ವಿಜಯಪುರ: ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ನಾನಾ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯಪಾಲರ ಪ್ರತಿಕೃತಿ ದಹನ ಮಾಡಿದರು.
ನಗರದ ಗಾಂಧಿಚೌಕಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸೋಮನಾಥ ಕಳ್ಳಿಮನಿ ಮತ್ತೀತರ ಮುಖಂಡರು ಸಿಎಂ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು. ರಾಜ್ಯದ ಜನ ಅವರ ಜೊತೆಗಿದ್ದಾರೆ. ಸಿಎಂ ತೇಜೋವಧೆ ಮಾಡುವ ಉದ್ದೇಶದಿಂದ ರಾಜ್ಯಪಾಲರು ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ಕೊಡುತ್ತಿರುವ ಗ್ಯಾರಂಟಿಗಳ ವಿರುದ್ಧ ಬಿಜೆಪಿ. ಪಿತೂರಿ ಮಾಡಿ ರಾಜ್ಯ ಸರಕಾರವನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದೆ. ಇಂದು ಸಂವಿಧಾನ ವಿರೋಧಿ ನಡೆಯಾಗಿದ್ದು, ರಾಜ್ಯಪಾಲರಿಗೆ ಕಾನೂನು ಹೋರಾಟದಲ್ಲಿ ಸೋಲಾಗಲಿದೆ. ಜನ ಬಿಜೆಪಿ ವಿರುದ್ಧ ದಂಗೆ ಏಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಗುರನಗೌಡ ಪಾಟೀಲ, ಅಬ್ದುಲ ರಜಾಕ ಹೊರ್ತಿ, ಸಂಜೀವ ಕಂಬೋಗಿ, ಆರತಿ ಶಹಪೂರ, ಡಾ. ರವಿ ಬಿರಾದಾರ, ಎಸ್, ಎಂ. ಪಾಟೀಲ ಗಣಿಹಾರ, ಮಹಮ್ದದ ರಫೀಕ ಟಪಾಲ ಎಂಜಿನಿಯರ್ ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಚಾಂದಸಾಬ ಗಡಗಲಾವ, ಗಂಗಾಧರ ಸಂಬಣ್ಣಿ, ಡಿ. ಎಲ್. ಚವ್ಹಾಣ, ಸಂಗನಗೌಡ ಹರನಾಳ, ನಗರ ಬ್ಲಾಕ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಸುರೇಶ ಗೊಣಸಗಿ, ಬೀರಪ್ಪ ಸಾಸನೂರ, ಮಲ್ಲು ಬಿದರಿ, ಸಾಹೇಬಗೌಡ ಬಿರಾದಾರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೋಡೆ, ಜಾಕೀರ ಮುಲ್ಲಾ, ಎಂ. ಎಂ. ಮುಲ್ಲಾ ದ್ಯಾಬೇರಿ, ಫಯಾಜ ಕಲಾದಗಿ, ದೇಸು ಚವ್ಹಾಣ, ಬಿ. ಎಸ್. ಗಸ್ತಿ, ಸತೀಶ ಅರವಿ, ಐಜಾಜ ಮಕ್ಬಿಲ್ ಸಾದತ್, ಗಂಗೂಬಾಯಿ ಧುಮಾಳೆ, ಜಯಶ್ರೀ ಭಾರತೆ, ಸರಿತಾ ಚವ್ಹಾಣ, ಆಸ್ಮಾ ಕಾಲೇಬಾಗ, ಕಾಶಿಬಾಯಿ ಹಡಪದ, ರಮೇಶ ಭಂಟನೂರ, ಲಾಲಸಾಬ ಕೋರಬು, ಮಹಾನಗರಪಾಲಿಕೆ ಸದಸ್ಯರಾದ ಆಶೀಫ ಶಾನವಾಲೆ, ಅಪ್ಪು ಪೂಜಾರಿ, ಪರಶುರಾಮ ಹೊಸಮನಿ, ಮಾದೇವ ರಾಠೋಡ, ಸಂತೋಷ ಚವ್ಹಾಣ, ಅಬೂಬಕರ ಕಂಬಾಗಿ, ನಿಂಗಪ್ಪ ಸಂಗಾಪೂರ, ಫೈರೋಜ ಶೇಖ, ವೀರೇಶ ಕಲಾಲ, ಲಕ್ಷ್ಮಿ ಕ್ಷೀರಸಾಗರ, ಗೌಸ ಮುಜಾವರ, ಲಕ್ಷ್ಮಣ ಇಲಕಲ, ಮಂಜುನಾಥ ನಿಡೋಣಿ, ಕೆ. ಎಸ್. ಪಾರಶೆಟ್ಟಿ, ಸೈಕ್ಲೇನ ಪಟೇಲ ಮುಂತಾದವರು ಉಪಸ್ಥಿತರಿದ್ದರು.