ವಿಜಯಪುರ: ಬಬಲೇಶ್ವರ ತಾಲೂಕಿನ ಕೃಷ್ಣಾ ನದಿಯ ದಂಡೆಯಲ್ಲಿರುವ ಚಿಕ್ಕಗಲಗಲಿ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ಮತ್ತು ಶ್ರೀ ವೇಮನ ದೇವಾಲಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಮರೆಗುದ್ದಿಯ ಶ್ರೀ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಹೇಮರೆಡ್ಡಿ ಮಲ್ಲಮ್ಮ ಮಾನವಳಾಗಿ ಜನಿಸಿ ಶ್ರೀ ಮಲ್ಲಯ್ಯನ ಭಕ್ತಳಾಗಿ ಪರಮಾತ್ಮನಿಂದ ವರ ಪಡೆದು ಕಾಯಕದಲ್ಲಿ ದೇವರನ್ನು ನೆನೆದು ದೇವತೆಯಾಗಿ ಮನುಕುಲ ಉದ್ಧಾರಕ್ಕಾಗಿ ದೇವರ ಆಶಿರ್ವಾದ ಪಡೆದ ಮಹಾಸಾದ್ವಿಯಾಗಿದ್ದಾಳೆ ಎಂದು ಹೇಳಿದರು.
ನಿಡೋಣಿಯ ರಾಮಚಂದ್ರ ಗೋವಿಂದಪ್ಪ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಅಡವಿ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಜಂಬಗಿ(ಎಚ್), ಶ್ರೀ. ವಿಶ್ವ ಪ್ರಭುದೇವ ಶಿವಾಚಾರ್ಯ ಮಹಾಸ್ವಾಮಿಗಳು, ಕೊಣ್ಣೂರು ಹೊರಗಿನಮಠದ ಶ್ರೀ ಜನಾರ್ಧನ ಮಹಾಸ್ವಾಮಿಗಳು, ಚಿಕ್ಕಗಲಗಲಿಯ ಶ್ರೀ ಬಸಯ್ಯ ಮಹಾಸ್ವಾಮಿಗಳು, ಹಿರೇಮಠ(ಬಿದರಿದ ಶ್ರೀ ಪ್ರದೀಪ ಗುರೂಜಿ, ಬಾಗಲಕೋಟೆಯ ಶ್ರೀ ಜಿ. ಬಿ. ಗೌಡಪ್ಪಗೋಳ ಶ್ರೀಕೃಷ್ಣ ಶಾಸ್ತಿಗಳು, ಶ್ರೀ ರಾಚಯ್ಯ ಸ್ವಾಮಿಗಳು, ಮುಂತಾದವರು ಉಪಸ್ಥಿತರಿದ್ದರು.
ಚಿಕ್ಕಗಲಗಲಿಯ ಹೇಮ-ವೇಮ ಸೇವಾ ಸಮಿತಿ ಸದಸ್ಯರು ಮತ್ತು ಸುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.