ಕನ್ನೂರ ಶಾಂತಿ‌ ಕುಟೀರದಲ್ಲಿ ಆ. 30 ರಂದು ಶ್ರೀ ಗಣಪತರಾವ ಮಹಾರಾಜರ ಜನ್ಮ ಮಹೊತ್ಸವ ಸಪ್ತಾಹ

ವಿಜಯಪುರ: ಸುಕ್ಷೇತ್ರ ಕನ್ನೂರ ಶಾಂತಿಕುಟೀರದಲ್ಲಿ ಶ್ರೀ ಗಣಪತರಾವ ಮಹಾರಾಜರ 116ನೇ ಜನ್ಮ ಮಹೋತ್ಸವ ಸಪ್ತಾಹವನ್ನು ಇದೇ ಆಗಷ್ಟ್ 30 ರಿಂದ ಸಪ್ಟೆಂಬರ 7 ರ ವರೆಗೆ ಆಯೋಜಿಸಲಾಗಿದೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಶಾಂತಿಕುಟೀರ ಟ್ರಸ್ಟ್ ಅಧ್ಯಕ್ಷ ಗೋವಿಂದಲಾಲ ಬಾಹೇತಿ, ಟ್ರಸ್ಟಿ ರಮೇಶ ಕುಲಕರ್ಣಿ(ಕನ್ನೂರ) ಈ ವಿಷಯ ತಿಳಿಸಿದ್ದಾರೆ.

ಆಧ್ಯಾತ್ಮ ಸಾಧನಕ್ಕೆ ಕನ್ನೂರಲ್ಲಿ ಶಾಂತಿಕುಟೀರ, ಆಧ್ಯಾತ್ಮಾಧಾರಿತ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಭಾರತೀಯ ಸುರಾಜ್ಯ ಸಂಸ್ಥೆಯನ್ನು ಸ್ಥಾಪಿಸಿದ ಶ್ರೀ ಗಣಪತರಾವ ಮಹಾರಾಜರು, ಆ ಮೂಲಕ ಸಮಾಜ ಸುಧಾರಣೆಯ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಕರ್ನಾಟಕ ಮಹಾರಾಷ್ಟ್ರದಲ್ಲಿ ಅನೇಕ ಶಿಷ್ಯರನ್ನು ಹೊಂದಿರುವ ಗಣಪತರಾವ್ ಮಹಾರಾಜರು ಬಾಲ್ಯದಿಂದಲೇ ಆಧ್ಯಾತ್ಮದತ್ತ ಒಲವುಉಳ್ಳವರಾಗಿದ್ದರು. ತಮ್ಮ 94ನೇ ವಯಸ್ಸಿನಲ್ಲಿ ಸುಲಭ ಆತ್ಮಜ್ಞಾನ ಎಂಬ ಮೇರುಗ್ರಂಥವನ್ನು ರಚಿಸಿದ ಹೆಗ್ಗಳಿಕೆ ಅವರದು. ಈ ಹೊತ್ತಿಗೆಯಲ್ಲಿ ಶ್ರುತಿ ಶಾಸ್ತ್ರಗಳಿಗೂ ವರ್ಣಿಸಲು ಕಠಿಣವಾದ ಉಚ್ಚತಮ ವೇದಾಂತವನ್ನು ನೀರು ಕುಡಿದಷ್ಟು ಸರಳ ಭಾಷೆಯಲ್ಲಿ ವಿವಿರಿಸಿರುವುದು ಅವರ ಆಧ್ಯಾತ್ಮದ ಮೇರು ವ್ಯಕ್ತಿತ್ವಕ್ಕೆ ಒಂದು ನಿದರ್ಶನವಾಗಿದೆ. ಅಂಥ ಸದ್ಗುರುಗಳ ಜನ್ಮ ಮಹೋತ್ಸವ ಸಪ್ತಾಹವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಶಾಂತಿಕುಟೀರ ಟ್ರಸ್ಟ್ ಕಮೀಟಿ ನಿರ್ಧರಿಸಿದೆ.

 

ಒಂಭತ್ತು ದಿನಗಳ ಕಾಲ ಶಾಂತಿಕುಟೀರದಲ್ಲಿ ನಡೆಯುವ ಸಪ್ತಾಹ ಕಾರ್ಯಕ್ರಮಗಳ ವಿವರಣೆ ನೀಡಿದ ಅವರು, ಆ. 30 ರಂದು ಬೆಳಿಗ್ಗೆ 10 ಗಂಟೆಗೆ ದಾಸಬೋಧ ಗ್ರಂಥಾರಂಭ, ಸಪ್ತಾಹದ ಉದ್ಘಾಟನೆ ಸಮಾರಂಭ ಜರುಗಲಿದ್ದು, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಷಣ್ಮುಖಾರೂಢ ಮಠದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು, ಕನ್ನೂರ ಗುರುಮಠದ ಶ್ರೀ ಸೋಮನಾಥ ಶಿವಾಚಾರ್ಯರು ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡುವರು. ಸಂಜೆ 5ಕ್ಕೆ ಸೂರತ್ ನ ಸ್ವಾಮಿ ಸವಿತಾನಂದಜಿ ಅವರಿಂದ ಪ್ರವಚನ, ಸಾಂಗಲಿಯ ಕೀರ್ತನಕಾರ ಕೇಳಕರ ಅವರಿಂದ ಕೀರ್ತನೆ ನಡೆಯಲಿದೆ.

ಕನ್ಬೂರ ಶಾಂತಿ ಕುಟೀರ.

ದಿ.31 ದು ಬೆಳಿಗ್ಗೆ 10ಕ್ಕೆ ಸಿಂದಗಿಯ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಬೆಂಗಳೂರಿನ ಡಾ. ಆರತಿ ವ್ಹಿ.ಬಿ. ಸಂಜೆ 5ಕ್ಕೆ ಬೆಂಗಳೂರು ಬೇಲಿಮಠದ ಶ್ರೀ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಪ್ರವಚನ ನೀಡುವರು.
ಸೆ.1 ರಂದು ಬೆಳಿಗ್ಗೆ 10ಕ್ಕೆ ಗದುಗಿನ ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು ಮತ್ತೂರಿನ ಶ್ರೀ ರಾಮನಾರಾಯಣ ಅವಧಾನಿ, ಬೆಂಗಳೂರಿನ ಡಾ. ತೇಜಸ್ವಿನಿ ಅನಂತಕುಮಾರ ಸಂಜೆ 5ಕ್ಕೆ ಮಾಣಿಕನಗರದ ಶ್ರೀ ಜ್ಞಾನರಾಜ ಮಾಣಿಕಪ್ರಭು ಮಹಾರಾಜರು ಪ್ರವಚನ ಹೇಳುವರು. ಸಂಜೆ 6.30ಕ್ಕೆ ಸ್ತೋತೃಗಾನ – ವ್ಯಾಖ್ಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆ. 3 ರಂದು ಬೆಳಿಗ್ಗೆ 10ಕ್ಕೆ ಸೂರೇಬಾನದ ಶ್ರೀ ಗುರುದೇವ ಸಮರ್ಥ ಶಿವಾನಂದ ಸ್ವಾಮಿಗಳು, ಕೇರೆಕೈನ ವಿದ್ವಾನ್ ಉಮಾಕಾಂತ ಭಟ್, ಆಳಂದಿಯ ಶ್ರೀ ಶಂಕರ ಶಾಸ್ತ್ರಿಗಳು, ಸಂಜೆ 5ಕ್ಕೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಪ್ರವಚನ ಹೇಳುವರು.
ದಿ.4 ರಂದು ಬೆಳಿಗ್ಗೆ 10ಕ್ಕೆ ಹೆಬ್ಬಳ್ಳಿಯ ಶ್ರೀ ದತ್ತಾವಧೂತ ಮಹಾರಾಜರು, ಖಾತಗಾವನ ಶ್ರೀ ಮೋಹನಬುವಾ ರಾಮದಾಸಿ, ಸಂಜೆ 5ಕ್ಕೆ ಚಿಕ್ಕೋಡಿಯ ಶ್ರೀ ಚಿದ್ಘನಾನಂದ ಮಹಾಸ್ವಾಮಿಗಳು ಪ್ರವಚನ ಹೇಳುವರು. ದಿ.5 ರಂದು ಬೆಳಿಗ್ಗೆ 10ಕ್ಕೆ ಸಜ್ಜನಗಡದ ಶ್ರೀ ಯೋಗೇಶಬುವಾ ರಾಮದಾಸಿ, ಹುಬ್ಬಳ್ಳಿಯ ಶ್ರೀ ಸ್ವಾಮಿ ಚಿದ್ರೂಪಾನಂದ ಸ್ವಾಮೀಜಿ, ಸಿಂದಗಿಯ ಶ್ರೀ ದತ್ತಪ್ಪಯ್ಯಾ ಸ್ವಾಮೀಜಿ ಪ್ರವಚನ ಹೇಳುವರು. ಸಂಜೆ 5ಕ್ಕೆ ಪುಣೆಯ ಚಾರುದತ್ತ ಆಫಳೇ ಅವರಿಗೆ ಶ್ರೀ ಗಣಪತರಾವ್ ಮಹಾರಾಜ ಆಧ್ಯಾತ್ಮಿಕ ಸೇವಾ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ. ದಿ.6 ರಂದು ಬೆಳಿಗ್ಗೆ 10ಕ್ಕೆ ಪುಣೆಯ ಶ್ರೀಚಾರುದತ್ತ ಆಫಳೇ, ಬಾಗಲಕೋಟೆಯ ಶ್ರೀ ಕೃಷ್ಞಾನಂದ ಶರಣರು, ಸಂಜೆ 5ಕ್ಕೆ ಬೀದರ್ ನ ಡಾ. ಶಿವಕುಮಾರ ಸ್ವಾಮೀಜಿ ಪ್ರವಚನ ಹೇಳುವರು.
ದಿ.7 ರಂದು ಬೆಳಿಗ್ಗೆ 6ಕ್ಕೆ ಕನ್ನೂರ ಗ್ರಾಮದಲ್ಲಿರುವ ಶ್ರೀ ಸಮರ್ಥ ಸದ್ಗುರುಗಳ ಜನ್ಮಸ್ಥಾನದಿಂದ ಶಾಂತಿಕುಟೀರದವರೆಗೆ ವಿವಿಧ ವಾಧ್ಯ ವೈಭವಗಳೊಂದಿಗೆ ರಥ ಹಾಗೂ ಪಲ್ಲಕ್ಕಿ ಉತ್ಸವದ ಭವ್ಯ ಮೆರವಣಿಗೆ ನಡೆಯುವುದು. 10.30 ಕ್ಕೆ ಭಂಡಾರಕವಠೆಯ ಶ್ರೀ ಕಲ್ಲಪ್ಪ ಮಹಾರಾಜರು, ವಿಜಯಪುರದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ, ಸಂಗಮೇಶ ಶ್ರೀಗಳು, ಪುಣೆಯ ಅನಂತರಾವ(ಬಾಬಣ್ಣ) ಕುಲಕರ್ಣಿ, ಮಡುರಾದ ಗಣೇಶ ನಾಯಕ, ಶಾಂತಿಕುಟೀರದ ಶ್ರೀಕೃಷ್ಣ ಸಂಪಗಾಂವಕರ ಪ್ರವಚನ ಹೇಳುವರು. ಇದೇ ದಿನ ದಾಸಬೋಧ ಗ್ರಂಥ ಸಮಾಪ್ತಿ,, ಪುಷ್ಪವೃಷ್ಟಿ ನಡೆಯುವುದು.
ಸಪ್ಹಾಹದ ಸಂದರ್ಭದಲ್ಲಿ ಶಾಂತಿಕುಟೀರದಲ್ಲಿ ನಿರ್ಮಿಸಲಾದ ಭಕ್ತನಿವಾಸ ನೂತನ ವಿಸ್ತರಿಸಿದ ಕಟ್ಟಡಗಳ ಉದಘಾಟನೆ, ಸ್ಮೃತಿಸದನ ಮತ್ತು ಧ್ಯಾನಮಂದಿರ ಲೋಕಾರ್ಪಣೆ, ಶಾಂತಿಕುಟೀರ ಸಂದೇಶ ವಿಶೇಷ ಸಂಚಿಕೆ ಬಿಡುಗಡೆ, ಶ್ರೀ ಗಣಪತರಾವ ಮಹಾರಾಜರ ಕೃತಿ ಯಶಸ್ವೀ ಜೀವನ ದ ಇಂಗ್ಲೀಷ ಅನುವಾದದ ಪ್ರಕಾಶನ, ಸದ್ಗುರುಗಳ ಗ್ರಹದಲ್ಲಿದ್ದ ಅನುಭವ ಪದಗಳ ಡಿಜಿಟಲೈಜೇಶನ್ ಮಾಡಿದ 250 ಧ್ವನಿ ಸುತುಗಳ ಮರು ಪ್ರಸ್ತುತಿ, ಸದ್ಗುರು ಉವಾಚ ಕೃತಿ ಬಿಡುಗಡೆ, ಬ್ರಹ್ಮಸ್ವರೂಪಾನುಸಂಧಾನ ಧ್ವನಿಸುರುಳಿ ಬಿಡುಗಡೆ, ಶಾಂತಿಕುಟೀರ ಸಂಪ್ರದಾಯದ ಸಂಹಿತೆ ಮಾಹಿತಿ ಕೈಪಿಡಿ ಬಿಡುಗಡೆ, ಗಣಪತರಾವ ಮಹಾರಾಜರು ಸಂಪಾದಿಸಿದ ಅಷ್ಟಾವಕ್ರಗೀತಾ ಹಾಗೂ ನವನೀತ ಕೃತಿಗಳ ಆಡಿಯೋ ಬುಕ್ ಲೋಕಾರ್ಪಣೆಯಾಗಲಿವೆ.

ಸಪ್ತಾಹದ ಅಂಗವಾಗಿ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಈ ಸಪ್ತಾಹದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಾನಾ ಕಡೆಗಳಿಂದ ಸುಮಾರು ಹತ್ತು ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಈ ಸಙದರ್ಭದಲ್ಲಿ ಶಾಂತಿ ಕುಟೀರದ ಟ್ರಸ್ಟಿಗಳಾದ ಡಾ ಸತೀಶ ಕನ್ನೂರ, ಸತೀಶ ತಿಕೋಟಿ, ಶ್ರೀನಿವಾಸ ಬಾಹೇತಿ, ಶ್ರೀಕೃಷ್ಣ ಸಂಪಗಾಂವಕರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌