ವಕ್ಫ್ ವಿಚಾರದಲ್ಲಿ ಬಿಜೆಪಿಯಿಂದ ಅಪಪ್ರಚಾರ- ಕಾಯಿದೆ ತಿಳಿದುಕೊಂಡು ಮಾತನಾಡಲಿ- ಎಸ್. ಎಂ. ಪಾಟೀಲ ಗಣಿಹಾರ

ವಿಜಯಪುರ: ವಕ್ಫ್ ನೊಟೀಸ್ ವಿಚಾರದಲ್ಲಿ ಬಿಜೆಪಿಯವರು ಅಪಪ್ರಚಾರ ನಡೆಸುತ್ತಿದ್ದು, ಈ ಕಾಯಿದೆಯನ್ನು ಸಂಪೂರ್ಣ ತಿಳಿದುಕೊಂಡು ಮಾತನಾಡಬೇಕು ಎಂದು ಕೆಪಿಸಿಸಿ ವಕ್ತಾರ ಎಸ್. ಎಂ. ಪಾಟೀಲ ಗಣಿಹಾರ ಆಗ್ರಹಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಮಂತ್ರಿ ಜಮೀರ ಅಹ್ಮದ್ ಖಾನ್ ವಿಜಯಪುರಕ್ಕೆ ಬಂದು ವಕ್ಫ್ ಅದಾಲತ ಮಾಡಿದ ಬಳಿಕ ಈ ಗೊಂದಲ ಸೃಷ್ಠಿ ಮಾಡಲಾಗಿದೆ.  ಸಚಿವರು ಮುತುವಲ್ಲಿಗಳ ಆಸ್ತಿಗಳ ದಾಖಲಾತಿ ಬಗ್ಗೆ ವಕ್ಫ್ ಅದಾಲತ ಮಾಡಿದ್ದರು.  ವಕ್ಫ್ ಆಸ್ತಿಗಳ ಬಗ್ಗೆ ಅಲ್ಲ.  ಈ ವಕ್ಫ್ ಅದಾಲತ್ ಗೂ ನೋಟೀಸಿಗೂ ಸಂಭಂದವಿಲ್ಲ ಎಂದು ಸ್ಪಷ್ಟಪಡಿಸಿದರು.

ಡಾ. ಸ್ವರೂಪ ಎಂಬುವರು ವಕ್ಫ್ ಕಾನೂನು ಬುಕ್ ಬರೆದಿದ್ದಾರೆ.  1954ರಲ್ಲಿ ಸರ್ವ ಪಕ್ಷಗಳ‌ ಸಂದಸರ ಜೊತೆ ಚರ್ಚೆ ಮಾಡೀಯೇ ವಕ್ಫ್ ಕಾನೂನು ಮಾಡಿದ್ದಾರೆ.  ರಾಷ್ಟ್ರಗಳ ಎಲ್ಲ ಆಸ್ತಿಗಳ ಸಂರಕ್ಷಣೆಗಾಗಿ ವಕ್ಫ್ ಬೋರ್ಡ್ ಮಾಡಲಾಗಿದೆ.  ಇಸ್ಲಾಂ ಧರ್ಮಕ್ಕೆ ಸೇರಿದ ವ್ಯಕ್ತಿ ಅಲ್ಲಾನ ಹೆಸರಿನಲ್ಲಿ ಉಡುಗೊರೆ ಕೊಡುತ್ತಾರೆ.  ಅದು ವಕ್ಫ್ ಆಸ್ತಿ.  ಕೇಂದ್ರ ಸಚಿವರು ಲಘುವಾಗಿ ಮಾತನಾಡುತ್ತಾರೆ.  ಇದು ಖಂಡನೀಯ ಎಂದು ಅವರು ಹೇಳಿದರು.

ಶಾಮ್ಲತ ಪಟ್ಟಿ ಪ್ರಕಾರ ಮುಸ್ಲಿಮ ಜನರಿಗೆ ಭೂಮಿಯನ್ನು ಇನಾಂ ರೂಪದಲ್ಲಿ ಕೊಟ್ಟಿದಾರೆ.  ಇವು ಹಿಂದಿನ ಕಾಲದಿಂದಲೂ ಮುಸ್ಲಿಮರು ವಂಶ ಪಾರಂಪರಿಕವಾಗಿ ಬಂದ ಆಸ್ತಿಗಳಾಗಿವೆ.  ಇವುಗಳನ್ನು ವಕ್ಫ್ ಆಸ್ತಿ ಎನ್ಜುತ್ತಾರೆ.  1954 ಕಲಂ 4 ರ ಪ್ರಕಾರ ಸರ್ವೇ ಮಾಡಿದ್ದಾರೆ.  ಕಲಂ 5ರ ಪ್ರಕಾರ ಜಿಲ್ಲಾಧಿಕಾರಿಗಳು ಸರಕಾರಕ್ಕೆ ವರದಿ ಕಳಿಸಿದ ಬಳಿಕ ಸರಕಾರವೇ ಗೆಜೆಟ್ ನೊಟಿಫಿಕೇಷನ್ ಮಾಡುತ್ತದೆ.  ನಂತರ ಕಲಂ 36 ರಂತೆ ವ್ಯಕ್ತಿಗೆ ನೊಟೀಸ್ ನೀಡಿ, ವಿಚಾರಣೆ ನಡೆಸಿದ ಬಳಿಕ ಬಳಿಕ ವಕ್ಫ್ ಎಂದು ನೋಂದಣಿ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.

ವಕ್ಫ್ ಆಸ್ತಿ ರಾಷ್ಟ್ರೀಕರಣ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಷ್ಟ್ರೀಕರಣ ಮಾಡಿ ಆ ಅಸ್ತಿಗಳನ್ನು ಕೊಳ್ಳೆ ಹೊಡೆಯಲು ಪ್ಲಾನ್ ಮಾಡಿದ್ದಾರೆ.  ವಕ್ಫ್ ನಿಂದ ನೊಟೀಸ್ ಕೊಟ್ಟಿಲ್ಲ,  ಕಂದಾಯ ಇಲಾಖೆಯಿಂದ ತಿಳುವಳಿಕೆ ನೊಟೀಸ್ ಕೊಡಲಾಗಿದೆ.  ನೊಟೀಸ್ ಕೊಟ್ಟಮೇಲೆ ಅದು ವಕ್ಫ್ ಆಸ್ತಿ ಆಗಲ್ಲ.  50 ವರ್ಷಗಳ ನಂತರ ಈಗ ಇಂದೀಕರಣ ಮಾಡಲು ಹೊರಟಿದ್ದು ತಪ್ಪಾಗಿದೆ‌.  ಧರಣಿ ಕೂತ ಯಾವುದೇ ರೈತರಿಗೆ ನೊಟೀಸ್ ಬಂದಿಲ್ಲ.  ಅವರು ರೈತರೇ ಅಲ್ಲ.  ಇವರೆಲ್ಲಾ ಬಿಜೆಪಿಯವರು ಎಂದು ಅವರು ಹೇಳಿದರು.

ಬಿಜೆಪಿಯವರು ಸೋಮವಾರ ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಲಿದ್ದಾರೆ.  ಈ ಹೋರಾಟದಲ್ಲಿ ಪಾಲ್ಗೋಳ್ಳಲು ಸ್ವಾಮೀಜಿಗಳು ತಯಾರಾಗಿದ್ದು, ಅವರು ಬಿಜೆಪಿಯವರೇ?  ವಕ್ಫ್ ಆಸ್ತಿ ಬಗ್ಗೆ ಬೊಮ್ಮಾಯಿ ಪ್ರಾಮಾಣಿಕವಾಗಿ ಹೇಳಿದ್ದಾರೆ.  ವಕ್ಫ್ ಆಸ್ತಿ ಕಾಪಾಡಿಕೊಳ್ಳಿ ಎಂದಿದ್ದಾರೆ.  ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಕೂಡಲೇ ಪ್ರತಿಭಟನೆ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು‌.

ಬಿಜೆಪಿ ಅಧಿಕಾರದಲ್ಲಿದ್ದಾಗ ಆ ಪಕ್ಷದ ಮುಖಂಡರು ಮತ್ತು ಸಂಘ ಪರಿವಾರದವರು ಬೆಂಗಳೂರು ನಗರ ಹಾಗೂ ಸುತ್ತಮುತ್ತ ಸಾವಿರಾರು ಎಕರೆ ಆಸ್ತಿ ಕೊಳ್ಳೆ ಹೊಡೆದಿದ್ದಾರೆ ಎಂದು ಎಸ್. ಎಂ. ಪಾಟೀಲ ಗಣಿಹಾರ ಆರೋಪಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಹೊನಮೋಡೆ, ಡಾ. ರವಿ ಬಿರಾದಾರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌