ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು: ರೂ. 52 ಕೋ. ವೆಚ್ಚದಲ್ಲಿ 10 ಕಿ. ಮೀ ಕೊಳವೆ ಮಾರ್ಗ ಬದಲಾವಣೆಗೆ ಒಪ್ಪಿಗೆ- ಎಂ. ಬಿ. ಪಾಟೀಲ

ಬೆಂಗಳೂರು: ವಿಜಯಪುರ ನಗರಕ್ಕೆ ಅಲಮಟ್ಟಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಸುಮಾರು 10.8 ಕಿ.ಮೀ ಉದ್ದದ ಕೊಳವೆ ಮಾರ್ಗ ಶಿಥಿಲವಾಗಿದ್ದು, ಅದನ್ನು ರೂ. 52 ಕೋಟಿ ವೆಚ್ಚದಲ್ಲಿ ಬದಲಿಸಿ, ಹೊಸದಾಗಿ ಎಂ.ಎಸ್‌. ಪೈಪುಗಳನ್ನು ಅಳವಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ತಿಳಿಸಿದ್ದಾರೆ. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿನ ಕುಡಿಯುವ ನೀರು ಸರಬರಾಜು ಯೋಜನೆಗಳ ಪ್ರಗತಿ ಪರಿಶೀಲನಾ […]

ವಕ್ಫ್ ವಿಚಾರ: ಯತ್ನಾಳ ಹೋರಾಟಕ್ಕೆ ಈಶ್ವರಪ್ಪ ಬೆಂಬಲ- ಸಿಎಂ, ಜಮೀರ್ ಅಹ್ಮದಖಾನ್ ವಿರುದ್ಧ ವಾಗ್ದಾಳಿ

ವಿಜಯಪುರ: ವಕ್ಪ್ ಕಾಯಿದೆ ವಿರೋಧಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಜಯಪುರ ನಗರದಲ್ಲಿ ನಡೆಸುತ್ತಿರುವ ಅಹೋರಾತ್ರಿ ಹೋರಾಟಕ್ಕೆ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ.   ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಡೀ ಕರ್ನಾಟಕಕ್ಕೆ ಸ್ಫೂರ್ತಿ ಕೊಡೋ ಜನ ಕಾರ್ಯಕರ್ತರು ಇಲ್ಲಿದ್ದಾರೆ.  ಪಹಣಿಯಲ್ಲಿ ವಕ್ಪ್ ಬೋರ್ಡ್ ಎಂದು ಮಾಡಿದ್ದಕ್ಕೆ ರಾಜ್ಯದ ಕಾಂಗ್ರೆಸ್ ಸಚಿವರಿಗೂ ಸಮಾಧಾನ ಇಲ್ಲ.  ಖುರ್ಚಿ ಆಸೆಗಾಗಿ ಸುಮ್ಮನಿದ್ದಾರೆ.  ನಿಮಗೆ ಖರ್ಚಿನೇ […]

ವಕ್ಫ್ ವಿಚಾರ: ಬಿಜೆಪಿ ಹೇಳುವುದೊಂದು, ಮಾಡುವುದೊಂದು ಧೋರಣೆ ಅನುಸರಿಸುತ್ತಿದೆ- ಪ್ರೊ. ರಾಜು ಆಲಗೂರ ವಾಗ್ದಾಳಿ

ವಿಜಯಪುರ: ಚುನಾವಣೆ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ಸಂರಕ್ಷಣೆ ಮಾಡುವುದಾಗಿ ಬಿಜೆಪಿ ಹೇಳಿತ್ತು.  ಆದರೆ, ಈಗ ಆ ಪಕ್ಷದ ಮುಖಂಡರು ವಕ್ಫ್ ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಶಾಸಕ ಪ್ರೊ. ರಾಜು ಆಲಗೂರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವಕ್ಫ್ ಆಸ್ತಿ ಸಂರಕ್ಷಣೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರಶ್ನೆ ಮಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಈಗ ವಕ್ಫ್ ಹೋರಾಟದಲ್ಲಿ ಭಾಗಿಯಾಗುವ ಯಾವ ನೈತಿಕತೆಯೂ ಇಲ್ಲ.  ವಕ್ಪ್ ಆಸ್ತಿ ಸಂರಕ್ಷಣೆ ಮತ್ತು […]

ಬೆಂಗಳೂರು ಸಮಸ್ಯೆಗಳಿಗೆ ನಿಮ್ಮ ಬಳಿ ಪರಿಹಾರವಿದೆಯೇ? ನೀವೂ ನಮ್ಮ ಬೆಂಗಳೂರು ಚಾಲೆಂಜ್‌ ನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಬಹುದು

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರು ಟ್ರಾಫಿಕ್ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ವಿಭಿನ್ನ ಆಲೋಚನೆ, ಐಡಿಯಾ ನಿಮ್ಮಲ್ಲಿದೆಯೇ? ಹಾಗಿದ್ದರೆ ಇಲ್ಲಿದೆ ಉತ್ತಮ ಅವಕಾಶ. ಅನ್‌ಬಾಕ್ಸಿಂಗ್‌ ಬೆಂಗಳೂರು ಹಾಗೂ WT ಫಂಡ್‌ ಸಹಯೋಗದೊಂದಿಗೆ ಬೆಂಗಳೂರು ಸಮಸ್ಯೆಗೆ ಪರಿಹಾರ ಸೂಚಿಸುವ ಐದು ವಿಭಿನ್ನ ಆಲೋಚನೆಗಳಿಗೆ ತಲಾ 10 ಲಕ್ಷ ರೂ ಅನುದಾನ ನೀಡುವ “ನಮ್ಮ ಬೆಂಗಳೂರು ಚಾಲೆಂಜ್‌” ಉಪಕ್ರಮವನ್ನು ಘೊಷಣೆ ಮಾಡಿದೆ. ಉತ್ತಮ ಐಡಿಯಾ ನೀಡುವ 5 ವ್ಯಕ್ತಿಗಳು ಅಥವಾ ಸ್ಟಾರ್ಟ್‌ಅಪ್‌ ಅಥವಾ ಸಮುದಾಯ […]

ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭ್ರಷ್ಟಾಚಾರದ ತುತ್ತ ತುದಿಗೆ ಹೋಗಿದ್ದಾರೆ- ಈಶ್ವರಪ್ಪಗೆ ಮಾಡಿದ ಅನ್ಯಾಯದ ಪಾಪ ಅವರಿಗೆ ಬೆನ್ನು ಹತ್ತಿದೆ ಶಾಸಕ ಯತ್ನಾಳ

ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಭ್ರಷ್ಟಾಚಾರದ ತುತ್ತ ತುದಿಗೆ ಹೋಗಿದ್ದಾರೆ.  ಹಿಂದೆ ಮಾಡಿದ ಪಾಪದ ಫಲ ಅವರನ್ನು ಕಾಡುತ್ತಿದೆ ಎಂದು ವಿಜಯಪರು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ. ವಿಜಯಪುರದಲ್ಲಿ ವಕ್ಫ್ ಕಾನೂನು ವಿರೋಧಿಸಿ ಹೋರಾಟ ನಡೆಸುತ್ತಿರುವ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಬೆಳಗಾವಿಯಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ಎಫ್ ಡಿಎ ಆತ್ಮಹತ್ಯೆ ಮತ್ತು ಈ ಪ್ರಕರಣದ ಡೆತ್ ನೋಟ್ ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪಿಎ ಸೋಮು […]

ಬಸವ ನಾಡಿನಲ್ಲಿ ಮಾದರಿ ಅಂಗನವಾಡಿಗಳ ಅಭಿವೃದ್ಧಿ ಕ್ರಮ: ಜಿ. ಪಂ ಸಿಇಒ ರಿಷಿ ಆನಂದ

ವಿಜಯಪುರ: ಜಿಲ್ಲೆಯಲ್ಲಿ ಮಾದರಿ ಅಂಗನವಾಡಿಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಪಂಚಾಯತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ 34 ಅಂಗನವಾಡಿಗಳನ್ನು ಮಾದರಿ ಹಾಗೂ ಆಕರ್ಷಕ ಅಂಗನವಾಡಿ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಮಟ್ಟದ ಮಕ್ಕಳ ಶೈಕ್ಷಣಿಕ ಜೀವನದ ಅಡಿಪಾಯವು ಅತ್ಯಂತ ಸದೃಢವಾಗುವುದರ ಜೊತೆಗೆ ಮಕ್ಕಳ ಹಾಜರಾತಿಯ ನಿರಂತರತೆಯನ್ನು ಕಾಯ್ದುಕೊಂಡು […]