Video News: ಮಳೆಗಾಗಿ ಶಿವ ಒಂಟಿ ಕಾಲಿನಲ್ಲಿ ನಿಂತಿದ್ದಾನೆ- ಎಲ್ಲವೂ ಸಮ್ಮಿಶ್ರವಾಗಿರಲಿದೆ- ಕುತೂಹಲ ಕೆರಳಿಸಿರುವ ಕತ್ನಳ್ಳಿ ಕಾರ್ಣಿಕರ ಭವಿಷ್ಯ

ವಿಜಯಪುರ: ಮಳೆಗಾಗಿ ಶಿವ ಒಂಟಿಗಾಲಿನ ಮೇಲೆ ನಿಂತಿದ್ದಾನೆ.  ಈ ವರ್ಷ ಎಲ್ಲವೂ ಮಿಶ್ರವಿದೆ ಎಂದು ಖ್ಯಾತ ಕಾರ್ಣಿಕ ವಿಜಯಪುರ ಜಿಲ್ಲೆಯ ಕತಕನಹಳ್ಳಿ(ಕತ್ನಳ್ಳಿ)ಯ ಶ್ರೀ ಗುರುಚಕ್ರವರ್ತಿ ಸದಾಶಿವ ಶಿವಯೋಗಗಿಳ ಮಠಾಧೀಶರಾದ ಶಿವಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಯುಗಾದಿ ಅಂಗವಾಗಿ ನಡೆಯುವ ಜಾತ್ರೆಯ ಅಂಗವಾಗಿ ನಡೆದ ಹೇಳಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಭವಿಷ್ಯ ನುಡಿದರು. ಈ ವರ್ಷ ಎಲ್ಲವೂ ಸಮ್ಮಿಶ್ರವಿದೆ ಈ ವರ್ಷ ಸಮ್ಮಿಶ್ರವಿದೆ.  ಸುಖ-ದುಃಖ, ಅಮೃತೃ-ವಿಷ, ಯೋಗ-ಆರೋಗ್ಯ, ಸಿಟ್ಟು-ಶಾಂತಿ, ಸಹನೆ-ಅಸಹನೆ, ಆರೋಗ್ಯ- ಅನಾರೋಗ್ಯ, ರೋಗ-ನಿರೋಗ ಈ ವರ್ಷ ಸಮ್ಮಿಶ್ರವಿದೆ.  […]

ಬಿಜೆಪಿಯ ಭ್ರಷ್ಟಾಚಾರ ರಹಿತ ಆಡಳಿತ ಜನಮನ ಗೆದ್ದಿದೆ- ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ- ಶಾಸಕ ಯತ್ನಾಳ

ವಿಜಯಪುರ: ಕಳೆದ 10 ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ದೇಶದಲ್ಲಾದ ಬದಲಾವಣೆ, ಸಾಧನೆ, ಆರ್ಥಿಕ ಸುಧಾರಣೆ, ಜಾಗತಿಕ ಮನ್ನಣೆ, ಭ್ರಷ್ಟಾಚಾರ ರಹಿತ ಆಡಳಿತ ಜನಮನ ಗೆದ್ದು ಇಂದು ಮತ್ತೊಮ್ಮೆ ದೇಶಕ್ಕೆ‌ ಮೋದಿ ಆಡಳಿತ ಬರಬೇಕೆಂಬುದು ಇಡಿ ದೇಶದ ಬಯಕೆಯಾಗಿದೆ.  ವಿಶ್ವಮೆಚ್ಚಿದ ನಾಯಕ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.   ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ನಡೆದ ಮಹಾನಗರ ಪಾಲಿಕೆಯ ಐದು ವಾರ್ಡ್ ಗಳ ವ್ಯಾಪ್ತಿಯ ಪಂಡಿತ ದೀನ್ […]

ದ್ವಿತೀಯ ಪಿಯು ಪರೀಕ್ಷೆ: ಎಸ್. ಎಸ್. ಪಿಯು ಕಾಲೇಜಿನ ವೇದಾಂತ ನಾವಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ- ಐಎಎಸ್ ಮಾಡುವ ಇಚ್ಛೆ ವ್ಯಕ್ತಪಡಿಸಿದ ವಿದ್ಯಾರ್ಥಿ

ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ಎಸ್. ಎಸ್. ಪಿ. ಯು ಕಾಲೇಜಿನ ವಿದ್ಯಾರ್ಥಿ ವೇದಾಂತ ನಾವಿ ಇತ್ತೀಚೆಗೆ ನಡೆದ ದ್ವಿತೀಯ ಪಿಯು ಪರೀಕ್ಷೆಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಬಸವನಾಡು ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಗೆ ಜಿಲ್ಲಾದ್ಯಂತ ಸಂತಸ ವ್ಯಕ್ತವಾಗಿದ್ದು, ವಿದ್ಯಾರ್ಥಿಯ ಪೋಷಕರು, ಕಾಲೇಜಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. ಸಾಧನೆಯ ಮೂಲಕ ಜಿಲ್ಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ […]

ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರಾಗಿ ಎಂ. ಎಸ್.ಲೋಣಿ ಅಧಿಕಾರ ಸ್ವೀಕಾರ- ಪ್ರೊ. ರಾಜು ಆಲಗೂರ ಎರಡು ಲಕ್ಷ ಮತಗಳಿಂದ ಗೆಲ್ಲಲಿದ್ದಾರೆ- ಲೋಣಿ ಭವಿಷ್ಯ

ವಿಜಯಪುರ: ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಅವರು ಮಾತನಾಡಿದರು. ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಈ ಲೋಕಸಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ.  ತಮ್ಮ ಮೇಲೆ ವಿಶ್ವಾಸವಿಟ್ಟು, ಪಕ್ಷ ಈ ಮಹತ್ವದ ಜವಾಬ್ದಾರಿ ನೀಡಿದ್ದು, ಇದಕ್ಕೆ ತಕ್ಕಂತೆ ಶ್ರಮವಹಿಸಿ ಪಕ್ಷ ಸಂಘಟನೆಯಲ್ಲಿ […]

ರನ್ನಿಂಗ್ ಮಾಡಿ ಮತದಾನ ಜಾಗೃತಿ ಮೂಡಿಸಿದ ಜಿ. ಪಂ. ಸಿಇಓ ರಿಷಿ ಆನಂದ

ವಿಜಯಪುರ: ಒಂದು ದೇಶದ ಶಕ್ತಿಶಾಲಿ ಸಂಪನ್ಮೂಲ ಎಂದರೆ ಅದು ಯವಶಕ್ತಿ.  ದೇಶಕ್ಕೆ ಯುವಕರ ಕೊಡುಗೆ ಅತ್ಯಂತ ಮಹತ್ವದಾಗಿದೆ.  ದೇಶದ ಭವಿಷ್ಯ ನಿರ್ಮಾಣ ಕಾರ್ಯಕ್ಕೆ ಎಲ್ಲಾ ಯುವಕರು ಲೋಕಸಭಾ ಚುನಾವಣೆಯಲ್ಲಿ ಪಾರದರ್ಶಕ ಹಾಗೂ ಮುಕ್ತವಾಗಿ ಮತದಾನ ಮಾಡುವ ಮೂಲಕ ಸದೃಡ ದೇಶ ನಿರ್ಮಾಣಕ್ಕೆ ಕಾರಣಿಭೂತರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಿಶಿ ಆನಂದ ಹೇಳಿದರು. ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಡಾ. ಬಿ. […]

ಮಗು ಸಾತ್ವಿಕ, ಪೋಷಕರು, ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೋಂಡವರಿಗೆ ಲಚ್ಚಾಣದಲ್ಲಿ ಸನ್ಮಾನ

ವಿಜಯಪುರ: ತೆರೆದ ಕೊಳವೆ ಭಾವಿಗೆ ತಲೆ ಕೆಳಗಾಗಿ ಬಿದ್ದು 20 ಗಂಟೆಗಳ ನಂತರ ಸಾವನ್ನು ಜಯಿಸಿ ಬಂದ 13 ತಿಂಗಳ ಮಗು ಸಾತ್ವಿಕ ಮುಜಗೊಂಡ ಮತ್ತು ಆತನ ಪೋಷಕರನ್ನು ಇಂಡಿ ತಾಲೂಕಿನ ಸುಕ್ಷೇತ್ರ ಲತ್ಚಾಣದಲ್ಲಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಆಶೀರ್ವದಿಸಲಾಯಿತು. ಲಚ್ಯಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ರಾತ್ರಿ ನಡೆದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಬಂಥನಾಳದ ಡಾ. ವೃಷಭಲಿಂಗ ಮಹಾಶಿವಹಿಗಳ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರವಚನಕಾರ ಮಹಾಂತೀಯ ಶಾಸ್ತ್ರಗಳು ಸನ್ಮಾನಿಸಿ ಗೌರವಿಸಿದರು. ಈ […]

ಕತಕನಹಳ್ಳಿ ಜಾನುವಾರು ಜಾತ್ರೆ ಪ್ರಾರಂಭ- ಶಾಸಕ ಸುನೀಲಗೌಡ ಪಾಟೀಲ ಚಾಲನೆ

ವಿಜಯಪುರ: ತಾಲೂಕಿನ ಸುಕ್ಷೇತ್ರ ಕತಕನಹಳ್ಳಿ ಶ್ರೀ ಗುರುಚಕ್ರವರ್ತಿ ಸದಾಶಿವ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಜಾನುವಾರು ಜಾತ್ರೆಗೆ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಚಾಲನೆ ನೀಡಿದರು. ಮಠದ ಶ್ರೀ ಶಿವಯ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುನೀಲಗೌಡ ಪಾಟೀಲ ಜಾನುವಾರು ಜಾತ್ರೆ ಉದ್ಘಾಟಿಸಿದರು.  ಅಲ್ಲದೇ, ಗೋಮಾತೆಗೆ ಪೂಜೆ ಸಲ್ಲಿಸಿದರು.   ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಉದ್ಯಮಿ ಬಾಬುಗೌಡ ಬಿರಾದಾರ, ಮುಖಂಡರಾದ ಬಸವರಾಜ ಕೌಲಗಿ, ಡಾ. ಗಂಗಾಧರ ಸಂಬಣ್ಣಿ, ಸಂಗಮೇಶ […]

ನರ್ಸ್ ವೃತ್ತಿಯ ಪಾವಿತ್ರ್ಯವನ್ನು ಹೆಚ್ಚಿಸಿ: ಬಸವರಾಜ ಕೌಲಗಿ ಕರೆ

ವಿಜಯಪುರ: ನರ್ಸ್ ವೃತ್ತಿ ಅತ್ಯಂತ ಪವಿತ್ರವಾಗಿದ್ದು ಪ್ರಾಮಾಣಿಕವಾಗಿ ಕೆಲಸಮಾಡಿ ಆ ವೃತ್ತಿಯ ಘನತೆ ಗೌರವವನ್ನು ಹೆಚ್ಚಿಸಬೇಕು ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ನಗರದ ಮಾತೋಶ್ರೀ ಗೌರಮ್ಮ ಅಪ್ಪಾಸಾಹೇಬ ಬಬಲೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ದೀಪದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನರ್ಸ್ ಗಳು ರೋಗಿಗಳ ಮುಖದಲ್ಲಿ ನಗು ಮೂಡಿಸುವ ಪ್ರಾಮಾಣಿಕ […]

ಮಗು ಸಾತ್ವಿಕ ಜಿಲ್ಲಾಸ್ಪತ್ರೆಯಿಂದ ಡಿಶ್ಚಾರ್ಜ್- ಮಗುವನ್ನು ಭೇಟಿ ಮಾಡಿದ ಸಂಸದ ರಮೇಶ ಜಿಗಜಿಣಗಿ- ಲಚ್ಯಾಣದಲ್ಲಿ ಮಗುವಿಗೆ ಹೃದಯಸ್ಪರ್ಷಿ ಸ್ವಾಗತ

ವಿಜಯಪುರ: ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಯಲ್ಲಿ ಸಿಲುಕಿ ಸಾವನ್ನು ಗೆದ್ದು ಬಂದು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮಗು ಸಾತ್ವಿಕ ಮುಜಗೊಂಡ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾನೆ. ಕಳೆದ ಮೂರು ದಿನಗಳಿಂದ ಎಲ್ಲ ಪರೀಕ್ಷೆಗಳನ್ನು ನಡೆಸಿದ ಮಕ್ಕಳ ವೈದ್ಯರು ಮಗುು ಸಂಪೂರ್ಣ ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆ ಕಾಣಿಸದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದರು.  ತಮ್ಮ ಪುತ್ರನೊಂದಿಗೆ ನಗು ನಗುತ್ತಲೆ ತಾಯಿ ಪೂಜಾ ಮತ್ತು ಸಂದೆ ಸತೀಶ ಆ್ಯಂಬ್ಯೂಲನ್ಸ್ ಮತ್ತು ಪೊಲೀಸರ ಭದ್ರತೆಯಲ್ಲಿ ತಮ್ಮ ಸ್ವಗ್ರಾಮ ಲಚ್ಯಾಣಕ್ಕೆ ತೆರಳಿದರು. […]

ದಿನೇಶ ಗುಂಡೂರಾವ ವಿರುದ್ಧ ಯತ್ನಾಳ ವಾಗ್ದಾಳಿ- ಮೋದಿ ಪ್ರಧಾನಿ ಮಾಡಲು ಭಿನ್ನಮತ ಮರೆತು ಪ್ರಚಾರ ಮಾಡುತ್ತೇವೆ ಎಂದ ಶಾಸಕ

ವಿಜಯಪುರ: ಶಾಸಕ ದಿನೇಶ ಗುಂಡೂರಾವ ಅವರ ಮನೆಯಲ್ಲಿಯೇ ಅರ್ಧ ಪಾಕಿಸ್ತಾನ ಇದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತನನ್ನು ವಿಚಾರಣೆ ನಡೆಸಿರುವ ವಿಚಾರದ ಕುರಿತು ದಿನೇಶ ಗುಂಡೂರಾವ ಮಾಡಿರುವ ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು. ನಮ್ಮ ಪದಾಧಿಕಾರಿ ಮೊಬೈಲ್ ಸಿಮ್ ವ್ಯಾಪಾರಿಗಳಿದ್ದಾರೆ.  ಅವರ ಬಳಿ ಯಾರು ಬಂದಿರುತ್ತಾರೆ ಎಂಬುದು ಹೇಗೆ […]