ಅಗಸನಹಳ್ಳಿಯಲ್ಲಿ ಗಮನ ಸೆಳೆದ ವಿಠ್ಠಲ- ರುಕ್ಮಿಣಿ ದೇವರ ಜಾತ್ರೆ

ವಿಜಯಪುರ: ಬಬಲೇಶ್ವರ ತಾಲೂಕಿನ ಕಾಖಂಡಕಿ ಪಕ್ಕದಲ್ಲಿರುವ ಅಗಸನಹಳ್ಳಿ ಗ್ರಾಮದಲ್ಲಿ ವಿಠ್ಠಲ- ರುಕ್ಮಿಣಿ ದೇವರ ಜಾತ್ರೆ ವಿಜೃಂಭಣೆಯಿಂದ ನೆರವೇರಿತು.  ಕಳೆದ ಮೂರು ದಿನಗಳಿಂದ ದೇವಾಲಯ ಆವರಣದಲ್ಲಿ ಕೀರ್ತನೆ ಭಜನೆ ದೇವರ ಧ್ಯಾನ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.  ಪಾಂಡುರಂಗನ ಪಲ್ಲಕ್ಕಿ ಉತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಹರಿ ಭಜನೆ ನಾನಾ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಯಿತು. ಜಿಲ್ಲೆಯಷ್ಟೇ ಅಲ್ಲ, ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಂತ ಮಂಡಳಿ ಸದಸ್ಯರು ಭಕ್ತಿಭಾವದ ಮತ್ತು ಗ್ರಾಮೀಣ ಸೊಗಡಿನ ಕಾರ್ಯಕ್ರಮವನ್ನು […]

ವಿಜಯಪುರ ನಗರದ ಪುರಾತನ ಸ್ವಯಂ ಶಿವಲಿಂಗ ದೇವಸ್ಥಾನಕ್ಕೆ ಯತ್ನಾಳ ಭೇಟಿ- ಉತ್ಖನನ ಮಾಡಿಸುವ ಭರವಸೆ

ವಿಜಯಪುರ: ನಗರದ ಹೋಟೆಲ್ ಆದಿಲ್‍ಶಾಹಿ ಹಿಂಭಾಗದಲ್ಲಿರುವ ಪುರಾತನ ಸ್ವಯಂ ಶಿವಲಿಂಗ ದೇವಸ್ಥಾನ ಕುರಿತು ಉತ್ಖನನ ಮಾಡಿಸಲಾಗುವುದು ಎಂದು ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಹೇಳಿದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಈ ಐತಿಹಾಸಿಕವಾದ ಸುಂದರ ದೇವಸ್ಥಾನದ ಪರಿಚಯ ಜನರಿಗೆ ಇರಲಿಲ್ಲ.  ಇನ್ನೂ ಮುಂದೆ ಇಲ್ಲಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು. ದೇವಸ್ಥಾನ ಕುರಿತಂತೆ ಮುಧೋಳದ ಸಂಶೋಧಕ ಡಾ. ಸಂಗಮೇಶ ಕಲ್ಯಾಣಿ ಅವರಿಂದ ಮಾಹಿತಿ ಪಡೆದ ಶಾಸಕರು, ನಂತರ ಭಾರತೀಯ […]

ಸರಕಾರಗಳು ಎಲ್ಲ ಪದವೀಧರ ಶಿಕ್ಷಕರಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು- ಆಶಾ ಎಂ. ಪಾಟೀಲ

ವಿಜಯಪುರ: ಸರಕಾರಗಳು ದೇಶದ ಭವಿಷ್ಯ ರೂಪಿಸುವ ಎಲ್ಲ ಪದವೀಧರ ಶಿಕ್ಷಕರಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಶಾ ಎಂ. ಪಾಟೀಲ ಹೇಳಿದ್ದಾರೆ. ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗ ಯಾವುದೇ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರನ್ನು ನೇಕವಾದಿ ನೇಮತ ಮಾಡಿಕೊಳ್ಳುವುದಿಲ್ಲ.  ಸರಕಾರ ಅನುಮತಿ ನೀಡಿದ ನಂತರ ಮಾರ್ಗಸೂಚಿಯಂತೆ ಎಲ್ಲ ಪ್ರಕ್ರಿಯೆ ನಡೆಯುತ್ತದೆ. ಖಾಸಗಿ […]

ಸೈನಿಕ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ- ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಚಾಲನೆ

ವಿಜಯಪುರ: ನಗರದಲ್ಲಿರುವ ರಾಜ್ಯದ ಪ್ರಥಮ ಸೈನಿಕ ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಅವರ ಪತ್ನಿ ಶ್ವೇತಾ ಎಂ. ದಾನಮ್ಮನವರ ಚಾನೆ ನೀಡಿದರು. ಇದಕ್ಕೂ ಮೊದಲು ಅಶ್ವಾರೂಡ ವಿದ್ಯಾರ್ಥಿಗಳು ಅತಿಥಿಗಳ:್ನು ಕ್ರೀಡಾಂಗಣಕ್ಕೆ ವೈಭವದ ಸ್ವಾಗತ ನೀಡಿ ಕರೆತಂದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿಳು ಕ್ರೀಡೆಗಳು ಮನಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕವಾಗುತ್ತವೆ.  ಎಲ್ಲ ವಿದ್ಯಾರ್ಥಿಗಳು ಈ ಕ್ರೀಡೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕುಯ ಈ ಕ್ರೀಡಾಕೂಟದಲ್ಲಿ ಎಲ್ಲರೂ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದು ಹೇಳಿದರು. […]

ಕಾಲಜ್ಞಾನದ ಹೇಳಿಕೆಗೆ ಹೆಸರಾದ ಕತ್ನಳ್ಳಿ ಸದಾಶಿವ ಜಾತ್ರೆಗೆ ಕ್ಷಣಗಣನೆ ಆರಂಭ- ಜ್ಞಾನ ದೀಪೋತ್ಸವ ಈ ಬಾರಿಯ ವಿಶೇಷ ಶ್ರೀ ಶಿವಯ್ಯ ಸ್ವಾಮೀಜಿ

ವಿಜಯಪುರ: ಚಹಾ ಮಾರುವವ ದೇಶದ ಪ್ರಧಾನಿಯಾಗುತ್ತಾನೆ.  ವೈದ್ಯರೂ ತಲೆಗೆ ಕೈ ಹಚ್ಚಿ ಕುಳಿತುಕೊಳ್ಳುವ ರೋಗ ಬಾಧಿಸುತ್ತೆ ಸೇರಿದಂತೆ ನಾನಾ ಭವಿಷ್ಯಗಳನ್ನು ಹೇಳುವ ಮೂಲಕ ಖ್ಯಾತವಾಗಿರುವ ಬಸವನಾಡು ವಿಜಯಪುರ ಜಿಲ್ಲೆಯ ಕತ್ನಳ್ಳಿ ಶ್ರೀ ಸದಾಶಿವ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ಶ್ರೀ ಶಿವಯ್ಯ ಸ್ವಾಮೀಜಿ, ಈ ಬಾರಿಯ ಜಾತ್ರೆಯ ವಿಶೇಷತೆಗಳನ್ನು ವಿವರವಾಗಿ ಮಾಹಿತಿ ನೀಡಿದ್ದಾರೆ. ಮಾ. 21 ರಿಂದ 25ರ ವರೆಗೆ ಜಾತ್ರೆ ನಡೆಯಲಿದೆ.  ಈ ಬಾರಿಯ ಜಾತ್ರೆಯಲ್ಲಿ ಜ್ಞಾನ ದೀಪೋತ್ಸವ […]

ಸೇವಾಲಾಲ, ಹಾಮುಲಾರರ ಆಶೀರ್ವಾದನ ನನ್ನ ಮೇಲಿದೆ- ಬಂಜಾರಾ ಉಡುಪು,, ಕಲೆ ಜಗತ್ತಿಗೆ ಪರಿಚಯಿಸಲು ಕ್ರಮ- ಎಂ. ಬಿ. ಪಾಟೀಲ

ವಿಜಯಪುರ: ಸೇವಾಲಾಲ್ ಮತ್ತು ಹಾಮುಲಾಲ್ ರ ಆಶೀರ್ವಾದ ನನ್ನ ಮೇಲಿದೆ.  ಬಂಜಾರಾ ಸಮುದಾಯದ ಉಡುಪು ಮತ್ತು ಅದನ್ನು ತಯಾರಿಸುವ ಕಲೆಯನ್ನು ಜಗತ್ತಿಗೆ ಪರಿಚಯಿಸಲು ಯೋಜನೆ ರೂಪಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ವಿಜಯಪುರ ನಗರದ ಸೋಲಾಪುರ ಬೈಪಾಸ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ಶ್ರೀ ಹಾಮುಲಾಲ್ ನೂತನ ದೇವಸ್ಥಾನ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಉದ್ಘಾಟನೆ ಬಳಿಕ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಂಜಾರಾ ಸಮುದಾಯದ ಜನ ಶ್ರಮ ಜೀವಿಗಳು.  […]

ಯುಗಾದಿ ದಿನ ಕಾಂಗ್ರೆಸ್ ಮೊದಲ ಪಟ್ಟಿ- ಸಿದ್ಧರಾಮಯ್ಯ ಪ್ರಚಾರದಿಂದ ಹೆಚ್ಚಿಗೆ ಲಾಭ- ರಾಹುಲ ಗಾಂಧಿ ಯುವಕರಿಗೆ ಸ್ಕೀಂ ಘೋಷಿಸಲಿದ್ದಾರೆ- ಎಂ. ಬಿ. ಪಾಟೀಲ

ವಿಜಯಪುರ: ಯುಗಾದಿಯಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಬಹುದು.  ಅಂದು ಬಹುಷಃ ನಾವು ಸಿಹಿ ಸುದ್ದಿ ಕೊಡುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.  ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮೊದಲ ಪಟ್ಟಿ ಯಾವಾಗ ಬಿಡುಗಡೆಯಾಗುಲಿದೆ ಎಂಬ ಪ್ರಶ್ನೆಗೆ ಯುಗಾದಿಯಂದು ಬಹುಷಃ ಸಿಹಿ ಸುದ್ದಿ ನೀಡುತ್ತೇವೆ ಎಂದು ಹೇಳುವ ಮೂಲಕ ಟಿಕೆಟ್ ಆಕಾಂಕ್ಷಿಗಳಲ್ಲಿ ಕುತೂಹಲ ಮತ್ತು ಆತಂಕ ಮೂಡಿಸಿದ್ದಾರೆ. ಮಾ. 20 ರಂದು ಬೆಳಗಾವಿಗೆ ರಾಹುಲ್ ಗಾಂಧಿ ಭೇಟಿ […]

ಬಿ ಎಲ್ ಡಿ ಇ ಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಿನಿ ಪ್ರೋಜೆಕ್ಟ್ ಪ್ರದರ್ಶನ

ವಿಜಯಪುರ: ಬಿ ಎnd ಡಿ ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗವು ನವದೆಹಲಿಯ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ (ISTE) ಸಹಯೋಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಮಿನಿ ಪ್ರೋಜೆಕ್ಟ್ ಪ್ರದರ್ಶನ ಆಯೋಜಿಸಿದ್ದರು. ಈ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ, ಉಪಪ್ರಾಚಾರ್ಯ ಡಾ. ಜಿ. ವಿ. ಪಾಟೀಲ, ವಿಭಾಗದ ಮುಖ್ಯಸ್ಥ ಡಾ. ಆರ್. ಎನ್. ಜೀರಗಾಳ ಉದ್ಘಾಟಿಸಿದರು. ಸುಮಾರು 17 ಗುಂಪುಗಳು ಭಾಗವಹಿಸಿ […]

ಆರೋಗ್ಯ ಸೌಧ ಕಾಮಗಾರಿ ಪರಿಶೀಲನೆ ನಡೆಸಿದ ಜಿ. ಪಂ. ಸಿಇಓ ರಾಹುಲ್ ಶಿಂಧೆ

ವಿಜಯಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಗೆ ಭೇಟಿ ನೀಡಿ, ಕಾರ್ಯಾಲಯದ ಆವರಣದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಆರೋಗ್ಯ ಸೌಧ ಕಾಮಗಾರಿಯನ್ನು ವೀಕ್ಷಿಸಿದರು. ಹಳೆಯ ಕಟ್ಟಡ ನಿಯಮಾನುಸಾರ ನೆಲಸಮಗೊಳಿಸಬೇಕು.  ಕಚೇರಿ ಆವರಣ, ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.  ರೆಡಸ್ ರಕ್ತನಿಧಿ ಕೇಂದ್ರದಲ್ಲಿ 1000 ರಕ್ತದ ಯುನಿಟ್ ಗಳ ಸಂಗ್ರಹಣೆಯ ಸಾಮಥ್ರ್ಯವಿದ್ದು, ಈಗ 80 ರಿಂದ 100 ರಕ್ತದ ಯುನಿಟ್ ಗಳನ್ನು ಮಾತ್ರ ಪ್ರತಿ […]

ನೆರೆ ರಾಜ್ಯದ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಅಂತಾರಾಜ್ಯ ಚುನಾವಣೆ ಅಕ್ರಮಕ್ಕೆ ಕಡಿವಾಣ- ಡಾ. ದಾನಮ್ಮನವರ

ವಿಜಯಪುರ: ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಗಡಿ ಭಾಗದ ವಿಜಯಪುರ ಜಿಲ್ಲೆಯಲ್ಲಿ ್ಲ ಅಂತಾರಾಜ್ಯ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಅಧಿಕಾರಿಗಳಿಗೆ ಅಧಿಕಾರವಿದ್ದು, ನೆರೆ ರಾಜ್ಯದ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಅಕ್ರಮ ತಡೆಗಟ್ಟುವಂತೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದ್ದಾರೆ.  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಂಬರುವ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗಡಿ ಜಿಲ್ಲೆಗಳಾದ ಸಾಂಗಲಿ ಹಾಗೂ ಸೋಲಾಪೂರ ಜಿಲ್ಲೆಗಳ ಕಂದಾಯ, ಜಿ ಎಸ್ ಟಿ, ಅಬಕಾರಿ, ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಅಂತಾರಾಜ್ಯ […]