಸ್ಟ್‌