ಪಾಠಗಳಿಗೆ ಆಟಗಳೇ ಸ್ಪೂರ್ತಿಯಾಗಿವೆ- ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್ ಚೈತ್ರಾ ವಿ. ಬೋರ್ಜಿ

ವಿಜಯಪುರ: ಪಾಠಗಳಿಗೆ ಆಟಗಳೇ ಸ್ಪೂರ್ತಿಯಾಗಿವೆ ಎಂದು ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್ ಮತ್ತು ಖೇಲೋ ಇಂಡಿಯಾದ ಸ್ವರ್ಣ ಪದಕ ವಿಜೇತ ಚೈತ್ರಾ ವಿ. ಬೋರ್ಜಿ ಹೇಳಿದ್ದಾರೆ. ಇಂದು ಶನಿವಾರ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಪಾಠಗಳಿಗೆ ಸ್ಪೂರ್ತಿಯಾಗಿರುವ ಈ ಆಟಗಳು ನಮ್ಮನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತವೆ.  ಸಶಕ್ತ ದೇಹದಲ್ಲಿ ಸದೃಢ ಮನಸ್ಸಿರುತ್ತದೆ.  ಕ್ರೀಡೆಗಳು ಕೇವಲ ರಂಜನೆಗಾಗಿ ಅಲ್ಲ.  ನಮ್ಮ ದೇಶದ ಪ್ರತಿಷ್ಟೆಯನ್ನು ಹೆಚ್ಚಿಸುವಲ್ಲಿ ನಮಗೆ ಸ್ಪೂರ್ತಿ […]

ಪಿಎಂ ಕೇಂದ್ರೀಯ ವಿದ್ಯಾಲಯದ ಮಕ್ಕಳಲ್ಲಿರುವ ಶಿಸ್ತು, ಸಂಯಮ ಇತರರಿಗೆ ಮಾದರಿ- ಚಂದನ ಝಂ

ವಿಜಯಪುರ: ಪಿಎಂ ಕೇಂದ್ರೀಯ ವಿದ್ಯಾಲಯದ ಮಕ್ಕಳಲ್ಲಿರುವ ಶಿಸ್ತು ಮತ್ತು ಸದ್ಭಾವನೆ ಇತರರಿಗೆ ಮಾದರಿಯಾಗಿದೆ ಎಂದು ರೇಲ್ವೆ ಇಲಾಖೆಯ ಅಧಿಕಾರಿ ಚಂದನ ಝಂ ಹೇಳಿದ್ದಾರೆ. ನಗರದ ಅಫಝಲಪುರ ಟಕ್ಕೆಯಲ್ಲಿರುವ ಪ್ರತಿಷ್ಠಿತ ಪಿಎಂ ಕೇಂದ್ರೀಯ ವಿದ್ಯಾಲಯದಲ್ಲಿ 62ುನೇ ಸಂಸ್ಥಾಪನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಇಲ್ಲಿನ ಮಕ್ಕಳಲ್ಲಿರುವ ಶಿಸ್ತು, ಸಮಯಪ್ರಜ್ಞೆ ಮತ್ತು ಪಾಠದ ಜೊತೆಗೆ ಆಟಗಳಲ್ಲಿ ತೊಡಗಿಸಿಕೊಳ್ಳುವ ರೀತಿ ಇತರರಿಗೆ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು. ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಶೃತಿ ಶಿಳ್ಳೀನ, ಅನಂತ ಪದ್ಮಾನಾಬನ್, ಸುಂದರೇಶ ಉಮದಿ, ವೀರೇಶ್ […]

ಯುವ ವೈದ್ಯರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಕೆಲಸ ಮಾಡಬೇಕು- ವಿಲಾಸ ಬಗಲಿ

ವಿಜಯಪುರ: ಯುವ ವೈದ್ಯರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಕೆಲಸ ಮಾಡಬೇಕು ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ವಿಲಾಸ ಎಸ್. ಬಗಲಿ ಹೇಳಿದ್ದಾರೆ. ಇಂದು ಶನಿವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ ಅಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ 2018ನೇ ವರ್ಷದ ವಿದ್ಯಾರ್ಥಿಗಳ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಿ ಅವರು ಮಾತನಾಡಿದರು. ವೈದ್ಯರು ನ್ಯಾಯಯುತ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸುವುದರಿಂದ ರೋಗಿಗಳ ಜೊತೆಗೆ ಸಮಾಜದ ಆರೋಗ್ಯಕ್ಕೂ ಕೊಡುಗೆ ನೀಡಬಹುರು.  ಇದರಿಂದ ಹೆತ್ತ ಪೋಷಕರು ಮತ್ತು […]

ಭಾರತದಲ್ಲಿ ಬಯೋಸೈನ್ಸ್ ಆಂದೋಲನಕ್ಕಾಗಿ ಕಿರಣ ಮಜುಂದಾರ ಶಾ ಅವರಿಗೆ ಐ.ಎಸ್.ಕ್ಯೂ ಜೆಮಶೇಡಜಿ ಟಾಟಾ ಪ್ರಶಸ್ತಿ

ಬೆಂಗಳೂರು: ಬಯೋಕಾನ್ ಸಮೂಹದ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರು ಭಾರತದಲ್ಲಿ ಜೈವಿಕ ವಿಜ್ಞಾನದ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಇಂಡಿಯನ್ ಸೊಸೈಟಿ ಫಾರ್ ಕ್ಯಾಲಿಟಿ (ISQ) ಯು ಪ್ರತಿಷ್ಠಿತ ಜೆಮಶೇಡಜಿ ಟಾಟಾ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನಡೆದ ISQ ವಾರ್ಷಿಕ ಸಮ್ಮೇಳನ -2024 ದಲ್ಲಿ ಪ್ರಶಸ್ತಿ ನೀಡಲಾಯಿತು. ISQ ನಿಂದ 2004 ರಲ್ಲಿ ಸ್ಥಾಪಿಸಲಾದ ಜೆಮ್ಷೆಡ್ಜಿ ಟಾಟಾ ಪ್ರಶಸ್ತಿಯನ್ನು ‘ಆಧುನಿಕ ಭಾರತೀಯ ಕೈಗಾರಿಕಾ ಪಿತಾಮಹ‌ ಎಂದು ಕರೆಯುವ ಜೆಮ್ಷೆಡ್ಜಿ ಟಾಟಾ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು […]