ಪ್ಯಾನ್ ಇಂಡಿಯಾ ರಕ್ಷಣೆ, ಪುನರ್ವಸತಿ ಅಭಿಯಾನ: ಅಂಗಡಿ, ವಾಣಿಜ್ಯ ಸಂಸ್ಥೆಗಳಲ್ಲಿ ಜಾಗೃತಿ

ವಿಜಯಪುರ: ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಒಂದು ತಿಂಗಳ ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುರ್ನವಸತಿ ಅಭಿಯಾನ ನಡೆಯಿತು.  ಈ ಅಭಿಯಾನದ ಅಂಗವಾಗಿ ತಿಕೋಟಾ ಪಟ್ಟಣದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಹಾಗೂ ನಾನಾ ಇಲಾಖೆಗಳ ಜಂಟಿ ಸಹಯೋಗದಲ್ಲಿ ನಾನಾ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನಿಡಿ ಕರಪತ್ರ ಹಾಗೂ ಸ್ಟೀಕರ್ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಕೈಗೊಂಡ ಅಭಿಯಾನದ ಸಂದರ್ಭದಲ್ಲಿ ಯಾವುದೇ ಬಾಲ ಮತ್ತು […]

ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವೇ ಅಂತಿಮ- ಸಂಗಮೇಶ ಬಬಲೇಶ್ವರ

ವಿಜಯಪುರ: ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವೇ ಅಂತಿಮ.  ಅದನ್ನು ಎಲ್ಲರೂ ಗೌರವಿಸಲೇಬೇಕು.  ವಿಜಯಪುರದಲ್ಲಿ ಪ್ರೊ. ರಾಜು ಆಲಗೂರ ಅವರ ಸೋಲನ್ನು ನಿರೀಕ್ಷಿಸಿರಲಿಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅತ್ಯುತ್ತಮ ಸಾಧನೆ ತೋರಿದೆ.  ಆದರೆ, ನಿರೀಕ್ಷಿತ ಫಲಿತಾಂಶ ಬರದಿರುವುದು ಬೇಸರ ಮೂಡಿಸಿದೆ ಎಂದು ತಿಳಿಸಿದ್ದಾರೆ. ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು […]

ಮತದಾರರ ತೀರ್ಪನ್ನು ಒಪ್ಪುತ್ತೇವೆ- ಪ್ರೊ. ರಾಜು ಆಲಗೂರ ಪರ ಮತ ಹಾಕಿದವರಿಗೆ ಧನ್ಯವಾದಗಳು- ಸಚಿವ ಎಂ. ಬಿ. ಪಾಟೀಲ

ವಿಜಯಪುರ: ಪ್ರೊ. ರಾಜು ಆಲಗೂರ ಮತ್ತು ಕಾಂಗ್ರೆಸ್ ಪರ ಮತದಾನ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳುವುದಾಗಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಂಗಳವಾರ ಸಂಜೆ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಮತದಾರರು ನೀಡಿರುವ ತೀರ್ಪನ್ನು ಒಪ್ಪುತ್ತೇವೆ.  ಈ ಬಾರಿ ಚುನಾವಣೆಯಲ್ಲಿ ವಿಜಯಪುರದಲ್ಲಿ ನಾವು ಗೆಲ್ಲುವ ಬಲವಾದ ವಿಶ್ವಾಸವಿತ್ತು.  ಸಂಘಟಿತ ಪ್ರಯತ್ನ ಮಾಡಲಾಗಿತ್ತು.  ಎಲ್ಲ ಜಿ. ಪಂ. ವ್ಯಾಪ್ತಿವಾರು ಮತದಾರರನ್ನು ತಲುಪಿದ್ದೇವು.  ಇಷ್ಟಾದರೂ ಕೂಡ ಮತದರಾರು ನಮಗೆ ಆಶೀರ್ವಾದ […]

ಆಶೀರ್ವದಿಸಿದ ಮತದಾರರು, ಶ್ರಮಿಸಿದ ಸಚಿವರು, ಶಾಸಕರು, ಕಾರ್ಯಕರ್ತರಿಗೆ ಧನ್ಯವಾದಗಳು- ಪ್ರೊ. ರಾಜು ಆಲಗೂರ

ವಿಜಯಪುರ: ವಿಜಯಪುರ ಮೀಸಲು ಲೋಕಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ನನಗೆ ಮತ ನೀಡಿ, ಆಶೀರ್ವದಿಸಿದ ಎಲ್ಲ ಮತದಾರರಿಗೆ ನನ್ನ ಕೃತಜ್ಞತೆಗಳು ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ತಿಳಿಸಿದ್ದಾರೆ.  ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಈ ಚುನಾವಣೆಯಲ್ಲಿ ನನಗೆ ಬೆಂಬಲವಾಗಿ ನಿಂತು, ಸಹಕಾರ ನೀಡಿ, ಹಗಲಿರುಳು ಶ್ರಮಿಸಿದ ಸಚಿವರು, ಶಾಸಕರು, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಬಾರಿ ಅತಿ ಹೆಚ್ಚು ಒಗ್ಗಟ್ಟಿನಿಂದ ಶ್ರಮಿಸಿದ್ದರು. ಅವರೆಲ್ಲರಿಗೂ ನನ್ನ ವೈಯಕ್ತಿಕ ಕೃತಜ್ಞತೆಗಳು ಎಂದು […]

ವೋಟು ಹಾಕಿದ ಮತದಾರರು, ಹಗಲಿರುಳು ಶ್ರಮಿಸಿದ ಕಾರ್ಯಕರ್ತರು, ಸುಗಮವಾಗಿ ಚುನಾವಣೆ ನಡೆಸಿದ ಅಧಿಕಾರಿಗಳಿಗೆ ಧನ್ಯವಾದಗಳು- ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ವೋಟು ಹಾಕಿದ ಮತದಾರರು, ಕೆಲಸ ಮಾಡಿದ ಕಾರ್ಯಕರ್ತರು, ಸುಸೂತ್ರವಾಗಿ ಚುನಾವಣೆ ನಡೆಸಿದ ಅಧಿಕಾರಿಗಳಿಗೆ ಧನ್ಯವಾದ ಹೇಳುವುದಾಗಿ ಸತತ ಏಳನೇ ಬಾರಿಗೆ ಸಂಸದರಾಗಿ ಆಯ್ಗೆಯಾಗಿರುವ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ಮಂಗಳವಾರ ಸಂಜೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಂದ ಗೆಲುವಿನ ಪ್ರಮಾಣ ಪತ್ರ ಸ್ವೀಕರಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನನ್ನ ಪಕ್ಷದ ಕಾರ್ಯಕರ್ತರು ಉರಿ ಬಿಸಿಲಿನಲ್ಲಿ ಚಪ್ಪಲಿ ಹರಿದುಕೊಂಡು, ಅಂಗಿ ಹರಿದುಕೊಂಡು ಶ್ರಮಪಟ್ಟು ನನ್ನನ್ನು ಗೆಲ್ಲಿಸಿದ್ದಾರೆ. […]

ಬಸವನಾಡಿನಲ್ಲಿ ವಿಧಾನ ಸಭೆ ಕ್ಷೇತ್ರವಾರ ಬಿಜೆಪಿ, ಕಾಂಗ್ರೆಸ್ ಪಡೆದ ಮತಗಳು ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ ಹಾಲಿ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಪ್ರೊ. ರಾಜು ಆಲಗೂರ ಅವರ ವಿರುದ್ಧ ಭರ್ಜರಿ ಜಯಗಳಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿರುವ ಒಟ್ಟು ಒಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಆರರಲ್ಲಿ ಕಾಂಗ್ರೆಸ್, ತಲಾ ಒಂದರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರಿದ್ದಾರೆ.  ಮುದ್ದೇಬಿಹಾಳ, ಬಸವನ ಬಾಗೇವಾಡಿ, ಬಬಲೇಶ್ವರ, ನಾಗಠಾಣ, ಇಂಡಿ ಮತ್ತು ಸಿಂದಗಿ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.  ಈ ಮತಕ್ಷೇತ್ರಗಳಲ್ಲಿ ರಮೇಶ ಜಿಗಜಿಣಗಿ ಕಾಂಗ್ರೆಸ್ ಅಭ್ಯರ್ಥಿಗಳಿಗಿಂತಲೂ ಅತೀ ಹೆಚ್ಚು ಮತ […]

ಜಿಗಜಿಣಗಿ ಈಗ ಸಪ್ತ ಗೆಲುವಿನ ಸರದಾರ- ಆಲಗೂರಗೆ ಸಿಗಲಿಲ್ಲ ಗೆಲುವಿನ ಹಾರ

ವಿಜಯಪುರ: ತೀವ್ರ ಕುತೂಹಲ ಕೆರಳಿಸಿದ್ದ ವಿಜಯಪುರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಸಂಸದ ರಮೇಶ ಜಿಗಜಿಣಗಿ ಸತತ ಏಳನೇ ಬಾರಿಗೆ ಸಂಸದರಾಗಿ ಆಯ್ಗೆಯಾಗುವ ಮೂಲಕ ಮತ್ತೆ ಗೆಲುವಿನ ನಗೆ ಬೀರಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಗ್ಯಾರಂಟಿ ಅಲೆಯನ್ನು ಬದಿಗೆ ಸರಿಸಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ 77552 ಮತಗಳ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಪ್ರೊ. ರಾಜು ಆಲಗೂರ ಅವರನ್ನು ಸೋಲಿಸಿದ್ದಾರೆ.  ಈ ಚುನಾವಣೆಯಲ್ಲಿ ರಮೇಶ ಜಿಗಜಿಣಗಿ 6 ಲಕ್ಷ 72 ಸಾವಿರದ 781 ಮತಗಳನ್ನು ಪಡೆದರೆ, ಅವರ […]

ಲೋಕಸಭೆ ಚುನಾವಣೆ ಮತ ಎಣಿಕೆ: ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದ ಡಿಸಿ ಟಿ. ಭೂಬಾಲನ್

ವಿಜಯಪುರ: ಲೋಕಸಭೆ ಚುನಾವಣೆಯ ಮತ ಎಣಿಕೆಯು ಜೂ. 4 ರಂದು ಮಂಗಳವಾರ ಚುನಾವಣೆ ಆಯೋಗದ ಮಾರ್ಗಸೂಚಿಯ ಪ್ರಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.   ವಿಜಯಪುರ ಮೀಸಲು(ಪ. ಜಾ) ಲೋಕಸಭೆ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ವಿಜಯಪುರ ನಗರದ ಸೈನಿಕ ಶಾಲೆಯ ಆವರಣದಲ್ಲಿ ಚುನಾವಣೆ ವೀಕ್ಷಕರೊಂದಿಗೆ ಅಂತಿಮ ಹಂತದ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ  ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.   ಮತ ಎಣಿಕೆ ಆರಂಭಕ್ಕೆ ಮುನ್ನ ಬೆ. […]

ಬಸವ ನಾಡಿನಲ್ಲಿ ಉತ್ತಮ ಮಳೆ: ಹರನಾಳದಲ್ಲಿ ಅತ್ಯಧಿಕ 12.2 ಸೆಂ. ಮೀ. ಮಳೆ ದಾಖಲು- ಉಳಿದೆಡೆ ಎಷ್ಟು? ಇಲ್ಲಿದೆ ಮಾಹಿತಿ

ವಿಜಯಪುರ: ಬಸವನಾಡು ವಿಜಯಪುರದಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ.  ಜಿಲ್ಲಾದ್ಯಂತ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು, ದೇವರ ಹಿಪ್ಪರಗಿ ತಾಲೂಕಿನ ಹರನಾಳದಲ್ಲಿ ಅತ್ಯಧಿಕ 12.20 ಸೆಂ. ಮೀ. ಮಳೆ ದಾಖಲಾಗಿದೆ.   ಇದೇ ರೀತಿ ಜಿಲ್ಲಾದ್ಯಂತ ಕೂಡ ಅತ್ಯುತ್ತಮ ಮಳೆಯಾಗಿದೆ.  ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ದಾಖಲಾದ ಸ್ಥಳಗಳ ಮಾಹಿತಿ ಇಲ್ಲಿದೆ. ದೇವರ ಹಿಪ್ಪರಗಿ ತಾಲೂಕು- ಹರನಾಳ- 12.20 ಸೆಂ. ಮೀ ತಾಳಿಕೋಟೆ ತಾಲೂಕು- ಹಿರೂರ- 10.10 ಸೆಂ. ಮೀ. ಬಸವನ ಬಾಗೇವಾಡಿ ತಾಲೂಕು- ಕಣಕಾಲ- 9.95 ಸೆಂ. […]

ವಿಶ್ವಖ್ಯಾತಿಯ ಬಿಜೆಎಂ ನಿಯತಕಾಲಿಕೆ ಸಹಸಂಪಾದಕರಾಗಿ ಡಾ. ಅರುಣ ಚಂ. ಇನಾಮದಾರ ಆಯ್ಕೆ

ವಿಜಯಪುರ: ಜಗತ್ತಿನ‌ ಖ್ಯಾತ ಬ್ರಿಟಿಷ ವೈದ್ಯಕೀಯ ಪ್ರಕಾಶನ ಸಂಸ್ಥೆಯ ಬಿ ಎಂ ಜೆ ಕೇಸ್ ರಿಪೋರ್ಟ ವೈದ್ಯಕೀಯ ವಿಜ್ಞಾನ ಮಾಸಿಕ ನಿಯತಕಾಲಿಕೆಯ ಅಸೋಸಿಯೇಟದ ಎಡಿಟರ್ ಅಗಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಚಂ. ಇನಾಮದಾರ ಆಯ್ಕೆ ಆಗಿದ್ದಾರೆ. ಚರ್ಮರೋಗ ಖ್ಯಾತ ತಜ್ಞವೈದ್ಯ ಡಾ. ಅರುಣ ಚಂ. ಇನಾಮದಾರ  ಈ ಮೂಲಕ ವಿಶ್ವದ ಪ್ರತಿಷ್ಠಿತ ನಿಯತಕಾಲಿಕೆಯ ಅಸೋಸಿಯೇಟ್ ಎಡಿಟರ್ ಆಗಿ ಆಯ್ಜೆಯಾದ ಭಾರತದ ಮೊದಲ‌ ಚರ್ಮರೋಗ ತಜ್ಞ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇಂದಿನಿಂದ ಅಂದರೆ ಜೂನ್ […]