ವಿಜಯಪುರ: ವೃಕ್ಷಥಾನ್ ಹೆರಿಟೇಜ್ ರನ್ ಅಂಗವಾಗಿ ಇಂದು ರವಿವಾರ ನಗರದಲ್ಲಿ ನಡೆದ ಪ್ರೊಮೊ ರನ್ ಗೆ ಎಸ್ಪಿ ಬಿ. ಲಕ್ಷ್ಮಣ ನಿಂಬರಗಿ ಹಸಿರು ನಿಶಾನೆ ತೋರಿಸಿದರು.
ಇಂದು ರವಿವಾರ ಬೆಳಿಗ್ಗೆ ನಗರದ ಡಾ. ಬಿ. ಆರ್. ಆಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾದ 10 ಕಿ. ಮಿ. ಪ್ರೊಮೊ ರನ್ ಗೆ ಎಸ್ಪಿ ಅವರು ಚಾಲನೆ ನೀಡಿದರು.
ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾದ ಈ ಓಟ, ಅಂಬೇಡ್ಕರ್ ಚೌಕ್, ಗಾಂಧಿ ಚೌಕ್ ಮತ್ತು ಶಿವಾಜಿ ಚೌಕ್. ಜೋರಾಪುರ ಪೇಠೆ, ಸೆಟಲೈಟ್ ಬಸ್ ನಿಲ್ದಾಣದ ಮೂಲಕ ಇಬ್ರಾಹಿಂ ರೋಜಾ ತಲುಪಿತು. ಅಲ್ಲಿ ಹೆರಿಟೇಜ್ ರನ್ ಪರ್ ಮತ್ತು ಹಸಿರು ವಿಜಯಪುರ ಹಾಗೂ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಪರ ಓಟದಲ್ಲಿ ಪಾಲ್ಗೋಂಡವರು ಘೋಷಣೆ ಹಾಕಿದರು.
ಈ ಓಟ ಇಬ್ರಾಹಿಂ ರೋಜಾದಿಂದ ಮರಳಿ ಅದೇ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಿತು.
ಬಳಿಕ ಜಿಲ್ಲಾ ಕ್ರೀಡಾಂಗಣದಲ್ಲಿ ಓಟಗಾರರನ್ನು ಉದ್ದೇಶಿಸಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಜಿಲ್ಲೆಯಲ್ಲಿ ಹೆರಿಟೇಜ್ ರನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, 21 ಕಿ. ಮೀ. ಓಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳಬೇಕು ಎಂದು ಹೇಳಿದರು. ಈ ವೇಳೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.
ಬೆಳಿಗ್ಗೆ ನಡೆದ ಓಟದಲ್ಲಿ ಡಾ. ಮಹಾಂತೇಶ ಬಿರಾದಾರ, ಡಾ. ರವಿ ಚೌಧರಿ, ಡಾ. ಭೀಮನಗೌಡ ಬಿರಾದಾರ, ಸಂಕೇತ ಬಗಲಿ, ವೀರೇಂದ್ರ ಗುಚ್ಚೆಟ್ಟಿ, ಶಿವನಗೌಡ ಪಾಟೀಲ, ಸೋಮಶೇಖರ ಸ್ವಾಮಿ, ಅನೀಲ ಧಾರವಾಡಕರ, ಅಮಿತ ಬಿರಾದಾರ, ಶ್ರೀಕಾಂತ ಮಂತ್ರಿ, ಡಾ. ಪ್ರವೀಣ ಚೌರ, ಗುರುಶಾಂತ ಕಾಪಸೆ, ಸೋಮು ಎಸ್. ಮಠ, ಕಾರ್ಪೊರೇಟರ್ ಅಶ್ಪಾಕ್ ಮನಗೂಳಿ, ಮುತ್ತಣ್ಣ ಬಿರಾದಾರ, ವಿಜಯಕುಮಾರ ಕೋರೆ, ಗಜಾನನ ಮಂದಾಲಿ, ಮುಂತಾದವರು ಉಪಸ್ಥಿತರಿದ್ದರು.
ಈ ಓಟದ ಸಂದರ್ಭದಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯರು, ಸೈಕ್ಲಿಂಗ್ ಕ್ರೀಡಾ ವಸತಿ ಶಾಲೆ ವಿದ್ಯಾರ್ಥಿಗಳು ಸೈಕ್ಲಿಂಗ್ ನಡೆಸಿದರೆ, ಇಂಡಿಯನ್ ಆರ್ಮಿ ಸಂಘಟನೆ, ಕಮಾಂಡೊ ಸಂಘಟನೆಯ ಓಟಗಾರರೂ ಪಾಲ್ಗೊಂಡರು.
ನವೆಂಬರ್ 30 ನೋಂದಣಿಗೆ ಕೊನೆಯ ದಿನ
ವಿಜಯಪುರ ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜನ್ ರನ್-2024ಕ್ಕೆ ನೋಂದಣಿ ಭರದಿಂದ ಸಾಗಿದ್ದು, ನವೆಂಬರ್ 30 ನೋಂದಣಿ ಮಾಡಿಸಲು ಕೊನೆಯ ದಿನವಾಗಿದೆ. ಆಸಕ್ತ ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ಕೂಡಲೇ ನೋಂದಣಿ ಮಾಡಿಸಬೇಕು ಎಂದು ಕೋರ್ ಕಮಿಟಿಯ ಮುರುಗೇಶ ಪಟ್ಟಣಶೆಟ್ಟಿ ಮತ್ತು ಡಾ. ರಾಜು ಯಲಗೊಂಡ ತಿಳಿಸಿದ್ದಾರೆ.