ದರೋಡೆಕೋರರ ಮೇಲೆ ಪೊಲೀಸರಿಂದ ಫೈರಿಂಗ್- ಓರ್ವ ಆಸ್ಪತ್ರೆಗೆ ದಾಖಲು

ವಿಜಯಪುರ: ನಗರದ ಜೈನಾಪುರ ಆರ್. ಸಿ ಯಲ್ಲಿ ದರೋಡೆ ನಡೆಸಿದ ಕಳ್ಳರ ಮೇಲೆ ಪೊಲೀಸರು ನಡೆಸಿದ ಗುಂಡಿ ದಾಳಿಯಲ್ಲಿ ಓರ್ವನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ನಗರದ ಸಂತೋಷ ಕನ್ನಾಳ‌ ಎಂಬುವರ ಮನೆಗೆ ನುಗ್ಗಿ ಚಾಕುವಿನಿಂದ ಇರಿದು‌ ಮೊದಲ‌ ಮಹಡಿಯಿಂದ ಕೆಳಗೆ ನೂಕಿದ್ದರು. ಅಲ್ಲದೇ, ಅವರ ಪತ್ನಿಯ ತಾಳಿ ಕಿತ್ತುಕೊಂಡು ದರೋಡೆಕೋರರು ಪರಾರಿಯಾಗಿದ್ದರು. ‌ಗಾಯಗೊಂಡ ಸಂತೋಷ‌ ಕನ್ನಾಳ ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ತನಿಖೆಗೆ […]