ನರಮಂಡಲ ಪಾರ್ಕಿನ್ಸನ್ ಕಾಯಿಲೆಗೆ ದೇಶದಲ್ಲಿಯೇ ಮೊದಲ ನ್ಯೂರೋಸ್ಮಾರ್ಟ್ ಪೋರ್ಟಬಲ್ ಬಳಸಿ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್ ಆಸ್ಪತ್ರೆ ವೈದ್ಯರು

ಬೆಂಗಳೂರು: ನರಮಂಡಲದ ಸಮಸ್ಯೆಯಿಂದ ಉಂಟಾಗುವ ಮಾರಣಾಂತಿಕ “ಪಾರ್ಕಿನ್ಸನ್‌” ರೋಗಕ್ಕೆ ಒಳಗಾಗಿದ್ದ 68 ವರ್ಷದ ವ್ಯಕ್ತಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡವು “ನ್ಯೂರೋಸ್ಮಾರ್ಟ್ ಪೋರ್ಟಬಲ್ ಮೈಕ್ರೋ ಎಲೆಕ್ಟ್ರೋಡ್ ರೆಕಾರ್ಡಿಂಗ್ (MER) ಸಿಸ್ಟಮ್‌” ಬಳಸಿಕೊಂಡು ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ಪಾರ್ಕಿನ್ಸನ್‌ ರೋಗಕ್ಕೆ ನಿಖರ ಚಿಕಿತ್ಸೆ ನೀಡಬಹುದಾದ ದೇಶದಲ್ಲೇ ಮೊದಲ ಬಾರಿಗೆ ನೂತನ ಅಪ್ಲಿಕೇಷನ್‌ನನ್ನು ಫೋರ್ಟಿಸ್‌ ಆಸ್ಪತ್ರೆಯಲ್ಲಿ ಬಳಸಲಾಗಿದೆ. ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ. ರಘುರಾಮ್ ಜಿ, ನರವಿಜ್ಞಾನದ ಹೆಚ್ಚುವರಿ ನಿರ್ದೇಶಕ ಡಾ. ಗುರುಪ್ರಸಾದ್ ಹೊಸೂರಕರ್ ಹಾಗೂ […]

Video News: ಟಿಕೆಟ್ ಸಿಕ್ಕಿದ್ದು ಖುಷಿ ತಂದಿದೆ- ನನ್ನನ್ನು ವಿರೋಧಿಸಿದವರಿಗೂ ದೇವರು ಒಳ್ಳೆಯದನ್ನು ಮಾಡಲಿ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಹೈಕಮಾಂಡ್ ನನಗೆ ಮತ್ತೆ ಬಿಜೆಪಿ ಟಿಕೆಟ್ ನೀಡಿರುವುದು ಖುಷಿ ತಂದಿದೆ.  ನನ್ನನ್ನು ವಿರೋಧಿಸಿದವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ವಿಜಯಪುರದಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ರಾಷ್ಟ್ರೀಯ ನಾಯಕರು ಟಿಕೆಟ್ ಘೋಷಣೆ ಮಾಡಿದ್ದಾರೆ.  ಇದೆಲ್ಲದರ ಕ್ರೆಡಿಟ್ ಬಿಜೆಪಿ ಕಾರ್ಯಕರ್ತರಿಗೆ ಸಲ್ಲುತ್ತದೆ.  ಇದರಲ್ಲಿ ನನ್ನದೇನೂ ಪಾತ್ರವಿಲ್ಲ.  ಪಕ್ಷ ಟಿಕೆಟ್ ನೀಡಿದರೆ ಚುನಾವಣೆಗೆ ಸ್ಪರ್ಧಿಸುತ್ತೇನೆ.  ಇಲ್ಲದಿದ್ದರೆ ಪಕ್ಷದ ಪರ ಕೆಲಸ ಮಾಡುತ್ತೇನೆ ಎಂದು ನಾನು ಮುಂಚೆಯಿಂದಲೂ ಎಲ್ಲರಿಗೂ […]

Video News: ಬಿಜೆಪಿ ಉತ್ತಮ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ- ಅಭ್ಯರ್ಥಿಗಳನ್ನು ಗೆಲ್ಲಿಸುವುದು ನಮ್ಮ ಗುರಿ- ಶಾಸಕ ಮಹೇಶ ಟೆಂಗಿನಕಾಯಿ

ವಿಜಯಪುರ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಒಳ್ಳೆಯ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗದ ವಿಜಯಪುರ ಜಿಲ್ಲಾ ಕೋರ್ ಕಮಿಟಿ ಸಭೆಗೆ ಆಗಮಿಸಿದ್ದ ಅವರು, ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಳಿಕ ವಿಜಯಪುರ ನಗರದಲ್ಲಿ ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದರು.  ಅಲ್ಲದೇ, ಈ ಟಿಕೆಟ್ ಪಡೆದ ಸಂಸದ ರಮೇಶ ಜಿಗಜಿಣಗಿ ಅವರಿಗೆ ಶುಭ ಕೋರಿ ಅಭಿನಂದಿಸಿದರು. ಈ ಸಂದರ್ಭದಲ್ಲಿ […]

ಈ ವರ್ಷ ನೇತ್ರಬಾಧೆ ಕಾಡಲಿದೆ- ಕೀಟಕಾಟ ಹೆಚ್ಚಾಗಲಿದೆ- ಜಾತಿಕಲಹ, ಯೋಧರಿಗೆ ನೋವು, ಉತ್ತಮರಿಗೆ ರಾಜಕೀಯ ಲಾಭವಿದೆ- ಹೊಳೆಬಬಲಾದಿ ಕಾರ್ಣಿಕರ ಭವಿಷ್ಯವಾಣಿ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಚಂದ್ರಗಿರಿ ಶ್ರೀ ಸದಾಶಿವ ಮುತ್ಯಾ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದ್ದು, ದೇವಸ್ಥಾನದ ಕಾರ್ಣಿಕ ಶ್ರೀ ಸಿದ್ಧಾರಮಯ್ಯ ಹೊಳಿಮಠ 2024 ನೇ ವರ್ಷದ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.  ಸದಾಶಿವ ಮುತ್ಯಾರ ಮಠದಲ್ಲಿ ನುಡಿಯಲಾಗುವ ಕಾಲಜ್ಞಾನ ಭವಿಷ್ಯ ನಿಜವಾಗುವುದರಿಂದ ಈ ಕಾರ್ಯಕ್ರಮ ವೀಕ್ಷಿಸಲು ಕರ್ನಾಟಕವಷ್ಟೇ ಅಲ್ಲ, ನೆರೆಯ ರಾಜ್ಯಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.  ಅದರಂತೆ ಈ ವರ್ಷದ ಕಾಲಜ್ಞಾನಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಶ್ರೀಮಠದ ಪೀಠಾಧಿಪತಿಗಳು ಮತ್ತು […]

ಲಿಂಗಾಯಿತ ವಿರೋಧಿ ಎಂದವರ ನಾಲಿಗೆಯನ್ನು ದೇವರ ಕತ್ತರಿಸಲಿ- ಇತಿಹಾಸ ನಿರ್ಮಿಸದೇ ಸಾಯಲ್ಲ- ರಮೇಶ ಜಿಗಜಿಣಗಿ

ವಿಜಯಪುರ: ನಾನು ಲಿಂಗಾಯಿತ ವಿರೋಧಿ ಎಂದು ಹೇಳಿದವರ ನಾಲಿಗೆಯನ್ನು ದೇವರು ಕತ್ತರಿಸಲಿ.  ರಾಜ್ಯದಲ್ಲಿ ದಲಿತ ವ್ಯಕ್ತಿಯಾಗಿ ಇತಿಹಾಸ ನಿರ್ಮಿಸಿಯೇ ಸಾಯುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ವಿಜಯಪುರ ರೈಲು ನಿಲ್ದಾಣದಲ್ಲಿ ಒಂದು ನಿಲ್ದಾಣ, ಒಂದು ಉತ್ಪನ್ನ ಮಳಿಗೆ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೂರು ಬಾರಿ ವಿಜಯಪುರ ಸಂಸದನಾಗಿ ಉತ್ತಮ ಕೆಲಸ ಮಾಡಿದ್ದೇನೆ.  ಪ್ರಧಾನಿ ಮೊದಿ ಅವರಿಗೆ ದೇಶದ ಚಿಂತನೆ ಅಭಿವೃದ್ದಿ ಬಿಟ್ಟು ಬೇರೆ ಕೆಲಸವಿಲ್ಲ.  ರಾಮಮಂದಿರ ನಿರ್ಮಾಣ ಮಾಡಿದರು.  ವಿಜಯಪುರ ಜಿಲ್ಲೆಗೆ ಏಳು […]

ವಂದೇ ಭಾರತ ರೈಲು ಸೇವೆ ಪ್ರಾರಂಭಿಸಿ- ಪ್ರಧಾನಿಗೆ ಶಾಸಕ ಸುನೀಲಗೌಡ ಪಾಟೀಲ ಪತ್ರ

ವಿಜಯಪುರ: ಸಂಸದರು ಮತ್ತು ರೇಲ್ವೆ ಸಚಿವರಿಗೆ ಪತ್ರ ಬರೆದರೂ ಸ್ಪಂದಿಸದ ಹಿನ್ನೆಲೆಯಲ್ಲಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರು ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಪತ್ರ ಬರೆದು ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ಹೊಸದಾಗಿ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಬೇಕು ಮತ್ತು ಮುಂಬೈ- ಸೋಲಾಪುರ ರೈಲನ್ನು ವಿಜಯಪುರವರೆಗೆ ವಿಸ್ತರಿಸುವಂತೆ ಆಗ್ರಹಿಸಿದ್ದಾರೆ. ಈ ಬೇಡಿಕೆ ಕುರಿತು 24.11.2023 ರಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮತ್ತು ಬಾಗಲಕೋಟೆ ಸಂಸದ ಪಿ. ಸಿ. ಗದ್ದಿಗೌಡರ […]

ಸಂಸದ, ಸಚಿವನಾಗಿ ಬಸವನಾಡಿಗೆ 10 ವರ್ಷ ಸಾಕಷ್ಟು ಕೆಲಸ ಮಾಡಿದ್ದೇನೆ- ರಮೇಶ ಜಿಗಜಿಗಣಗಿ

ವಿಜಯಪುರ: ಸಂಸದ ಮತ್ತು ಕೇಂದ್ರ ಕೇಂದ್ರ ಸಚಿವನಾಗಿ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ ಸಂತೃಪ್ತಿ ನನಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ರೈಲ್ವೇ, ವಿಮಾನ ನಿಲ್ದಾಣ, ಏಳು ಹೊಸ ರಾಷ್ಟ್ರೀಯ ಯೋಜನೆಗಳು ಸೇರಿದಂತೆ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ.  ವಿಜಯಪುರ ಜಿಲ್ಲೆ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕೆಂಬ ಹಂಬಲ ಇದೆ.  ಪಕ್ಷ ಮತ್ತೊಮ್ಮೆ ಅವಕಾಶ ಕೊಟ್ಟರೆ ದುಡಿಯುತ್ತೇನೆ.  ಇಲ್ಲವಾದರೆ ಯಾವಾಗಲೂ […]

ವೈದ್ಯಕೀಯ ಲೋಕದಲ್ಲೋಂದು ವಿನೂತನ ಪ್ರಯತ್ನ- ಜಾಗತಿಕ ದಾಖಲೆಗಾಗಿ ರಂಗೋಲಿಯಲ್ಲಿ ಅರಳಿದ ಆರೋಗ್ಯದ ಪಠ್ಯಚಿತ್ರಗಳು

ವಿಜಯಪುರ, ಮಾ. 10: ರಂಗೋಲಿಯ ಮೂಲಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಮತ್ತು ಜಗತ್ತಿನ ನಾನಾ ದಾಖಲೆ ಪುಟಗಳಲ್ಲಿ ಸೇರಿಸುವ ವಿಶ್ವದ ಮೊದಲ ವಿನೂತನ ಕಾರ್ಯಕ್ರಮಕ್ಕೆ ಬಸವ ನಾಡು ವಿಜಯಪುರದಲ್ಲಿ ನಡೆದಿದ್ದು, ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಚಾಲನೆ ನೀಡಿದ್ದಾರೆ. ವಿಜಯಪುರ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ 1500 ವಿದ್ಯಾರ್ಥಿಗಳು ಸ್ವಾಸ್ಷ್ಟ ಸಂತುಲನ […]

ಧೂಳಖೇಡ ಸೌಹಾರ್ದ ಬ್ಯಾಂಕ್ ಕಳ್ಳತನ ಪ್ರಕರಣ- ಆರು ಜನ ಅಂತಾರಾಜ್ಯ ಕಳ್ಳರ ಬಂಧಿಸಿದ ಝಳಕಿ ಪೊಲೀಸರು

ವಿಜಯಪುರ: ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸೌಹಾರ್ದ ಬ್ಯಾಂಕಿನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಝಳಕಿ ಪೊಲೀಸರು ಭೇದಿಸಿದ್ದು, ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಝಳಕಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಋಷಿಕೇಶ ಸೋನಾವಣೆ, ಫೆ. 28 ರಂದು ಮಧ್ಯರಾತ್ರಿ ಸೌಹಾರ್ದ ಬ್ಯಾಂಕ್ ನಲ್ಲಿದ್ದ ರೂ. 19.45 ಲಕ್ಷ ಹಣವನ್ನು ಕಳ್ಳತನ ಮಾಡಲಾಗಿತ್ತು.  ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಝಳಕಿ ಪೊಲೀಸರು 6 ಜನ ಆರೋಪಿಗಳನ್ನು ಕಳುವಾದ […]

ಕೌಶಲ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷೆ ಕಾಂತಾ ನಾಯಕ ಅವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸನ್ಮಾನ

ವಿಜಯಪುರ: ಕೌಶಲ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ ಕಾಂತಾ ನಾಯಕ ಅವರನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು. ಡಿಸಿಸಿ ಕಚೇರಿಗೆ ಭೇಟಿ ನೀಡಿದ ಕಾಂತಾ ನಾಯಕ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ಮಾಜಿ ಶಾಸಕ ಪ್ರೊ. ರಾಜು ಆಲಗೂರ ಹಾಗೂ ಪದಾಧಿಕಾರಿಗಳು ಸನ್ಮಾನಿಸಿದರು. ಈ ಸಂರ‍್ಭದಲ್ಲಿ ಕೆಪಿಸಿಸಿ ಸದಸ್ಯ ಬಿ ಎಸ್ ಪಾಟೀಲ್ (ಯಾಳಗಿ) ಪಕ್ಷದ ಮುಖಂಡರಾದ ಡಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ), […]