ಪತ್ರಕರ್ತರ ರೇಲ್ವೆ ಪಾಸ್ ಪುನಾರಂಭಿಸಲು ಸಚಿವ ವಿ. ಸೋಮಣ್ಣಗೆ ಸಂಪಾದಕರ ಸಂಘದ ಮನವಿ
ರಾಯಚೂರು: ಕೋವಿಡ್-19 ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಪತ್ರಕರ್ತರ ರೈಲ್ವೆಯ ಪಾಸನ್ನು ಪುನಾರಂಭಿಸವಂತೆ ರೈಲ್ವೆ ಕೇಂದ್ರ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಿನಪತ್ರಿಕೆಗಳ ಸಂಪಾದಕರು ಸೇರಿಕೊಂಡು ಸ್ಥಾಪಿಸಿರುವ ಕರ್ನಾಟಕದ ಏಕೈಕ ಸಂಪಾದಕರ ಸಂಘವಾಗಿದೆ. ಕೋವಿಡ್-19 ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪತ್ರಕರ್ತರಿಗೆ ವಿತರಿಸುತ್ತಿದ್ದ ರೈಲ್ವೆ ಪಾಸ್‌ನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಈಗ ಕೋವಿಡ್-19 ಅಲೆ ಮುಕ್ತಾಯಗೊಂಡು 3-4 […]