ಪ್ರಯಾಣಿಕನ ಲ್ಯಾಪಟಾಪ್ ಮರಳಿಸಿ ಪ್ರಾಮಾಣಿಕತೆ ಮೆರೆದ ಬಸವನಾಡಿನ ಚಾಲಕ, ನಿರ್ವಾಹಕ

ವಿಜಯಪುರ: ಪ್ರಯಾಣಿಕನೊಬ್ಬ ಬಸ್ಸಿನಲ್ಲಿ ಮರೆತು ಹೋಗಿದ್ದ ಲ್ಯಾಪಟಾಪ್ ನ್ನು ಮರಳಿಸುವ ಮೂಲಕ ವಿಜಯಪುರ 1ನೇ ಘಟಕದ ಚಾಲಕ ಮತ್ತು ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.

ವಿಜಯಪುರ ನಗರ ಘಟಕ-1ರ ಬಸ್ ಕೆಎ-28/ಎಫ್- 1703 ವಿಜಯಪುರ ನಗರದಿಂದ ಮುಳಸಾವಳಗಿಗೆ ಸಂಚರಿಸಿತ್ತು.  ಈ ಸಂದರ್ಭದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನೂರಲಿಶಾ ಮಕಾಂದಾರ ಅವರು ಮುಳಸಾವಳಗಿಗೆ ಇಳಿಯುವ ಸಂದರ್ಭದಲ್ಲಿ ತನ್ನ ರೂ. 50 ಸಾವಿರ ಮೌಲ್ಯದ ಲ್ಯಾಪಟಾಪ್ ನ್ನು ಬಸ್ಸಿನಲ್ಲಿಯೇ ಮರೆತು ಹೋಗಿದ್ದರು.

ವಿಜಯಪುರ ಜಿಲ್ಲೆಯ ಮುಳಸಾವಳಗಿಯಲ್ಲಿ ಬಸ್ಸಿನಲ್ಲಿ ಮರೆತು ಹೋಗಿದ್ದ ಲ್ಯಾಪಟಾಪ್ ನ್ನು ಪ್ರಯಾಣಿಕನಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಚಾಲಕ ಶೇಖರ ಬೋಗಂ ಮತ್ತು ನಿರ್ವಾಹಕ ಗುಂಡೂರಾವ ರಾಠೋಡ.

ಇದನ್ನು ಗಮನಿಸಿದ ಬಸ್ಸಿನ ಚಾಲಕ ಶೇಖರ ಬೋಗಂ ಮತ್ತು ನಿರ್ವಾಹಕ ಗುಂಡೂರಾವ ರಾಠೋಡ ಅವರು ಅದನ್ನು ಮಾಲಿಕರಿಗೆ ಮರಳಿಸುವ ಮೂಲಕ ಕರ್ತವ್ಯ ಪ್ರಜ್ಞೆಯ ಜೊತೆಗೆ ಪ್ರಾಮಾಣಿಕತೆ ಮೆರೆದಿದ್ದಾರೆ.  ತಮ್ಮ ಲ್ಯಾಪಟಾಪ್ ಮರಳಿ ಪಡೆದ ನೂರಲಿಶಾ ಮಕಾಂದಾರ ಅವರು ಚಾಲಕ ಮತ್ತು ನಿರ್ವಾಹಕರಿಗೆ ನಗದು ಬಹುಮಾನ ನೀಡಲು ಮುಂದಾದಾಗ, ಇಬ್ಬರೂ ಅದನ್ನು ನಯವಾಗಿ ತಿರಸ್ಕರಿಸುವ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿಜಯಪುರ ಜಿಲ್ಲೆಯ ಚಾಲಕ ಮತ್ತು ನಿರ್ವಾಹಕರು ಪ್ರಾಮಾಣಿಕತೆಯ ಮೂಲಕ ಈ ಮುಂಚೆಯಿಂದಲೂ ಇತರರಿಗೆ ಮಾದರಿಯಾಗುವಂಥ ಕೆಲಸ ಮಾಡುತ್ತಿರುವುದು ಗಮನಾರ್ಹವಾಗಿದೆ.

Leave a Reply

ಹೊಸ ಪೋಸ್ಟ್‌