ಶೃದ್ದಾ ರಾಹುಲ ಆಪ್ಟೆ ಭಗವದ್ಗೀತೆ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ

ವಿಜಯಪುರ: ನಗರದ ಶೃದ್ದಾ ರಾಹುಲ್ ಆಪ್ಟೆ ಭಗವದ್ಗೀತೆ ಕುರಿತ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಪತ್ರಕರ್ತ ರಾಹುಲ ಆಪ್ಟೆ ಅವರ ಪುತ್ರಿಯಾಗಿರುವ ಶ್ರದ್ಧಾ ಆಪ್ಡೆ ಪ್ರಥ ಸ್ಥಾನ ಪಡೆದ ಹಿನ್ನೆಲೆಯಲ್ಲಿ ನಗರದ ಸಾಯಿ ಗಾರ್ಡನ್ ಮೈದಾನದಲ್ಲಿ ಆಯೋಜಿಸಲಾದ ಭಗವದ್ಗೀತೆ ಅಭಿಯಾನ-2024 ರಾಜ್ಯ ಮಟ್ಟದ ಮಹಾಸಮರ್ಪಣೆ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಶ್ರೀಗಳು, ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ  ಬಸವಲಿಂಗ ಸ್ವಾಮೀಜಿ, ಸಿಂದಗಿ ಸಾರಂಗಮಠದ ಶ್ರೀಗಳು ಸೇರಿದಂತೆ ನಾನಾ ಸ್ವಾಮೀಜಿಗಳು ಹಾಗೂ ಭಗವದ್ಗೀತೆ ಅಭಿಯಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿ, ಭಗವದ್ಗೀತೆ ಅಭಿಯಾನ ಆಯೋಜನೆ ಮಾಡಿದ್ದ ಸ್ಪರ್ಧೆಯಲ್ಲಿ ಶೃದ್ದಾ ಆಪ್ಟೆ ಸಂಸ್ಕೃತದಲ್ಲಿ ಭಗವದ್ಗೀತೆ ಬಗ್ಗೆ ಭಾಷಣ ಮಾಡಿ ರಾಜ್ಯಕ್ಕೆ ಪ್ರಥಮ‌ ಸ್ಥಾನ ಪಡೆದಿರುವುದು ಗಮನಾರ್ಹವಾಗಿದೆ.

Leave a Reply

ಹೊಸ ಪೋಸ್ಟ್‌