ಶರಣ ಹಡಪದ ಅಪ್ಪಣ್ಣ ಜಾತಿ, ಧರ್ಮ, ವರ್ಣ ರಹಿತ ಸಮಾಜಕ್ಕಾಗಿ ಶ್ರಮಿಸಿದ್ದಾರೆ- ಶಂಕರಗೌಡ ಬಿರಾದಾರ

ವಿಜಯಪುರ: ಶರಣ ಹಡಪದ ಅಪ್ಪಣ್ಣ ಜಾತಿ ಧರ್ಮ ಹಾಗೂ ವರ್ಣರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದ್ದಾರೆ.

ಬಸವನ ಬಾಗೇವಾಡಿ ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಏರ್ಪಡಿಸಿದ್ದ ಶಿವಶರಣ ಹಡಪದ ಅಪ್ಪಣ್ಣನವರ 890ನೇ ಜಯಂತೋತ್ಸವದ ಅಂಗವಾಗಿ ಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿದ ನಂತರ ಮಾತನಾಡಿದರು

ಶರಣರ ಕಾಯಕ ಬದುಕು ಯುವ ಪೀಳಿಗೆಗೆ ದಾರಿ ದೀಪವಾಗಬೇಕು.  ಶರಣರು ಏಕೆ ಹೋರಾಟ ಮಾಡಿದರು? ಅದರ ಉದ್ದೇಶದ ಬಗ್ಗೆ ತಿಳಿದುಕೊಳ್ಳಬೇಕಿದೆ.  ಈ ನಿಟ್ಟಿನಲ್ಲಿ ಹೆಚ್ಚು ಬೆಳಕು ಚೆಲ್ಲುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು.  ಅವರ ವಚನವನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಇವೆಲ್ಲವೂ ಸಾಧ್ಯ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೈನ್ಯದ ತಾಲೂಕ ಘಟಕದ ಅಧ್ಯಕ್ಷ ಸಂಜು ಬಿರಾದಾರ, ಮುಖಂಡರಾದ ಶ್ರೀಕಾಂತ ಕೊಟ್ರಶೆಟ್ಟಿ, ನಿಂಗಪ್ಪ ಅವಟಿ, ಮನ್ನಾನ ಶಾಬಾದಿ, ಅರವಿಂದ ಗೊಳಸಂಗಿ, ಮಂಜುನಾಥ ಜಾಲಗೇರಿ, ಪ್ರಶಾಂತ ಮುಂಜಾನೆ, ಬಸನಗೌಡ ಪಾಟೀಲ, ಮಾಂತೇಶ ಹೆಬ್ಬಾಳ, ಮಲ್ಲು ಪಟ್ಟಣಶೆಟ್ಟಿ, ಅಣ್ಣಾರಾಯ ಪತಂಗಿ, ಬಸವರಾಜ ಅಳ್ಳಗಿ, ವೆಂಕಟೇಶ್ ಕರಾಡೆ, ಸಂತೋಷ ಚಿಂಚೋಳಿ, ವೀರೇಶ ಗಬ್ಬೂರ, ಅರುಣ ಗೊಳಸಂಗಿ, ಮಹೇಶ ಪತ್ತಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌