ಬಸವನಾಡಿನಲ್ಲಿ ಶೇ. 66.66 ರಷ್ಟು ಮತದಾನ- ವಿಧಾನಸಭೆ ಕ್ಷೇತ್ರವಾರು ಬಬಲೇಶ್ವರದಲ್ಲಿ ಅತೀ ಹೆಚ್ಚು, ದೇವರ ಹಿಪ್ಪರಗಿಯಲ್ಲಿ ಅತೀ ಕಡಿಮೆ- ಉಳಿದೆಡೆ ಎಷ್ಟು ಗೊತ್ತಾ?

ವಿಜಯಪುರ: ಜಿಲ್ಲೆಯಲ್ಲಿ ನಡೆದ ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆ ನಿನ್ನೆ ಮಂಗಳವಾರವೇ ಪೂರ್ಣಗೊಂಡಿದ್ದು, ಇಂದು ಬುಧವಾರ ಜಿಲ್ಲಾಡಳಿತ ಶೇಕಡವಾರು ಮತದಾನದ ಮಾಹಿತಿಯನ್ನು ಪ್ರಕಟಿಸಿದೆ. ಜಿಲ್ಲೆಯಲ್ಲಿ ಶೇ. 66.33ರಷ್ಟು ಮತದಾನವಾಗಿದ್ದು, ಅಂಚೆ ಮತಗಳು ಸೇರಿ‌ ಒಟ್ಟು 66.66ರಷ್ಟು‌ ಮತದಾನ ದಾಖಲಾಗಿದೆ. ಬಬಲೇಶ್ವರ ಮತಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ ಶೇ. 71.32 ಮತ್ತು ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಅತೀ ಕಡಿಮೆ ಶೇ. 61.95 ರಷ್ಟು ಮತದಾನವಾಗಿದೆ. ಒಟ್ಟು ಮತದಾರರು- 1946090 ಒಟ್ಟು ಮತದಾನ ಮಾಡಿದವರು- 1290719 ಒಟ್ಟು ಪುರುಷ ಮತದಾರರು […]

ಶಾಸಕ ಸುನೀಲಗೌಡ ಪಾಟೀಲ ಮತದಾನ- ಪ್ರೊ. ರಾಜು ಆಲಗೂರ ಗೆಲುವ ಖಚಿತ ಎಂದ ಎಂಎಲ್‌ಸಿ

ವಿಜಯಪುರ: ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರು ಇಂದು ಮಂಗಳವಾರ ನಗರದಲ್ಲಿ ಮತದಾನ ಮಾಡಿದರು. ನಗರದ ಮದ್ದಿನ ಖಣಿಯಲ್ಲಿರುವ ಸಮನ್ವಯ ಇಂಗ್ಲಿಷ್ ಮೀಡಿಯಮ್ ಪ್ರೈಮರಿ ಬಿ ಸ್ಕೂಲ್ ನಲ್ಲಿರುವ ಮತಗಟ್ಟೆ ಸಂಖ್ಯೆ 46ಕ್ಕೆ ತೆರಳಿ ಅವರು ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಬದಲಾವಣೆ ಖಚಿತ, ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಗೆಲುವು ಖಚಿತ ಎಂದು ಹೇಳಿದರು. ಈ ಬಾರಿ ಜಿಲ್ಲೆಯಲ್ಲಿ ಜನ ಬದಲಾವಣೆ ಬಯಸಿದ್ದಾರೆ.  ಪ್ರೊ. ರಾಜು ಆಲಗೂರ ಗೆಲುವು ಸಾಧಿಸಿ ಸಂಸತ್ತಿನಲ್ಲಿ […]

ಅರುಣ ಶಹಾಪುರ ಮತದಾನ- ಬಿಜೆಪಿ ಕ್ಷೇತ್ರ ಉಳಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಶಾಸಕ

ವಿಜಯಪುರ: ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ ನಗರದಲ್ಲಿ ಮತದಾನ ಮಾಡಿದ್ದಾರೆ. ನಗರದ ಕೌಜಲಗಿ ತಾಂಡಾದಲ್ಲಿರುವ ಮತಗಟ್ಟೆ ಸಂಖ್ಯೆ 160ಕ್ಕೆ ತಮ್ಮ ಪತ್ನಿ ದೀಪಾ ಅವರ ಜೊತೆ ಆಗಮಿಸಿದ ಅವರು ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಈ ಬಾರಿಯೂ ಸಂಸದ ರಮೇಶ ಜಿಗಜಿಣಗಿ ಪುನರಾಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಪ್ರಕಾಶ ರಾಠೋಡ ಮತದಾನ- ಪ್ರೊ. ರಾಜು ಆಲಗೂರ ಗೆಲುವ ಸಾಧಿಸಲಿದ್ದಾರೆ ಎಂದ ಎಂಎಲ್ಸಿ

ವಿಜಯಪುರ: ವಿಧಾನ ಪರಿಷತ ಶಾಸಕ ಪ್ರಕಾಶ ರಾಠೋಡ ಮತದಾನ ಮಾಡಿದ್ದಾರೆ ನಗರದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಮತ್ತು ಗಂಡು ಮಕ್ಕಳ ಮರಾಠ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಅವರ ಮತದಾನ ಮಾಡಿದರು.  ಅವರ ಪತ್ನಿ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ಬಿ. ಎಲ್. ಸುಜಾತಾ ಜೊತೆಗೆ ಮತಗಟ್ಟೆಗೆ ಆಗಮಿಸಿ ಅವರು ತಮ್ಮ ಹಕ್ಕು ಚಲಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ ರಾಠೋಡ, ಈ ಬಾರಿ ಪ್ರೊ. ರಾಜು ಆಲಗೂರ ಗೆಲುವು ಸಾಧಿಸಲಿದ್ದಾರೆ ಎಂದು […]

ಅಪ್ಪು ಪಟ್ಟಣಶೆಟ್ಟಿ ಮತದಾನ- ಸಂಸದ ರಮೇಶ ಜಿಗಜಿಣಗಿ ಗೆಲುವು ಖಚಿತ ಎಂದ ಮಾಜಿ ಸಚಿವ

ವಿಜಯಪುರ: ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತದಾನ ಮಾಡಿದ್ದಾರೆ. ಅಪ್ಪು ಪಟ್ಟಣಶೆಟ್ಟಿ ತಮ್ಮ ಪತ್ನಿ ಮಧು ಮತ್ತು ಮಗಳು ಲಕ್ಷ್ಮಿ ಜೊತೆ ವಿಜಯಪುರ ನಗರದ ಇಬ್ರಾಹಿಂ ರೋಜಾ ರಸ್ತೆಯಲ್ಲಿರುವ ಉರ್ದು ಶಾಲೆಗೆ ತೆರಳಿ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಪ್ಪು ಪಟ್ಟಣಶೆಟ್ಟಿ ಸಂಸದ ರಮೇಶ ಜಿಗಜಿಣಗಿ ಮರು ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಕಕ್ತಪಡಿಸಿದರು.

ಸಚಿವ ಎಂ. ಬಿ. ಪಾಟೀಲರಿಂದ ವಿಜಯಪುರದಲ್ಲಿ ಮತದಾನ- ಪ್ರೊ. ರಾಜು ಆಲಗೂರ ಒಂದು ಲಕ್ಷ ಮತಗಳಿಂದ ಗೆಲ್ಲುತ್ತಾರೆ ಎಂದ ಎಂಬಿಪಿ

ವಿಜಯಪುರ: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ನಗರದ ಮದ್ದಿನ ಖಣಿಯಲ್ಲಿರುವ ಸಮನ್ವಯ ಇಂಗ್ಲಿಷ್ ಮೀಡಿಯಂ ಪ್ರೈಮರಿ ಬಿ ಸ್ಕೂಲ್ ನಲ್ಲಿರುವ ಮತಗಟ್ಟೆ ಸಂಖ್ಯೆ 46ರಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ನಾನು ಮುಂಚೆಯಿಂದಲೂ ಅಕ್ಕಮಹಾದೇವಿ ರಸ್ತೆಯಲ್ಲಿರುವ […]

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತದಾನ- ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ- ಎಸ್ ಐಟಿ ಸಂಪೂರ್ಣ ಡಿಕೆಶಿ ಏಜೆಂಟ್ ಆಗಿದೆ- ಪ್ರಜ್ವಲ ರೇವಣ್ಣ ಕೇಸ್ ಸಿಬಿಐಗೆ ವಹಿಸಲು ಆಗ್ರಹ

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ನಗರದಲ್ಲಿ ಮತದಾನ ಮಾಡಿದ್ದಾರೆ. ನಗರದ ಎಸ್. ಎಸ್. ಹೈಸ್ಕೂಲಿನಲ್ಲಿರುವ ಮತಗಟ್ಟೆ ಸಂಖ್ಯೆ 70ರಲ್ಲಿ ಶಾಸಕರು ತಮ್ಮ ಹಕ್ಕು ಚಲಾಯಿಸಿದರು.  ಪತ್ನಿ ಶೈಲಜಾ ಮತ್ತು ಪುತ್ರ ರಾಮನಗೌಡ ಜೊತೆ ಮತಗಟ್ಟೆಗೆ ಆಗಮಿಸಿ ಅವರು ಮತದಾನ ಮಾಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಸ್ ಐ ಟಿ ಸಂಪೂರ್ಣವಾಗಿ ಡಿಸಿಎಂ ಡಿ. ಕೆ. ಶಿವಕುಮಾರ ಏಜೆಂಟರಂತೆ ಕೆಲಸ ಮಾಡುತ್ತಿದ್ದು, ಪ್ರಜ್ವಲ ರೇವಣ್ಣ ಕೇಸನ್ನು ಸಿಬಿಐ ಗೆ ವಹಿಸಬೇಕು ಎಂದು ಆಗ್ರಹಿಸಿದರು. ಪ್ರಜ್ವಲ […]

ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮತದಾನ- ಗೆಲುವು ನನ್ನದೇ ಎಂದ ಮಾಜಿ ಶಾಸಕ

ವಿಜಯಪುರ: ಕಾಂಗ್ರೆಸ್ ಅಭ್ಯರ್ಥಿ‌ ಪ್ರೊ. ರಾಜು ಆಲಗೂರ ತಮ್ಮ ಸ್ವಗ್ರಾಮ ತೊರವಿಯಲ್ಲಿ ಮತದಾನ ಮಾಡಿದರು. ತೊರವಿಯ ಸರಕಾರಿ ಕನ್ನಡ ಹಿರಿಯ ಬಾಲಕಿಯರ ಶಾಲೆಯ ಮತಗಟ್ಟೆ ಸಂಖ್ಯೆ-97ಕ್ಕೆ ಆಗಮಿಸಿದ ಅವರು ಮತದಾನ ಮಾಡಿದರು.  ಈ ಸಂದರ್ಭದಲ್ಲಿ ಅವರ ಮಗಳು ಭವಾನಿ ಕೂಡ ಮತದಾನ ಮಾಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗೆಲುವು ನಿಶ್ಚಿತ.  ವಿಜಯಪುರದ ಬದಲಾವಣೆಗಾಗಿ ಜನರೇ ಮನಸ್ಸು ಮಾಡಿದ್ದಾರೆ. ವಿಜಯಪುರ ಸೇರಿದಂತೆ ರಾಜ್ಯದಲ್ಲಿ 18ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರೊ. […]

ಸಂಸದ ರಮೇಶ ಜಿಗಜಿಣಗಿ ಮತದಾನ- ಬಿಜೆಪಿಗೆ ಒನಸೈಡ್ ಮತ ಬೀಳಲಿವೆ ಎಂದ ಬಿಜೆಪಿ ಅಭ್ಯರ್ಥಿ

ವಿಜಯಪುರ: ಸಂಸದ ರಮೇಶ ಜಿಗಜಿಣಗಿ ವಿಜಯಪುರ ನಗರ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ಭೂತನಾಳ ತಾಂಡಾದಲ್ಲಿ ಮತದಾನ ಮಾಡಿದರು. ಭೂತನಾಳ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ 14ಕ್ಕೆ ಕುಟುಂಬ ಸಮೇತ ಆಗಮಿಸಿದ ಸಂಸದರು ತಮ್ಮ ಹಕ್ಕು ಚಲಾಯಿಸಿದರು.  ಈ ಸಂದರ್ಭದಲ್ಲಿ ಅವರ ಪುತ್ರರಾದ ಆನಂದ, ವಿನೋದ ಮತ್ತು ಸೊಸೆಯಂದಿರಾದ ರೇಷ್ಮಾ, ಗೀತಾ ಹಾಗೂ ಮೊಮ್ಮಗಳು ಸ್ನೇಹಾ ಜೊತೆ ಆಗಮಿಸಿ ಮತ ಚಲಾಯಿಸಿದರು. ಸಂಸದರ ಮೊಮ್ಮಗಳು ಸ್ನೇಹಾ ಇದೇ ಮೊದಲ ಬಾರಿಗೆ ಮತಹಾಕಿ ಖುಷಿಪಟ್ಟರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ […]

ಮೇ 7 ರಂದು ಮತದಾನಕ್ಕೆ ಸಕಲ ಸಿದ್ಧತೆ- ಚುನಾವಣೆ ಸಾಮಗ್ರಿಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದ ಕರ್ತವ್ಯನಿರತ ಸಿಬ್ಬಂದಿ

ವಿಜಯಪುರ: ಲೋಕಸಭೆ ಚುನಾವಣೆಗೆ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು, ಮೇ 7ರಂದು ನಡೆಯಲಿರುವ ಮತದಾನಕ್ಕೆ ನಿಯೋಜಿತ ಸಿಬ್ಬಂದಿ ಚುನಾವಣೆಗೆ ಸಂಬಂಧಿತ ಸಲಕರಣೆಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದರು. ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ ವಿಜಯಪುರ ನಗರ ಮತ್ತು ನಾಗಠಾಣ ಮತಕ್ಷೇತ್ರಗಳಿಗೆ ಸಂಬಂಧಿತ ವಿದ್ಯುನ್ಮಾನ ಮತಯಂತ್ರಗಳನ್ನು ವಿತರಿಸಲಾಗುತ್ತಿದೆ. ಮುದ್ದೇಬಿಹಾಳ, ಬಸವನ ಬಾಗೇವಾಡಿ, ಬಬಲೇಶ್ವರ, ಇಂಡಿ, ಸಿಂದಗಿ ಮತ್ತು ದೇವರ ಹಿಪ್ಪರಗಿಯಲ್ಲಿ ಆಯಾ ಮತಕ್ಷೇತ್ರಗಳ ಮತದಾನಕ್ಕೆ ಸಂಬಂಧಿಸಿದ ವಿದ್ಯುನ್ಮಾನ ಮತಯಂತ್ರಗಳು, ಮತದಾರರ ಪಟ್ಟಿಗೆ, ಶಾಹಿ ಮತ್ತೀತರ ಸಲಕರಣೆಗಳನ್ನು ವಿತರಿಸಲಾಯಿತು. […]