ಉಕ್ಕಲಿಯಲ್ಲಿ ವೈದ್ಯಕೀಯ, ಶಾಲಾ ವಿದ್ಯಾರ್ಥಿಗಳಿಂದ ಸ್ವಚ್ಛತಾ ಸೇವಾ ಅಭಿಯಾನ

ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರ ವರೆಗೆ ಸ್ವಚ್ಛತಾ ಹಿ ಸೇವಾ-2024 ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಸ್ವಚ್ಛತೆ ಅಭಿಯಾನದ ಅಂಗವಾಗಿ ಗುರುವಾರ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿಯರಿಗೆ ಸ್ವಚ್ಛತೆ ಪ್ರತಿಜ್ಞೆ ಮಾಡಿಸಲಾಯಿತು. ಪ್ರತಿವಾರ ಎರಡು ಗಂಟೆಯಂತೆ ವರ್ಷಕ್ಕೆ 100 ಗಂಟೆ ಸ್ವಚ್ಛತೆಗೆ ಮೀಸಲಿಡಲು ಮತ್ತು ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕದಿರಲು ಕುರಿತು ಗ್ರಾಮಸ್ಥರಲ್ಲಿ ಅರಿವು ಜನಜಾಗೃತಿ ಮೂಡಿಸಲು ತರಬೇತಿ ನೀಡಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಉಕ್ಕಲಿ ಬಸ್ ನಿಲ್ದಾಣದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಸಿಬ್ಬಂದಿಯ ಜೊತೆಗೂಡಿ ಸ್ವಚ್ಛತೆ ಕೈಗೊಂಡರು.

ಈ ಸ್ವಚ್ಛತಾ ಅಭಿಯಾನದಲ್ಲಿ ವೈದ್ಯಕೀಯ ಕಾಲೇಜಿನ ಡಾ. ಎಂ. ಸಿ.ಯಡವಣ್ಣವರ, ಡಾ. ಶೈಲಜಾ ಪಾಟೀಲ, ಡಾ. ರೇಖಾ ಉದಗಿರ, ಡಾ. ಎಂ. ಆರ್. ಗುಡದಿನ್ನಿ, ಡಾ. ಪ್ರವೀಣ ಗಂಗನಹಳ್ಳಿ, ಡಾ. ಸಂತೋಷ ಪಾಟೀಲ, ಡಾ. ತನುಜಾ ಪಟ್ಟಣಕರ, ಡಾ. ಪೂಜಾ ತೊದಲಬಾಗಿ, ಡಾ. ಸಂದೀಪ ಯಂಕಂಚಿ, ಸಂಜೀವ ಖಾನಗೌಡ್ರ, ಡಿ. ಐ. ಮಠಪತಿ ಮುಂತಾವದವರು ಪಾಲ್ಗೊಂಡಿದ್ದರು.

Leave a Reply

ಹೊಸ ಪೋಸ್ಟ್‌