ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ವಿಜಯಪುರ ಜಿಲ್ಲಾಡಳಿತ ಸನ್ನದ್ಧ: ಮೇ 7 ರಂದು ಮತದಾನ. 1946090 ಮತದಾರರು, 2086 ಮತಗಟ್ಟೆಗಳ ಸ್ಥಾಪನೆ

ವಿಜಯಪುರ: ಮುಕ್ತ ನ್ಯಾಯಸಮ್ಮತ ಹಾಗೂ ಸುಗಮ ಚುನಾವಣೆಗೆ ಜಿಲ್ಲಾಡಳಿತದಿಂದ, ಮೇ.07ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ನಡೆಯಲಿರುವ ಮತದಾನಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19,46,090 ಮತದಾರರಿದ್ದು, ಜಿಲ್ಲೆಯಾದ್ಯಂತ ಒಟ್ಟು 2086 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಇದೇ ಮೇ 7 ರಂದು ನಡೆಯುವ ಮತದಾನ ಹಾಗೂ ಜೂನ್. 4 ರಂದು ನಡೆಯುವ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು […]

ಪ್ರತಿ ಬೂತ್ ನಲ್ಲಿ ಬಿಜೆಪಿ ಪರ ಅಲೆ, ಕಾರ್ಯಕರ್ತರಲ್ಲಿ ಅತ್ಯುತ್ಸಾಹ : ಪ್ರಕಾಶ ಅಕ್ಕಲಕೋಟ

ವಿಜಯಪುರ: ವಿಜಯಪುರ ಲೋಕಸಭೆ ಕ್ಷೇತ್ರದ ಪ್ರತಿಯೊಂದು ಬೂತ್ ಗಳಲ್ಲಿ ಬಿಜೆಪಿ‌ ಪರ ಉತ್ತಮ ವಾತಾವರಣ ಸೃಷ್ಟಿಯಾಗಿದ್ದು, ಬಿಜೆಪಿ ಪರ‌ ಅಲೆ‌ ಇದೆ ಎಂದು ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಪ್ರಕಾಶ ಅಕ್ಕಲಕೋಟ ವಿಶ್ವಾಸ ವ್ಯಕ್ತಪಡಿಸಿದ್ದಾರೆ.   ಬಿಜೆಪಿ‌‌ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ವಿಜಯಪುರ ನಗರದ ಡೋಹರ ಗಲ್ಲಿ‌ ಹಾಗೂ ಅಗಸರ ಗಲ್ಲಿಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರತಿ ಮನೆಮನೆಗೆ ತೆರಳಿ ಕರಪತ್ರ ಹಂಚಿ ಅವರು ಬಿಜೆಪಿ ಪರ ಮತಯಾಚಿಸಿದರು.  ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ಬಿಜೆಪಿ ಕಾರ್ಯಕರ್ತರು ಅತ್ಯುತ್ಸಾಹದಲ್ಲಿ […]

ಯಾರಿಗಾದರೂ ತೊಂದರೆ ಕೊಟ್ಟಿದ್ದನ್ನು ಸಾಬೀತು ಮಾಡಿದರೆ ಚುನಾವಣೆ ಕಣದಿಂದ ನಿವೃತ್ತಿ- ಸಂಸದರಿಗೆ ಪ್ರೊ. ರಾಜು ಆಲಗೂರ ಸವಾಲು

ವಿಜಯಪುರ: ಪ್ರೊ. ರಾಜು ಆಲಗೂರ ವಿಜೇತರಾದರೆ ಲಿಂಗಾಯಿತ ಸಮುದಾಯಕ್ಕೆ ತೊಂದರೆಯಾಗಲಿದೆ ಎಂದು ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನೀಡಿರುವ ಹೇಳಿಕೆಗೆ  ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೇಳಿಕೆ ಮೂಲಕ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಕೀಳು ಮಟ್ಟದ ರಾಜಕಾರಣ ಆರಂಭಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ಈವರೆಗೂ ಯಾರಿಗೂ ಏಕವಚನದಲ್ಲಿ ಮಾತನಾಡಿಲ್ಲ.ನಾನು ಲಿಂಗಾಯಿತ ಸಮುದಾಯದ ಜೊತೆಗೆ ಅನುಚಿತವಾಗಿ ನಡೆದುಕೊಂಡಿದ್ದನ್ನು ಬಿಜೆಪಿ ಅಭ್ಯರ್ಥಿ ರುಜುವಾತು […]

ಗರ್ಭವತಿ ಮಹಿಳೆಯ ಮರ್ಯಾದಾ ಹತ್ಯೆ- ಇಬ್ಬರಿಗೆ ಗಲ್ಲು ಶಿಕ್ಷೆ, 5 ಜನರಿಗೆ ಜೀವಾವಧಿ

ವಿಜಯಪುರ: ಮರ್ಯಾದಾ ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಗಲ್ಲು ಶಿಕ್ಷೆ ಮತ್ತು ಉಳಿದ ಐದು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಜಯಪುರ ಸ್ಪೇಶಲ್ ಕೋರ್ಟ್ ಆದೇಶ ಹೊರಡಿಸಿದೆ. 30.06.2017 ರಂದು ಒಂಬತ್ತು ತಿಂಗಳು ಗರ್ಭಿಣಿ ಯುವತಿಯನ್ನು ಅವಳ ಸಂಬಂಧಿಕರೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದರು  ಈ ಪ್ರಕರಣದ ಮೊದಲ ಆರೋಪಿ ಇಬ್ರಾಹಿಂಸಾಬ ಮಹ್ಮದಸಾಬ ಅತ್ತಾರ ಮತ್ತು ಅಕ್ಬರ್ ಮಹ್ಮದಸಾಬ ಅತ್ತಾರ ಅವರಿಗೆ ಗಲ್ಲು ಶಿಕ್ಷೆ ಮತ್ತು ರೂ. ತಲಾ ರೂ. 49250 ದಂಡ ವಿಧಿಸಲಾಗಿದೆ.  ಅಲ್ಲದೇ, ಈ […]

ನರೇಂದ್ರ ಮೋದಿ ಮತ್ತೋಮ್ಮೆ ಪ್ರಧಾನಿಯಾಗಲಿ- ಮಹಿಳೆಯರಿಂದ ವಿಶೇಷ ಪೂಜೆ

  ವಿಜಯಪುರ : ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು ಹೆಮ್ಮೆಯ ನಾಯಕ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ ವಿಜಯಪುರ ಬಿಜೆಪಿ ಮಹಿಳಾ ಮೊರ್ಚಾ ಕಾರ್ಯಕರ್ತೆಯರು ನಗರದ ಕಾಳಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇಶದ ರಕ್ಷಣೆ, ಅಭಿವೃದ್ಧಿಗಾಗಿ ದಿಟ್ಟ ನಿರ್ಧಾರಗಳನ್ನು ಕೈಗೊಂಡು ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವರು ಇನ್ನಷ್ಟು ಶಕ್ತಿ, ಆಯುರಾರೋಗ್ಯ ಕರುಣಿಸಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ.  ಅವರ ನೇತೃತ್ವದಲ್ಲಿ ಬಿಜೆಪಿ […]

ಸಂಸದ ರಮೇಶ ಜಿಗಜಿಣಗಿ ಪರ ಅಣ್ಣಾಮಲೈ, ಅರವಿಂದ ಲಿಂಬಾವಳಿ ಬಿರುಸಿನ ಪ್ರಚಾರ

ವಿಜಯಪುರ: ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.   ನಗರದ ಮೀನಾಕ್ಷಿ ಚೌಕಿನಲ್ಲಿ ನಡೆದ ಯುವ ಸಮಾವೇಶಕ್ಕೆ  ಚಾಲನೆ ನೀಡಿ ಮಾತನಾಡಿದ ಅಣ್ಣಾಮಲೈ, ದೊಡ್ಡ ಸಂಖ್ಯೆಯಲ್ಲಿ ‌ನಾವು ಸೇರಿದ್ದೇವೆ.  ಯುವಕರ ಬದುಕು ದೇಶದಲ್ಲಿ ಹೇಗೆ ಇರಬೇಕೆಂದು ಸೇರಿದ್ದೇವೆ. 26 ನೇ ವಯಸ್ಸಿನಲ್ಲಿ ಜಿಗಜಿಣಗಿ ಸಚಿವರಾಗಿದ್ದರು.  2014 ಮೇ 30 ರಂದು ‌ನಾವು ಹೊಸ ರಾಜಕೀಯ ಪೇಜ್ ಮಾಡಿದೇವು.  ನಮಗೆ ಮೋದಿ ಪಿಎಂ ಆಗಬೇಕೆಂದು ಬಯಸಿದ್ದೇವು.  […]

ಮೀಸಲಾತಿ ಮೂಲಕ ಸಮುದಾಯದ ಹಿತ ಕಾಪಾಡುತ್ತಿರುವ ಕಾಂಗ್ರೆಸ್ ಬೆಂಬಲಿಸೋಣ- ಬಂಜಾರಾ ನಾಯಕರ ಮನವಿ

ವಿಜಯಪುರ: ಮೀಸಲಾತಿ ನೀಡುವ ಮೂಲಕ ಸಮುದಾಯ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಆರ್ಥಿಕವಾಗಿ ಸ್ವಾವಲಂಬನೆಯಾಗಲು ಕಾರಣವಾದ ಕಾಂಗ್ರೆಸ್ ನ್ನು ಬೆಂಬಲಿಸೋಣ ಎಂದು ಬಂಜಾರಾ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ. ನಗರದಲ್ಲಿ ನಡೆದ ವಿಜಯಪುರ ಜಿಲ್ಲಾ ಬಂಜಾರಾ ಸ್ವಾಭಿಮಾನಿ ಸಮಾವೇಶಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಚಾಲನೆ ನೀಡಿದರು. ಈ ಸಮಾವೇಶದಲ್ಲಿ ಮಾತನಾಡಿದ ವಿಧಾನ ಪರಿಷತ ಶಾಸಕ ಪ್ರಕಾಶ ರಾಠೋಡ, ಕಾಂಗ್ರೆಸ್ ನಮಗೆ ಎಸ್ಸಿಮೀಸಲಾತಿ  ನೀಡಿದ್ದರಿಂದ ನಾವು ಶಿಕ್ಷಣ, ಉದ್ಯೋಗ ಸೇರಿದಂತೆ ಸರ್ವ ಕ್ಷೇತ್ರಗಳಲ್ಲಿ […]

ಶೇ. 100 ರಷ್ಟು ಮತದಾನ ಮಾಡಿ ಜಿಲ್ಲೆಯ ಕೀರ್ತಿ ಹೆಚ್ಚಿಸಿ- ಟಿ. ಭೂಬಾಲನ್

ವಿಜಯಪುರ: ಜಿಲ್ಲೆಯು ಸೈಕ್ಲಿಂಗ್ ಕ್ಷೇತ್ರಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿನ ಕ್ರೀಡಾಪಟುಗಳ ಸ್ಪರ್ಧಾ ಮನೋಭಾವ ಹೆಮ್ಮರದಂತೆ ಇದೆ.  ಅದರಂತೆ ಲೋಕಸಭೆ ಚುನಾವಣಾಯಲ್ಲೂ ಸ್ಪರ್ಧೇಯೊಡ್ಡಿದವರಂತೆ ನೂರಕ್ಕೆ ನೂರರಷ್ಟು ಮತದಾನ ಮಾಡುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದ್ದಾರೆ.   ಲೋಕಸಭೆ ಚುನಾವಣೆ 2024ರ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಸೈಕಲ್ ಜಾಥಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಲ್ಲಿನ ಸೈಕ್ಲಿಂಗ್ ಕ್ರೀಡಾಪಟುಗಳು […]

ವಿಜಯಪುರ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ವಿಜನ್ ಏನು ಗೊತ್ತಾ?

ವಿಜಯಪುರ: ಕಾಂಗ್ರೆಸ್ ಅಭ್ಯರ್ಥಿ ಪ್ರೊ ರಾಜು ಆಲಗೂರ ವಿಜಯಪುರ ಜಿಲ್ಲೆಯ ಅಭಿವೃದ್ಧಿಗೆ ತಾವು ಹೊಂದಿರುವ ವಿಜನ್ ನನ್ನು ಬಿಚ್ಚಿಟ್ಟಿದ್ದಾರೆ.   ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ತಾವು ಗೆಲುವು ಸಾಧಿಸಿದರೆ 10 ಅಂಶಗಳ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ. ಪ್ರೊ. ರಾಜು ಆಲಗೂರ ಅವರ ವಿಜನ್ ಏನು? ಇಲ್ಲಿದೆ ಮಾಹಿತಿ. ನೀರಾವರಿ   1. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕೃμÁ್ಣ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ವಿಜಯಪುರ ಜಿಲ್ಲೆಯನ್ನು ಸಮಗ್ರ ನೀರಾವರಿಗೆ ಒಳಪಡಿಸಲು […]

ಸಚಿವ ಎಂ. ಬಿ. ಪಾಟೀಲ ಅವರಿಂದ ಪ್ರೊ. ರಾಜು ಆಲಗೂರ ಪರ ಬಾಬಾನಗರ, ಬಿಜ್ಜರಗಿ, ಟಕ್ಕಳಕಿ, ಜಾಲಗೇರಿಯಲ್ಲಿ ಬಿರುಸಿನ ಪ್ರಚಾರ

ವಿಜಯಪುರ: ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು, ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಬಾಬಾನಗರ ಮತ್ತು ಬಿಜ್ಜರಗಿಯಲ್ಲಿ ಪ್ರಚಾರ ಕೈಗೊಂಡ ಅವರು, ಪ್ರಾಮಾಣಿಕವಾಗಿ ದುಡಿದವರಿಗೆ ನಿಯತ್ತಿನಿಂದ ಮತಹಾಕಿ ಗೆಲ್ಲಿಸಬೇಕು ಎಂದು ಹೇಳಿದರು. ಕಾಂಗ್ರೆಸ್ ದೇಶವನ್ನು ಕಟ್ಟುವ ಕೆಲಸ ಮಾಡಿದೆ. ಬ್ರಿಟೀಷರು ಎಲ್ಲವನ್ನೂ ಲೂಟಿ ಮಾಡಿದ ದೇಶದಲ್ಲಿ ನೆಹರು ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆ ಸ್ಥಾಪಿಸಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನಾಂದಿ […]