ಬೆಂಗಳೂರು: ವಿಶ್ವದೆಲ್ಲೆಡೆ ಹೆಚ್ಚು ಚಾಲ್ತಿಯಲ್ಲಿರುವ ಪಿಕಲ್‌ಬಾಲ್ ಆಟವನ್ನು ಭಾರತದಲ್ಲೂ ಪ್ರಸಿದ್ಧಿಗೆ ತರುವ ಉದ್ದೇಶದಿಂದ ಆಲ್ ಇಂಡಿಯಾ ಪಿಕಲ್‌ಬಾಲ್ ಅಸೋಸಿಯೇಷನ್ ಐಟಿಸಿ ಅವರ ಬಿಂಗೋ ತಿಂಡಿಯೊಂದಿಗೆ ಸಹಯೋಗತ್ವವನ್ನು ಘೋಷಿಸಿದೆ.
ಬಿಂಗೊ ಸಹಭಾಗಿತ್ವದಲ್ಲಿ ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ ಗೆ ನಟಿ ಮಂದಿರಾ ಬೇಡಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಐಟಿಸಿ ಸ್ನ್ಯಾಕ್ಸ್, ನೂಡಲ್ಸ್ ಮತ್ತು ಪಾಸ್ಟಾ ವಿಭಾಗದ ವಿಪಿ ಸುರೇಶ್ ಚಂದ್, ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ (WPC), ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಗಳಲ್ಲಿ ಒಂದಾಗಿದ್ದು, ಈ ಕ್ರೀಡೆಯನ್ನು ಭಾರತದಲ್ಲೂ ಉತ್ತೇಜಿಸಲು ನಾವು ಮುಂದಾಗಿದ್ದೇವೆ.
ಪಿಕಲ್‌ಬಾಲ್ ಆಟವು ಈಗಾಗಲೇ 84 ದೇಶಗಳಾದ್ಯಂತ 5 ಮಿಲಿಯನ್ ಆಟಗಾರರನ್ನು ಸೆಳೆದಿದ್ದು, ಶೇ.40ರಷ್ಟು ಮಹಿಳಾ ಆಟಗಾರರೇ ಭಾಗವಹಿಸುತ್ತಿದ್ದಾರೆ. ಭಾರತದಲ್ಲಿ, ಕಳೆದ ಮೂರು ವರ್ಷಗಳಲ್ಲಿ ಈ ಕ್ರೀಡೆಯ ಸಕ್ರಿಯ ಆಟಗಾರರಲ್ಲಿ ಶೇ.275 ರಷ್ಟು ಬೆಳವಣಿಗೆ ಕಂಡಿದ್ದು, 2028 ರ ವೇಳೆಗೆ ಒಂದು ಮಿಲಿಯನ್ ಸಕ್ರಿಯ ಆಟಗಾರರನ್ನು ಮೀರಿಸುವ ನಿರೀಕ್ಷೆಯಿದೆ. ಪ್ರಸ್ತುತ ಬಿಂಗೋ ಸಹಭಾಗಿತ್ವದಲ್ಲಿ ಈ ಆಟವನ್ನು ಇನ್ನಷ್ಟು ಪ್ರಚಲಿತಗೊಳಿಸಲು 23 ರಾಜ್ಯಗಳ ಎಲ್ಲಾ ಕಾಲೇಜುಗಳ ಪಂದ್ಯಾವಳಿಗಳಲ್ಲಿ ಪಿಕಲ್‌ಬಾಲ್ ಆಟವನ್ನು ಪರಿಚಯಿಸಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳು ಶಿಕ್ಷಣದ ಸಂದರ್ಭದಿಂದಲೇ ಈ ಆಟದಲ್ಲಿ ನಿರತರಾಗಲು ಹಾಗೂ ಅಭ್ಯಾಸಿಸಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಅಖಿಲ ಭಾರತ ಪಿಕಲ್‌ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಅರವಿಂದ್ ಪ್ರಭು, ನಟ ಅಲಿ ಫಜಲ್ ಮತ್ತಿತರರು ಉಪಸ್ಥಿತರಿದ್ದರು.