ಶಿಕ್ಷಣದಲ್ಲಿ ಸಂಸ್ಕಾರದ ಕೊರತೆಯಿಂದ ಸುಶಿಕ್ಷಿತರೇ ವಿಘಟನಕಾರಿ ಶಕ್ತಿಯಾಗುತ್ತಿದ್ದಾರೆ- ಭಗವದ್ಗಿತೆ ಅಭಿಯಾನದ ಮೂಲಕ ಪರಿಹಾರ ಸ್ವರ್ಣವಲ್ಲಿ ಸ್ವಾಮೀಜಿ

ವಿಜಯಪುರ : ಶಿಕ್ಷಣದಲ್ಲಿ ಸಂಸ್ಕಾರ ಕೊರತೆಯಿಂದ ಸುಶಿಕ್ಷಿತರೇ ವಿಘಟನಕಾರಿ ಶಕ್ತಿಗಳಾಗುತ್ತಿರುವುದು ನೋವಿನ ಸಂಗತಿ. ಈ ಹಿನ್ನೆಲೆಯಲ್ಲಿ ಶಿಕ್ಷಣದಲ್ಲಿ ಸಂಸ್ಕಾರ ನೀಡುವ ಉದ್ದೇಶದಿಂದ ಭಗವದ್ಗೀತೆ ಬೋಧನೆಯ ಮೂಲಕ ಅರ್ಥಪೂರ್ಣವಾಗಿ ಅಭಿಯಾನ ನಡೆಯುತ್ತಿದೆ ಎಂದು ಸೋಂದಾ ಸ್ವರ್ಣವಲ್ಲಿ ಶ್ರೀಗಳಾದ ಗಂಗಾಧರೇಂದ್ರ ಸ್ವಾಮಿಜಿ ಹೇಳಿದರು.

ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ದೇಶ ಸ್ವಾತಂತ್ರ‍್ಯ ಗಳಿಸಿ ಅನೇಕ ದಶಕಗಳು ಕಳೆದರೂ ಇಂದಿಗೂ ವಿಘಟನಕಾರಿ ಶಕ್ತಿಗಳ ಜಾಲ ಜಾಗೃತವಾಗಿದೆ, ಸುಶಿಕ್ಷಿತರೇ ವಿಘಟನಕಾರಿ ಶಕ್ತಿಗಳ ಜೊತೆ ಸೇರುವಂತಾಗಿದೆ, ಶಿಕ್ಷಣದಲ್ಲಿ ಸಂಸ್ಕಾರ ಕೊರತೆಯಿಂದಾಗಿ ಈ ವಿದ್ಯಮಾನ ನಡೆಯುತ್ತಿದೆ. ಹೀಗಾಗಿಯೇ ಭಗವದ್ಗೀತೆ ಅಭಿಯಾನದ ಮೂಲಕ ಶಿಕ್ಷಣದಲ್ಲಿ ಸಂಸ್ಕಾರ ಬಿತ್ತುವ ಕಾರ್ಯ ನಡೆಸಲಾಗುತ್ತಿದೆ.  ಅಪರಾಧ ಮಾಡದೇ ಇರುವ ಮನೋಭಾವ ರೂಪಿಸುವುದೇ ಭಗವದ್ಗೀತೆ, ಮಾನವನ ನಡತೆ ಸುಧಾರಿಸಿ ಸಾಮರಸ್ಯ, ಸಮನ್ವಯತೆ ಸಾಧಿಸುವ ಶಕ್ತಿ ಭಗವದ್ಗೀತೆಗೆ ಇದೆ ಎಂದ ಅವರು ಹೇಳಿದ ಅವರುಜ ವಿಯಪುರ ಜಿಲ್ಲೆಯಲ್ಲಿ ಭಗವದ್ಗೀತಾಲೆ ಅಭಿಯಾನ ಹಿನ್ನೆಲೆಯಲ್ಲಿ ನಡೆಸಲಾಗುವ ಹಲವಾರು ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡಿದರು.

ಅಭಿಯಾನದ ಪ್ರಶಿಕ್ಷಣ ಪ್ರಮುಖ ಶ್ರೀರಾಮ ಭಟ ಮಾತನಾಡಿ, ಮಕ್ಕಳಿಗಾಗಿ ಹಲವಾರು ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಬಾಗವಹಿಸುವವರಿಗೆ 9ನೇ ಅಧ್ಯಾಯದ/ಎಲ್ಲ ಶ್ಲೋಕಗಳ ಕಂಠಪಾಠ ಮಾಡಬಹುದಾಗಿದ್ದು, ಅದರಲ್ಲಿ ನಿರ್ಣಾಯಕರು ಸೂಚಿಸುವ ಯಾವುದೇ ಶ್ಲೋಕಗಳನ್ನು ಅನುಕ್ರಮವಾಗಿ ಹೇಳಬಹುದಾಗಿದೆ.  ಅದೇ ರೀತಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಭಗವದ್ಗೀತೆಯಿಂದ ಸಾಮಾಜಿಕ ಸಾಮರಸ್ಯ ಎಂಬ ವಿಷಯ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಭಗವದ್ಗೀತೆಯಿಂದ ದೇಶದ ಸಮಗ್ರತೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಭಗವದ್ಗೀತೆಯಿಂದ ವಿಶ್ವಭಾತೃತ್ವ ಎಂಬ ವಿಷಯಾಧಾರಿತ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. ಈ ಎಲ್ಲ ಸ್ಪರ್ಧೆಗಳ ನಂತರ ರಾಜ್ಯಮಟ್ಟದ ಸ್ಫರ್ಧೆ ಡಿ. 13 ರಂದು ನಡೆಯಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಗವದ್ಗೀತೆ ಅಭಿಯಾನದ ಗೌರವಾಧ್ಯಕ್ಷ ಅರುಣ ಸೋಲಾಪುರಕರ, ಅಭಿಯಾನದ ಅಧ್ಯಕ್ಷ ಉಮೇಶ ಕಾರಜೋಳ, ಶ್ರೀಹರಿ ಗೊಳಸಂಗಿ, ಡಾ.ಸುರೇಶ್ ಬಿರಾದಾರ, ಸಂಗನಗೌಡ ಪಾಟೀಲ, ವಿಜಯ ಜೋಶಿ, ಗೋಪಾಲ ಘಟಕಾಂಬಳೆ, ವಿಕ್ರಂ ಗಾಯಕವಾಡ, ಮಹೇಶ ದೇಶಪಾಂಡೆ, ವಿಕಾಸ ಪದಕಿ, ಪವನ್ ಜೋಶಿ, ಸಂತೋಷ ಕಳ್ಳಿಗುಡ್ಡ ಸಿದ್ದಣ್ಣ ಶಿರೂರ, ಮಂಜುನಾಥ ಮೀಸೆ, ಭೀಮಾಶಂಕರ ಹನೂರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌