ಶ್ರೀ ಗಜಾನನ ಮಹಾಮಂಡಳ ವರ್ಷದ ಅಧ್ಯಕ್ಷರಾಗಿ ಆನಂದ ಕ. ಮುಚ್ಚಂಡಿ ನೇಮಕ- ಹೊಸ ಪದಾಧಿಕಾರಿಗಳ ಆಯ್ಜೆ

ವಿಜಯಪುರ: ನಗರದಲ್ಲಿ ಈ ವರ್ಷದ ಶ್ರೀ ಗಜಾನನ ಉತ್ಸವ ಮಹಾಮಂಡಳ(ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ವೃತ್ತ) ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಯಿವ ಧುರೀಣ ಆಬಂದ ಕ.‌ಮುಚ್ಚಂಡಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ನಗರದಲ್ನಲಿ ಮಾಜಿ ಸಚಿವಾ ಅಪ್ಪು ಪಟ್ಟಣಶೆಟ್ಟಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ನೂನ‌ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಪದಾಧಿಕಾರಿಗಳ ಪಟ್ಟಿ ಇಲ್ಲಿದೆ.

ಅಧ್ಯಕ್ಷ- ಆನಂದ ಕ ಮುಚ್ಚಂಡಿ

ಕೋಶಾಧ್ಯಕ್ಷ- ಅಖೀಲ ಮ್ಯಾಗೇರಿ,

ಉಪಾಧ್ಯಕ್ಷ- ಗಣೇಶ ಹಜೇರಿ, ಬಸವರಾಜ ದಿಂಡವಾರ, ವಿನಯ ಬಬಲೇಶ್ವರ, ಅಕ್ಷಯ ಇಜೇರಿ, ಮನೋಜ ಶಿಖ್ರೆ

ಪ್ರಧಾನ ಕಾರ್ಯದರ್ಶಿ- ಪ್ರೇಮ ಬಿರಾದಾರ, ಸತೀಶ ಗಾಯಕವಾಡ

ಕಾರ್ಯದರ್ಶಿ- ಸಾಗರ ಶೇರಖಾನೆ,
ಮಂಥನ ಗಾಯಕವಾಡ,ಸಂ ತೋಷ ಪತ್ತಾರ,ಕೃ ಷ್ಣಾ ಗಾಯಕವಾಡ

ಸಹ ಕಾರ್ಯದರ್ಶಿ ಆಕಾಶ ಬಡಿಗೇರ, ಪ್ರಸಾದ ಕುಲಕರ್ಣಿ, ಆಕಾಶ ಮಠಪತಿ, ಆನಂದ ಬೋವಿ,

ಕಾರ್ಯಕ್ರಮದ ಮುಖ್ಯ ಸಂಚಾಲಕ- ವಿವೇಕ ತಾವರಗೇರಿ

ಕಾರ್ಯಕ್ರಮದ ಸಂಚಾಲಕ- ಮಯೂರ ಕಟ್ಟಿಮನಿ, ಸಾಗರ ಜಾಲಗಾರ,

ಕಾರ್ಯಕ್ರಮದ ಸಹ ಸಂಚಾಲಕ- ನವೀನ ಶೇಡಬಾಳ.

ವಿಜಯಪುರದಲ್ಲಿ ಶ್ರೀ ಗಜಾನನ ಮಹಾಮಂಡಳ ನೂತನ‌ ಪದಾಧಿಕಾರಿಗಳು ಮಾಜಿ‌ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಿದತು.

ಈ ಸಂದರ್ಭದಲ್ಲಿ ಶ್ರೀ ಗಜಾನನ ಉತ್ಸವ ಮಹಾಮಂಡಳ ಸಂಸ್ಥಾಪಕರು ಮಾಜಿ ಸಚಿವರು ಶ್ರೀ ಅಪ್ಪಾಸಾಹೇಬ ಮ.ಪಟ್ಟಣಶೆಟ್ಟಿ ಅವರಿಗೆ ನೂತನ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಸನ್ಮಾನಿಸಿ ಶುಭ ಕೋರಿದರು.

ಬಳಿಕ ಮಾತನಾಡಿದ ಮಾಜಿ ಸಚಿವರು, ಶ್ರೀ ಗಜಾನನ ಉತ್ಸವ ಮಹಾಮಂಡಳ ಇಡೀ ವಿಜಯಪುರ ಜಿಲ್ಲೆಯಲ್ಲಿ ಮಾದರಿ ಗಣೇಶೋತ್ಸವ ಆಚರಿಸುವ ಮೂಲಕ ಎಲ್ಲರ ಮನೆ ಮಾತಾಗಿದೆ.  ಈ ಮಂಡಳಿ ಗಣೇಶ ಉತ್ಸವದ ಜೊತೆಗೆ ಹಲಚಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಮಾಜಿಕ ಕಾರ್ಯಕ್ರಮಗಳನ್ನುಆಯೋಜಿಸಿ ಉತ್ಸವಕ್ಕೂ ಸೈ, ಸಾಮಾಜಿಕ ಚಟುವಟಿಕೆಗೂ ಸೈ  ಎನಿಸಿಕೊಂಡಿದೆ.  ಅಲ್ಲದೇ, ಕೊರೊನಾ ಸಂದರ್ಭದಲ್ಲಿ ಮಹಾಮಂಡಳದ ವತಿಯಿಂದ ಕೊರೊನಾ ರೋಗಿಗಳ ಪರಿಚಾರಕರಿಗೆ ಸತತ 54 ದಿನಗಳ ಕಾಲ ಶುಚಿ ರುಚಿಯಿಂದ ಕೂಡಿದ ಆಹಾರದ ಪೊಟ್ಟಣ ವಿತರಣೆ ಮಾಡುವ ಮೂಲಕ ಮಾನವೀಯತೆ ಕಾರ್ಯವನ್ನು ಮಾಡಿದೆ.  ನಮ್ಮ ಮಹಾಮಂಡಳದ ಕಾರ್ಯಕರ್ತರು ಜೀವನದ ಹಂಗು ತೊರೆದು ಕಾರ್ಯ ನಿರ್ವಹಿಸುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.  ಅದೇ ರೀತಿ ಸರಿ ಸುಮಾರು 10 ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಣೆ‌ ಮತ್ತು ಸಾಕಷ್ಟು ಸಸಿಗಳನ್ನು ನೆಟ್ಟು ಸಾಮಾಜಿಕ ಅರಣ್ಯ ಸಂರಕ್ಷಣೆ ಮಾಡಿದ್ದಾರೆ.  ಅಲ್ಲದೇ,  ಕಳೆದ ಮೂರು ವರ್ಷಗಳಿಂದ ಉಚಿತವಾಗಿ ಮಣ್ಣಿನಲ್ಲಿ ತಯಾರಿಸಿದ ಐದು ಸಾವಿರ ಗಣೇಶ ಮೂರ್ತಿಗಳನ್ನು ವಿತರಿಸುವ ಮೂಲಕ ಪರಿಸರ ಸ್ನೇಹಿ ಹಬ್ಬವನ್ನು ಆಚರಣೆಗೆ ನಾಂದಿ ಹಾಡಿದೆ.  ಮಹಾಮಂಡಳ ಎಲ್ಲಾ ಗಣೇಶ ಮಂಡಳಿಯ ರೀತಿಯಲ್ಲಿ ಗಣೇಶನ ಮೂರ್ತಿಯನ್ನು ಪ್ಲಾಸ್ಟರ್ ಆಪ್ ಪ್ಯಾರಿಸ್ ದಿಂದ ತಯಾರಿಸಿದರೂ ಅದರ ಬದಲಾಗಿ ಶಾಶ್ವತವಾಗಿ ನಿರ್ಮಿಸಿದ ಫೈಬರ್ ಮೂರ್ತಿಯನ್ನು ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಪ್ರತಿಷ್ಠಾಪನೆ ಮಾಡಿದೆ. ಹಿಂದೂ ಧರ್ಮದಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆ, ಸಾಂಸ್ಕೃತಿಕ ಹಾಗೂ ಪರಿಸರ ಸ್ನೇಹಿ ಗಣೇಶೋತ್ಸವನ್ನು ಈ ನಾಡಿನ ಸಮಸ್ತ ಕನ್ನಡಿಗರು ಆಚರಣೆ ಮಾಡುಬೇಕು ಎಂಬ ಹೇಳಿದರು.

ಈ ಸಂದರ್ಭದಲ್ಲಿ ಈ ಮಹಾಮಂಡಳ ಮಾಜಿ ಅಧ್ಯಕ್ಷರು, ಹಿರಿಯರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರ

Leave a Reply

ಹೊಸ ಪೋಸ್ಟ್‌