ಕಾನಿಪ ಜಿಲ್ಲಾ ಪ್ರಶಸ್ತಿ ಪ್ರಕಟ- ರಮೇಶ, ಗೌಡರ, ಪ್ರಕಾಶ, ಇರ್ಫಾನ್, ವಿಜಯ, ಸುನೀಲಧ್ವಯರು ಸೇರಿ 31 ಪತ್ರಕರ್ತರು ಪ್ರಶಸ್ತಿಗೆ ಆಯ್ಕೆ

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನೀಡಲಾಗುವ 2024ನೇ ವರ್ಷದ  ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸ್ಥಾನಿಕ ಸಂಪಾದಕರು, ಜಿಲ್ಲಾ, ತಾಲೂಕು ವರದಿಗಾರರು, ಕ್ಯಾಮೆರಾಮನ್‌ಗಳು ಹಾಗೂ ಪತ್ರಿಕಾ ವಿತರಕರು ಸೇರಿದಂತೆ ಒಟ್ಟು 31 ಜನರಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.  ಜು. 28ರಂದು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಗರದ ಪೊಲೀಸ್ ಸಮುದಾಯ ಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೈಗಾರಿಕೆ ಮತ್ತು ಮೂಲಸೌಲಭ್ಯ ಸೌಕರ್ಯ ಸಚಿವ ಎಂ.ಬಿ. ಪಾಟೀಲ, ಸಕ್ಕರೆ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಸಂಸದ ರಮೇಶ ಜಿಗಜಿಣಗಿ ಹಾಗೂ ಜಿಲ್ಲೆಯ ಎಲ್ಲ ಶಾಸಕರು ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮತ್ತು ಪ್ರಧಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಕಾನಿಪ ವಿಜಯಪುರ ಜಿಲ್ಲಾ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರು.

ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ :

ವಿಜಯವಾಣಿಯ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ, ವಿಜಯ ಕರ್ನಾಟಕದ ಸ್ಥಾನಿಕ ಸಂಪಾದಕ ಈರಣ್ಣ ಎಂಬಿ ಗೌಡರ, ಕನ್ನಡದೀಪ ಪತ್ರಿಕೆಯ ಸಂಪಾದಕ ಕಲ್ಯಾಣರಾವ್ ಕುಲಕರ್ಣಿ, ಗುಮ್ಮಟ ನಗರಿ ವ್ಯವಸ್ಥಾಪಕ ಸಂಪಾದಕ ಇರ್ಫಾನ್ ಶೇಖ್, ಉದಯವಾರ್ತೆಯ ಸಂಪಾದಕಿ ಲಕ್ಷ್ಮಿ ವಾಲೀಕಾರ, ರಿಪಬ್ಲಿಕ್ ಟಿವಿಯ ಕ್ಯಾಮರಾಮನ್ ಸುನೀಲ ಗೋಡೆನವರ, ಪಬ್ಲಿಕ್ ಟಿವಿಯ ಕ್ಯಾಮೆರಾಮನ್ ಸುನೀಲ ಕಾಂಬಳೆ, ಇನ್ ನ್ಯೂಸ್ ವರದಿಗಾರ ವಿಜಯ ಸಾರವಾಡ ಅವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

 

ಚಡಚಣದ ಕನ್ನಡಮ್ಮ ವರದಿಗಾರ ತುಕಾರಾಮ ಕೋಳಿ, ಕನ್ನಡಪ್ರಭ ವರದಿಗಾರ ಶಂಕರ ಹಾವಿನಾಳ, ಬಸವನ ಬಾಗೇವಾಡಿಯ ಉದಯವಾಣಿ ವರದಿಗಾರ ಪ್ರಕಾಶ ಬೆಣ್ಣೂರ, ಕನ್ನಡಪ್ರಭ ವರದಿಗಾರ ಬಸವರಾಜ ನಂದಿಹಾಳ, ಇಂಡಿಯ ಸಂಯುಕ್ತ ಕರ್ನಾಟಕ ವರದಿಗಾರ ಸಿದ್ದಯ್ಯ ಹಿರೇಮಠ, ಗುಮ್ಮಟನಗರಿ ವರದಿಗಾರ ಸದ್ದಾಂಹುಸೇನ್ ಜಮಾದಾರ, ಸಿಂದಗಿಯ ಕನ್ನಡಪ್ರಭ ವರದಿಗಾರ ಸಿದ್ಧಲಿಂಗ ಕಿಣಗಿ, ವಿಜಯ ಕರ್ನಾಟಕದ ವರದಿಗಾರ ಸುದರ್ಶನ ಜಂಗಣ್ಣಿö, ದೇವರಹಿಪ್ಪರಗಿಯ ಭೂಮಿವಾಣಿ ವರದಿಗಾರ ಈರನಗೌಡ ಪಾಟೀಲ, ಉದಯಕಾಲ ವರದಿಗಾರ ರಫೀಕ್‌ ಅಹ್ಮದ್ ಮೋಮಿನ್, ಮುದ್ದೇಬಿಹಾಳದ ವಿಜಯವಾಣಿ ವರದಿಗಾರ ಜಿ.ಎನ್. ಬೀರಗೊಂಡ, ಡೈಲಿ ಸಾಲಾರ್ ವರದಿಗಾರ ಲಾಡ್ಲೇಮಶಾಕ್ ಅಬ್ದುಲ್‌ಗಣಿ ಶೇಖ್ ಆಯ್ಕೆ ಮಾಡಲಾಗಿದೆ.
ಇವರೊಟ್ಟಿಗೆ ತಿಕೋಟಾದ ವಿಜಯ ಕರ್ನಾಟಕ ವರದಿಗಾರ ಸಾತಲಿಂಗಯ್ಯ ಸಾಲಿಮಠ, ಕ್ರಾಂತಿ ಧ್ವನಿ ವರದಿಗಾರ ನಿಂಗಪ್ಪ ಸಂಗಾಪುರ, ತಾಳಿಕೋಟೆಯ ಕನ್ನಡಮ್ಮ ವರದಿಗಾರ ಸುನೀಲ ತಳವಾರ, ಮೈಬೂಬ್ ಸುಬಾನಿ ಆಯ್ಕೆಯಾಗಿದ್ದಾರೆ.
ನಿಡಗುಂದಿಯ ವಿಜಯ ಕರ್ನಾಟಕ ವರದಿಗಾರ ಮಹೇಶ ಆಡಾಳಿ, ವಿಜಯವಾಣಿ ವರದಿಗಾರ ಮಲ್ಲಿಕಾರ್ಜುನಯ್ಯ ತೊರಗಲ್ಲಮಠ, ಕೊಲ್ಹಾರದ ಉದಯವಾಣಿ ವರದಿಗಾರ ಅರುಣ ಔರಸಂಗ, ಆಲಮೇಲದ ಹೊಸ ದಿಗಂತ ವರದಿಗಾರ ಅಮರ ನಾರಾಯಣಕರ, ಉದಯವಾಣಿಯ ವರದಿಗಾರ ಅವಧೂತ ಭಂಡಗಾರ ಹಾಗೂ ಪತ್ರಿಕಾ ವಿತರಕರಾದ ವಿಜಯಪುರದ ದಯಾನಂದ ಶಿರಶ್ಯಾಡ ಮತ್ತು ಬಸವನಬಾಗೇವಾಡಿ ತಾಲೂಕಿನ ಮನಗೂಳಿಯ ಶಿವಾಜಿ ಮೋರೆ ಅವರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಸಮಿತಿ ಆಯ್ಕೆ ಮಾಡಲಾಗಿದೆ.

 

 

ಪ್ರತಿಭಾ ಪುರಸ್ಕಾರ

ಇದೇ ವೇಳೆ ಎಸ್.ಎಸ್. ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 80ಕ್ಕೂ ಹೆಚ್ಚು ಅಂಕ ಪಡೆದ 15 ಜನ ಪತ್ರಕರ್ತರ ಮಕ್ಕಳಿಗೆ ಇದೇ ವೇಳೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಸಂಗಮೇಶ ಚೂರಿ ಮತ್ತು ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌