ವಿಜಯಪುರ: ನಗರದ ಜೈನಾಪುರ ಆರ್. ಸಿ ಯಲ್ಲಿ ದರೋಡೆ ನಡೆಸಿದ ಕಳ್ಳರ ಮೇಲೆ ಪೊಲೀಸರು ನಡೆಸಿದ ಗುಂಡಿ ದಾಳಿಯಲ್ಲಿ ಓರ್ವನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ನಗರದ ಸಂತೋಷ ಕನ್ನಾಳ ಎಂಬುವರ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಮೊದಲ ಮಹಡಿಯಿಂದ ಕೆಳಗೆ ನೂಕಿದ್ದರು. ಅಲ್ಲದೇ, ಅವರ ಪತ್ನಿಯ ತಾಳಿ ಕಿತ್ತುಕೊಂಡು ದರೋಡೆಕೋರರು ಪರಾರಿಯಾಗಿದ್ದರು. ಗಾಯಗೊಂಡ ಸಂತೋಷ ಕನ್ನಾಳ ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ತನಿಖೆಗೆ ವಿಶೇಷ ತಂಡಗಳನ್ನು ರಚನೆ ಮಾಡಿದ್ದರು.
ಇದು ಅಂತಾರಾಜ್ಯ ದರೋಡೆಕೋರರ ತಂಡದ ಕೃತ್ಯವಾಗಿದ್ದು ವಿಜಯಪುರ ನಗರದ ಹೊರ ಭಾಗದಲ್ಲಿ ಬೀಡು ಬಿಟ್ಟಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ ನಡೆಸಿಸಿದ್ದಾರೆ. ನಸುಕಿನ ಜಾವದಿಂದಲೇ ಖದೀಮರ ಬೆನ್ನತ್ತಿದ ಖಾಕಿ ಪಡೆ ವಿಜಯಪುರ ನಗರದ ಹೊರಬಾಗದ ಟೋಲ್ ಪ್ಲಾಜಾ ಬಳಿ ಏನ್ ಎಚ್ 50 ಹತ್ತಿರ ಬೈಕ್ ನಲ್ಲಿ ತೆರಳುತ್ತಿದ್ದಾರೆಂಬ ಮಾಹಿತಿ ಪಡೆದಿದ್ದಾರೆ. ಪೊಲೀಸರು ಬಂದ ತಕ್ಷಣ ಬೈಕನ್ನು ಅಲ್ಲಿಯೇ ಬಿಟ್ಟ ದರೋಡೆಕೋರರು ಜಮೀನಿನತ್ತ ಓಡಿದ್ದಾರೆ. ಆಗ ಐದು ಜನರ ಗ್ಯಾಂಗ್ ಮೇಲೆ ಪೊಲೀಸರು ಐದು ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ. ಗೋಳಗುಮ್ಮಟ ಸಿಪಿಐ ಮಲ್ಲಯ್ಯ ಮಠಪತಿ, ಪಿಎಸ್ಐ ಘೋರಿ ಐದು ಸುತ್ತು ಗುಂಡು ಹಾರಿಸಿದರೂ ಖದೀಮರ ಗ್ಯಾಂಗ್ ಕಕತ್ತಲಲ್ಲಿ ಕಣ್ಮರೆಯಾಗಿದೆ. ಆದರೂ ಗ್ಯಾಂಗ್ ಪೊಲೀಸರು ಶೋಧ ಕಾರ್ಯ ಮುಂದುವರೆದಿದ್ದಾರೆ. ಆಗ ನಂತರ ಪೊಲೀಸರ ಗುಂಡು ಬಡಿದು ಜಮೀನಿನಲ್ಲಿ ಬಿದ್ದಿದ್ದ ಖದೀಮನೊಬ್ಬ ಸಿಕ್ಕಿ ಬಿದ್ದಿದ್ದಾನೆ. ಉವರು ಮಧ್ಯಪ್ರದೇಶದ ಮೂಲದವರು ಎಂದು ಮೂಲಗಳು ಮಾಹಿತಿ ನೀಡಿದ್ದು,
ಇತರ ನಾಲ್ವರು ದರೋಡೆಕೋರರು ಪರಾರಿಯಾಗಿದ್ದಾರೆ. ಗುಂಡೇಟಿನಿಂದ ಗಾಯಗೊಂಡು ಬಿದ್ದಿದ್ದ ಕದೀವ ನನ್ನ ಬಿಟ್ಟು ಇತರರು ಪರಾರಿಯಾಗಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಓರ್ವ ದರೋಡೆಕೋರನಿಗೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರ ತನಿಖೆ ಮುಂದುವರೆಸಿದ್ದಾರೆ.