ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕೆರೆ ಅಂಗಳದಲ್ಲಿ ಮತದಾನ ಜಾಗೃತಿ

ವಿಜಯಪುರ: ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಾಣಾಧಿಕಾರಿ ರಾಹುಲ್ ಶಿಂಧೆ ಅವರ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ  ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ತಾಳಿಕೋಟಿ  ತಾಲೂಕಿನ ಅಸ್ಕಿ ಗ್ರಾಮ ಪಂಚಾಯಿತಿಯ ಅಸ್ಕಿ ಗ್ರಾಮದ  ಕೆರೆ ಹೂಳೆತ್ತುವ  ಕಾಮಗಾರಿ ಸ್ಥಳದಲ್ಲಿ,  ಕೂಲಿಕಾರ್ಮಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆರೆ ಅಂಗಳದಲ್ಲಿ ಮತದಾನ ಜಾಗೃತಿ ಸಂಬಂಧಿಸಿದ “ನನ್ನ ಮತ ನನ್ನ ಹಕ್ಕು” […]

ಚುನಾವಣೆ ಬಳಿಕ ಬೊಮ್ಮಾಯಿ ಅವರಿಗೂ ಯಡಿಯೂರಪ್ಪ, ಸವದಿ, ಶೆಟ್ಟರ ಪರಿಸ್ಥಿತಿ ಬರಲಿದೆ ಎಂ ಬಿ ಪಾಟೀಲ

ವಿಜಯಪುರ: ಚುನಾವಣೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಪರಿಸ್ಥಿತಿ ಬರಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಭವಿಷ್ಯ ನುಡಿದಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಲಿಂಗಾಯಿತರನ್ನು ವ್ಯವಸ್ಥಿತವಾಗಿ ಬಿಜೆಪಿ ತುಳಿಯುತ್ತಿದೆ.  ಮೊದಲಿಗೆ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಯಿತು.  ಅವರಿಂದ ಆಪರೇಷನ್ ಕಮಲ‌ ಮಾಡಿಸಿ, […]

ಬಬಲೇಶ್ವರ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ. ಬಿ. ಪಾಟೀಲ ನಾಮಪತ್ರ ಸಲ್ಲಿಕೆ- ರೂ. 50 ಸಾವಿರ ಹಣ ನೀಡಿ ಶುಭ ಕೋರಿದ ವೃದ್ಧೆ ಪುತಳಿಬಾಯಿ ರಾಮು ರಾಠೋಡ

ವಿಜಯಪುರ:  ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಬಲೇಶ್ವರದಲ್ಲಿ ನಾಮಪತ್ರ ಸಲ್ಲಿಸಿದರು. ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಅವರು, ನೀರಾವರಿ ಇಲಾಖೆ ಕಛೇರಿಗೆ ತೆರಳಿ ಚುನಾವಣಾಧಿಕಾರಿ ಮಂಜುನಾಥ ಅವರಿಗೆ ಎರಡು ಸೆಟ್ ಗಳಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ ದಳವಾಯಿ, ಭೂತಾಳಸಿದ್ಧ ಒಡೆಯರ, ಈರಗೊಂಡ ಬಿರಾದಾರ, ಪುತಳಿಬಾಯಿ ರಾಮು ರಾಠೋಡ, ತಮ್ಮಣ್ಣ ಹಂಗರಗಿ, ಸಿದ್ದು‌ ಗೌಡನವರ, ಮುತ್ತಪ್ಪ‌ ಶಿವಣ್ಣವರ, ಸೋಮನಾಥ ಬಾಗಲಕೋಟ ಉಪಸ್ಥಿತರಿದ್ದರು. ಇದಕ್ಕೂ ಮುಂಚೆ ಎಂ. ಬಿ. ಪಾಟೀಲ ಅವರು […]

ಸ್ವಚ್ಛ ಆಡಳಿತ ನೀಡಲು ಹಲವರಿಗೆ ಟಿಕೆಟ್ ನಿರಾಕರಿಸಲಾಗಿದೆ- ಬಿಜೆಪಿಗೆ ಅಧಿಕಾರ ತಪ್ಪಿಸಲು ವಿದೇಶಿ ಶಕ್ತಿಗಳು ಕೈ ಜೋಡಿಸಿವೆ- ಯತ್ನಾಳ

ವಿಜಯಪುರ: ಸ್ವಚ್ಛ ಆಡಳಿತ ನೀಡಲು ಹಲವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ವಿದೇಶಿ ಶಕ್ತಿಗಳ ಷಡ್ಯಂತ್ರ ರೂಪಿಸಿವೆ ಎಂದು ವಿಜಯಪುರ ನಗರ ಬಿಜೆಪಿ ಅಭರ್ಥಿ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿರುವ ಈ ಎಲ್ಲ ವೇಸ್ಟ್ ಬಾಡಿಗಳನ್ನು ಅಂದರೆ ಕಸವನ್ನು ತೆಗೆದು ಕರ್ನಾಟಕದಲ್ಲಿ ಸ್ವಚ್ಛ ಆಡಳಿತ ನೀಡಲು ಹಲವಾರು ಜನರಿಗೆ ಟಿಕೆಟ್ ನಿರಾಕರಿಸಲಾಗಿದೆ.  ಇವರೆಲ್ಲರ ಬಗ್ಗೆ ಪ್ರಧಾನಿ, ಬಿಜೆಪಿ ಮುಖಂಡರಿಗೆ ಮಾಹಿತಿ ಇದೆ.  ಎರಡನೇ ಹಂತದ ನಾಯಕರನ್ನು ಬೆಳೆಸಬೇಕು.  […]

ವಿಧಾನಸಭೆ ಚುನಾವಣೆ: ಮತಗಟ್ಟೆಗಳಲ್ಲಿ ಕಾರ್ಯನಿರತ ಸಿಬ್ಬಂದಿಗಳಿಗೆ ಊಟ, ಉಪಹಾರ ಸೂಕ್ತ ವ್ಯವಸ್ಥೆಗೆ ಸೂಚನೆ

ವಿಜಯಪುರ: ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮತದಾನದ ಪೂರ್ವದಿನ ಹಾಗೂ ಮತದಾನ ದಿನ ಊಟ ಹಾಗೂ ಉಪಹಾರ ಪೂರೈಸಲು ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆ ನೀಡಿದ್ದಾರೆ.    ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ 2072 ಮತಗಟ್ಟೆಗಳಲ್ಲಿ ನಿಯೋಜಿತ ಸಿಬ್ಬಂದಿಗಳಿಗೆ ನಿಗದಿತ ಸಮಯದಲ್ಲಿ ಊಟ, ಉಪಹಾರ, ಶುದ್ಧ ಕುಡಿಯುವ ನೀರು ಒದಗಿಸಬೇಕು.  ಮತಗಟ್ಟೆಗಳಲ್ಲಿ ಹಾಗೂ ಮತಗಟ್ಟೆಗೆ […]

ವಿಜಯಪುರ ನಗರ ಬಿಜೆಪಿ ಅಭ್ಯರ್ಥಿಯಾಗಿ ಯತ್ನಾಳ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ

ವಿಜಯಪುರ: ವಿಧಾನ ಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ಚುರುಕು ಪಡೆದಿದ್ದು, ವಿಜಯಪುರ ನಗರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಸನಗೌಡ ಪಾಟೀಲ ಯತ್ನಾಳ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಅಧಿಕಾರಿ ಕ್ಯಾ. ಮಹೇಶ ಮಾಲಿಗಿತ್ತಿ ಅವರಿಗೆ ಯತ್ನಾಳ ತಮ್ಮ ನಾಮಪತ್ರ ಸಲ್ಲಿಸಿದರು. ನಾಳೆ ರವಿವಾರ ಪಂಚಕ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.  ಈ ಸಂದರ್ಭದಲ್ಲಿ ಕಾರ್ಪೋರೇಟರ್ ಎಂ. ಎಸ್. ಕರಡಿ, ಕ್ಯಾಂಡಿಡೇಟ್ ಏಜೆಂಟ್ ಗುರು ಗಚ್ಚಿನಮಠ, ನ್ಯಾಯವಾದಿ ಸತೀಶಚಂದ್ರ ಕುಲಕರ್ಣಿ, ಎನ್. ಎಂ. […]

ಅಂಬೇಡ್ಕರ ಎಲ್ಲ ಸಮುದಾಯಗಳ ಅಮೂಲ್ಯ ಆಸ್ತಿ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಅವರು ಎಲ್ಲ ಸಮುದಾಯಗಳ ಅಮೂಲ್ಯ ಆಸ್ತಿ.  ಶೋಷಿತ ಸಮುದಾಯಗಳ ಉದ್ಧಾರಕ್ಕಾಗಿ ಅವತರಿಸಿದ ಮಹಾನ್ ಸಂತ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ. ಬಿ. ಆರ್. ಅಂಬೇಡ್ಕರ ಅವರ ಚಿಂತನೆಯ ಫಲವಾಗಿ ರೂಪುಗೊಂಡ ಸಂವಿಧಾನದ ಫಲವಾಗಿ ಇಂದು ದಲಿತರ ಬದುಕಿನಲ್ಲಿ ಬೆಳಕು ಮೂಡುವಂತಾಗಿದೆ.  ಭಾರತಕ್ಕೆ ಶ್ರೇಷ್ಠ ಸಂವಿಧಾನ […]

ಚುನಾವಣೆ ವೆಚ್ಚ ವೀಕ್ಷಕರಿಂದ ನಾನಾ ಸಿದ್ಧತೆಗಳ ಪರಿಶೀಲನೆ: ಸಂಶಯಾಸ್ಪದ ಚಟುವಟಿಕೆ ಮೇಲೆ ತೀವ್ರ ನಿಗಾಕ್ಕೆ ಡಿಸಿ ಸೂಚನೆ

ವಿಜಯಪುರ: ಚುನಾವಣೆ ವೆಚ್ಚಕ್ಕೆ ಸಂಬಂಧಿಸಿದಂತೆ ಅತ್ಯಂತ ಸೂಕ್ಷ್ಮವಾಗಿ ಕಾರ್ಯನಿರ್ವಹಿಸಬೇಕು.  ಸಂಶಯಾಸ್ಪದ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಹೆದ್ದಾರಿ ಸೇರಿದಂತೆ ನಾನಾ ಮಾರ್ಗಗಳಲ್ಲಿ ವಾಹನ ತಪಾಸಣೆ ಕಾರ್ಯದ ಜೊತೆಗೆ ಅಕ್ರಮ ಚುಟುವಟಿಕೆ ಬಗ್ಗೆ ನಿಗಾ ವಹಿಸುವಂತೆ ಚುನಾವಣಾ ವೆಚ್ಚ ವೀಕ್ಷಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೇಂದ್ರ ಚುನಾವಣೆ ಆಯೋಗದ ವತಿಯಿಂದ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡ ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ಮತಕ್ಷೇತ್ರದ ವೆಚ್ಚ ವೀಕ್ಷಕರಾದ  ಗೋಲಾಪ್   ಪ್ರಜ್ಞಾ ರಾಜೇಂದ್ರ, ಬಸವನಬಾಗೇವಾಡಿ ಮತ್ತು […]

ವಿಜಯಪುರ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಆಚರಣೆ

ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ 132ನೇ ಜನ್ಮ ದಿನ ಆಚರಿಸಲಾಯಿತು.  ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಪ್ರೊ. ರಾಜು ಆಲಗೂರ ಅಂಬೇಡಕ್ರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಜಗತ್ತಿನಲ್ಲೇ ಸರ್ವಶ್ರೇಷ್ಠವಾದ ಭಾರತ ಸಂವಿಧಾನವನ್ನು ನೀಡಿದ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಆರ್ಥಿಕ ತಜ್ಞ, ಯೋಜನಾ ನಿಪುಣ, ಕಾನೂನು ತಜ್ಞರಾಗಿದ್ದರು.  ಮಾತ್ರವಲ್ಲ, ಸಾಮಾಜಿಕ ಪರಿಕಲ್ಪನೆಯ ತಜ್ಞರಾಗಿದ್ದರು.  […]

ಮುದ್ದೇಬಿಹಾಳ ಪೊಲೀಸರ ಕಾರ್ಯಾಚರಣೆ- ಹೊಲದಲ್ಲಿ ಬೆಳೆಯಲಾಗಿದ್ದ ರೂ. 1.80 ಲಕ್ಷ ಮೌಲ್ಯದ ಹಸಿಗಾಂಜಾ ವಶ, ಆರೋಪಿ ಬಂಧನ

ವಿಜಯಪುರ: ಮುದ್ದೇಬಿಹಾಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹೊಲದಲ್ಲಿ ಅಕ್ರಮವಾಗಿ ಬೆಳೆಯಲಾಗಿದ್ದ ರೂ. 1.80 ಲಕ್ಷ ಮೌಲ್ಯದ ಹಸಿಗಾಂಜಾ ವಶಪಡಿಸಿಕೊಂಡಿದ್ದಾರೆ. ಮುದ್ದೇಬಿಹಾಳ ತಾಲೂಕಿನ ಮಲಗಲದಿನ್ನಿ ಗ್ರಾಮದ ಬಸವರಾಜ್ ಮಲ್ಲೇಶಪ್ಪ ಬಿರಾದಾರ ಎಂಬುವರ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿರುವ ಮಾಹಿತಿ ಪಡೆದ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿ ಎಸ್ ಐ ಆರೀಫ್ ಮುಶಾಪುರಿ ತಮ್ಮ ಸಿಬ್ಬಂದಿಯೊಂದಿಗೆ ಧಾಳಿ ನಡೆಸಿ ಹಸಿ 36.820 ಕೆಜಿ ಹಸಿಗಾಂಜಾ ವಶಪಡಿಸಿಕೊಂಡಿದ್ದಾರೆ.  ಅಲ್ಲದೇ, ಆರೋಪಿಯನ್ನು ಬಂಧಿಸಿದ್ದಾರೆ. ಈ ಧಾಳಿಯಲ್ಲಿ  ಸಿಬ್ಬಂದಿಯಾದ ಸಿಪಿಐ ಮಲ್ಲಿಕಾರ್ಜುನ್ ತುಳಸಿಗಿರಿ […]