ಕ್ರೀಡೆಗಳಿಂದ ವಿದ್ಯಾರ್ಥಿಗಳು ದೈಹಿಕ, ಮಾನಸಿಕವಾಗಿ ಸದೃಢರಾಗಲು ಸಾಧ್ಯ- ಎಲ್. ಆರ್. ಹಳ್ಳದಮನಿ

ವಿಜಯಪುರ: ಕ್ರೀಡೆಗಳಿಂದ ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ಕನ್ನೂರಿನ ಸರಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಎಲ್. ಆರ್. ಹಳ್ಳದಮನಿ ಹೇಳಿದ್ದಾರೆ.

ನಗರದಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮತ್ತು ಅಲ್ ಹಸ್ನಾತ ಪಿಯು ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ನಡೆದ 2024-25ನೇ ಶೈಕ್ಷಣಿಕ ವರ್ಷದ ವಿಜಯಪುರ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ವೇಳೆ ಮಾತನಾಡಿದ ಅಲ್ ಹಸ್ನಾತ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎ. ಎ. ಬಿಜಾಪುರ, ಕ್ರೀಡೆ ಮಕ್ಕಳ ಮನಸ್ಸಿಗೆ ಮುದ ನೀಡುತ್ತದೆ.  ಮಕ್ಕಳ ಮನಸ್ಸು ಕಲಿಕೆಯುವಿಕೆ ಕೆಡೆಗೆ ಆಕರ್ಷಿಸಲು ದೈಹಿಕ ಶಿಕ್ಷಣವೂ ಅಗತ್ಯವಾಗಿದೆ.  ಮಕ್ಕಳು ದೈನಂದಿನ ಕೆಲಸ ಕಾರ್ಯಗಳ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ವಿಜಯಪುರ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿತೇತ ತಂಡಗಳಿಗೆ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು.

ಅಲ್ ಹಸ್ನಾತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂ. ಡಿ. ರೂಗಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎ. ಎ. ಶಟಗಾರ, ಉಪನ್ಯಾಸಕ ಬಿ. ಎಸ್. ಗೌರಿ, ಕ್ರೀಡಾ ಸಂಯೋಜಕಿ ಎಸ್. ಆರ್. ಮುತ್ತಗಿ, ಗಣೇಶ ಗುನ್ನಾಪೂರ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್. ಎಸ್. ಹರಿಯಾಲ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ. ಬಿ. ಅವಟಿ, ಕ್ರೀಡಾ ಸಂಘಟನಾ ಕಾರ್ಯದರ್ಶಿ ಆಬೀದ ಬಾಗವಾನ, ದೈಹಿಕ ಶಿಕ್ಷಕ ಡಾ. ಮೊಹ್ಮದ ಸಲೀಂ ಮಕಾಂದಾರ, ನಿವೃತ್ತ ಮುಖ್ಯ ಶಿಕ್ಷಕ ಎ. ಜೆ. ಜಮಾದಾರ, ನಿವೃತ್ತ ಶಿಕ್ಷಕ ಎ. ಎಚ್. ಬಾಗವಾನ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಫೀರದೋಸ ಮಣಿಯಾರ ಸ್ವಾಗತಿಸಿದರು.  ಡಾ. ಎಸ್. ಸಿ. ಮುಲ್ಲಾ ನಿರೂಪಿಸಿದರು.  ರಿಜ್ವಾನಾ ಚೌಧರಿ ವಂದಿಸಿದರು.

ಜಿಲ್ಲಾ ಮಟ್ಟಕ್ಕೆ ಆಯ್ಕೆ

ಇದೇ ಸಂದರ್ಭದಲ್ಲಿ ವಿಜಯಪುರ ತಾಲೂಕಾ ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಎಸ್. ಎಸ್. ಪಿಯು ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಮತ್ತು ಕೋನಿಕಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

ವಿಜಯಪುರ ತಾಲೂಕಾ ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಬಾಲಕಿಯರ ವಿಭಾಗದದಲ್ಲಿ ಎಸ್. ಎಸ್. ಪಿಯು ಕಾಲೇಜಿನ  ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರೆ ಲೊಯೊಲಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.  ಈ ಸಂದರ್ಭದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.

ಅಲ್ ಹಸ್ನಾತ ಪದವಿ ಪೂರ್ವ ಕಾಲೇಜನ ವಿದ್ಯಾರ್ಥಿನಿಯರಾದ ಮದಿಯಾ ಅರಬ, ಅನಿಸಾ ಅನಾಸೂರ ಪ್ರಾರ್ಥಿಸಿದರು.

Leave a Reply

ಹೊಸ ಪೋಸ್ಟ್‌