ದೇಶದಲ್ಲಿಯೇ ಮೊದಲು- ರೊಬೋಟ್‌ ನೆರವಿನಿಂದ ಸ್ತನವನ್ನು ಪುನರ್ನಿರ್ಮಾಣ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್‌ ಆಸ್ಪತ್ರೆ ವೈದ್ಯರು

ಬೆಂಗಳೂರು: ಮೂರನೇ ಹಂತದ ಸ್ತನಕ್ಯಾನ್ಸರ್‌ನಿಂದ ಬಳಲುತ್ತಿದ್ದ 38 ವರ್ಷದ ಮಹಿಳೆಗೆ ದೇಶದಲ್ಲೇ ಮೊದಲ ಬಾರಿಗೆ ತನ್ನದೇ ದೇಹದ ಮತ್ತೊಂದು ಭಾಗವನ್ನು ಬಳಸಿಕೊಂಡು ರೊಬೋಟ್‌ ಸಹಾಯದ ಮೂಲಕ ಯಶಸ್ವಿಯಾಗಿ ಸ್ತನವನ್ನು ಪುನರ್‌ ನಿರ್ಮಿಸಲಾಗಿದೆ. ಬನ್ನೇರುಘಟ್ಟ ರಸ್ತೆ ಫೋರ್ಟಿಸ್‌ ಆಸ್ಪತ್ರೆಯ ಆಂಕೊಲಾಜಿ ಮತ್ತು ರೊಬೊಟಿಕ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜರಿ ವಿಭಾಗದ ನಿರ್ದೇಶಕ ಡಾ. ಸಂದೀಪ್ ನಾಯಕ್ ಪಿ ಅವರ ವೈದ್ಯ ತಂಡ ಈ ಸಾಧನೆ ಮಾಡಿದೆ.

ಈ ಕುರಿತು ಮಾತನಾಡಿದ ಡಾ. ಸಂದೀಪ್‌ ನಾಯಕ ಪಿ., 38 ವರ್ಷದ ರೇಹಾ (ಹೆಸರು ಬದಲಿಸಲಾಗಿದೆ) ಎಂಬುವವರಿಗೆ ಎಡ ಸ್ತನದ ಕ್ಯಾನ್ಸರ್‌ ಮೂರನೇ ಹಂತಕ್ಕೆ ತಲುಪಿತ್ತು. ಇವರಿಗೆ ಸಣ್ಣ ಮಗುವಿದ್ದು, ಹಾಲುಣಿಸುತ್ತಿದ್ದರು. ಸ್ತನ ಕ್ಯಾನ್ಸರ್‌ ೩ನೇ ಹಂತ ತಲುಪಿದ್ದರಿಂದ ಹಾಲುಣಿಸುವುದು ಸಹ ಕಷ್ಟಕರವಾಗಿತ್ತು. ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಅವರಿಗೆ ಸ್ತನ ಕ್ಯಾನ್ಸರ್‌ ಮೂರನೇ ಹಂತಕ್ಕೆ ತಲುಪಿರುವುದು ತಿಳಿದು ಬಂತು. ಕೂಡಲೇ ಅವರಿಗೆ ಕಿಮೊಥೆರಪಿ ಕೋರ್ಸ್‌ ಪೂರ್ಣಗೊಳಿಸುವಂತೆ ಸಲಹೆ ನೀಡಿದೆವು, ಅದರಂತೆ ಅವರು ಕಿಮೊಥೆರಪಿ ತೆಗೆದುಕೊಂಡರು.

ಡಾ. ಸಂದೀಪ ನಾಯಕ

ಆದರೆ, ಅವರಿಗೆ ತಮ್ಮ ಸ್ತನ ಪುನರ್‌ ನಿರ್ಮಾಣದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರಿಂದ ಅವರಿಗೆ ವಿನೂತನ ಶಸ್ತ್ರಚಿಕಿತ್ಸೆಯಾದ ರೊಬೊಟಿಕ್-ಸಹಾಯದ ನಿಪ್ಪಲ್ ಸ್ಪೇರಿಂಗ್ ಸ್ತನಛೇದನ ಮತ್ತು LD ಫ್ಲಾಪ್ ಪುನರ್ನಿರ್ಮಾಣದ ಸಲಹೆ ನೀಡಿದೆವು. ಅದರಂತೆ, ಕ್ಯಾನ್ಸರ್‌ ಪೀಡಿತ ಸ್ತನ ಅಂಗಾಂಶವನ್ನು ತೆಗೆದುಹಾಕಿದ ನಂತರ, ನಾವು ರೋಬೋಟಿಕ್ ನೆರವಿನ LD ಫ್ಲಾಪ್ ಪುನರ್ನಿರ್ಮಾಣದ ಮೂಲಕ ರೋಗಿಯ ಹಿಂಭಾಗದಿಂದ ತೆಗೆದ ಅಂಗಾಂಶವನ್ನು ಬಳಸಿಕೊಂಡು ಸ್ತನವನ್ನು ಪುನರ್ನಿರ್ಮಿಸಿದ್ದೇವೆ.

ಈ ವಿಧಾನವು ಕನಿಷ್ಠ ಆಕ್ರಮಣಕಾರಿಯಾಗಿದ್ದು, ತ್ವರಿತವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಲಿದೆ. ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ರೋಬೋಟ್‌ ಸಹಾಯದಿಂದ ನಡೆಸಿದ ಸ್ತನ ಮರುನಿರ್ಮಾಣ ಶಸ್ತ್ರಚಿಕಿತ್ಸೆಯು ಹೆಚ್ಚು ಪರಿಣಾಮಕಾರಿ. ಅಷ್ಟೇ ಅಲ್ಲದೆ, ದೇಶದಲ್ಲೇ ಮೊದಲ ಬಾರಿಗೆ ತಮ್ಮ ದೇಹದ ಭಾಗವನ್ನೇ ಬಳಸಿಕೊಂಡು ಸ್ತನವನ್ನು ನೈಸರ್ಗಿಕವಾಗಿ ರೋಬೋಟ್‌ ಸಹಾಯದ ಮೂಲಕ ಮರುನಿರ್ಮಾಣದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಕಾರ್ಯ ವಿಧಾನದಲ್ಲಿ ಫೋರ್ಟಿಸ್ ಆಸ್ಪತ್ರೆಯ ಡಾ ಅಮೀನುದ್ದೀನ್ ಖಾನ್ ಮತ್ತು ಡಾ. ಭರತ್ ಜಿ ಅವರ ಸಹಕಾರ ಪ್ರಶಂಸನೀಯ. ಪ್ರಸ್ತುತ ರೋಗಿಯು ಆರೋಗ್ಯವಾಗಿದ್ದಾರೆ ಎಂದು ಅವರು ವಿವರಿಸಿದರು.

Leave a Reply

ಹೊಸ ಪೋಸ್ಟ್‌