ಹಾಂಕಾಂಗ ಕಂಪನಿಯಿಂದ ಸಿದ್ಧ ಉಡುಪು ಕ್ಷೇತ್ರದ ಬಂಡವಾಳ ಹೂಡಿಕೆಗೆ ಉತ್ಸುಕತೆ- ಆರು ಸಾವಿರ ಉದ್ಯೋಗ ಸೃಷ್ಟಿಗೆ ಅವಕಾಶ: ಶಿವಾನಂದ ಪಾಟೀಲ

ವಿಜಯಪುರ: ಜಿಲ್ಲೆಯ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಹಾಂಕಾಂಗ್ ಮೂಲದ ಟಾಲ್ ಅಪಾರೆಲ್ಸ್ ಜವಳಿ ಹಾಗೂ ಸಿದ್ಧ ಉಡುಪು ಉತ್ಪಾದನಾ ಕಂಪನಿಯು 700 ರಿಂದ 800 ಕೋಟಿ ರೂ ಹೂಡಿಕೆ ಮಾಡಲು ಉತ್ಸುಕತೆ ತೋರಿರುವ ಹಿನ್ನೆಲೆಯಲ್ಲಿ ಕಂಪನಿಯ ನಿರ್ದೇಶಕರಾದ ಇತಾನ್ ಯಾಂಗ್ ಅವರೊಂದಿಗೆ ಬೆಂಗಳೂರಿನಲ್ಲಿ ನಿನ್ನೆ ಸಭೆ ನಡೆಸಲಾಯಿತು ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ಅವರು ತಿಳಿಸಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕಂಪನಿ ನಿರ್ದೇಶಕರಿಗೆ ಮಾಹಿತಿ ಒದಗಿಸಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ಪೆÇ್ರೀತ್ಸಾಹ ಹಾಗೂ […]

ಜ್ಞಾನಯೋಗಾಶ್ರಮದಲ್ಲಿ ಪ್ರತಿದಿನ ಬೆಳಿಗ್ಗೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪ್ರವಚನಗಳ ಧ್ವನಿಸುರುಳಿ ಪ್ರಸಾರ

ವಿಜಯಪುರ: ಪ್ರತಿವರ್ಷ ಜ್ಞಾನಯೋಗಾಶ್ರಮದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ಮುಗಿದ ನಂತರ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನ ನಡೆಯುತ್ತಿತ್ತು.  ಆದರೆ, ಶತಮಾನದ ಸಂತ ಈ ವರ್ಷಾರಂಭದಲ್ಲಿಯೇ ಪ್ರಕೃತಿಯಲ್ಲಿ ಲೀನರಾಗಿದ್ದಾರೆ.  ಶ್ರೀಗಳು ಈಗ ಇಲ್ಲವಾದರೂ, ಅವರು ಈ ಹಿಂದೆ ನೀಡಿದ ಪ್ರವಚನಗಳ ಧ್ವನಿಸುರುಳಿಗಳ ಪ್ರಸಾರಕ್ಕೆ ಚಾಲನೆ ನೀಡಲಾಗಿದೆ.  ನಯೋಗಾಶ್ರಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಪ್ರವಚನ ನೀಡುತ್ತಿದ್ದ ಸ್ಳಳದಲ್ಲಿ ಶ್ರೀಗಳ ಭಾವಚಿತ್ರ ಇಟ್ಟು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ, […]

ಪೆನಡ್ರೈವ್ ಬಿಡುಗಡೆ ಮಾಡಿದ ಮೇಲೆ ಉತ್ತರಿಸುತ್ತೇವೆ- ಬಿಜೆಪಿಯವರಿಗೆ ತಾಳ್ಮೆ ಇರಲಿ- ಸಚಿವ ಎಂ. ಬಿ. ಪಾಟೀಲ

ವಿಜಯಪುರ: ಜೆಡಿಎಸ್ ಮುಖಂಡ ಎಚ್. ಡಿ. ಕುಮಾರಸ್ವಾಮಿ ಅವರ ಪೆನ್‌ ಡ್ರೈವ್ ನಲ್ಲಿದೆ ಎನ್ನಲಾದ ಆಡಿಯೋ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ‌ ಶೇಗುಣಸಿ ಬಳಿ ಮುಳವಾಡ ಏತ ನೀರಾವರಿ ಹಂತ- 3ರಡಿ ಬರುವ ವಿತರಣೆ ಕಾಲುವೆಗಳ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ‌ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಪೆನ್‌ ಡ್ರೈವ್ ಬಿಡುಗಡೆ […]

ಬೆತ್ತಲೆಯಾಗಿ ಮೊಬೈಲ್ ಟವರ್ ಹತ್ತಿ ತುತ್ತತುದಿಯಲ್ಲಿ ಯುವಕನ ಹುಚ್ಚಾಟ- ಮದ್ಯ, ಗುಟ್ಕಾ ಆಮಿಷ ತೋರಿಸಿ ಕೆಳಗಿಳಿಸಿದ ಗ್ರಾಮಸ್ಖರು, ಪೊಲೀಸರು

ವಿಜಯಪುರ: ಮೊಬೈಲ್ ಟವರ್ ಹತ್ತಿದ ಯುವಕನೊಬ್ಬ ಬೆತ್ತಲೆಯಾಗಿ ಹುಚ್ಚಾಟ ತೋರಿಸುತ್ತ ಆವಾಂತರ ಸೃಷ್ಠಿಸಿದ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ. ಬೆಳಿಗ್ಗೆಯಿಂದಲೇ ಮೊಬೈಲ್ ಟವರ್ ಮೇಲಿದ್ದ ಯುವಕ ಬೆತ್ತಲೆಯಾಗಿಯೇ ಟಾವರ್ ನ ತುತ್ತ ತುದಿಯ ಮೇಲೆ ನಿಂತು ಬೇಕಾದಂತೆ ಕೈ ಬೀಸುತ್ತಿದ್ದ.  ಈ ಸುದ್ದಿ ಇಡೀ ಗ್ರಾಮವಷ್ಟೇ ಅಲ್ಲ, ಅಕ್ಕಪಕ್ಕದ ಹಳ್ಳಿಗಳಲ್ಲಿಯೂ ಕಾಳ್ಗಿಚ್ಚಿನಂತೆ ಹರಡಿತು.  ಸುದ್ದಿ ತಿಳಿದ ಗ್ರಾಮಸ್ಥರೂ ಸೇರಿದಂತೆ ಅಕ್ಕಪಕ್ಕದ ಜನರೂ ಆ ಸ್ಥಳಕ್ಕೆ ದೌಡಾಯಿಸಿದರು.  ಮಾಹಿತಿ ಪಡೆದ ಆಲಮೇಲ ಪೊಲೀಸರು […]

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ನ್ಯೂನ್ಯತೆಗಳ ಕುರಿತು ತನಿಖೆ- ಎಂ. ಬಿ. ಪಾಟೀಲ

ವಿಜಯಪುರ: ಬುರಣಾಪುರ ಬಳಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಬದಲು ಲೋಕೋಪಯೋಗಿ ಇಲಾಖೆಯ ಮೂಲಕ ಟೆಂಡರ್ ಮಾಡಿಸಲು ಕಾರಣಗಳ ಕುರಿತು ತನಿಖೆ ನಡೆಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯಲ್ಲಿ ಬಹಳಷ್ಟು ನ್ಯೂನ್ಯತೆಗಳಾಗಿವೆ.  ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ(ಐಡಿಡಿ) ಮಾಡಬೇಕಿದ್ದ ಕೆಲಸವನ್ನು ಲೋಕೋಪಯೋಗಿ ಇಲಾಖೆಗೆ ನೀಡಿದ್ದಾರೆ.  ಐಡಿಡಿ ಮಾಡಬೇಕಿದ್ದ […]

ಬಿಜೆಪಿಯವರು ಪ್ರತಿಪಕ್ಷದ ನಾಯಕನ ಸ್ಥಾನಕ್ಕೂ ದರ ನಿಗದಿ ಪಡಿಸಿರಬಹುದು- ಸಚಿವ ಎಂ. ಬಿ. ಪಾಟೀಲ ವ್ಯಂಗ್ಯ

ವಿಜಯಪುರ: ಬಿಜೆಪಿಯವರು ಪ್ರತಿಪಕ್ಷದ ನಾಯಕನ ಸ್ಥಾನಕ್ಕೂ ದರ ಫಿಕ್ಸ್ ಮಾಡಿದ್ದಾರಾ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ವ್ಯಂಗ್ಯವಾಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಆಯ್ಕೆಗೆ ಬಿಜೆಪಿ ವಿಳಂಬ ಮಾಡುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ವ್ಯಂಗ್ಯಭರಿತವಾಗಿ ಪ್ರತಿಕ್ರಿಯೆ ನೀಡಿದರು. ಈ ಹಿಂದೆ ಮುಖ್ಯಮಂತ್ರಿ ಹುದ್ದೆಗೆ ರೂ. 2500 ಕೋ. ಕೊಡಬೇಕು ಎಂದು ಬಿಜೆಪಿಯಲ್ಲಿದ್ದವರೇ ಹೇಳಿದ್ದರು.  ಸಿಎಂ ಪಟ್ಟಕ್ಕೆ ರೂ. […]

ಸಾಲ, ತೆರಿಗೆಯ ಬರೆ ಎಳೆದ ಬಜೆಟ್- ಉಮೇಶ ಕಾರಜೋಳ

ವಿಜಯಪುರ : ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಹೇಗಿದೆ ಅಂದ್ರೆ ಸಾಲ ಮತ್ತು ತೆರಿಗೆಯ ಬರೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಟೀಕಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ದಾಖಲೆಯ 14ನೇಯ ಬಾರಿ ಬಿಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು.  ಆದರೆ, ಈ ಬಜೆಟ್ ನಲ್ಲಿ ತೆರಿಗೆಯ ಭಾರವೇ ತುಂಬಿದೆ.  ಅಬಕಾರಿ ಸುಂಕಗಳ ದರವನ್ನು ಶೇ. 20 ರಷ್ಟು ಹೆಚ್ಚಿಸಿದ್ದು, ಹಾಗೂ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ […]

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್- ಸಂಗಮೇಶ ಬಬಲೇಶ್ವರ

ವಿಜಯಪುರ: ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ವಕ್ತಾರ ಸಂಗಮೇಶ್ ಬಬಲೇಶ್ವರ ಹೇಳಿದ್ದಾರೆ. ರಾಜ್ಯ ಬಜೆಟ್ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಈ ಬಜೆಟ್ ಮತ ನೀಡಿ ಸ್ಪಷ್ಟ ಬಹುಮತ ಕೊಟ್ಟು ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟ ರಾಜ್ಯದ ಎಲ್ಲ ಕ್ಷೇತ್ರದ ಜನರಿಗೂ ನ್ಯಾಯ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.  ಹೀಗಾಗಿ ಜನರ ನಿರೀಕ್ಷೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಈ […]

ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು- ಸರ್ವಾಂಗೀಣ ಅಭಿವೃದ್ಧಿಯ ಬಜೆಟ್- ಸುನೀಲಗೌಡ ಪಾಟೀಲ

ವಿಜಯಪುರ: ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವದಡಿ ಜನಪರ ಬಜೆಟ್ ಮಂಡಿಸಿದ್ದಾರೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ಎಲ್ಲ ಗ್ಯಾರಂಟಿ ಸ್ಕೀಂಗಳನ್ನು ಬಲಪಡಿಸಲು ಈ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದೆ. ರೈತರು, ಮಹಿಳೆಯರು, ಯುವಕರು, ಹಿರಿಯರು, ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಸೇರಿದಂತೆ ಎಲ್ಲ ವರ್ಗದವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಲಾಗಿದೆ […]

ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಪ್ರಸ್ತಾಪಿಸಿರುವ ನಾನಾ ತೆರಿಗೆಗಳ ಮಾಹಿತಿ ಇಲ್ಲಿದೆ

ಬೆಂಗಳೂರು: ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ರಾಜ್ಯ ಬಜೆಟ್ ನಲ್ಲಿ ನಾನಾ ತೆರಿಗೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.  ಈ ತೆರಿಗೆಗಳ ಮಾಹಿತಿ ಇಲ್ಲಿದೆ. ತೆರಿಗೆ ಪ್ರಸ್ತಾವನೆಗಳು ವಾಣಿಜ್ಯ ತೆರಿಗೆಗಳು 356. ದೇಶದ ದೊಡ್ಡ ರಾಜ್ಯಗಳಲ್ಲಿ ನಮ್ಮ ರಾಜ್ಯವು ಜಿ.ಎಸ್‍.ಟಿ ತೆರಿಗೆ ಸಂಗ್ರಹಣೆಯಲ್ಲಿ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 21 ರಷ್ಟು ಅತ್ಯಧಿಕ ಬೆಳವಣಿಗೆ ದರವನ್ನು ಸಾಧಿಸಿದೆ. ಪ್ರಸ್ತುತ ಸಾಲಿನ ಮೊದಲನೇ ತ್ರೈಮಾಸಿಕದಲ್ಲಿ ಕೆ.ಜಿ.ಎಸ್‍.ಟಿ ರಾಜಸ್ವ ಸಂಗ್ರಹವು 18,962 ಕೋಟಿ ರೂ.ಗಳಾಗಿರುತ್ತದೆ. 357. ಪರಿಣಾಮಕಾರಿ ತೆರಿಗೆ ಆಡಳಿತಕ್ಕಾಗಿ ಹಾಗೂ ವಾಣಿಜ್ಯೋದ್ಯಮಗಳಿಗೆ […]