ವಿಜಯಪುರ: ವಕ್ಪ್ ಕಾಯಿದೆ ವಿರೋಧಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಜಯಪುರ ನಗರದಲ್ಲಿ ನಡೆಸುತ್ತಿರುವ ಅಹೋರಾತ್ರಿ ಹೋರಾಟಕ್ಕೆ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಡೀ ಕರ್ನಾಟಕಕ್ಕೆ ಸ್ಫೂರ್ತಿ ಕೊಡೋ ಜನ ಕಾರ್ಯಕರ್ತರು ಇಲ್ಲಿದ್ದಾರೆ. ಪಹಣಿಯಲ್ಲಿ ವಕ್ಪ್ ಬೋರ್ಡ್ ಎಂದು ಮಾಡಿದ್ದಕ್ಕೆ ರಾಜ್ಯದ ಕಾಂಗ್ರೆಸ್ ಸಚಿವರಿಗೂ ಸಮಾಧಾನ ಇಲ್ಲ. ಖುರ್ಚಿ ಆಸೆಗಾಗಿ ಸುಮ್ಮನಿದ್ದಾರೆ. ನಿಮಗೆ ಖರ್ಚಿನೇ ಬೇಕಾದರೆ ಸಾಯಿರಿ ಎಂದು ಅವರು ಕಾಜ್ಯ ಕಾಂಗ್ರೆಸ್ ಸರಕಾರದ ಸಚಿವರ ವಿರುದ್ದ ವಾಗ್ದಾಳಿ ನಡೆಸಿದರು.
ಈ ಭೂಮಿಗೂ ವಕ್ಪ್ ಗೂ ಸಂಬಂಧವಿಲ್ಲ. ಅವನೊಬ್ಬ ರಾಷ್ಟ್ರದ್ರೋಹಿ. ಆತನ ಹೆಸರು ಹೇಳಲು ನಾಚಿಕೆ ಎಂದು ಸಚಿವ ಜಮೀರ್ ವಿರುದ್ದ ವಾಗ್ದಾಳಿ
ನಡೆಸಿದ ಅ;ರು, ಆತನಿಗೆ ವಕ್ಪ್ ಅದಾಲತ್ ಮಾಡಲು ಸಿಎಂ ಹೇಳಿದ್ದಾರಂತೆ. ಅದಕ್ಕೆ ಸಿಎಂ ಸ್ಪಷ್ಟನೆ ನೀಡಬೇಕು. ನೊಟೀಸ್ ನೀಡಿದ ಬಳಿಕ ವಾಪಸ್ ತೆಗೆದುಕೊಂಡದ್ದು ಯಾಕೆ? ನೊಟೀಸ್ ನೀಡಿ ವಾಪಸ್ ತೆಗೆದುಕೊಂಡಿದ್ದರೂ ಬಿಜೆಪಿ ಹೋರಾಟ ಮಾಡುತ್ತಿದ್ದಾರೆಂದು ಸಿಎಂ ಹೇಳಿದ್ದು ಏಕೆ? ಎಂದು ಪ್ರಶ್ನಿಸಿದರು.
ಈಗ ಸಿಎಂಗೆ ದೇವರ ಮೇಲೆ ಭಕ್ತಿ ಹೆಚ್ಚಾಗಿದೆ. ಸಿಎಂ ಪತ್ನಿ ಎಂದೂ ಹೊರಗೆ ಬಂದವರಲ್ಲ. ಅವರ ಸಹಿ ಪಡೆದು ಅವರನ್ನೂ ಮುಡಾ ಹಗರಣದಲ್ಲಿ ಎ2 ಆರೋಪಿ ಮಾಡಿದರು. ಚಾಮುಂಡಿ ದರ್ಶನ ಮಾಡಿ ಸಿಎಂ ಪತ್ನಿ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ಸವದತ್ತಿ ಯಲ್ಲಮ್ಮನ ದರ್ಶನ ಮಾಡಿದರು ಎಂದು ಅವರು ಹೇಳಿದರು.
ದೇವರ ಆಶಿರ್ವಾದ ಬೇಕಾದರೆ ಹಿಂದೂ ವಿರೋಧಿಯಾ ವಕ್ಪ್ ಬೋರ್ಡ್ ಪರ ಕೆಲಸ ಮಾಡಬೇಡಿ. ವಕ್ಪ್ ಬೋರ್ಡ್ ನೊಟೀಸ್ ಹಿಂದೂಗಳಿಗೆ ಡಿದಂತೆ ಮುಸ್ಲಿಂಮರಿಗೆ ನೊಟೀಸ್ ನೀಡಿದ್ದರೆ ಬೆಂಕಿ ಹಚ್ಚಿ ಬಿಡುತ್ತಿದ್ದರು. ಹಿಂದೂಗಳು ಸಹನೆಯಿಂದ ಇದ್ದಾರೆ. ಹಿಂದೂಗಳ ಜಮೀನು ವಕ್ಪ್ ಗೆ ಹೋಗದಂತೆ ಕ್ರಮ ತಗೆದುಕೊಂಡರೆ ಹಿಂದೂ ದೇವರ ಆಶಿರ್ವಾದ ಸಿಗುತ್ತದೆ. ಸಿಎಂ ಖುರ್ಚಿಉಳಿಯಬಹುದು. ಇಲವಾದರೆ ಸಿಎಂ ಖುರ್ಚಿ ಉಳಿಯಲ್ಲ ಎಂದು ಈಶ್ವರಪ್ಪ ಹೇಳಿದರು.
ನಾನಾ ಮಠಾದೀಶರು ವಕ್ಪ್ ವಿರುದ್ದ ಹೋರಾಟಕ್ಕೆ ಸಾಥ್ ನೀಡಿದ್ದು ಖುಷಿಯ ವಿಚಾರ. ಆದರೆ, ಉಳಿದ ಸಾಧು ಸಂತರು ಮಠಾಧೀಶರು ಸಹ ಹೋರಾಟಕ್ಕೆ ಸಾಥ್ ನೀಡಬೇಕು. ನಮ್ಮ ಮಠಕ್ಕೆ ನೊಟೀಸ್ ನೀಡಿಲ್ಲ ಎಂದು ಸುಮ್ಮನಿರಬೇಡಿ. ಇಂದಲ್ಲ ನಾಳೆ ನೊಟೀಸ್ ಬಂದರೆ ಆಶ್ಚರ್ಯವಿಲ್ಲ
ಹಿಂದೂಗಳ ಮಠ ಮಾನ್ಯಗಳ ಆಸ್ತಿ ವಕ್ಪ್ ಬೋರ್ಡ್ ಎಂದಾಗಿದೆ. ಬೀರಲಿಂಗೇಶ್ವರ ಮಠಕ್ಕೂ ವಕ್ಪ್ ಬೋರ್ಡ್ ನೊಟೀಸ್ ಬಂದಿದೆ ಎಂದು ಅವರು ಹೇಳಿದರು.
ಸಿಎಂ ಎಸ್. ಸಿದ್ದರಾಮಯ್ಯ ನಾನು ಕುರುಬ ನಾಯಕ ಹಿಂದುಳಿದ ನಾಯಕ ಎಂದು ಹೇಳುತ್ತಾರೆ. ಆದರೆ ಅದೇ ಹಿಂದುಳಿದ ಕುರುಬ ಸಮಾಜದ ಮಠಗಳಿಗೆ ವಕ್ಪ್ ನೊಟೀಸ್ ನೀಡಲಾಗಿದೆ. ಸಿದ್ದರಾಮಯ್ಯ ಮುಸ್ಲಿಂ ನಾಯಕರಾಗಲು ಹೊರಟಿದ್ದಾರೆ. ಮುಸ್ಲಿಂ ನಾಯಕ ಆಗಲಿ ಆದರೆ ನಮ್ಮ ಮಠಗಳಿಗೆ ನೀಡಿರೋ ನೊಟೀಸ್ ವಾಪಸ್ ಪಡೆಯಲಿ. ಪಹಣಿಯಲ್ಲಿ ವಕ್ಪ್ ಬೋರ್ಡ್ ಎಂದು ನಮೂದು ಮಾಡಿದ್ದನ್ನು ತೆಗೆಯಬೇಕು ಎಂದು ಅವರು ಆಗ್ರಹಿಸಿದರು.
ಹಾವೇರಿಯ ಕಲಗೋಡ ಗ್ರಾಮ ವಕ್ಪ್ ಎಂದು ಮಾಡಿದ್ದಾರೆ. ಗಲಾಟೆ ಘರ್ಷಣೆ ಆಗಿದೆ. ವಕ್ಪ್ ವಿಚಾರದಲ್ಲಿ ರಕ್ತಪಾತ ದಂಗೆ ಕೊಲೆಗಳಾಗುತ್ತದೆ
ಇದಕ್ಕೆ ಕಾರಣ ಹಿಂದೂಗಳು ಕಾರಣವಲ್ಲ. ಮಠಗಳು ಅಲ್ಲ. ಇದಕ್ಕೆ ಜಮೀರ್ ಕಾರಣ. ಜಮೀರ್ ರಾಷ್ಟ್ರ ದ್ರೋಹಿ ಆಗ್ತಾರೆ. ಜನರು ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ. ಸರಕಾರದ ಸಚಿವರ ಹೋರಾಟದ ಕುರಿತು ಗಮನ ಹರಿಸಿಲ್ಲ. ಸಚಿವ ಕೆ. ಎನ್. ರಾಜಣ್ಣ ಹೊರತು ಪಡಿಸಿ ಇತರೆ ಸಚಿವರು ವಕ್ಪ್ ಕುರಿತು ಜಮೀರ್ ವಿರುದ್ದ ಮಾತನಾಡಿದ್ದಾರೆ. ಉಳಿದವರು ಮೌನವಾಗಿದ್ದಾರೆ. ಸೌಜನ್ಯಕ್ಕೂ ಬಂದು ಮಾತನಾಡಿಲ್ಲ. ಮಠಾದೀಶರು ಹೋರಾಟಕ್ಕೆ ಬನ್ನಿ. ಇಲ್ಲವಾದರೆ ನೀವು ಪೂಜಿಸೋ ದೇವರ ಶಾಪ ಮಠಾಧೀಶರಿಗೂ ತಟ್ಟುತ್ತದೆ. ಕೆಪಿಸಿಗೆ ಕಾಂಗ್ರೆಸ್ ನವರು ಹೇಡಿಗಳಂತೆ ವಿರೋಧಿಸಿ ಬಹಿಷ್ಕಾರ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಜನ ಬಹಿಷ್ಕಾರ ಹಾಕುತ್ತಾರೆ ಎಂದು ಕೆ. ಎಸ್. ಈಶ್ವರಪ್ಪ ಕಾಂಗ್ರೆಸ್ ವಿರುದ್ದ ವಾಘ್ದಾಳಿ ನಡೆಸಿದರು.