About Us

ಬಸವನಾಡು ವೆಬ್ ಸುದ್ದಿ ತಾಣದ ಕುರಿತು.

12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯ ಮೂಲಕ ಮನೆಮಾತಾಗಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಅಣ್ಣ ಬಸವಣ್ಣ. ಅಣ್ಣನ ತವರು ವಿಜಯಪುರ ಜಿಲ್ಲೆಯ ಸುದ್ದಿ ತಾಣವೇ ಈ ಬಸವನಾಡು ವೆಬ್ ಸೈಟ್.

ವಿಜಯಪುರ ಶರಣರ ನಾಡು, ಸೂಫಿ ಸಂತರ ಬೀಡು. ನಕಾರಾತ್ಮಕ ಸುದ್ದಿಗಳೇ ವಿಜೃಂಭಿಸುತ್ತಿರುವ ಇಂದಿನ ದಿನಗಳಲ್ಲಿ ಸಕಾರಾತ್ಮಕ ಸಂಗತಿಗಳಿಗೆ ಪ್ರಾಧಾನ್ಯತೆ ನೀಡಿ ಪ್ರಕಟಿಸುವುದು ಬಸವನಾಡು ವೆಬ್ ಸೈಟ್ ಸುದ್ದಿ ತಾಣದ ಮುಖ್ಯ ಧ್ಯೇಯ. ವಿಜಯಪುರ ಜಿಲ್ಲೆಯಲ್ಲಿರುವ ಗುಣಾತ್ಮಕ ಮತ್ತು ಧನಾತ್ಮಕ ಸಂಗತಿಗಳ ಮಾಹಿತಿ ಹಂಚಿಕೊಳ್ಳಲು ಈ ವೆಬ್ ಸೈಟ್ ಆರಂಭಿಸಲಾಗಿದೆ.

ಇಲ್ಲಿ ಜಿಲ್ಲೆಯ ವಿದ್ಯಮಾನಗಳು, ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಹಿತ್ಯ, ಕೃಷಿ, ಕ್ರೀಡೆ, ಶೈಕ್ಷಣಿಕ ಕ್ಷೇತ್ರಗಳ ವಿದ್ಯಮಾನಗಳು, ಈ ಕ್ಷೇತ್ರಗಳಲ್ಲಿರುವ ಸಾಧಕರ ಸಾಧನೆಗಳು ಇಲ್ಲಿರುವ ಪ್ರವಾಸಿ ತಾಣಗಳು, ಹಾಸ್ಯ ಸಂಗತಿಗಳು ಜಿಲ್ಲೆಗೆ ಆಗಬೇಕಿರುವ ಕೆಲಸಗಳು, ಆಗಬೇಕಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಇತರ ಜನಸಾಮಾನ್ಯರಿಗೆ ಹತ್ತಿರವಾಗಿರುವ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವುದೇ ನಮ್ಮ ಮುಖ್ಯ ಗುರಿಯಾಗಿದೆ.

ಎಲೆಮರೆಯ ಕಾಯಿಯಂತಿರುವ ಸಾಧಕರು ಮತ್ತು ಅವರ ಸಾಧನೆಗಳು, ತಾಣಗಳು ಮತ್ತು ಅವುಗಳ ಮಹತ್ವ, ಬೇರೆ ದೇಶಗಳ ಬಗ್ಗೆ ಮಾತನಾಡುವ ನಾವು ನಮ್ಮಲ್ಲಿರುವ ಪ್ರತಿಭೆಗಳು ಮತ್ತು ಕಾಲಗರ್ಭ ಸೇರಿರುವ ಉತ್ತಮ ಸಂಗತಿಗಳ ಬಗ್ಗೆ ಓದುಗರಿಗೆ ಸುದ್ದಿ ಒದಗಿಸಬೇಕು ಎಂಬುದು ನಮ್ಮ ಸದುದ್ದೇಶವಾಗಿದೆ. ಇಲ್ಲಿ ಸಾಧ್ಯವಾದಷ್ಟು ಸಾಧಕರು, ಸಾಧನೆಗಳು, ಜನಪರ ಸಂಗತಿಗಳನ್ನು ಮಾಹಿತಿಯನ್ನು ಪೋಸ್ಟ್ ಮಾಡಲಾಗುತ್ತದೆ. ಅದರಂತೆ, ಜಿಲ್ಲೆಯ ಖ್ಯಾತ ಮತ್ತು ಹೆಸರಾಂತ ಸಾಹಿತಿಗಳು, ವೈದ್ಯರು, ಸಮಾಜ ಸೇವಕರು, ನಾಯಕರು, ತಜ್ಞರು, ತತ್ವಜ್ಞಾನಿಗಳ ಬಗ್ಗೆಯೂ ಮಾಹಿತಿ ಸಿಗಲಿದೆ. ಅಷ್ಟೇ ಅಲ್ಲ, ಸೂಕ್ತ ವೇದಿಕೆ ಸಿಗದೆ ತಮ್ಮಲ್ಲಿರುವ ಪ್ರತಿಭೆ ಮತ್ತು ಸಮಾಜಕ್ಕೆ ಪೂರಕ ಮತ್ತು ಸ್ಪೂರ್ತಿದಾಯಕ ವಿಚಾರಗಳನ್ನು ಹೊಂದಿದ್ದರೂ ಅವುಗಳನ್ನು ಹೊರ ಹಾಕಲು ಸಾಧ್ಯವಾಗದೆ ಇರುವವರು ಇಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇದೊಂದು ಸುವರ್ಣಾವಕಾಶದ ವೇದಿಕೆ ಎಂದರೂ ತಪ್ಪಾಗಲಾರದು.

ಇಲ್ಲಿರುವ ನಮ್ಮ ನಾಡು, ರಾಜಕೀಯ, ಕೃಷಿ-ತೋಟಗಾರಿಕೆ, ಆರೋಗ್ಯ, ಪ್ರವಾಸ, ಧರ್ಮ, ಸಾಹಿತ್ಯ, ಸಂಸ್ಕೃತಿ, ಆಟೋಟ, ಜೀವನ ಶೈಲಿ, ವೈಶಿಷ್ಠ್ಯ ವಿಭಾಗಗಳು ತಮಗೆ ಇಷ್ಟವಾಗುವ ಮಾಹಿತಿಯ ಭರಪೂರ ಮಾಹಿತಿಯನ್ನು ಒದಗಿಸಲಿವೆ. ತಮ್ಮ ಗಮನಕ್ಕೆ ಬರುವ ಸಂಗತಿಗಳು, ವ್ಯಕ್ತಿಗಳ ಬಗ್ಗೆ ತಾವೂ ಕೂಡ ನಮ್ಮ ಜೊತೆ ಮಾಹಿತಿ ಹಂಚಿಕೊಂಡರೆ ಅವರ ಬಗ್ಗೆಯೂ ಸುದ್ದಿಯನ್ನು ಪ್ರಕಟಿಸಲಾಗವುದು. ತಮ್ಮೆಲ್ಲರ ಸಹಾಯ, ಸಹಕಾರವೇ ನಮಗೆಲ್ಲ ಸ್ಪೂರ್ತಿ. ತಮ್ಮೆಲ್ಲರ ಬಾಂಧವ್ಯ ಇದೇ ರೀತಿಯಾಗಿ ನಮ್ಮೊಂದಿಗೆ ಅನನ್ಯವಾಗಿರಲಿ. ಇದು ನಮ್ಮ ಯಶಸ್ಸಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಬಲವಾದ ನಂಬಿಕೆ. ಬಸವನಾಡಿನ ಹೆಸರಿನಲ್ಲಿ ಆರಂಭಿಸಲಾಗಿರುವ ವೆಬ್ ತಾಣಕ್ಕೆ ತಮಗೆಲ್ಲ ಮತ್ತೋಮ್ಮೆ ಸ್ವಾಗತ ಕೋರುತ್ತೇವೆ. ಅಷ್ಟೇ ಅಲ್ಲ, ತಮ್ಮ ಸಹಕಾರವನ್ನೂ ಬಯಸುತ್ತೇವೆ.

ಹೊಸ ಪೋಸ್ಟ್‌