BLDEA: 2025-30ರ ಅವಧಿಗೆ ಅಧ್ಯಕ್ಷರಾಗಿ ಎಂ. ಬಿ. ಪಾಟೀಲ ಅವಿರೋಧವಾಗಿ ಪುನರಾಯ್ಕೆ- ಉಳಿದ ಪದಾಧಿಕಾರಿಗಳ ಮಾಹಿತಿ ಇಲ್ಲಿದೆ

ವಿಜಯಪುರ: ಭಾರತೀಯ ಲಿಂಗಾಯತ ಡೆವಲೆಪಮೆಂಟ್ ಎಜುಕೇಶನಲ್ ಅಸೋಸಿಯೇಶನ್ ಆಡಳಿತ ಮಂಡಳಿಯ 2025-2030 ರ ಅವಧಿಗೆ ನಡೆದ ಚುನಾವಣೆಯಲ್ಲಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅಧ್ಯಕ್ಷರಾಗಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಚುನಾವಣೆ ನಿರ್ವಾಚಣಾಧಿಕಾರಿ ಅಶೋಕ ಎಚ್. ಮಲಘಾಣ, ಸಚಿವ ಎಂ.ಬಿ.ಪಾಟೀಲ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.  ಅಲ್ಲದೇ, ಉಪಾಧ್ಯಕ್ಷರಾಗಿ ವಿಧಾನ ಪರಿಷತ್  ಮಾಜಿ ಸದಸ್ಯ ಜಿ. ಕೆ. ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಗೆ ಎಲ್ಲ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ಆಡಳಿತ ಮಂಡಳಿ ಸದಸ್ಯರಾಗಿ ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ), ಅಶೋಕ ಜಿ. ವಾರದ (ಸಿಂದಗಿ), ಸಂಗಪ್ಪ ಗುರಪ್ಪ ಸಜ್ಜನ (ವಿಜಯಪುರ), ಸಿದ್ದರಾಮಯ್ಯ ನಿಜಗುಣಯ್ಯ ಮಠ ವಕೀಲರು (ವಿಜಯಪುರ), ಅಮಗೊಂಡ ಮದುಗೌಡ ಪಾಟೀಲ (ಬಿಜ್ಜರಗಿ), ಬಾಪುಗೌಡ ಭೀಮನಗೌಡ ಪಾಟೀಲ (ಶೇಗುಣಶಿ), ಡಾ. ಅನಿಲಕುಮಾರ ಬಾಪುಗೌಡ ಪಾಟೀಲ (ಲಿಂಗದಳ್ಳಿ), ಕುಮಾರ ಚಂದ್ರಕಾಂತ ದೇಸಾಯಿ (ಜೈನಾಪುರ), ಕಲ್ಲನಗೌಡ ಕಾಶಿರಾಯಗೌಡ ಪಾಟೀಲ (ತೊರವಿ), ವೀರನಗೌಡ ಶಿವನಗೌಡ ಪಾಟೀಲ (ಬಬಲೇಶ್ವರ), ಮಹೇಶ ಬಾಪುಗೌಡ ಪಾಟೀಲ (ಕುಮಠೆ) ಹಾಗೂ ಬಸನಗೌಡ ಮಲ್ಲನಗೌಡ ಪಾಟೀಲ (ರಾಹುಲ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ನಿರ್ವಾಚಣಾಧಿಕಾರಿ ಅಶೋಕ ಎಚ್. ಮಲಘಾಣ ಪ್ರಕಟಣೆಯಲ್ಲಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌