ನಾರಾಯಣಪ್ಪ ಕುರುಬರ ದಕ್ಷ, ಪ್ರಾಮಾಣಿಕ ಡಿಸಿ- ಸಿಬ್ಬಂದಿ ಪ್ರಯಾಣಿಕರಿಗೆ ಅವರ ಸೇವೆ ಶ್ಲಾಘನೀಯ- ಐ. ಐ. ಮುಶ್ರೀಫ್

ವಿಜಯಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗಕ್ಕೆ ಮತ್ತೆ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಆಗಮಿಸಿರುವ ನಾರಾಯಣಪ್ಪ ಕುರುಬರ ಅವರಿಗೆ ಸಾರಿಗೆ ನೌಕರರ ಮಹಾಂಡಳದ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿ ಗೌರವಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮಹಾಮಂಡಳದ ಕಾರ್ಯದರ್ಶಿ ಐ. ಐ. ಮುಶ್ರಿಫ್, ಈ ಹಿಂದೆ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ನಾರಾಯಣಪ್ಪ ಕುರುಬರ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದರು.  ಕೊರೊನಾ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಕಾರ್ಯ ನಿರ್ವಹಿಸಲು ಹಿಂಜರಿದಾಗ ಮತ್ತು ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾಗ  ನಾರಾಯಣಪ್ಪ ಕುರುಬರ ಅವರು 2021ರಲ್ಲಿ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ 287 ವಾಹನಗಳನ್ನು ವಿಜಯಪುರ ದಿಂದ ಬೆಳಗಾವಿಗೆ ಒದಗಿಸಿ ಸರಕಾರ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೂ ಒಳ್ಳೆಯ ಹೆಸರು ತಂದಿದ್ದಾರೆ.  ಕೊರೊನಾ ಸಂದರ್ಭದಲ್ಲಿ ಶ್ರೀಶೈಲಂ ಜಾತ್ರೆಯಲ್ಲಿ ಪ್ರಯಾಣಿಕರ ಹಿತವನ್ನು ಗಮನದಲ್ಲಿರಿಸಿಕೊಂಡು ವಿಜಯಪುರ ವಿಭಾಗದ ಕಾರ್ಮಿಕರ ಮನವೊಲಿಸಿ ಶ್ರೀಶೈಲಂ ಜಾತ್ರೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.  ಅಲ್ಲದೇ, ಅಂದು ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಸುರಕ್ಷಿತವಾಗಿ ಕಳುಹಿಸುವ ಮೂಲಕ ಜನಮನ ಗೆದ್ದಿದ್ದಾರೆ ಎಂದು ಹೇಳಿದರು.

ಸಂಸ್ಥೆ ಮತ್ತು ಕಾರ್ಮಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರುವ ನಾರಾಯಣಪ್ಪ ಕುರುಬರ ಅವರು ವಿಜಯಪುರ ಜಿಲ್ಲೆಯ ಜನತೆಗೆ ಉತ್ತಮ ಸೇವೆ ನೀಡಲು ಉತ್ಸುಕರಾಗಿದ್ದಾರೆ.  ಅವರಿಗೆ ತಾವೆಲ್ಲರೂ ಸಂಪೂರ್ಣ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕೆ. ಎಸ್. ಆರ್. ಟಿ. ಸಿ ಸ್ಟಾಫ್ ಮತ್ತು ವರ್ಕರ್ಸ್ ಯೂನಿಯನ್ ಪದಾಧಿಕಾರಿಗಳಾದ ಎಂ. ಎನ್. ನದಾಫ, ಎಂ. ಎಚ್. ಮಾರನಬಸರಿ, ಶರಣಪ್ಪ ಅಥಣಿ, ಬಿ. ಎಂ. ತೇರದಾಳ, ಆರ್. ಆರ್. ನದಾಫ್, ಎಸ್. ಡಿ. ಪಟ್ಟಣಶೆಟ್ಟಿ, ಅಧ್ಯಕ್ಷ ಅರುಣಕುಮಾರ ಹಿರೇಮಠ, ಮುಸ್ತಾಕ ಹುಂಡೇಕಾರ, ಯಮನಪ್ಪ ಚಲವಾದಿ, ಜಿ. ಜಿ. ಬಿರಾದಾರ, ಭೀಮಪ್ಪ ಗುಳೇದ, ರಾಚಪ್ಪ ಹೂಗಾರ, ಜಯಶ್ರೀ ಹೂಗಾರ, ಸುಜ್ಞಾನಿ ಹಳ್ಳಿ, ಚಂದು ಬರಮನಗೋಳ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌