ರಾಯಚೂರು: ಕೋವಿಡ್-19 ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಪತ್ರಕರ್ತರ ರೈಲ್ವೆಯ ಪಾಸನ್ನು ಪುನಾರಂಭಿಸವಂತೆ ರೈಲ್ವೆ ಕೇಂದ್ರ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಿನಪತ್ರಿಕೆಗಳ ಸಂಪಾದಕರು ಸೇರಿಕೊಂಡು ಸ್ಥಾಪಿಸಿರುವ ಕರ್ನಾಟಕದ ಏಕೈಕ ಸಂಪಾದಕರ ಸಂಘವಾಗಿದೆ. ಕೋವಿಡ್-19 ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪತ್ರಕರ್ತರಿಗೆ ವಿತರಿಸುತ್ತಿದ್ದ ರೈಲ್ವೆ ಪಾಸ್‌ನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಈಗ ಕೋವಿಡ್-19 ಅಲೆ ಮುಕ್ತಾಯಗೊಂಡು 3-4 ವರ್ಷಗಳು ಗತಿಸಿದರೂ ಸಹ ಈವರೆಗೂ ಸದರಿ ರೈಲ್ವೆ ಇಲಾಖೆಯಿಂದ ಪಾಸ್‌ಗಳನ್ನು ಪುನರಾರಂಭಿಸಿರುವುದಿಲ್ಲ. ಇದರಿಂದಾಗಿ ಮಾನ್ಯತೆ ಹೊಂದಿದ ಪತ್ರಕರ್ತರಿಗೆ ರೈಲು ಪ್ರಯಾಣ ಮರೀಚಿಕೆಯಾಗಿದೆ. ದೂರದ ಪ್ರಯಾಣಗಳಿಗೆ ಕೇವಲ ಬಸ್‌ಗಳನ್ನಷ್ಟೇ ಅವಲಂಬಿಸುವ ಪರಿಸ್ಥಿತಿ ಉಂಟಾಗಿದೆ.
ಆದಕಾರಣ, ತಾವುಗಳು ರೈಲ್ವೆ ಇಲಾಖೆಯಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ಸ್ಥಗಿತಗೊಳಿಸಿದ್ದ ರೈಲ್ವೆ ಪಾಸ್‌ನ್ನು ಪುನಃ ಪ್ರಾರಂಭಿಸಿ ಪತ್ರಕರ್ತರಿಗೆ ಅನುಕೂಲತೆ ಕಲ್ಪಿಸಿಕೊಡಬೇಕೆಂದು ನೀಡಿರುವ ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ಚನ್ನಬಸವ ಬಾಗಲವಾಡ, ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಖಜಾಂಚಿಗಳಾದ ಖಾನಸಾಬ್ ಮೋಮಿನ್, ಸೇರಿದಂತೆ ಸಂಘದ ಇನ್ನಿತರ ಪದಾಧಿಕಾರಿಗಳು ಇದ್ದರು.