ವೃದ್ಧೆಯ ಭಕ್ತಿ- ಗುಳೆ ತಪ್ಪಿಸಿ ಸುಖ ಸಂಸಾರಕ್ಕೆ ಕಾರಣರಾದ ಆಧುನಿಕ ಭಗೀರಥನ ಚುನಾವಣೆ ಖರ್ಚಿಗೆ ರೂ. 50 ಸಾವಿರ ನೀಡಲು ನಿರ್ಧಾರ

ವಿಜಯಪುರ: ನೀರಾವರಿ ಸೌಲಭ್ಯ ಒದಗಿಸಿ ಜನ ಗುಳೆ ಹೋಗುವುದನ್ನು ತಪ್ಪಿಸಲು ಕಾರಣರಾದ ಆಧುನಿಕ ಭಗೀರಥ ಎಂ. ಬಿ. ಪಾಟೀಲ ಅವರಿಗೆ ಈ ಬಾರಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮತ್ತು ಖರ್ಚಿಗಾಗಿ ಬಂಜಾರಾ ವೃದ್ಧೆಯೊಬ್ಬರು ರೂ. 50 ಸಾವಿರ ಹಣ ನೀಡಲು ನಿರ್ಧರಿಸಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಎಲ್. ಟಿ. 2ರ ವೃದ್ದೆ ಪುತಲಿಬಾಯಿ ರಾಮು ರಾಠೋಡ(65) ಎಂ. ಬಿ. ಪಾಟೀಲರ ಮೇಲಿನ ಅಭಿಮಾನದಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪುತಲಿಬಾಯಿ […]

ರಾಜ್ಯ ಸರಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಬದಲು ಹಳೆಯ ಪಿಂಚಣಿ ಯೋಜನೆಗೆ ಮರುಜಾರಿಗೆ ಕೇಂದ್ರ ಸ್ಪಂದನೆ- ಅರುಣ ಶಹಾಪುರ ಸಂತಸ

ವಿಜಯಪುರ: ಸರಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಮರುಜಾರಿಗೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇದರ ಪರಾಮರ್ಶೆ ಮತ್ತು ಸುಧಾರಣೆಗಾಗಿ ಕೇಂದ್ರ ಹಣಕಾಸು ಸಚಿವಾಲಯ ನಾಲ್ಕು ಜನರ ಸಮಿತಿ ರಚಿಸಿದೆ.  ಕೇಂದ್ರದ ಈ ನಿರ್ಧಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಮಾಜಿ ಎಂಎಲ್‌ಸಿ ಮತ್ತು ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಾಧ್ಯಕ್ಷ ಅರುಣ ಶಹಾಪುರ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರಕಾರ ನೌಕರರ ಹಿತ ಕಾಪಾಡಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ.  ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಆಗಬೇಕಿರುವ […]

ಗುಮ್ಮಟ ನಗರಿಯಿಂದ ಯತ್ನಾಳಗೆ ಟಿಕೆಟ್ ನೀಡಬೇಕು- ಬಿಜೆಪಿ ಕಾರ್ಪೋರೇಟರ್ ಗಳ ಆಗ್ರಹ

ವಿಜಯಪುರ: ಗುಮ್ಮಟ ನಗರಿ ವಿಜಯಪುರ ನಗರ ಮತಕ್ಷೇತ್ರದಿಂದ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮಾನಂದ ಬಿರಾದಾರ, ಮಾಜಿ ಉಪಮೇಯರ್ ರಾಜೇಶ ದೇವಗಿರಿ ಮತ್ತೀತರರು, ಕಳೆದ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಉಚ್ಛಾಟಿತರಾಗಿರುವ ಮುಖಂಡರು ಯತ್ನಾಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.   ಮಹಾನಗರ ಪಾಲಿಕೆಯ ಬಿಜೆಪಿಯ 18 ಕಾರ್ಪೋರೇಟರ್ […]

ಆದಿ ಬಣಜಿಗರ ಸಮುದಾಯ ಅಭಿವೃದ್ಧಿಯತ್ತ ಸಾಗಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಆದಿ ಬಣಜಿಗರ ಸಮುದಾಯ ಕಾಯಕ ನಿಷ್ಠ ಸಮುದಾಯ. ಈ ಸಮುದಾಯದ ಮಕ್ಕಳು ಶಿಕ್ಷಣ ಪಡೆದು ಬುದ್ದಿವತಂರಾಗಬೇಕು. ಆದಿ ಬಣಜಿಗರ ಸಮುದಾಯವೂ ಅಭಿವೃದ್ಧಿಯತ್ತ ಸಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಆದಿ ಬಣಜಿಗ ಸಮುದಾಯವನ್ನು ಪ್ರವರ್ಗ 2ಡಿ ಗೆ ಸೇರಿಸಿರುವುದಕ್ಕೆ ಹುಬ್ಬಳ್ಳಿಯಲ್ಲಿ ಸಮುದಾಯದ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು. ಹುಬ್ಬಳ್ಳಿಗೆ ಬಂದಾಗ ಮಗಳು ತವರು ಮನೆಗೆ ಬಂದ ಹಾಗೇ ಆಗುತ್ತದೆ. ನಮ್ಮ ತಂದೆಯವರು ಈ ಊರಿನ ಜೊತೆಗಿನ ಸಂಬಂಧ, […]

ಬಸವನಾಡಿನಲ್ಲಿ ಹನುಮ ಜಯಂತಿ ಆಚರಣೆ- ನಸುಕಿನಿಂದಲೇ ಆಂಜನೇಯ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದ ಭಕ್ತರು- ಪ್ರಸಾದ ವ್ಯವಸ್ಥೆಯೂ ಜೋರು

ವಿಜಯಪುರ: ಇಂದು ರಾಮಭಕ್ತ ಹನುಮ ಜಯಂತಿ.  ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಹನುಮ ಜಯಂತಿ ಸಂಭ್ರಮ ಜೋರಾಗಿದೆ.  ಜಿಲ್ಲೆಯ ನಾನಾ ಬಡಾವಣೆಗಳಲ್ಲಿರುವ ಎಲ್ಲ ಹನುಮಾನ ಮಂದಿರಗಳಲ್ಲಿ ಹನುಮ ಜಯಂತಿ ಅಂಗವಾಗಿ ನಾನಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ರಾಮಭಕ್ತ, ಸರ್ವಶಕ್ತ, ಚಿರಂಜೀವಿ, ವಾಯುಪುತ್ರ, ಆಂಜನಿಸುತ, ಮಾರುತಿ ಸೇರಿದಂತೆ ನಾನಾ ಹೆಸರುಗಳಿಂದ ಕರೆಯಲಾಗುವ ಆಂಜನೆಯ ಭಕ್ತರು ಅಪಾರ ಸಂಖ್ಯೆಯಲ್ಲಿದ್ದಾರೆ.  ಹೀಗಾಗಿ ಹನುಮಂತನ ಪ್ರತಿಯೊಂದು ದೇವಸ್ಧಾನಗಳಲ್ಲಿ ನಸುಕಿನ ಜಾವದಿಂದಲೇ ಜನಜಂಗುಳಿ ಕಂಡು ಬಂತು.  ಹನುಮ ದೇಗುಲಗಳಲ್ಲಿ ಸಂಭ್ರಮದಿಂದ ಪೂಜಾ ಕೈಂಕರ್ಯ […]

ಒಳಮೀಸಲಾತಿ ರದ್ದು ಪಡಿಸಲು ಆಗ್ರಹಿಸಿ ಬಂಜಾರಾ ಸಮುದಾಯದಿಂದ ಪ್ರತಿಭಟನೆ, ಮನವಿ ಪತ್ರ ಸಲ್ಲಿಕೆ

ವಿಜಯಪುರ: ಒಳಮೀಸಲಾತಿ ವರ್ಗೀಕರಣ ಅವೈಜ್ಞಾನಿಕವಾಗಿದ್ದು, ಅದನ್ನು ರದ್ದು ಪಡಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘ(ಎ.ಐ.ಬಿ.ಎಸ್‌.ಎಸ್‌.) ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಠೋಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತರಾತುರಿಯಲ್ಲಿ , ಸಚಿವರಾದ ಗೋವಿಂದ ಕಾರಜೋಳ, ಅಂಗಾರಾ, ಪ್ರಭು ಚವ್ಹಾಣ, ಡಿ. ಸುಧಾಕರ ಅವರನ್ನೊಳಗೊಂಡ ಐದು ಜನರ ಉಪಸಮಿತಿ ರಸಿಚಿ ಚುನಾವಣೆ ಸಂರ್ಭದಲ್ಲಿ ಪರಿಶಿಷ್ಠ ಜಾತಿಯಲ್ಲಿರುವ 101 ಸಮುದಾಯಗಳನ್ನು ಒಡೆಯುವ ಕೆಲಸ […]

ಬಿ.ಎಲ್.ಡಿ.ಇ ಡೀಮ್ಡ್ ವಿವಿ- ಇಸ್ರೇಲ್ ಸೌರಾಸ್ಕಿ ಆಸ್ಪತ್ರೆಯೊಂದಿಗೆ ಒಡಂಬಡಿಕೆ

ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಚರ್ಮರೋಗ ವಿಭಾಗ ಇಸ್ರೇಲ್ ದೇಶದ ಟೆಲ್ ಅವಿವ್ ಸೌರಾಸ್ಕಿ ಆಸ್ಪತ್ರೆಯೊಂದಿಗೆ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ. ಬಿ.ಎಲ್.ಡಿ.ಇ ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ.ಎಂ.ಜಯರಾಜ, ಉಪಕುಲಪತಿ ಡಾ. ಆರ್.ಎಸ್.ಮುಧೋಳ, ಡಿನ್ ಡಾ. ಅರವೀಂದ ಪಾಟೀಲ ಮತ್ತು ರಜಿಸ್ಟ್ರಾರ್ ಆರ್.ವಿ.ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಅಮೇರಿಕಾದ ನ್ಯೂ ಅರ್ಲೇಯಾನ್‍ದಲ್ಲಿ ಸಮ್ಮೇಳನದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿವಿಯ ಡಾ.ಅರುಣ ಇನಾಮದಾರ ಮತ್ತು ಇಸ್ರೇಲ್‍ನ ಡಾ. ಎಲಿ ಸ್ಪೀಚರ ಜೊತೆ ಶೈಕ್ಷಣಿಕ ಒಪ್ಪಂದ […]

ನ್ಯಾಯಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧ: ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ

ವಿಜಯಪುರ: ನ್ಯಾಯಸಮ್ಮತ, ಪಾರದರ್ಶಕ ಚುನಾವಣೆಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜ್ಯ ಚುನಾವಣೆ ಆಯೋಗದಿಂದ ನಡೆದ ವಿಡಿಯೋ ಕಾನ್ಫರೆನ್ಸಲ್ಲಿ  ಮಾತನಾಡಿದ ಅವರು, ಜಿಲ್ಲೆಯ ಎಂಟು ವಿಧಾನ ಸಭೆ ಮತಕ್ಷೇತ್ರಗಳಲ್ಲಿ ಸುಗಮವಾಗಿ ಮತದಾನ ನಡೆಯಲು ಎಲ್ಲ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ಕಳೆದ ಚುನಾವಣೆಗಳಲ್ಲಿ ಅತಿ ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ವಿಶೇಷ ಮುತುವರ್ಜಿ ವಹಿಸಿ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡು ಮತದಾನದ ಮಹತ್ವದ ಕುರಿತು ಅರಿವು […]

ಒಳಮೀಸಲಾತಿಗೆ ವಿರೋಧ- ತಿಕೋಟಾ ತಾಲೂಕು ಬಂಜಾರ ಸಮುದಾಯದಿಂದ ತಹಸೀಲ್ದಾರ್ ಗೆ ಮನವಿ ಪತ್ರ ಸಲ್ಲಿಕೆ

ವಿಜಯಪುರ: ಒಳಮೀಸಲಾತಿಯನ್ನು ವಿರೋಧಿಸಿ ತಾಲೂಕು ಬಂಜಾರಾ ಸಮುದಾಯದ ಮುಖಂಡರು ತಿಕೋಟಾದಲ್ಲಿ ತಹಸೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಸದಾಶಿವ ಆಯೋಗದ ಅವೈಜ್ಞಾನಿಕ ವರದಿಯನ್ನು ಅನುಷ್ಠಾನಗೊಳಿಸಲಾಗಿದ್ದು, ಅದನ್ನು ಹಿಂಪಡೆಯಬೇಕು.  2012ರಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅಂದಿನ ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಸರಕಾರಕ್ಕೆ ಸಲ್ಲಿಸಿದ್ದಾರೆ.  ಇದು ಅವೈಜ್ಞಾನಿಕ ಅಷ್ಟೇ ಅಲ್ಲ, ಕಾನೂನುಬಾಹಿರವೂ ಆಗಿದೆ.  ಅಲ್ಲದೇ, ಇದನ್ನು ವಿರೋಧಿಸಿ ಈಗಾಗಲೇ ಹಲವಾರು ಬಾರಿ ಬಂಜಾರ, ಭೋವಿ, ವಡ್ಡರ, ಕೊರಚ, ಕರೊವ ಸಮುದಾಯದವರು ರಾಜ್ಯಾದ್ಯಂತ ಹೋರಾಟವನ್ನು ಮಾಡಿದ್ದಾರೆ.  2020ರಲ್ಲಿ […]

ಎಸ್ ಎಸ್ ಎಲ್ ಸಿ ಪರೀಕ್ಷೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಭೇಟಿ, ಪರಿಶೀಲನೆ

ವಿಜಯಪುರ: ಜಿಲ್ಲೆಯ ನಾನಾ ಪರೀಕ್ಷೆ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಗಣಿತ ವಿಷಯದ ಪರೀಕ್ಷೆ ಜರುಗಿತು. ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಅವರು ಸೋಮವಾರ ನಗರದ ವಿವಿ ದರ್ಬಾರ ಪ್ರೌಢ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಜಿಲ್ಲೆಯ ಸ್ಥಾಪಿತ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಏಳು ವಿಚಕ್ಷಣೆ ದಳ ನೇಮಿಸಲಾಗಿದೆ. ಈ ವಿಚಕ್ಷಣ ದಳದಲ್ಲಿ ಓರ್ವ ಪತ್ರಾಂಕಿತ ಎ ಗುಂಪಿನ ಅಧಿಕಾರಿಯ ಅಧ್ಯಕ್ಷತೆಯಲ್ಲಿ ಇಬ್ಬರು ಸದಸ್ಯರನ್ನು ಒಳಗೊಂಡ ಮೂರು ಜನರನ್ನೊಳಗೊಂಡ ವಿಚಕ್ಷಣ ತಂಡ  […]