ರಾಜ್ಯಪಾಲರಿಗೆ ಮತ್ತೋಮ್ಮೆ ಸುಗ್ರಿವಾಜ್ಞೆ ಕಳುಹಿಸುತ್ತೇವೆ- ಸಚಿವ ಎಚ್. ಕೆ. ಪಾಟೀಲ

ವಿಜಯಪುರ: ಮೈಕ್ರೋ ಫೈನಾನ್ಸ್ ಗೆ ಕಡಿವಾಣ ಹಾಕಲು ಸರಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರ ನಕಾರ ವಿಚಾರಕ್ಕೆ ಸಂಬಂಧಿಸಿದತೆ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್. ಕೆ. ಪಾಟೀಲ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರಿಗೆ ಸುಗ್ರಿವಾಜ್ಞೆ ಬಗ್ಗೆ ತಪ್ಪು ಗ್ರಹಿಕೆ ಇದೆ.  ಹೀಗಾಗಿ ಸುಗ್ರೀವಾಜ್ಞೆಯನ್ನು ಪುರಸ್ಕರಿಸಲು ರಾಜ್ಯಪಾಲರಿಗೆ ಮರು ಸಲ್ಲಿಕೆ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ಕೆಲ ವಾರಗಳಿಂದ ಮೈಕ್ರೋ ಫೈನಾನ್ಸ್ ಗಳಿಂದ ಸಾಲ ವಸೂಲಿ‌ ವಿಚಾರಕ್ಕೆ ಸಂಬಂಧಿಸಿದಂತೆ ಒತ್ತಡದಲ್ಲಿ ವಸೂಲಿ ಕ್ರಮ ನಡೆದು ಸಮಾಜದಲ್ಲಿ ಅಸಮಾಧಾನ ಉಂಟಾಗಿದೆ.  ಅನೇಕ‌ ಕುಟುಂಬಗಳಲ್ಲಿ ಸಂಪೂರ್ಣ ದೈರ್ಯ‌ಕಳೆದುಕೊಂಡಿವೆ.  ಆತ್ಮಹತ್ಯೆ ಮಾಡಿಕೊಳ್ಳೋ ಸ್ಥಿತಿ ಕೂಡ ಉಂಟಾಗಿತ್ತು.  ಈ ಹಿನ್ನೆಲೆಯಲ್ಲಿ ನಮ್ಮ ಸರಕಾರ ಇದೆಲ್ಲವನ್ನು ತಡೆಯಲು ಸುಗ್ರೀವಾಜ್ಞೆ ರೂಪದಲ್ಲಿ ರಾಜ್ಯಪಾಲರಿಗೆ ಕಳುಹಿಸಿತ್ತು ಎಂದು ಅವರು ಹೇಳಿದರು.

ಆದರೆ, ರಾಜ್ಯಪಾಲರು ತಮ್ಮದೇ ಅಂಶ ಅವಲೋಕನ ಪ್ರಸ್ತಾಪಿಸಿ ಸುಗ್ರಿವಾಜ್ಞೆ ವಾಪಸ್ ಕಳುಹಿಸಿದ್ದಾರೆ.  ಸುಗ್ರಿವಾಜ್ಞೆ ವಾಪಸ್ ಬಗ್ಗೆ ರಾಜ್ಯಪಾಲರು ಕೆಲ ಕಾರಣಗಳನ್ನು ನೀಡಿದ್ದಾರೆ.  ಆರು ಪ್ರಮುಖ ಅಂಶಗಳನ್ನು ನೀಡಿ ಸುಗ್ರಿವಾಜ್ಞೆ ತಿರಸ್ಕಾರ ಮಾಡಿದ್ದಾರೆ.  ಕೆಲವು ಗೊಂದಲಗಳಿವೆ ಎಂದು ರಾಜ್ಯಪಾಲರು ಹೇಳಿದ್ದಾರೆ.  ಇದಕ್ಕೆ ಸರಕಾರದ ಪ್ರತಿಕ್ರಿಯೆ ಮುಖ್ಯವಾಗಿದೆ.  ನಮ್ಮ‌ ಸುಗ್ರಿವಾಜ್ಞೆ ನೊಂದಾಯಿತ ಅಲ್ಲದ, ಅನ್ ರಜಿಸ್ಟರ್ಡ್, ಅನ್ ಲೈನ್ಸ್ ಇಲ್ಲೀಗಲ್ ಮನಿ ಲ್ಯಾಂಡರ್ಸ್ ಸಾಲ‌‌‌ ನೀಡುವುದು ಸಲ್ಲದು.  ಕಾನೂನು‌ ಬಾಹೀರವಾಗಿ ನೀಡಿದ ಸಾಲ ವಸೂಲಾತಿಗೆ ಅರ್ಹವಲ್ಲ.  ಕಾನೂನು ಪ್ರಕಾರ ನೀಡಿದ ಸಾಲ ಮಾತ್ರ ವಸೂಲಿಗೆ ಅರ್ಹ.  ರಾಜ್ಯಪಾಲರು ಕಾನೂನು ಉಲ್ಲಂಘಿಸಿ ಸಾಲ‌ ನೀಡುವವರಿಗೆ ಹಕ್ಕುಗಳ ಬಗ್ಗೆ ಮಾತನಾಡಿದ್ದಾರೆ.  ಒತ್ತಾಯ ಪೂರ್ವಕವಾಗಿ ಸಾಲ ವಸೂಲಿ ಮಾಡುವುದು ಕಾನೂನು ಬಾಹೀರ ಎಂಬುದು ಸರಕಾರದ ನಡೆಯಾಗಿದೆ.  ಸುಗ್ರೀವಾಜ್ಞೆ ಬಗ್ಗೆ ರಾಜ್ಯಪಾಲರು ತಪ್ಪು‌ ಗ್ರಹಿಕೆ ಹೊಂದಿದ್ದಾರೆ ಎಂದು ಸಚಿವಹು ಹೇಳಿದರು.

ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವ ಪ್ರಸ್ತಾಪ ಇಲ್ಲ.  ಸಾಲ ವಸೂಲಿಗೆ ಮಾಡುವ ಕ್ರಮದ ವಿರುದ್ಧ ಶಿಕ್ಷೆ ಮಾಡಿದ್ದೇವೆ.  ಮೂರು ವರ್ಷದಿಂದ ಹತ್ತು ವರ್ಷ ಶಿಕ್ಷೆ ಏರಿಕೆ ಮಾಡಿದ್ದೇವೆ.  ದಂಡ ರೂ. 5 ಲಕ್ಷ ಏರಿಕೆ ಮಾಡಿದ್ದೇವೆ.  ಇದು ಸಾಲದ ಮೊತ್ತಕ್ಕೆ ಹೋಲಿಕೆ ಮಾಡಬಾರದು.  ಇದು ಸಾಲ‌ ವಸೂಲಿಗೆ ಮಾಡುವ ಕ್ರಿಯೆಗೆ ಹಾಕೋ ದಂಡವಾಗಿದೆ ಎಂದು ಅವರು ಹೇಳಿದರು.

ಸಾಲಕ್ಕೆ ನೀಡಿದ ಭದ್ರತೆಗೆ‌ ನೀಡಿದ್ದ ದಾಖಲಾತಿಗಳನ್ನು ವಾಪಸ್ ನೀಡಬೇಕೆಂದು ಆಜ್ಞೆಯಲ್ಲಿದೆ.  ಕಾನೂನು ಬಾಹೀರವಾಗಿ‌ ಸಾಲ ನೀಡುವ ‌ಮೈಕ್ರೋ ಫೈನಾನ್ಸ್ ನವರಿಗೆ ಫೈನಾನ್ಸ್ ನವರಿಗೆ ಮಾತ್ರ ಈ ಕಾನೂನು ಅನ್ವಯವಾಗುತ್ತದೆ.  ಅಧಿಕ ಬಡ್ಡಿ ವಸೂಲಿ ಮಾಡುವವರಿಗೆ ಸುಗ್ರಿವಾಜ್ಞೆ ಮಾಡಲಾಗಿದೆ.  ಕಾನೂನು ಪ್ರಕಾರ ಸಾಲ‌ ನೀಡುವವರಿಗೆ ಅಲ್ಲ.  ಯಾರು ಮಾನವೀಯತೆ ಮೀರಿ ಜನರಿಗೆ ಹಿಂಸೆ ನೀಡಿ ಸಾಲ ಬಡ್ಡಿ ವಸೂಲಿ ಮಾಡುವವರಿಗೆ ಲಗಾಮು ಹಾಕಲು ಸುಗ್ರಿವಾಜ್ಞೆ ಮಾಡಲಾಗಿದೆ.  ಹಾಲಿ ಇರುವ ಕಾನೂನು ಕಾಯ್ದೆಗಳಲ್ಲಿ‌ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ.  ಈ ಕಾರಣದಿಂದ ಸರಕಾರ ಸುಗ್ರಿವಾಜ್ಞೆ ಮಾಡಿದೆ.  ಸದನದಲ್ಲಿ ಚರ್ಚೆ ಮಾಡಬೇಕೆಂದು ರಾಜ್ಯಪಾಲರು ಸೂಚನೆ‌ ನೀಡಿದ್ದಾರೆ.  ಅದರೆ, ಸದನ ನಡೆಯಲು ಒಂದು ತಿಂಗಳ ಸಮಯ ಬೇಕಿದೆ.  ಇದು ವಿಳಂಬ ಆಗುತ್ತದೆ.  ಹೀಗಾಗಿ ಸುಗ್ರೀವಾಜ್ಞೆಯನ್ನು ಪುರಸ್ಕರಿಸಲು ರಾಜ್ಯಪಾಲರಿಗೆ ಮರು ಸಲ್ಲಿಕೆ ಮಾಡುತ್ತೇವೆ ಎಂದು  ಸಚಿವ ಎಚ್. ಕೆ. ಪಾಟೀಲ ಹೇಳಿದರು.

Leave a Reply

ಹೊಸ ಪೋಸ್ಟ್‌