ಶ್ರೀಗಂಧದ ಮರ ಇಬ್ಬರು ಕಳ್ಳರಿಗೆ 5 ವರ್ಷ ಜೈಲು, ತಲಾ ರೂ. 1 ಲಕ್ಷ ದಂಡ ವಿಧಿಸಿದ ನ್ಯಾಯಾಲಯ- ಎಸ್. ಎಚ್. ಹಕೀಂ

ವಿಜಯಪುರ: ಶ್ರೀಗಂಧದ ಮರ ಕಳ್ಳತನ ಮಾಡಿದ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ಮತ್ತು ರೂ. 2 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ. ಈ ಕುರಿತು ಮಾದ್ಯಮ ಪ್ರಕಟಣೆ ನೀಡಿರುವ ಪ್ರಧಾನ ಸರಕಾರಿ ಅಭಿಯೋಜಕ ಎಸ್. ಎಚ್. ಹಕೀಂ, ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದ ದಸ್ತಗೀರ ಜಾಫರಸಾಬ ಚಂದನ ಮತ್ತು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಹಾಜಿಮಲಂಗ ಮೈಬೂಬಸಾಬ ವಾಲಿಕಾರ ಅವರಿಗೆ ಶಿಕ್ಷೆ […]

ಜ್ಞಾನಯೋಗಾಶ್ರಮದಲ್ಲಿ ಗುರು ಪೂರ್ಣಿಮೆ ಆಚರಣೆ- ಹರಿದು ಬಂದ ಭಕ್ತಸಾಗರ

ವಿಜಯಪುರ: ಗುರು ಪೂರ್ಣಿಮೆ ಬಂದರೆ ಸಾಕು ನಡೆದಾಡುವ ದೇವರ ದರ್ಶನಕ್ಕೆ ಜನ ಮುಗಿಬೀಳುತ್ತಿದ್ದರು.  ಆಶ್ರಮಕ್ಕೆ ಭೇಟಿ ನೀಡಿ ದೂರದಿಂದಲೇ ನಮಸ್ಕರಿಸಿ ಸಾಧ್ಯವಾದರೆ ಹತ್ತಿರದಿಂದ ದರ್ಶನ ಪಡೆದು ಆಶೀರ್ವಾದ ಪಡೆದು ಧನ್ಯರಾಗುತ್ತಿದ್ದರು.  ಆದರೆ, ಈಗ ನಡೆದಾಡಿದ ದೇವರಿಲ್ಲ.  ಆದರೂ ಕಡೆಪಕ್ಷ ಅವರ ಭಾವಚಿತ್ರಕ್ಕೆ ನಮಸ್ಕರಿಸಿದರಾಯಿತು.  ನಡೆದಾಡಿದ ದೇವರ ಗುರುಗಳ ಗದ್ದುಗೆಯ ದರ್ಶನ ಪಡೆದರಾಯಿತು.  ಈಗ ಇರುವ ಶ್ರೀಗಳ ಆಶೀರ್ವಾದ ಪಡೆದರಾಯಿತು ಎಂದು ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಬಂದು ಗುರುಪೂರ್ಣಿಮೆಗೆ ನಿಜವಾದ ಅರ್ಥ ನೀಡಿದರು. ಇದು ಇದೇ ವರ್ಷದ ಆರಂಭದಲ್ಲಿ […]

ಬ್ರಾಂಡ್ ಬೆಂಗಳೂರು ನಿರ್ಮಾಣಕ್ಕೆ ನಾಗರಿಕ ಸಮಾಜ ಸಂಸ್ಥೆಗಳಿಂದ ಹರಿದು ಬಂದ ಸಲಹೆ ಸೂಚನೆಗಳು ಏನು ಗೊತ್ತಾ?

ಬೆಂಗಳೂರು: ನಗರದ ಸಮಗ್ರ ಅಭಿವೃದ್ಧಿ ಕುರಿತು ರಾಜ್ಯ ಸರ್ಕಾರ ಆರಂಭಿಸಿರುವ ‘ಬ್ರ್ಯಾಂಡ್‌ ಬೆಂಗಳೂರು’ ಅಭಿಯಾನಕ್ಕೆ ಸಾಕಷ್ಟು ಸಲಹೆ ಸೂಚನೆಗಳು ಹರಿದು ಬಂದಿದೆ. ಸಂಚಾರಯುಕ್ತ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನರಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್‌ ಬೆಂಗಳೂರು ಹಾಗೂ ಜಲಸುರಕ್ಷಾ ಬೆಂಗಳೂರು ಹೀಗೆ ೭ ವಿಭಾಗದಲ್ಲಿ ಬದಲಾವಣೆ ತರುವ ಉದ್ದೇಶದಿಂದ ನಾಗರಿಕರಿಂದಲೇ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಸರ್ಕಾರ ಮುಂದಾಗಿತ್ತು, ಈ ಹಿನ್ನೆಲೆಯಲ್ಲಿ ಕ್ರೈಮೇಟ್‌ ರೈಸ್‌ ಅಲೈಯನ್ಸ್‌ ಸಂಸ್ಥೆ, ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ […]

ಬಸವನಾಡಿಗೆ ಬಂದ ಫ್ರಾನ್ಸ್ ವಿದ್ಯಾರ್ಥಿಗಳ ತಂಡ- ಸ್ಮಾರಕ ವಿಕ್ಷಣೆಗಲ್ಲ- ಮತ್ಯಾಕೆ ಗೊತ್ತಾ?

ವಿಜಯಪುರ: ಬಸವನಾಡು ವಿಜಯಪುರವೆಂದರೆ ಸಾಕು ರಾಜ್ಯವಷ್ಟೇ ಏಕೆ ದೇಶದ ಬಹುತೇಕರು ಬರಪೀಡಿತ ಜಿಲ್ಲೆ, ಹಿಂದುಳಿದ ಪ್ರದೇಶ ಎಂದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.  ಈವರೆಗೆ ಕೇವಲ ಪ್ರಾಚೀನ ಸ್ಮಾರಕಗಳ ವೀಕ್ಷಣೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು.  ಆದರೆ, ಈಗ ಬಸವನಾಡಿನ ಚಿತ್ರಣವೇ ಬದಲಾಗುತ್ತಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಬಸವನಾಡು ವಿಜಯಪುರಕ್ಕೆ ಬಂದಿರುವ ಫ್ರಾನ್ಸ್ ದೇಶದ ಆಡೆನ್ನಿಯಾ ಬ್ಯೂಸಿನೆಸ್ ಸ್ಕೂಲ್ 12 ವಿದ್ಯಾರ್ಥಿಗಳ‌ ತಂಡ.  ಈ ವಿದ್ಯಾರ್ಥಿಗಳು ವಿಜಯಪುರ ಜಿಲ್ಲೆಯ ಪರಿಸರ, ಜಲಸಂಪನ್ಮೂಲ, ಪ್ರಾಣಿ, ಪಕ್ಷಿ ಸಂಕುಲ, ಕೃಷಿ, ತೋಟಗಾರಿಕೆ, ಐತಿಹಾಸಿಕ […]

ಬದರುದ್ದೀನ್ ಅ. ಸೌದಾಗರ ವಿಜಯಪುರ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕಾರ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಬದರುದ್ದೀನ್ ಅ. ಸೌದಾಗರ ಅವರನ್ನು ಸರಕಾರ ವರ್ಗವಾಣೆ ಮಾಡಿದ್ದು, ಅವರು ಈಗಾಗಲೇ ಅಧಿಕಾರ ಸ್ವೀಕರಿಸಿದ್ದಾರೆ. ಬಳ್ಳಾರಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಅವರನ್ನು ಸರಕಾರ ವಿಜಯಪುರಕ್ಕೆ ವರ್ಗಾವಣೆ ಮಾಡಿದೆ.  ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ವಿಜಯ ಮೆಕ್ಕಳಕಿ ಅವರನ್ನು ವಿಜಯಪುರದಿಂದ ಪೌರಾಡಳಿತ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು, ಯಾವುದೇ ಸ್ಥಳ ತೋರಿಸಿಲ್ಲ. ನೂತನ ಆಯುಕ್ತರನ್ನು ವಿಜಯಪುರ ಮಹಾನಗರ ಪಾಲಿಕೆಯ ಎಲ್ಲ ಸಿಬ್ಬಂದಿ ಬರಮಾಡಿಕೊಂಡು ಸ್ವಾಗತ ಕೋರಿದ್ದಾರೆ.  ಬದರುದ್ದೀನ್ ಅ. ಸೌದಾಗರ ಅವರು […]

ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಜಯಂತಿ ಆಚರಣೆ- ಹಳಕಟ್ಟಿ ಕುಟುಂಬಸ್ಥರು, ಅಪರ ಜಿಲ್ಲಾಧಿಕಾರಿ ಭಾಗಿ

ವಿಜಯಪುರ: ವಚನಪಿತಾಮಹ ಡಾ. ಫ.ಗು.ಹಳಕಟ್ಟಿ ಜಯಂತಿಯನ್ನು ನಗರದ ಬಿ.ಎಲ್.ಡಿ.ಇ. ಸಂಸ್ಥೆಯಲ್ಲಿ ಆಚರಿಸಲಾಯಿತು. ಸಂಸ್ಥೆಯ ಆವರಣದಲ್ಲಿರುವ ಸಂಶೋಧನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಳಕಟ್ಟಿಯವರ ಸಮಾಧಿಗೆ ಗಣ್ಯರು ನಮನ ಸಲ್ಲಿಸಿದರು. ಅಲ್ಲದೇ ಹಳಕಟ್ಟಿಯವರ ಭಾವಚಿತ್ರ ಹಾಗೂ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಳಕಟ್ಟಿಯವರ ಮರಿಮೊಮ್ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಿ.ಎಲ್.ಡಿ.ಇ. ಸಂಸ್ಥೆಯ ವತಿಯಿಂದ ಮುಖ್ಯ ಆಡಳಿತಾಧಿಕಾರಿ ಡಾ. ಆರ್.ಬಿ.ಕೊಟ್ನಾಳ ಅವರು ಹಳಕಟ್ಟಿಯವರ ಕುಟುಂಬಸ್ಥರಿಗೆ ಗೌರವಧನದ ಚೆಕ್ ವಿತರಿಸಿದರು. ಹಳಕಟ್ಟಿಯವರ ಮೊಮ್ಮಗ ಗಿರೀಶ ಹಳಕಟ್ಟಿ, ಅವರ ಪತ್ನಿ ಸುಜಾತಾ ಹಳಕಟ್ಟಿ […]

ಬಸವನಾಡಿನ ತಾಳಿಕೋಟೆಯಲ್ಲಿ ನಡೆದ ಶ್ರೀ ಖಾಸ್ಗತ ಮಹಾಶಿವಯೋಗಿಗಳ ಜಾತ್ರೋತ್ಸವ- ಭಾವೈಕ್ಯತೆಗೆ ಸಾಕ್ಷಿಯಾದ ಧಾರ್ಮಿಕ ಕಾರ್ಯಕ್ರಮಗಳು

ವಿಜಯಪುರ: ಜಿಲ್ಲೆಯ ತಾಳಿಕೋಟೆ ಪಟ್ಟಣದ ಶ್ರೀ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೋತ್ಸವ ಅದ್ದೂರಿಯಾಗಿ ನಡೆದಿದ್ದು, ಜಾತ್ರೆಯ ಅಂಗವಾಗಿ ನಡೆದ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳು ಜನಮನ ಸೆಳೆದಿವೆ.  ಶ್ರೀ ಖಾಸ್ಗತ ಮಹಾಶಿವಯೋಗಿಗಳ ಗಂಗಸ್ಥಳ ಮತ್ತು ಶ್ರೀಗಳ ಭವ್ಯ ಮೆರಣಿಗೆಯ ಮಹಾ ಕಾರ್ಯಕ್ರಮ ಶ್ರೀ ಮಠದ ನೂತನ ಪೀಠಾಧಿಪತಿ ಶ್ರೀ ಸಿದ್ದಲಿಂಗದೇವರ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆಯಿತು.  ಭಾವೈಕ್ಯತೆಗೆ ಸಾಕ್ಷಿಯಾದ ಈ ಕಾರ್ಯಕ್ರಮ ಜನಮನಸೂರೆಗೊಂಡಿತು. ಬೆಳಿಗ್ಗೆ 9 ಘಂಟೆಗೆ ಶ್ರೀ ಖಾಸ್ಗತ ಮಠದಿಂದ ಆನೆ ಅಂಬಾರಿ ಮೇಲೆ ಶ್ರೀ […]

ಹಸುವಿನ ಅಂತ್ಯಕ್ರಿಯೆ ನೆರವೇರಿಸಿ ಗೋಭಕ್ತಿ ತೋರಿದ ಬಸವನಾಡಿನ ಮಾತೋಶ್ರೀ ಕಾಲನಿ ನಿವಾಸಿಗಳು

ವಿಜಯಪುರ: ಬೀಡಾಡಿ ದನಗಳೆಂದರೆ ಸಾಕು ಮಾಲಿಕರು ಗೊತ್ತಾಗದ ಕಾರಣ ಸಾರ್ವಜನಿಕರೂ ಅವುಗಳನ್ನು ನಿರ್ಲಕ್ಷ್ಯಿಸುವುದುಂಟು.  ಆದರೆ, ತಮ್ಮ ಬಡಾವಣೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ತಿರುಗಾಡಿಕೊಂಡಿದ್ದ ಹಸು ಅಸುನೀಗಿಡಾದ ಅದನ್ನು ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಬಸವ ನಾಡಿನ ಜನ ಗಮನ ಸೆಳೆದಿದ್ದಾರೆ. ನಗರದ ವಾರ್ಡನಂ. 12ರಲ್ಲಿ ಬರುವ ಮಾತೋಶ್ರೀ ಕಾಲನಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಬೀಡಾಡಿ ಆಕಳೊಂದು ತಿರುಗಾಡಿಕೊಂಡಿತ್ತು.  ವಿಜಯ ಟಾಯರ್ ಹಿಂದುಗಡೆ ಬರುವ ಬಡಾವಣೆಯಲ್ಲಿ ಬರುವ ಈ ಪ್ರದೇಶದಲ್ಲಿನ ಈ ಹಸು ಸಾವನ್ನಪ್ಪಿದೆ.  ಈ ವಿಷಯ ತಿಳಿದ ಬಟಾವಣೆ […]

ಗಾಂಧಿ ಭವನ ವೀಕ್ಷಿಸಿದ ರಾಜ್ಯ ಹೈಕೋರ್ಟ್ ನ್ಯಾ. ಎಚ್. ಪಿ. ಸಂದೇಶ

ವಿಜಯಪುರ:  ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಎಚ್. ಪಿ. ಸಂದೇಶ್ ಅವರು ಕುಟುಂಬದೊಂದಿಗೆ ಶುಕ್ರವಾರ ನಗರದ ಜಿಲ್ಲಾ ಪಂಚಾಯತಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗಾಂಧಿ ಭವನಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಗಾಂಧಿ ಪ್ರತಿಮೆ,ಗಾಂಧೀ ವಿಚಾರ ಧಾರೆಗಳ ಕುರಿತ ಮಾಹಿತಿ ವಿವರ, ಗಾಂಧಿಜಿ ಕುರಿತ ಜಗತ್ತಿನ ನಾಯಕರು ವ್ಯಕ್ತಪಡಿಸಿದ ಅಭಿಪ್ರಾಯಗಳ ಕುರಿತಾದ ಮಾಹಿತಿ ವಿವರ ಓದಿ ಪ್ರಶಂಸೆ ವ್ಯಕ್ತ ಪಡಿಸಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ವೀಕ್ಷಿಸಿದ ಅವರು ಇಲ್ಲಿನ ಬಹುಮೂಲ್ಯ ಸಂಗ್ರಹದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ […]

ಮಳೆಯ ಅಭಾವ: ನೀರು ಪೋಲಾಗದಂತೆ ಕ್ರಮ ಕೈಗೊಳ್ಳಲು ಜಿ. ಪಿ. ಸಿಇಓ ರಾಹುಲ ಶಿಂಧೆ ಸೂಚನೆ

ವಿಜಯಪುರ: ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ನದಿ ಮತ್ತು ಕೆರೆಗಳಲ್ಲಿನ ಅತr  ಕೆಳಗಿನ ನೀರನ್ನು ಸಂಸ್ಕರಿಸಿ ಗ್ರಾಮೀಣ ಭಾಗದ ಪ್ರದೇಶಗಳಿಗೆ ಕುಡಿಯಲು ಪೂರೈಕೆ ಮಾಡಲಾಗುತ್ತಿರುವುದರಿಂದ ಜನರು ನೀರನ್ನು ಆದಷ್ಟು ಕಾಯಿಸಿ ಆರಿಸಿ ಉಪಯೋಗಿಸಬೇಕು ಹಾಗೂ ನೀರು ಅನಗತ್ಯವಾಗಿ ಪೋಲು ಮಾಡದೇ ಸಮರ್ಪಕವಾಗಿ ಬಳಸಿಕೊಳ್ಳುವಂತೆ ಗ್ರಾಮೀಣ ಭಾಗದ ಜನರಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳ ಜಲಮೂಲಗಳಾದ ಕೃμÁ್ಣ, ಭೀಮಾ ನದಿಯಲ್ಲಿ […]