ವಿಕಲಚೇತನ ವಿದ್ಯಾರ್ಥಿಗಳಿಗೆ ಸಾಧನ ಸಲಕರಣೆ ವಿತರಣೆ, ವೈದ್ಯಕೀಯ ಶಿಬಿರ ಆಯೋಜನೆ- ಸದುಯೋಗ ಪಡೆದುಕೊಳ್ಳಲು ರಿಷಿ ಆನಂದ ಮನವಿ

ವಿಜಯಪುರ: ಸಮನ್ವಯ ಶಿಕ್ಷಣ ಮಧ್ಯವರ್ತನೆಯ ಅಡಿಯಲ್ಲಿ ವಿಶೇಷ ಅಗತ್ಯವುಳ್ಳ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ಮಕ್ಕಳಿಗಾಗಿ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಬಸವನಬಾಗೇವಾಡಿ ಹಾಗೂ ಮುದ್ದೇಬಿಹಾಳ ತಾಲೂಕಿಗೆ ಸಂಬಂಧಿಸಿದಂತೆ ಅ.28ರಂದು ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿಯ ದೇವರಹಿಪ್ಪರಗಿ ರಸ್ತೆಯಲ್ಲಿರುವ ಎಂ.ಜಿ.ಕೋರಿ ಡಾ:ಬಿ.ಜಿ.ಬ್ಯಾಕೋಡ್ ಪದವಿ ಪುರ್ವ ಮಹಾವಿದ್ಯಾಲಯದಲ್ಲಿ, ಇಂಡಿ, ಚಡಚಣ, ಸಿಂದಗಿ ತಾಲೂಕಿಗೆ ಸಂಬಂಧಿಸಿದಂತೆ ಅ.29ರಂದು ಇಂಡಿ ನಗರದ ಬಸ್ ಸ್ಟ್ಯಾಂಡ್ ಹತ್ತಿರದ ಯುಬಿಎಂಪಿಎಸ್ ಕಾಲೇಜ್‍ನಲ್ಲಿ ಹಾಗೂ ವಿಜಯಪುರ ನಗರ ಮತ್ತು ಗ್ರಾಮೀಣ ವಲಯಕ್ಕೆ ಸಂಬಂಧಿಸಿದ ವೈದ್ಯಕೀಯ ಶಿಬಿರ ಹಾಗೂ ಸಾಧನ ಸಲಕರಣೆ ವಿತರಣೆಯನ್ನು ಅ.30ರಂದು ನಗರದ ಮನಗೂಳಿ ರಸ್ತೆಯಲ್ಲಿರುವ ಮರಾಠಿ ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.

ಚಲನಾಂಗ ನ್ಯೂನ್ಯತೆ, ಮೆದುಳಿನ ಪಾಶ್ರ್ವವಾಯು, ಪೂರ್ಣ ದೃಷ್ಟಿದೋಷ, ಭೌದ್ದಿಕ ಅಸಾಮರ್ಥತೆ, ಶ್ರವಣ ದೋಷ, ಬಹು ವಿಧ ಅಂಗಾಗದೋಷ, ಶ್ರವಣ ಅಂಧತ್ವವುಳ್ಳ ಮಕ್ಕಳ ಪಾಲಕರು ಆಯಾ ದಿನಗಳಂದು ನಡೆಯುವ ಸ್ಥಳಗಳಲ್ಲಿ ಡಿಸೆಬಿಲಿಟಿ ಸರ್ಟಿಫಿಕೇಟ್, ವಿದ್ಯಾರ್ಥಿ/ಪೋಷಕರ ಆಧಾರ ಕಾರ್ಡ, 2 ಪಾಸ್‍ಪೋರ್ಟ್ ಸೈಜ್ ಫೋಟೋ, ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿಯೊಂದಿಗೆ ಹಾಜರಾಗಿ ವೈದ್ಯಕೀಯ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಕೋರಿದ್ದಾರೆ ಎಂದು ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳಾದ ಶ್ರೀಮತಿ ಉಮಾದೇವಿ ಸೊನ್ನದ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌