ಅಗದ ಸಮುಚ್ಚಯ ಪುಸ್ತಕ ಆಯುರ್ವೇದ ಯುವ ವೈದ್ಯರು, ಸಂಶೋಧಕರಿಗೆ ವರದಾನವಾಗಿದೆ- ಡಾ. ಆರ್. ವಿ. ಕುಲಕರ್ಣಿ

ವಿಜಯಪುರ: ಸಂಸ್ಕೃತದಲ್ಲಿ ಶ್ಲೋಕದ ರೂಪದಲ್ಲಿರುವ ಆಯುರ್ವೇದ ಔಷಧಿಗಳ ಮಾಹಿತಿಯನ್ನು ಯುವವೈದ್ಯರು ಮತ್ತು ಸಂಶೋಧಕರಿಗೆ ಸರಳವಾಗಿ ಅಧ್ಯಯನ ಮಾಡಲು ‘ಅಗದ ಸಮುಚ್ಚಯ’ ಪುಸ್ತಕ ವರದಾನವಾಗಿದೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಹೇಳಿದ್ದಾರೆ. ಗುರುವಾರ ವಿವಿ ಕಚೇರಿಯಲ್ಲಿ ಎ. ವಿ. ಎಸ್ ಆಯುರ್ವೇದ ಕಾಲೇಜಿನ ಅಗದ ತಂತ್ರವಿಭಾಗದ ಮುಖ್ಯಸ್ಥೆ ಡಾ. ಮಲ್ಲಮ್ಮ ಬಿರಾದಾರ ಅವರು ರಚಿಸಿದ ‘ಅಗದ ಸಮುಚ್ಚಯ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ವಿಷಜಂತುಗಳು ಕಚ್ಚಿದಾಗ […]

ಮಕ್ಕಳಲ್ಲಿ ವಿಜ್ಞಾನ ಲೋಕದ ಬಗ್ಗೆ ಆಸಕ್ತಿ ಮೂಡಿಸಲು ಲಿಲ್ ಬಿಗ್ ಫ್ಯಾಂಟಸಿ ಸೈನ್ಸ್‌ ಬಸ್‌ ಅನಾವರಣ- ಆಯ್ದ ಮಕ್ಕಳಿಗೆ ನಾಸಾ ಭೇಟಿಗೆ ಅವಕಾಶ

ಬೆಂಗಳೂರು: ವಿಜ್ಞಾನ ಲೋಕದ ಕೌತಕಗಳನ್ನು ಕಣ್ತುಂಬಿಕೊಳ್ಳಲು ಮಕ್ಕಳ ಬಳಿಯೇ ಬರುತ್ತಿದೆ ಲಿಲ್ ಬಿಗ್ ಫ್ಯಾಂಟಸಿಯ “ಸೈನ್ಸ್‌ ಬಸ್‌”.! ಹೌದು, ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ವಿಜ್ಞಾನವನ್ನು ಅನ್ವೇಷಿಸಿ, ಅದರ ಅನುಭವ ಪಡೆದುಕೊಳ್ಳಲು ಐಟಿಸಿ ಸನ್‌ಫೀಸ್ಟ್‌ ಡಾರ್ಕ್‌ ಫ್ಯಾಂಟಸಿ ಅವರಿಂದ ಈ ವಿನೂತನ ಸೈನ್ಸ್‌ಬಸ್‌ನನ್ನು ಅನಾವರಣಗೊಳಿಸಲಾಗಿದೆ. ಇಸ್ರೋ ಮಾಜಿ ಅಧ್ಯಕ್ಷ ಶ್ರೀ ಪ್ರಕಾಶ್ ರಾವ್, ಬಾಲಿವುಡ್‌ ನಟಿ ಮಂದಿರಾ ಬೇಡಿ, ನಿಮ್ಹಾನ್ಸ್‌ನ ಡಿಎಂ ಡಾ. ಮೇಘಾ ಮಹಾಜನ್ , ಐಟಿಸಿ ಲಿಮಿಟೆಡ್ ಬಿಸ್ಕೆಟ್ಸ್ ಮತ್ತು ಕೇಕ್ಸ್ […]

ದೇಶದಲ್ಲಿಯೇ ಮೊದಲು- ರೊಬೋಟ್‌ ನೆರವಿನಿಂದ ಸ್ತನವನ್ನು ಪುನರ್ನಿರ್ಮಾಣ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್‌ ಆಸ್ಪತ್ರೆ ವೈದ್ಯರು

ಬೆಂಗಳೂರು: ಮೂರನೇ ಹಂತದ ಸ್ತನಕ್ಯಾನ್ಸರ್‌ನಿಂದ ಬಳಲುತ್ತಿದ್ದ 38 ವರ್ಷದ ಮಹಿಳೆಗೆ ದೇಶದಲ್ಲೇ ಮೊದಲ ಬಾರಿಗೆ ತನ್ನದೇ ದೇಹದ ಮತ್ತೊಂದು ಭಾಗವನ್ನು ಬಳಸಿಕೊಂಡು ರೊಬೋಟ್‌ ಸಹಾಯದ ಮೂಲಕ ಯಶಸ್ವಿಯಾಗಿ ಸ್ತನವನ್ನು ಪುನರ್‌ ನಿರ್ಮಿಸಲಾಗಿದೆ. ಬನ್ನೇರುಘಟ್ಟ ರಸ್ತೆ ಫೋರ್ಟಿಸ್‌ ಆಸ್ಪತ್ರೆಯ ಆಂಕೊಲಾಜಿ ಮತ್ತು ರೊಬೊಟಿಕ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜರಿ ವಿಭಾಗದ ನಿರ್ದೇಶಕ ಡಾ. ಸಂದೀಪ್ ನಾಯಕ್ ಪಿ ಅವರ ವೈದ್ಯ ತಂಡ ಈ ಸಾಧನೆ ಮಾಡಿದೆ. ಈ ಕುರಿತು ಮಾತನಾಡಿದ ಡಾ. ಸಂದೀಪ್‌ ನಾಯಕ ಪಿ., 38 ವರ್ಷದ ರೇಹಾ […]

ಬಂಜಾರಾ ಸಮಾಜ ಬಸವಾದಿ ಶರಣರ ಕಾಯಕ ತತ್ವ ಪಾಲಿಸುತ್ತ ಸಮುದಾಯದ ಸಂಸ್ಕೃತಿಯನ್ನು ಸಂರಕ್ಷಿಸುತ್ತಿದೆ- ಎಂ. ಬಿ. ಪಾಟೀಲ

ವಿಜಯಪುರ: ಬಂಜಾರಾ ಸಮಾಜ ಬಸವಾದಿ ಶರಣರ ಕಾಯಕ ತತ್ವ ಪಾಲಿಸುವುದರ ಜೊತೆಗೆ ಅದರದೇ ಆದ ಸಂಸ್ಕೃತಿಯನ್ನೂ ಮುಂದುವರೆಸಿಕೊಂಡು ಬರುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ಬುಧವಾರ ರಾತ್ರಿ ತಿಕೋಟಾ ತಾಲೂಕಿನ ಜಾಲಗೇರಿ ಎಲ್. ಟಿ.-1 ರಲ್ಲಿ ದುರ್ಗಾದೇವಿ ಜಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಂಜಾರಾ ಸಮಾಜ ಅದರದೇ ಆದ ವಿಭಿನ್ನ ಸಂಸ್ಕೃತಿ ಹೊಂದಿದ್ದು, ದುಡಿಮೆಯ ಕುರಿತು ಬಸವಾದಿ ಶರಣರು ಮತ್ತು ಅಣ್ಣ […]

ಪತ್ರಕರ್ತರ ರೇಲ್ವೆ ಪಾಸ್ ಪುನಾರಂಭಿಸಲು ಸಚಿವ ವಿ. ಸೋಮಣ್ಣಗೆ ಸಂಪಾದಕರ ಸಂಘದ ಮನವಿ

ರಾಯಚೂರು: ಕೋವಿಡ್-19 ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಪತ್ರಕರ್ತರ ರೈಲ್ವೆಯ ಪಾಸನ್ನು ಪುನಾರಂಭಿಸವಂತೆ ರೈಲ್ವೆ ಕೇಂದ್ರ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಿನಪತ್ರಿಕೆಗಳ ಸಂಪಾದಕರು ಸೇರಿಕೊಂಡು ಸ್ಥಾಪಿಸಿರುವ ಕರ್ನಾಟಕದ ಏಕೈಕ ಸಂಪಾದಕರ ಸಂಘವಾಗಿದೆ. ಕೋವಿಡ್-19 ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪತ್ರಕರ್ತರಿಗೆ ವಿತರಿಸುತ್ತಿದ್ದ ರೈಲ್ವೆ ಪಾಸ್‌ನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಈಗ ಕೋವಿಡ್-19 ಅಲೆ ಮುಕ್ತಾಯಗೊಂಡು 3-4 […]

ಬಿ.ಎಲ್.ಡಿ ಸೌಹಾರ್ದ ಈ ವರ್ಷ ರೂ. 500 ಕೋ. ವ್ಯವಹಾರ ಗುರಿ ಹೊಂದಿದೆ- ಸುನೀಲಗೌಡ ಪಾಟೀಲ

ವಿಜಯಪುರ: ಬಿ.ಎಲ್.ಡಿ. ಸೌಹಾರ್ದ ಸಹಕಾರಿ ಸಂಘ(ಬ್ಯಾಂಕ) ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ. 500 ಕೋ. ವ್ಯವಹಾರದ ಗುರಿ ಹೊಂದಿದೆ ಎಂದು ಸಂಘದ ಅಧ್ಯಕ್ಷ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ. ಮುದ್ದೇಬಿಹಾಳ ಪಟ್ಟಣದಲ್ಲಿ ನೂತನ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ಶತಮಾನದ ಸಂತ, ನಡೆದಾಡಿದ ದೇವರು, ಶ್ರೀ ಸಿದ್ದೇಶ್ವರ ಸ್ವಾಮೀಜಿ ಆಶಿರ್ವಾದದೊಂದಿಗೆ ಪ್ರಾರಂಭವಾದ ಬಿ.ಎಲ್‌.ಡಿ (ಬಿಜಾಪುರ ಲಿಂಗಾಯತ ಡೆವಲಪ್‌ಮೆಂಟ್) ಸೌಹಾರ್ದ ಸಹಕಾರಿ ಸಂಘ ಬೆಂಗಳೂರು ಮಹಾನಗರ ಸೇರಿ ಉತ್ತರ ಕರ್ನಾಟಕದ ಪ್ರಮುಖ […]

ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲಿನಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮ

ವಿಜಯಪುರ: ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ. ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಾನಾ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನರ್ಸರಿಯಿಂದ ಹಿಡಿದು 5ನೇ ತರಗತಿಯವರೆಗೆ ಪ್ರತಿಯೊಂದು ಮಕ್ಕಳು ರಾಧಾ- ಕೃಷ್ಣ, ವಾಸುದೇವ- ದೇವಕಿ ವೇಷ ಧರಿಸಿ ಆಗಮಿಸುವ ಮೂಲಕ ಇಡೀ ಶಾಲೆಯಲ್ಲಿ ನಂದಗೋಕುಲ ವಾತಾವರಣವನ್ನು ಸೃಷ್ಟಿಸಿದ್ದರು. ಎಲ್.ಕೆ.ಜಿ ಪುಟ್ಟ ಬಾಲಕಿ ತೃಪ್ತಿ ಹಚಡದ ಭರತ ನಾಟ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಯು.ಕೆ.ಜಿ ವಿದ್ಯಾರ್ಥಿನಿ ಕನಸು ಜೆಟ್ಟಗಿ ಭಗವದ್ಗೀತೆಯ ಶ್ಲೋಕ ಹೇಳುವ […]

ಕನ್ನೂರ ಶಾಂತಿ‌ ಕುಟೀರದಲ್ಲಿ ಆ. 30 ರಂದು ಶ್ರೀ ಗಣಪತರಾವ ಮಹಾರಾಜರ ಜನ್ಮ ಮಹೊತ್ಸವ ಸಪ್ತಾಹ

ವಿಜಯಪುರ: ಸುಕ್ಷೇತ್ರ ಕನ್ನೂರ ಶಾಂತಿಕುಟೀರದಲ್ಲಿ ಶ್ರೀ ಗಣಪತರಾವ ಮಹಾರಾಜರ 116ನೇ ಜನ್ಮ ಮಹೋತ್ಸವ ಸಪ್ತಾಹವನ್ನು ಇದೇ ಆಗಷ್ಟ್ 30 ರಿಂದ ಸಪ್ಟೆಂಬರ 7 ರ ವರೆಗೆ ಆಯೋಜಿಸಲಾಗಿದೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಶಾಂತಿಕುಟೀರ ಟ್ರಸ್ಟ್ ಅಧ್ಯಕ್ಷ ಗೋವಿಂದಲಾಲ ಬಾಹೇತಿ, ಟ್ರಸ್ಟಿ ರಮೇಶ ಕುಲಕರ್ಣಿ(ಕನ್ನೂರ) ಈ ವಿಷಯ ತಿಳಿಸಿದ್ದಾರೆ. ಆಧ್ಯಾತ್ಮ ಸಾಧನಕ್ಕೆ ಕನ್ನೂರಲ್ಲಿ ಶಾಂತಿಕುಟೀರ, ಆಧ್ಯಾತ್ಮಾಧಾರಿತ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಭಾರತೀಯ ಸುರಾಜ್ಯ ಸಂಸ್ಥೆಯನ್ನು ಸ್ಥಾಪಿಸಿದ ಶ್ರೀ ಗಣಪತರಾವ ಮಹಾರಾಜರು, ಆ ಮೂಲಕ ಸಮಾಜ ಸುಧಾರಣೆಯ […]

ಶ್ರೀ ಗಜಾನನ ಮಹಾಮಂಡಳ ವರ್ಷದ ಅಧ್ಯಕ್ಷರಾಗಿ ಆನಂದ ಕ. ಮುಚ್ಚಂಡಿ ನೇಮಕ- ಹೊಸ ಪದಾಧಿಕಾರಿಗಳ ಆಯ್ಜೆ

ವಿಜಯಪುರ: ನಗರದಲ್ಲಿ ಈ ವರ್ಷದ ಶ್ರೀ ಗಜಾನನ ಉತ್ಸವ ಮಹಾಮಂಡಳ(ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ವೃತ್ತ) ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಯಿವ ಧುರೀಣ ಆಬಂದ ಕ.‌ಮುಚ್ಚಂಡಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ನಗರದಲ್ನಲಿ ಮಾಜಿ ಸಚಿವಾ ಅಪ್ಪು ಪಟ್ಟಣಶೆಟ್ಟಿ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ನೂನ‌ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಪದಾಧಿಕಾರಿಗಳ ಪಟ್ಟಿ ಇಲ್ಲಿದೆ. ಅಧ್ಯಕ್ಷ- ಆನಂದ ಕ ಮುಚ್ಚಂಡಿ ಕೋಶಾಧ್ಯಕ್ಷ- ಅಖೀಲ ಮ್ಯಾಗೇರಿ, ಉಪಾಧ್ಯಕ್ಷ- ಗಣೇಶ ಹಜೇರಿ, ಬಸವರಾಜ ದಿಂಡವಾರ, ವಿನಯ ಬಬಲೇಶ್ವರ, ಅಕ್ಷಯ […]

ಆಲಮಟ್ಟಿ ಜಲಾಷಯಕ್ಕೆ ಸಿಎಂ, ಡಿಸಿಎಂ, ಸಚಿವರಿಂದ ಗಂಗಾ ಪೂಜೆ, ಬಾಗೀನ ಅರ್ಪಣೆ

ವಿಜಯಪುರ: ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರಿ ಸಾಗರದ ಜಲಧಿಗೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ್ದಾರೆ. ನಿಡಗುಂದಿ ತಾಲೂಕಿನ ಆಲಮಟ್ಟಿಗೆ ಆಗಮಿಸಿದ ಸಿಎಂ ಎಸ್. ಸಿದ್ಧರಾಮಯ್ಯ, ಡಿಸಿಎಂ‌ ಡಿ. ಕೆ. ಶಿವಕುಮಾರ, ಸಚಿವರಾದ ಎಂ. ಬಿ. ಪಾಟೀಲ, ಆರ್. ಬಿ. ತಿಮ್ಮಾಪುರ, ಶಿವಾನಂದ ಎಸ್. ಪಾಟೀಲ, ಶಾಸಕರಾದ ಯಶವಂತರಾಯಗೌಡ ವಿ. ಪಾಟೀಲ, ಸಿ. ಎಸ್. ನಾಡಗೌಡ, ಅಶೋಕ ಮನಗೂಳಿ, ಎಚ್. ವೈ. ಮೇಟಿ, ಜೆ. ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ,, ಭೀಮಸೇನ ಚಿಮ್ಮನಕಟ್ಡಿ, ವಿಧಾನ ಪರಿಷತ […]