ನಿಮಗೆ ಭವಿಷ್ಯವಿದೆ ಎಂದು ಹೇಳಿ ತುಡುಗರಿಗೆ ಜವಾಬ್ದಾರಿ ಕೊಡುತ್ತಾರೆ- ನೋಡಿ ಸ್ವಾಮಿ ನಾವಿರೋದು ಹೀಗೆ- ಯತ್ನಾಳ

ವಿಜಯಪುರ: ಸತ್ಯವನ್ನು ಹೇಳಿ ದಕ್ಕಿಸಿಕೊಳ್ಳುವ ಶಕ್ತಿ ನನಗಿದೆ.  ನಿಜ ಹೇಳಿದಾಗ ನನನ್ನು ಕರೆಯಿಸಿ ನಿಮಗೆ ಉತ್ತಮ ಭವಿಷ್ಯವಿದೆ ಸುಮ್ಮನಿರಿ ಎಂದು ಹೇಳುವ ಹೈಕಮಾಂಡ್ ನಂತರ ಮತ್ತೆ ತುಡುಗರ(ಕಳ್ಳರ) ಕೈಗೆ ಜವಾಬ್ದಾರಿ ನೀಡುತ್ತಾರೆ.  ಇದು ಇಷ್ಟೇ.  ಎಲ್ಲಿಗೆ ಹೋಗಿ ತಲುಪುತ್ತೋ ಗೊತ್ತಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ನಗರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾನು ಇದ್ದುದ್ದನ್ನು ಇದ್ದಂಗೆ ಹೇಳುತ್ತೇನೆ.  ಆಗ ಕೆಲವರು ಇವರು ಎಡ್ಜಸ್ಟ್ ಆಗಿದ್ದಾರೆ ಎಂದು ಹೇಳುತ್ತಾರೆ.  ನಾನು ನಮ್ಮ ಪಾರ್ಟಿಯಲ್ಲಿಯೇ ಎಡ್ಜಸ್ಟಮೆಂಟ್ ಆಗಿಲ್ಲ.  ಬೇರೆಯವರ ಜೊತೆ ದೂರದ ಮಾತು.  ನಾನಂತೂ ಎಂದೂ ಸಿಎಂ ಕಚೇರಿಗೆ ಹೋಗಿಲ್ಲ.  ಅವರ ಪಿಎಸ್ ಯಾರಿದ್ದಾರೆ? ಎಪಿಎಸ್ ಯಾರಿದ್ದಾರೆ? ಓ.ಎಸ್‌.ಡಿ ಯಾರಿದ್ದಾರೆ ಗೊತ್ತಿಲ್ಲ.  ಯಾವ ಸಚಿವರ ಬಳಿಯೂ ಹೋಗಿಲ್ಲ.  ವಿಧಾನಸೌಧಕ್ಕೆ ಮಾತ್ರ ಹೋಗುತ್ತೇನೆ.  ಅಲ್ಲಿಯೇ ಸಿದ್ಧರಾಮಯ್ಯ ಮುಖ ನೋಡುತ್ತೇನೆ.  ಮತ್ತೆಲ್ಲಿಯೂ ಅವರ ಮುಖವನ್ನೂ ನೋಡುವುದಿಲ್ಲ.  ಆದರೂ ನಾನು ಎಡ್ಜಸ್ಟಮೆಂಟ್ ಆಗಿದ್ದೇನೆ ಎನ್ನುತ್ತಾರೆ.  ನಾನ್ಯಾರ ಜೊತೆಯೂ ಎಡ್ಜಸ್ಟಮೆಂಟ್ ಆಗಿಲ್ಲ.  ನಮ್ಮ ಪಾರ್ಟಿಯಲ್ಲಿಯೇ ಎಡ್ಜಸ್ಟಮೆಂಟ್ ಆಗದ ನಾನು ಬೇರೆ ಪಾರ್ಟಿಯೊಂದಿಗೆ ಹೇಗೆ ಎಡ್ಜಸ್ಟಮೆಂಟ್ ಮಾಡಿಕೊಳ್ಳಲಿ? ಎಂದು ಅವರು ಪ್ರಶ್ನಿಸಿದರು.

ನಾನು ಸತ್ಯ ಹೇಳಿದರೆ ಯಾರು ಏನು ಮಾಡುತ್ತಾರೆ? ಆದರೂ, ಕೆಲವರು ಹೈಕಮಾಂಡ್ ಇವರ ಸುಮ್ಮನಿದೆ ಎಂದು ಚರ್ಚಿಸುತ್ತಾರೆ.  ಒಂದೊಂದು ಕಾಲಕ್ಕೆ ಒಬ್ಬೊಬ್ಬರ ಶಕ್ತಿ ನಇರುತ್ತದೆ.  ಹೀಗಾಗಿ ರಾಷ್ಟ್ರೀಯ ಪಕ್ಷದಲ್ಲಿದ್ದರೂ ಯಾರೂ ನನ್ನ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ.  ದೇವರ ದಯೆಯಿಂದ ನನ್ನ ಗಾಡಿ ಹೊರಟಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ನಮ್ಮ ಪಕ್ಷದವರು ದೆಹಲಿಗೆ ಹೋಗಿ ಯತ್ನಾಳ ಹೀಗೆ ಹೇಳಿದರು, ಹಾಗೆ ಹೇಳಿದರು ಎಂದು ದೂರು ನೀಡುತ್ತಾರೆ.  ಪಕ್ಷಕ್ಕೆ ಹಾನಿಯಾಗುತ್ತಿದೆ ಎಂದು ವಾದಿಸುತ್ತಾರೆ.  ಆಗ ದೆಹಲಿಯವರು ನನ್ನನ್ನು ತಮ್ಮ ಬಳಿ ಕರೆಸುತ್ತಾರೆ.  ನೀವು ಹೀಗೆ ಮಾತನಾಡಬೇಡಿ.  ನೀವು ಸುಮ್ಮನಿರಿ.  ನಿಮ್ಮ ಭವಿಷ್ಯ ಉಜ್ವಲವಾಗಿದೆ.  ಮುಂದೆ ನಿಮಗೆ ಕರ್ನಾಟಕದಲ್ಲಿ ಉನ್ನತ ಸ್ಥಾನ ನೀಡುತ್ತೇವೆ ಎಂದು ಹೇಳುತ್ತಾರೆ.  ನಂತರ ತುಡುಗರ(ಕಳ್ಳರ) ಕೈಗೆ ಜವಾಬ್ದಾರಿ ನೀಡುತ್ತಾರೆ. ಇದು ಹೀಗೆ ನಡೆಯುತ್ತದೆ.  ಎಲ್ಲಿಗೆ ಹೋಗಿ ತಲುಪುತ್ತೊ ಗೊತ್ತಿಲ್ಲ.  ಇದರಿಂದ ಏನಾಗಲಿದೆ? ನಮ್ಮ ಜೀವನದಲ್ಲಿ ಸಿಎಂ ಮತ್ತು ಮಂತ್ರಿಯಾಗುವ ಯೋಗವಿದ್ದರೆ ಆಗುತ್ತದೆ.  ಇಲ್ಲದಿದ್ದರೆ ನಾಲ್ಕು ವರ್ಷ ಶಾಸಕನಾಗಿಯೇ ಮುಂದುವರೆಯುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ವಿಜಯಪುರ ನಗರ ಶಾಸಕ ಬನಸಗೌಡ ಪಾಟೀಲ ಯತ್ನಾಳ.

ಸತ್ಯ ಹೇಳಿದಾಗ ನಮ್ಮವರಲ್ಲಿ ಕೆಲವರು ನಮ್ಮನ್ನು ಬೈಯ್ಯುತ್ತಾರೆ.  ಹಾಗೆ ಹೈದವರು ನಂತರದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುತ್ತಾರೆ.  ಆಗ ಬಹುಮತಕ್ಕೆ ಉಂಟಾಗುವ ಶಾಸಕರ ಕೊರತೆ ನೀಗಿಸಲು ತಲಾ ರೂ. 50 ಕೋ. ಹಣ ನೀಡಿ ಶಾಸಕರನ್ನು ಖರೀದಿ ಮಾಡಿ ತಂದು ಬಿಜೆಪಿ ಸರಕಾರ ರಚಿಸುತ್ತದೆ ಎಂದು ಮಾಧ್ಯಮದವರು ವರದಿ ಮಾಡುತ್ತಾರೆ.  ಹೀಗಾಗಿ ಕಾಂಗ್ರೆಸ್ಸಿನಿಂದ ಯಾರನ್ನೂ ಕರೆತರಬೇಡಿ ಎಂದು ಮೊನ್ನೆ ಹೇಳಿದ್ದೇನೆ.  ಆ ಪಕ್ಷದಿಂದ ಯಾರಾದರೂ ಎಲ್ಲಿಗೆ ಬೇಕಾದರೂ ಹೋಗಲಿ.  ನಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಂಡು ನಾವು ಆರಾಮವಾಗಿರಬಹುದು.  ಅರ್ಜಂಟೇನಿಲ್ಲ ಎಂದು ಪ್ರತಿಪಾದಿಸಿದ್ದೇನೆ ಎಂದು ಶಾಸಕರು ಹೇಳಿದರು.

 

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನ ಸಿದ್ಧರಾಮಯ್ಯ ಮುಖ ನೋಡಿ ಜನ ಮತ ಹಾಕಿದ್ದಾರೆ ಹೊರತು ಕಾಂಗ್ರೆಸ್ ನೋಡಿ ಮತ ಹಾಕಿಲ್ಲ.  ಆದರೆ, ಈಗ ಸಿದ್ಧರಾಮಯ್ಯನವರನ್ನು ಬಹಳ ಅವರ ಪಕ್ಷದವರೇ ಕಾಡುತ್ತಿದ್ದಾರೆ.  ಇದನ್ನೇ ಸಿದ್ಧರಾಮಯ್ಯ ಅವರಿಗೆ ಮೊನ್ನೆ ಹೇಳಿದ್ದೇನೆ.  ಆದರೆ, ಪ್ರತಿಪಕ್ಷದ ನಾಯಕ ಆರ್. ಅಶೋಕ ಅವರು ನನ್ನ ಬಳಿಗೆ ಬಂದು ಸಿದ್ಧರಾಮಯ್ಯ ಅವರ ಬಗ್ಗೆ ಬಹಳ ಹೊಗಳಬೇಡಿ ಎಂದು ಹೇಳಿದರು.  ಆಗ, ನೀನು ಮಾತ್ರ ಡಿ. ಕೆ. ಶಿವಕುಮಾರ ಬಳಿ ಹೋಗಿ ಸಹಿ ಮಾಡಿಸಿಕೊಂಡು ಬಂದಿದ್ದೀಯಾ.  ನನ್ನು ಸಮ್ಮುಖದಲ್ಲಿಯೇ ಸಹಿ ಮಾಡಿಸಿದ್ದೀಯಾ.  ನಾನು ಎಂದೂ ಡಿ. ಕೆ. ಶಿವಕುಮಾರ ಬಳಿ ಸಹಿ ಮಾಡಿಸಿಕೊಳ್ಳಲು ಹೋಗಿಲ್ಲ.  ಸಿಎಂ ಬಳಿಗೂ ಹೋಗಿಲ್ಲ ಎಂದು ಪ್ರತ್ಯುತ್ತರ ನೀಡಿದ್ದೇನೆ ಎಂದು ಅವರು ತಿಳಿಸಿದರು.

ನಾನು ವಿಧಾನ ಸೌಧದ ಮೂರನೇ ಮಹಡಿಯನ್ನು ಹತ್ತಿಯೇ ಇಲ್ಲ.  ಬೊಮ್ಮಾಯಿ ಸಿಎಂ ಇದ್ದಾಗಲೂ ಹೋಗಿಲ್ಲ.  ಕೃಷ್ಣಾಕ್ಕೆ ಹೋಗಿದ್ದೇನೆ.  ಮೂರನೇ ಮಹಡಿಗೆ ಸಿಎಂ ಕಚೇರಿಗೆ ಹೋಗುವುದು, ಪಂಪ್ ಹೊಡೆಯುವುದು ನನ್ನಿಂದ ಆಗುವುದಿಲ್ಲ.  ಯಡಿಯೂರಪ್ಪ ಸಿಎಂ ಆಗಿದ್ದಾಗ ನನ್ನ ಒಂದು ಕೆಲಸ ಮಾಡಲಿಲ್ಲ.  ಆಗ ನಾನು ನೀವು ಅಧಿಕಾರದಿಂದ ಕೆಳಗೆ ಇಳಿಯುವ ತನಕ ನಿಮ್ಮ ಕಚೇರಿಗೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ.  ಹೀಗಾಗಿ ಬೊಮ್ಮಾಯಿ ಸಿಎಂ ಆಗುವವರೆಗೂ ಸಿಎಂ ಕಚೇರಿಗೆ ಹೋಗಿರಲಿಲ್ಲ ಎಂದು ಅವರು ಬಿ. ಎಸ್. ಯಡಿಯೂರಪ್ಪ ಅವರ ಜೊತೆಗಿರುವ ವೈರತ್ವಕ್ಕೆ ಕಾರಣವನ್ನು ತಿಳಿಸಿದರು.

ನೋಡಿ ಸ್ವಾಮಿ ನಾವಿರೋದು ಹೀಗೆ

ಸಚಿವ ಎಂ. ಬಿ. ಪಾಟೀಲ ಅವರು ಜಿಲ್ಲೆಯಲ್ಲಿ ನೀರಾವರಿ ಮಾಡಿದರೆ, ನಾನು ವಿಜಯಪುರ ನಗರವನ್ನು ದೇಶದಲ್ಲಿಯೇ ಆರನೇ ಉತ್ತಮ ಗಾಳಿ ಸಿಗುವ ನಗರ ಎಂದು ಹೆಮ್ಮೆ ಪಡುವಷ್ಟು ಆಭಿವೃದ್ಧಿ ಮಾಡಿದ್ದೇನೆ.  ಇದನ್ನೇ ಕೆಲವರು ನಾನು ಮತ್ತು ಎಂ. ಬಿ. ಪಾಟೀಲ ಒಂದಾಗಿದ್ದೇವೆ ಎಂದು ಕೆಲವರು ಹೇಳುತ್ತಾರೆ.  ಆದರೆ, ನಾವು ಎಂದೂ ಒಂದಾಗಿಲ್ಲ.  ಅವರ ವಿಷಯದಲ್ಲಿ ನಾನು ಕೈ ಹಾಕಲ್ಲ.  ನಮ್ಮ ವಿಚಾರದಲ್ಲಿ ಅವರು ಹಸ್ತಕ್ಷೇಪ ಮಾಡುವುದಿಲ್ಲ.  ಯಾರು ನಮ್ಮಲ್ಲಿ ಕೈ ಹಾಕುತ್ತಾರೋ ಅವರನ್ನು ಮಣ್ಣಲ್ಲಿ ಇಡುತ್ತೇವೆ.  ಇಷ್ಟೇ. ನೋಡಿ ಸ್ವಾಮಿ ನಾವಿರೋದು ಹೀಗೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಯ್ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಕೆಲವರು ಬಸನಗೌಡ ಐಸಾ ಬೋಲಾ, ವೈಸಾ ಬೋಲಾ ಎಂದು ಪ್ರತಿದಿನ ಪ್ರಸಾರ ಮಾಡುತ್ತಲೇ ಇರುತ್ತವೆ.  ಕ್ಯಾ ಬೊಲಾ ರೆ, ಕ್ಯಾ ಸಚ್ ಹೇ, ವಹಿ ಬೋಲಾ.  ಝೂಟ್ ಬೋಲನಾ ಮುಝೆ ಕಬಿ ಭಿ ನಹಿ ಆತಾ ಹೈ ಎಂದು ಬಸನಗೌಡ ಪಾಟೀಲ ಯತ್ನಾಳ ಅವರು ವ್ಯಂಗ್ಯವಾಗಿ ಹೇಳಿದರು.

Leave a Reply

ಹೊಸ ಪೋಸ್ಟ್‌