ನಾರದರು ಬುದ್ದಿವಾದದ ಮೂಲಕ ಲೋಕೋದ್ದಾರ ಮಾಡಿದ ಮಹಾನ್ ದೇವ- ಡಾ. ಸಂಜೀವ ಜೋಶಿ

ವಿಜಯಪುರ:  ನಾರದ ಮುನಿಗಳು ಬುದ್ದಿವಾದದ ಮೂಲಕ ಲೋಕಾದ್ಧಾರ ಮಾಡಿದ ಮಹಾನ್ ದೇವ ಎಂದು ಡಾ. ಆಯುರ್ವೇದ ವೈದ್ಯ ಡಾ. ಸಂಜೀವ ಜೋಶಿ ಹೇಳಿದ್ದಾರೆ. ಮಂಥನ ವಿಜಯಪುರ ಚಿಂತಕರ ಚಾವಡಿ ಆದ್ಯ ಪತ್ರಕರ್ತ ದೇವಋಷಿ ನಾರದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾರದ ಮುನಿಗಳು ಧೃವ ಒಂದು ತಾರೆಯಾಗಲು, ಪ್ರಹ್ಲಾದ ಭಕ್ತ ಪ್ರಹ್ಲಾದನಾಗಲು ಪ್ರೇರಣೆಯಾಗಿದ್ದಾರೆ.  ಅಷ್ಟೇ ಅಲ್ಲ, ಅನೇಕರ ಬದುಕನ್ನೇ ಉದ್ಧಾರ ಮಾಡಿದ್ದಾರೆ.  ನಾರದ ಮುನಿ ಎಂದರೆ ಈ ವಿಷಯ ಅಲ್ಲಿಗೆ, ಅಲ್ಲಿನ ವಿಷಯ ಇಲ್ಲಿಗೆ ಹೇಳುತ್ತಾರೆ ಎಂಬುದು […]

ಧರ್ಮಸ್ಥಳಕ್ಕೆ ಸಿಎಂ, ಡಿಸಿಎಂ‌ ಭೇಟಿ- ಮಂಜುನಾಥನ ದರ್ಶನ‌ ಪಡೆದ ಸಿದ್ಧರಾಮಯ್ಯ, ಶಿವಕುಮಾರ

ಮಂಗಳೂರು: ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕ. ಶಿವಕುಮಾರ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥೇಶ್ವರನ ದರ್ಶನ ಪಡೆದರು.   ಅಲ್ಲದೇ, ವಿಶೇಷ ಪೂಜೆ ಸಲ್ಲಿಸಿದ ಮುಖಂಡರು ದೇವರ ಸನ್ನಿಧಿಯಲ್ಲಿ ಪ್ರಸಾದ ಸ್ವೀಕರಿಸಿದರು. ನಂತರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಸಿಎಂ, ಡಿಸುಎಂ ಮತ್ತು ಸಚಿವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಎಚ್. ಸಿ. ಮಹದೇವಪ್ಪ, ಬೈರತಿ ಸುರೇಶ, ಕೆ. ವೆಂಕಟೇಶ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, […]

ಬಸ್ ಪಾಸ್, ಮಾಶಾಸನ ಸೇರಿ ನಾನಾ ಬೇಡಿಕೆ ಕುರಿತು ವಾರ್ತಾ ಇಲಾಖೆ ಆಯುಕ್ತರ ಭೇಟಿ ಮಾಡಿದ ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ನೇತೃತ್ವದ ನಿಯೋಗ

ಬೆಂಗಳೂರು:ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯೂಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗವು, ವಾರ್ತಾ ಇಲಾಖೆಯ ಆಯುಕ್ತ ಸೂರಳ್‌ಕರ್ ವಿಕಾಸ್ ಕಿಶೋರ್ ಅವರನ್ನು ಭೇಟಿ ಮಾಡಿ ಪತ್ರಕರ್ತರ ಸಮಸ್ಯೆ ಮತ್ತು ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿತು. ನಿವೃತ್ತರಾಗಿರುವ ಹಿರಿಯ ಪತ್ರಕರ್ತರುಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು ಬರಬೇಕಾಗಿರುವ ಮಾಸಾಶನ ಹಣ 2-3 ತಿಂಗಳಾದರೂ ಬರುತ್ತಿಲ್ಲ. ಇದರಿಂದಾಗಿ ಅನೇಕರಿಗೆ ಜೀವನ ನಿರ್ವಹಣೆ ಮಾಡಲು ಔಷಧಿ ಖರೀದಿಸಲು ಹಣವಿಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ. ಆದ್ದರಿಂದ ಕೂಡಲೇ ಈ ಬಗ್ಗೆ ಆಗಿರುವ […]

ಬೆಳೆಹಾನಿ ಪರಿಹಾರ: ರಾಜ್ಯದಲ್ಲಿ ವಿಜಯಪುರ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ರೈತರ ಖಾತೆಗೆ ಜಮೆ

ವಿಜಯಪುರ: 2023ನೇ ವರ್ಷದ ಮುಂಗಾರು ಬೆಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರಧನ ವಿಚಾರದಲ್ಲಿ ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ರೈತರ ಖಾತೆಗೆ ಜಮೆಯಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, 2023ನೇ ಸಾಲಿನ ಮುಂಗಾರು ಬೆಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರಧನವು ರಾಜ್ಯದಲ್ಲಿಯೇ ವಿಜಯಪುರ ಜಿಲ್ಲೆಗೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಒಟ್ಟು ರೂ. 413.48.76 ಕೋ. ಗಣ ಜಿಲ್ಲೆಯ ಒಟ್ಟು 2 ಲಕ್ಷ 50 ಸಾವಿರದ 63 […]

ವಿಜಯಪುರ ನಗರದ ಪ್ರತಿಷ್ಠಿತ ಹೋಟೇಲುಗಳಿಗೆ ದಿಡೀರ್ ಭೇಟಿ ನೀಡಿದ ಎಸಿ ಶ್ವೇತಾ ಮೋಹನ ಬೀಡಿಕರ- ಯಾಕೆ ಗೊತ್ತಾ?

ವಿಜಯಪುರ: ಉಪವಿಭಾಗಾಧಿಕಾರಿ ಶ್ವೇತಾ ಮೋಹನ ಬಿಡಿಕರ ನಗರದ ನಾನಾ ಹೋಟೇಲುಗಳಿಗೆ ದಿಢೀರ್ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ಸ್ವಚ್ಛ ಗ್ರೀನ್ ಲೀಫ್ ರೇಟಿಂಗ್ ಇನ್ ಹಾಸ್ಪಿಟ್ಯಾಲಿಟಿ ಫೆಸಿಲಿಟೀಸ್(Swachchta Green Leaf Rating in Hospitality facilities) ಗೆ ಸಂಬಂಧಿಸಿದಂತೆ ರೇಟಿಂಗ್ ನೀಡುವ ಸಂಬಂಧ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಪ್ರವಾಸೋದ್ಯಮ ತಾಣದ ಸುತ್ತಮುತ್ತಲಿರುವ ಹೋಟೆಲ್ ಗಳಾದ ಕೆರೈಡ್ ಹೋಟೆಲ್, ಹೊಟೇಲ್ ಮಧುವನ ಇಂಟರನ್ಯಾಷನಲ್, ದಿ ಗ್ರಾಂಡ್ ಪರ್ಲ್ ಹೋಟೆಲ್, ಸ್ಪೂರ್ತಿ ರೆಸಾರ್ಟ್, ದಿ […]

ಭೂತನಾಳ ಕೆರೆ ಸುತ್ತಮುತ್ತ 900 ಎತ್ತರ ಸಸಿ ನೆಡುವ ಯೋಜನೆಗೆ ಡಿಸಿ ಟಿ. ಭೂಬಾಲನ್ ಚಾಲನೆ

ವಿಜಯಪುರ: ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆ ಸುತ್ತಮುತ್ತ ಮತ್ತು ಬಿಡಿಎ ಗಾರ್ಡನ್ ನ ಮೂರು ಎಕರೆ ಪ್ರದೇಶದಲ್ಲಿ 900 ಎತ್ತರದ ಸಸಿಗಳನ್ನು ನೆಡುವ ಯೋಜನೆಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಚಾಲನೆ ನೀಡಿದರು. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಡಿಸ್ಟ್ರಿಕ್ಟ್ ಮೀನಿರಲ್ ಫಂಡ್(DMF) ಯೋಜನೆಡಿ ಎತ್ತರದ ಸಸಿ ನೆಡಲಾಗುತ್ತಿದೆ. ಈ ಸಂದರ್ಭದಲ್ಲಿ ಡಿಎಫ್ಒ ಶಿವಶರಣ ಹಿರೇಮಠ ಸೇರಿದಂತೆ ಅರಣ್ಯ ಇಲಾಖೆಯ ನಾನಾ ಅಧಿಕಾರಿಗಳು ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

ಪುರಾಣ ಪ್ರವಚನ ಕೇಳುವುದರಿಂದ ಮನಸು ಹಸನಾಗುತ್ತದೆ- ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ

ವಿಜಯಪುರ: ಪುರಾಣ ಪ್ರವಚನ ಕೇಳುವುದರಿಂದ ಮನಸು ಹಸನಾಗುತ್ತದೆ ಎಂದು ಮನಗೂಳಿ ಸಂಸ್ಥಾನ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯರು  ಹೇಳಿದ್ದಾರೆ. ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಸಂಸ್ಥಾನ ಹಿರೇಮಠದ ಆವರಣದಲ್ಲಿ ನಡೆದ ಲಿಂಗೈಕ್ಯ ಶತಾಯುಷಿ ಶ್ರೀ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ.41 ಪುಣ್ಯಸ್ಮರಣೋತ್ಸವ ಮತ್ತು ಜಗದ್ಗುರು ಡಾ. ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಪುರಾಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಅ;ರು ಮಾತನಾಡಿದರು. ಪುರಾಣ ಪ್ರವಚನ ಕೇಳುವುದರಿಂದ ಮನುಷ್ಯನಿಗೆ ಸಂಸ್ಕಾರ ತಿಳಿಯುತ್ತದೆ.  ಸಂಸಾರದ […]

ಸಿಎಂ ಎಸ್. ಸಿದ್ಧರಾಮಯ್ಯ ಎಲ್ಲ ಡಿಸಿ, ಜಿ. ಪಂ. ಸಿಇಓಗಳ ಜೊತೆ ವಿಡಿಯೋ ಸಂವಾದ- ಮುಂಗಾರು, ಕೃಷಿ ಚಟುವಟಿಕೆಗಳ ಕುರಿತು ಚರ್ಚೆ, ಸೂಚನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರ ಹಾಗೂ ಮುಂಗಾರು ಕೃಷಿ ಚಟುವಟಿಕೆ ಕುರಿತು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚುನಾವಣೆ ನೀತಿ ಸಂಹಿತೆ ಸಮಯ ಈ ಬಾರಿ ದೀರ್ಘವಾಗಿತ್ತು. ಇದರಿಂದ ಆಡಳಿತ ಯಂತ್ರ ಸ್ಥಗಿತವಾದಂತೆ ಆಗಿತ್ತು.  ಅಭಿವೃದ್ಧಿ ಕೆಲಸಗಳಿಗೆ ಗಮನ ಹರಿಸಲು ಅಧಿಕಾರಿಗಳಿಂದ ಸಾಧ್ಯ ಆಗಿರಲಿಲ್ಲ.  ನಮ್ಮ ಮನವಿ ಮೇರೆಗೆ ಚುನಾವಣಾ ಆಯೋಗ ನೀತಿ ಸಂಹಿತೆ ಸಡಿಲಿಸಿದೆ.  ಈಗ ಮಳೆ ವಾಡಿಕೆಗಿಂತ ಅಧಿಕವಾಗಿದೆ.  ಕೃಷಿ ಚಟುವಟಿಕೆ ಆರಂಭವಾಗಿದೆ. ಚುನಾವಣಾ […]

ಭೂಮಿ, ಆನಲೈನ್ ವಂಚನೆ, ಸುಲಿಗೆ ಸೇರಿ ನಾನಾ ಪ್ರಕರಣ ಬೇಧಿಸಿದ ಬಸವನಾಡಿನ ಪೊಲೀಸರು

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ನಾನಾ ಠಾಣೆಗಳ ಪೊಲೀಸರು ಜಿಲ್ಲೆಯಲ್ಲಿ ದಾಖಲಾಗಿದ್ದ ಭೂ ಹಗರಣ, ಆನಲೈನ್ ವಂಚನೆ ಹಾಗೂ ದರೋಡೆ ಸೇರಿದಂತೆ ನಾನಾ ಪ್ರಕರಣಗಳನ್ನು ಭೇದಿಸುವ ಮೂಲಕ ಗಮನ ಸೆಳೆದಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಋಷಿಕೇಶ ಸೋನಾವಣೆ, ಮೊದಲ ಪ್ರಕರಣದಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ವಂಚಿಸಿ ಭೂ ಹಗರಣ ಮಾಡುತ್ತಿದವರನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಬಳಿ ಬಾಬಾನಗರ ಗ್ರಾಮದ ನಿವಾಸಿ ಸಾಹೇಬಗೌಡ ಮಲ್ಲನಗೌಡ […]

ಹಜ್ ಯಾತ್ರಿಗಳನ್ನು ಬೀಳ್ಕೊಟ್ಟ ಸಿಎಂ- ಎಲ್ಲ ಧರ್ಮದವರೂ ಒಂದು ತಾಯಿಯ ಮಕ್ಕಳಂತಿರಬೇಕು- ಎಸ್. ಸಿದ್ಧರಾಮಯ್ಯ

ಬೆಂಗಳೂರು: ಎಲ್ಲ ಧರ್ಮದವರೂ ಒಂದು ತಾಯಿಯ ಮಕ್ಕಳಂತೆ ಇರಲು ಎಲ್ಲ ಧರ್ಮದವರಲ್ಲೂ ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ತುಂಬಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ಹೆಗಡೆ ನಗರದಲ್ಲಿರುವ ಹಜ್ ಭವನ್ ದಲ್ಲಿ ಆಯೋಜಿಸಲಾಗಿದ್ದ ಹಜ್ ಯಾತ್ರಾರ್ಥಿ ಗಳಿಗೆ ಬೀಳ್ಕೊಡುಗೆ ಸಮಾರಂಭ ದಲ್ಲಿ ಭಾಗವಹಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. 10168 ಹಜ್ ಯಾತ್ರಿಗಳ ಪ್ರಯಾಣ ಸುಖಕರವಾಗಿರಲಿ ಎಂದು ಶುಭ ಕೋರಿದ್ದೇನೆ. ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ನೆಲಸಲಿ ಎಂದು ಪ್ರಾರ್ಥಿಸುವಂತೆ ತಿಳಿಸಿದ್ದೇನೆ. ಕುವೆಂಪು ಅವರು ಸರ್ವ […]