ವಿಜಯಪುರ: ಪಿಎಂ ಕೇಂದ್ರೀಯ ವಿದ್ಯಾಲಯದ ಮಕ್ಕಳಲ್ಲಿರುವ ಶಿಸ್ತು ಮತ್ತು ಸದ್ಭಾವನೆ ಇತರರಿಗೆ ಮಾದರಿಯಾಗಿದೆ ಎಂದು ರೇಲ್ವೆ ಇಲಾಖೆಯ ಅಧಿಕಾರಿ ಚಂದನ ಝಂ ಹೇಳಿದ್ದಾರೆ.
ನಗರದ ಅಫಝಲಪುರ ಟಕ್ಕೆಯಲ್ಲಿರುವ ಪ್ರತಿಷ್ಠಿತ ಪಿಎಂ ಕೇಂದ್ರೀಯ ವಿದ್ಯಾಲಯದಲ್ಲಿ 62ುನೇ ಸಂಸ್ಥಾಪನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಇಲ್ಲಿನ ಮಕ್ಕಳಲ್ಲಿರುವ ಶಿಸ್ತು, ಸಮಯಪ್ರಜ್ಞೆ ಮತ್ತು ಪಾಠದ ಜೊತೆಗೆ ಆಟಗಳಲ್ಲಿ ತೊಡಗಿಸಿಕೊಳ್ಳುವ ರೀತಿ ಇತರರಿಗೆ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು.
ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಶೃತಿ ಶಿಳ್ಳೀನ, ಅನಂತ ಪದ್ಮಾನಾಬನ್, ಸುಂದರೇಶ ಉಮದಿ, ವೀರೇಶ್ ಡಂಬಳ, ಕಲ್ಯಾಣಿ, ಅಶೋಕ ಕಾಳೆ, ಪಿಯುಷ ದೀಕ್ಷಿತ, ಚಿನ್ನು ಗುಪ್ಪಾ, ವೈಷ್ಟವಿ ಚೂರಿ ಕಾರ್ಯಕ್ರಮದಲ್ಲಿ ಪಾಲ್ಗೋಂಡರು.
ಶಾಲೆಯ ಹಿರಿಯ ಶಿಕ್ಷಕ ರಮೇಶ ಚವ್ವಾಣ ಅವರು ಕೇಂದ್ರೀಯ ವಿದ್ಯಾಲಯ ಜೊತೆ ತಾವು ಸಲ್ಲಿಸುತ್ತಿರುವ ಸೇವೆಯ ಪಯಣ ಬಗ್ಗೆ ಸಂತಸ ಹಂಚಿಕೊಂಡರು.
ಪ್ರಾಚಾರ್ಯ ಜುನಾ ರಾಮ, ಹಿರಿಯ ಶಿಕ್ಷಕ ಶಂಕರ ಶಾಸ್ತ್ರಿ, ಸಂತೋಷ ಹಲವಾಯಿ ಮಾತನಾಡಿದರು.
ಅನಾಮಿಕ ಕುಮಾರಿ ನಿರೂಪಿಸಿದರು.